• Home
  • »
  • News
  • »
  • lifestyle
  • »
  • Morning Breakfast: ಬೆಳಗ್ಗಿನ ತಿಂಡಿಗೆ ಮಿಕ್ಸ್ ಸೀಡ್ಸ್ ಚಪಾತಿ ಮಾಡಿ ತಿನ್ನಿ, ಇಲ್ಲಿದೆ ಮಾಡುವ ವಿಧಾನ

Morning Breakfast: ಬೆಳಗ್ಗಿನ ತಿಂಡಿಗೆ ಮಿಕ್ಸ್ ಸೀಡ್ಸ್ ಚಪಾತಿ ಮಾಡಿ ತಿನ್ನಿ, ಇಲ್ಲಿದೆ ಮಾಡುವ ವಿಧಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾನ್ಯ ಚಪಾತಿಯನ್ನು ಹೆಚ್ಚು ಆರೋಗ್ಯಕರ ಮತ್ತು ರುಚಿಕರವಾಗಿ ಮಾಡಬಹುದು. ಹಾಗಾದರೆ ಈ ಆರೋಗ್ಯಕರ ಮತ್ತು ಟೇಸ್ಟಿ ರೆಸಿಪಿ ಹೇಗೆ ಮಾಡುವುದು. ಕೆಲವೊಮ್ಮೆ ನಿಮ್ಮ ಮಕ್ಕಳು ಸಾಮಾನ್ಯ ಚಪಾತಿ ತಿಂದ ನಂತರ ಬೇಜಾರಾಗುತ್ತಾರೆ. ತಿಂಡಿ ಸೇವನೆ ಮಾಡಲ್ಲ. ಹೀಗಿದ್ದಾಗ ನೀವು ಚಪಾತಿಗೆ ಕೆಲವು ತರಕಾರಿಗಳು ಮತ್ತು ಬೀಜಗಳನ್ನು ಸೇರಿಸಿ ಹೆಚ್ಚು ಪೌಷ್ಟಿಕ ಮತ್ತು ರುಚಿ ನೀಡಬಹುದು.

ಮುಂದೆ ಓದಿ ...
  • Share this:

    ಚಪಾತಿ ಎಲ್ಲರ ಮನೆಗಳಲ್ಲಿ ಊಟಕ್ಕೆ ಮಾಡುವ ಪದಾರ್ಥವಾಗಿದೆ. ನೀವು ಚಪಾತಿಯನ್ನು ಬೆಳಗಿನ ತಿಂಡಿಗೂ (Morning Breakfast) ಮಾಡಿ ಸೇವಿಸಬಹುದು. ಇದು ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಚಪಾತಿ (Chapati) ಪೋಷಕಾಂಶಗಳಿಂದ (Nutrients) ಕೂಡಿರುತ್ತದೆ. ಸಾಮಾನ್ಯವಾಗಿ ಗೋಧಿ ಹಿಟ್ಟಿನಿಂದ ಚಪಾತಿ ತಯಾರಿಸಲಾಗುತ್ತದೆ. ಚಪಾತಿಯನ್ನು ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಯಾವುದೇ ಸಮಯದಲ್ಲಿ ಸೇವನೆ ಮಾಡಬಹುದು. ಸಾಮಾನ್ಯವಾಗಿ, ಗೋಧಿ ಹಿಟ್ಟು ಸಾಕಷ್ಟು ಆರೋಗ್ಯಕರ ಆಯ್ಕೆ ಆಗಿದೆ. ಆದರೆ ಮಕ್ಕಳು ರೊಟ್ಟಿ ತಿನ್ನಲು ಇಷ್ಟ ಪಡಲ್ಲ, ಚಪಾತಿ ರೋಲ್ ತಕ್ಕ ಮಟ್ಟಿಗೆ ತಿನ್ನುತ್ತಾರೆ. ಹಾಗಾಗಿ ಇಂದು ನಾವು ಇಲ್ಲಿ ಮಕ್ಕಳಿಗೂ ಇಷ್ಟವಾಗುವ ಚಪಾತಿ ರೆಸಿಪಿ ಮಾಡುವುದು ಹೇಗೆ ಅಂತಾ ನೋಡೋಣ.


    ಸಾಮಾನ್ಯ ಚಪಾತಿಯನ್ನು ಹೆಚ್ಚು ಆರೋಗ್ಯಕರ ಮತ್ತು ರುಚಿಕರವಾಗಿ ಮಾಡಬಹುದು. ಹಾಗಾದರೆ ಈ ಆರೋಗ್ಯಕರ ಮತ್ತು ಟೇಸ್ಟಿ ರೆಸಿಪಿ ಹೇಗೆ ಮಾಡುವುದು? ಕೆಲವೊಮ್ಮೆ ನಿಮ್ಮ ಮಕ್ಕಳು ಸಾಮಾನ್ಯ ಚಪಾತಿ ತಿಂದ ನಂತರ ಬೇಜಾರಾಗುತ್ತಾರೆ. ತಿಂಡಿ ಸೇವನೆ ಮಾಡಲ್ಲ. ಹೀಗಿದ್ದಾಗ ನೀವು ಚಪಾತಿಗೆ ಕೆಲವು ತರಕಾರಿಗಳು ಮತ್ತು ಬೀಜಗಳನ್ನು ಸೇರಿಸಿ ಹೆಚ್ಚು ಪೌಷ್ಟಿಕ ಮತ್ತು ರುಚಿ ನೀಡಬಹುದು.


    ಇದು ನಿಮ್ಮ ಮಕ್ಕಳ ಊಟದ ಡಬ್ಬವನ್ನು ಆರೋಗ್ಯಕರವಾಗಿಸುತ್ತದೆ, ಜೊತೆಗೆ ಮನೆಯ ಹಿರಿಯರಿಗೂ ಇಷ್ಟವಾಗುತ್ತದೆ. ಪೌಷ್ಟಿಕಾಂಶಗಳಿಂದ ಕೂಡಿದ ರುಚಿಕರ ಚಪಾತಿ ಸೇವಿಸುವುದು ಉತ್ತಮ. ಅದರಲ್ಲೂ ಮಿಕ್ಸ್ ವೆಜಿಟೇಬಲ್ ಮತ್ತು ಸೀಡ್ಸ್ ಚಪಾತಿ ಆರೋಗ್ಯಕರ ಮತ್ತು ರುಚಿಕರ ಆಯ್ಕೆ ಆಗಿದೆ.


    ಇದನ್ನೂ ಓದಿ: ಬಲಿಷ್ಠ ಮೂಳೆಗಳಿಗಾಗಿ ಬೇಕು ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ, ಇವು ಹೇಗೆ ಕೆಲಸ ಮಾಡುತ್ತವೆ?


    ಮಿಶ್ರ ಬೀಜಗಳ ಚಪಾತಿ ಪೋಷಕಾಂಶಗಳ ಉಗ್ರಾಣವಾಗಿದೆ


    ಅಗಸೆ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಬಿ, ವಿಟಮಿನ್ ಇ, ಮ್ಯಾಂಗನೀಸ್, ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸೆಲೆನಿಯಮ್ ಸಮೃದ್ಧವಾಗಿದೆ. ಪೋಷಕಾಂಶಗಳು ಆರೋಗ್ಯಕ್ಕೆ ಮುಖ್ಯ.


    ಈ ಚಪಾತಿ ತಯಾರಿಕೆಯಲ್ಲಿ ಚಿಯಾ ಬೀಜಗಳನ್ನೂ ಬಳಸಲಾಗಿದೆ. ಇದು ಉತ್ಕರ್ಷಣ ನಿರೋಧಕ ಮೆಗ್ನೀಸಿಯಮ್ ಫೈಬರ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲ. ಈ ಎರಡೂ ಬೀಜಗಳು ಮಧುಮೇಹ, ರಕ್ತದೊತ್ತಡದಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಕಡಿಮೆ ಮಾಡುತ್ತದೆ.


    ಮಿಶ್ರ ಬೀಜಗಳ ಚಪಾತಿ ರೆಸಿಪಿ


    ಬೇಕಾಗುವ ಪದಾರ್ಥಗಳು


    ಗೋಧಿ ಹಿಟ್ಟು ಎರಡು ಕಪ್, ಅಗಸೆ ಬೀಜಗಳು ಒಂದು ಕಪ್, ಚಿಯಾ ಬೀಜಗಳು ಒಂದು ಕಪ್, ಓಟ್ಸ್ ಒಂದು ಕಪ್, ಉಪ್ಪು ರುಚಿಗೆ ತಕ್ಕಂತೆ, ಅಜ್ವೈನ್ ಅರ್ಧ ಟೀ ಸ್ಪೂನ್ ಬೇಕು.


    ಮಿಶ್ರ ಬೀಜ ಚಪಾತಿ ತಯಾರಿಸುವ ವಿಧಾನ


    ಮೊದಲು ಅಗಸೆ ಬೀಜಗಳು, ಚಿಯಾ ಬೀಜಗಳು ಮತ್ತು ಓಟ್ಸ್ ಅನ್ನು ಪ್ರತ್ಯೇಕವಾಗಿ ಮಿಶ್ರಣ ಮಾಡಿ. ದೊಡ್ಡ ಬಟ್ಟಲಿನಲ್ಲಿ ಗೋಧಿ ಹಿಟ್ಟು, ಮಿಶ್ರಿತ ಓಟ್ಸ್, ಅಗಸೆ ಬೀಜಗಳು ಮತ್ತು ಚಿಯಾ ಬೀಜಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಸೇರಿಸಿ ಸ್ವಲ್ಪ ಸ್ವಲ್ಪ ನೀರು ಹಾಕಿ ಕಲಸಿ.


    ಇದನ್ನೂ ಓದಿ: ಟೇಸ್ಟಿ ಎಂದು ಅತಿಯಾಗಿ ತಿನ್ನುವ ಚೀಸ್ ಯಾವೆಲ್ಲಾ ಅಡ್ಡ ಪರಿಣಾಮ ಉಂಟು ಮಾಡುತ್ತದೆ?


    ಈಗ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ. ಚಪಾತಿ ಆಕಾರದಲ್ಲಿ ಲಟ್ಟಿಸಿ. ತವಾವನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಚಪಾತಿ ಇಟ್ಟು ಎರಡೂ ಕಡೆಯಿಂದ ಕೆಂಪಗಾಗುವವರೆಗೆ ಬೇಯಿಸಿ. ತುಪ್ಪವನ್ನು ಅನ್ವಯಿಸಬಹುದು. ಈಗ ಆರೋಗ್ಯಕರ ಮತ್ತು ಮಿಕ್ಸ್ ಸೀಡ್ಸ್ ಟೇಸ್ಟಿ ಚಪಾತಿ ಸಿದ್ಧವಾಗಿದೆ. ನೆಚ್ಚಿನ ತರಕಾರಿ ಮತ್ತು ಚಟ್ನಿಯೊಂದಿಗೆ ಸೇವಿಸಿ.

    Published by:renukadariyannavar
    First published: