• Home
  • »
  • News
  • »
  • lifestyle
  • »
  • Breakfast Recipe: ಬೆಳಗಿನ ತಿಂಡಿಗೆ ಮಖನಿ ಪನೀರ್ ಬಿರಿಯಾನಿ ರೆಸಿಪಿ ಮಾಡಿ

Breakfast Recipe: ಬೆಳಗಿನ ತಿಂಡಿಗೆ ಮಖನಿ ಪನೀರ್ ಬಿರಿಯಾನಿ ರೆಸಿಪಿ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಗಿನ ತಿಂಡಿಗೆ ಮಖನಿ ಪನೀರ್ ಬಿರಿಯಾನಿ ಹೇಗೆ ಮಾಡುವುದು ಎಂದು ತಿಳಿಯೋಣ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಪ್ರೋಟೀನ್ ಧಾನ್ಯಗಳ ಸೇವನೆ ತುಂಬಾ ಮುಖ್ಯ. ಮಖನಿ ಪನೀರ್ ಬಿರಿಯಾನಿ ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಶಕ್ತಿಯು ದಿನವಿಡೀ ಉಳಿಯುತ್ತದೆ.

  • Share this:

    ಬೆಳಗಿನ ತಿಂಡಿಗೆ (Morning Breakfast) ನೀವು ವಾರದಲ್ಲಿ (Week) ಒಮ್ಮೆಯಾದರೂ ಬಿರಿಯಾನಿ (Biriyani) ಮಾಡಿ ಸೇವನೆ ಮಾಡುವುದು ಉತ್ತಮ ಆಯ್ಕೆ. ಪನೀರ್ (Paneer) ಯಾರಿಗೆ ತಾನೇ ಇಷ್ಟವಿಲ್ಲ. ಎಲ್ಲರೂ ಪನೀರ್ ವಿವಿಧ ರೀತಿಯಲ್ಲಿ ತಿನ್ನಲು ಇಷ್ಟ ಪಡುತ್ತಾರೆ. ರುಚಿಕರ ಮತ್ತು ಆರೋಗ್ಯಕರ (Tasty And Healthy) ಮಖನಿ ಪನೀರ್ ಬಿರಿಯಾನಿ ನಿಮ್ಮನ್ನು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಶಕ್ತಿ ನೀಡುತ್ತದೆ. ಬೆಳಗಿನ ತಿಂಡಿಗೆ ಕಡಿಮೆ ಸಮಯದಲ್ಲಿ ಮಾಡುವ ಕೆಲವು ಟೇಸ್ಟಿ ತಿನಿಸುಗಳು ಎಲ್ಲರಿಗೂ ಇಷ್ಟವಾಗುತ್ತವೆ. ಕಡಿಮೆ ಸಮಯದಲ್ಲಿ ರೆಸಿಪಿ ತಯಾರಿಸಿ ಸೇವನೆ ಮಾಡುವುದು ಸಮಯ ಉಳಿತಾಯಕ್ಕೆ ಸಹಕಾರಿ. ಮಖನಿ ಪನೀರ್ ಬಿರಿಯಾನಿ ತಿನ್ನಲು ರುಚಿಕರ ಮಾತ್ರವಲ್ಲದೇ ನಿಮ್ಮ ಆರೋಗ್ಯಕ್ಕೂ ಉತ್ತಮ.


    ಮಖನಿ ಪನೀರ್ ಬಿರಿಯಾನಿ ರೆಸಿಪಿ


    ಹಾಗಾದ್ರೆ ನಾವು ಇಲ್ಲಿ ಬೆಳಗಿನ ತಿಂಡಿಗೆ ಮಖನಿ ಪನೀರ್ ಬಿರಿಯಾನಿ ಹೇಗೆ ಮಾಡುವುದು ಎಂದು ತಿಳಿಯೋಣ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಪ್ರೋಟೀನ್ , ಧಾನ್ಯಗಳ ಸೇವನೆ ತುಂಬಾ ಮುಖ್ಯ. ಮಖನಿ ಪನೀರ್ ಬಿರಿಯಾನಿ ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಶಕ್ತಿಯು ದಿನವಿಡೀ ಉಳಿಯುತ್ತದೆ.


    ಮಖನಿ ಪನೀರ್ ಬಿರಿಯಾನಿ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು


    250 ಗ್ರಾಂ ಪನೀರ್ ನ್ನು ಚೌಕಾಕಾರದಲ್ಲಿ ಸಣ್ಣದಾಗಿ ಕತ್ತರಿಸಿಟ್ಟಿದ್ದು, ಎರಡು ಟೀ ಸ್ಪೂನ್ ಬೇ ಎಲೆಗಳು, ದಾಲ್ಚಿನ್ನಿ, ಕಪ್ಪು ಏಲಕ್ಕಿ, ಕರಿಮೆಣಸು, ಲವಂಗ, ಸಣ್ಣ ಏಲಕ್ಕಿ, ಮೂರು ಚಮಚ ದೇಸಿ ತುಪ್ಪ, ಸಣ್ಣದಾಗಿ ಕೊಚ್ಚಿದ ಒಂದು ದೊಡ್ಡ ಈರುಳ್ಳಿ, ಒಂದು ಮಧ್ಯಮ ಗಾತ್ರದ ಹುರಿದ ಈರುಳ್ಳಿ,


    ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


    ಮೂರು ಟೀ ಸ್ಪೂನ್ ಬೆಣ್ಣೆ, ಎರಡು ಸಣ್ಣದಾಗಿ ಕೊಚ್ಚಿದ ದೊಡ್ಡ ಟೊಮೆಟೊಗಳು, ಎರಡು ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿಗಳು, ನಾಲ್ಕರಿಂದ ಐದು ತುಂಡು ಬೆಳ್ಳುಳ್ಳಿ ಪೇಸ್ಟ್, ಒಂದು ಇಂಚು ಸಣ್ಣದಾಗಿ ಕೊಚ್ಚಿದ ಶುಂಠಿ, ಒಂದು ಚಮಚ ಅರಿಶಿನ ಪುಡಿ, ಒಂದು ಚಮಚ ಜೀರಿಗೆ ಪುಡಿ, ಒಂದು ಚಮಚ ಕೊತ್ತಂಬರಿ ಪುಡಿ,


    ಒಂದು ಚಮಚ ತಂದೂರಿ ಮಸಾಲಾ, ಉಪ್ಪು ರುಚಿಗೆ ತಕ್ಕಷ್ಟು, ಎಂಟರಿಂದ ಹತ್ತು ಗೋಡಂಬಿ, ಹತ್ತರಿಂದ ಹನ್ನೆರಡು ಬಾದಾಮಿ, ಅರ್ಧ ಚಮಚ ಸಣ್ಣ ಏಲಕ್ಕಿ ಪುಡಿ, ಒಂದು ಚಮಚ ಸಕ್ಕರೆ, ಅರ್ಧ ಕಪ್ ತಾಜಾ ಕೆನೆ, ಆರು ಕಪ್ ಬೇಯಿಸಿದ ಬಾಸ್ಮತಿ ಅಕ್ಕಿ, ಅರ್ಧ ಕಪ್ ಪುದೀನ ಮತ್ತು ಕೊತ್ತಂಬರಿ ಸೊಪ್ಪು


    ಮಖನಿ ಪನೀರ್ ಬಿರಿಯಾನಿ ತಯಾರಿಸುವುದು ಹೇಗೆ?


    ಬಿರಿಯಾನಿ ಮಾಡಲು ಮೊದಲು ಪನೀರ್ ತುಂಡುಗಳನ್ನು ತುಪ್ಪದಲ್ಲಿ ಹಾಕಿ ಲಘುವಾಗಿ ಹುರಿಯಿರಿ. ಪನೀರ್ ಫ್ರೈ ಆದ ನಂತರ ಪ್ಲೇಟ್ ನಲ್ಲಿ ತೆಗೆದಿರಿಸಿ. ನಂತರ ದೊಡ್ಡ ಬಾಣಲೆಗೆ ಬೆಣ್ಣೆ ಹಾಕಿ ಮತ್ತು ಅದರಲ್ಲಿ ಎಲ್ಲಾ ಮಸಾಲೆ ಹಾಕಿ ಮತ್ತು ಗೋಲ್ಡನ್ ಬ್ರೌನ್ ಬರುವವರೆಗೆ ಹುರಿಯಿರಿ.


    ಅದರಲ್ಲೀಗ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಹಾಕಿ ಬೇಯಿಸಿ. ಈಗ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ 3 ರಿಂದ 4 ನಿಮಿಷ ಪ್ರೈ ಮಾಡಿ. ಸಿದ್ಧಪಡಿಸಿದ ಟೊಮೆಟೊ ಪ್ಯೂರಿ ಮತ್ತು ಎಲ್ಲಾ ಮಸಾಲೆ ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಬೇಯಿಸಿ. ಎಲ್ಲಾ ಮಸಾಲೆಗಳು ಮತ್ತು ತರಕಾರಿ ಬೆಂದ ನಂತರ ತಾಜಾ ಕ್ರೀಮ್, ಗೋಡಂಬಿ ಪೇಸ್ಟ್ ಮತ್ತು ಪನೀರ್ ಅನ್ನು ಹಾಕಿ ಮಿಶ್ರಣ ಮಾಡಿ.


    ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


    ದೊಡ್ಡ ಪಾತ್ರೆಯಲ್ಲಿ ಸುತ್ತಲೂ ಸ್ವಲ್ಪ ತುಪ್ಪ ಅನ್ವಯಿಸಿ. ನಂತರ ಬೇಯಿಸಿದ ಅನ್ನವನ್ನು ಸುರಿಯಿರಿ. ಪನೀರ್ ಮತ್ತು ಅದರಲ್ಲಿರುವ ಎಲ್ಲಾ ಮಸಾಲೆ ಹಾಕಿ ಮಿಶ್ರಣ ಮಾಡಿ. ಈ ಪಾತ್ರೆಯನ್ನು ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ ಸುಮಾರು 25 ನಿಮಿಷ ಬೇಯಿಸಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಮತ್ತು ಹುರಿದ ಈರುಳ್ಳಿ ಹಾಕಿ ಬಿಸಿಯಾಗಿ ಬಡಿಸಿ.

    Published by:renukadariyannavar
    First published: