ಇದು ಚಳಿಗಾಲ (Winter) ಹಾಗಾಗಿ ಬೆಳಗಿನ ಉಪಹಾರ (Morning Breakfast) ಮತ್ತು ಆಗಾಗ್ಗೆ ಏನಾದ್ರೂ ತಿನ್ನಬೇಕು ಅನ್ನೋ ಆಸೆ ಆಗುತ್ತೆ. ಅದಾಗ್ಯೂ ಅದೆಷ್ಟೋ ಜನರಿಗೆ ಸಿಹಿ (Sweet) ಅಂದ್ರೆ ಸಖತ್ ಇಷ್ಟ. ಅವರು ಬೆಳಗಿನ ತಿಂಡಿಯಲ್ಲಿ ಶಿರಾ, ಹುಗ್ಗಿ ಸೇರಿದಂತೆ ವಿವಿಧ ಸಿಹಿ ಖಾದ್ಯಗಳನ್ನ (Recipe) ತಿನ್ನುತ್ತಾರೆ. ಇನ್ನು ಚಳಿಗಾಲದಲ್ಲಿ ಸಿಹಿ ತಿಂಡಿ ಉಪಹಾರ ಮಾಡ್ಬೇಕು ಅನ್ನಿಸಿದರೆ, ಪೋಷಕಾಂಶ ಭರಿತ ಮತ್ತು ಪೌಷ್ಟಿಕ ಹಾಗೂ ಶಕ್ತಿ ಒದಗಿಸುವ ಖರ್ಜೂರದ ಸಿಹಿ ತಿಂಡಿ ತಿನ್ನುವುದು ಉತ್ತಮ. ಹಾಗಾಗಿ ಇವತ್ತು ನಾವು ಬೆಳಗಿನ ತಿಂಡಿಗೆ ಸಿಹಿ ಖರ್ಜೂರ ಪಾಕವಿಧಾನ ತಂದಿದ್ದೇವೆ. ಅದನ್ನ ಹೇಗೆ ಮಾಡೋದು ಅಂತಾ ಇಲ್ಲಿ ನೋಡೋಣ.
ಬೆಳಗಿನ ತಿಂಡಿಗೆ ಸಿಹಿ ಖರ್ಜೂರದ ಖೀರ್ ರೆಸಿಪಿ
ಸಮ್ಮರ್ ಸೀಸನ್ ನಲ್ಲಿ ಹೇಗೆ ತಂಪು ಕುಡಿಯಬೇಕು ಅನ್ನಿಸುತ್ತೋ, ಅದೇ ರೀತಿ ಚಳಿಗಾಲದಲ್ಲಿ ಬಿಸಿ ಬಿಸಿ ಸಿಹಿ ತಿನ್ನಬೇಕು ಅಂತ ಅನಿಸುತ್ತೆ. ಹಾಗಾಗಿ ನಾವು ಕಡಿಮೆ ಸಕ್ಕರೆ ಮತ್ತು ಕಡಿಮೆ ಕ್ಯಾಲೋರಿ ಹೊಂದಿರುವ ಖೀರ್ ಪಾಕ ವಿಧಾನವನ್ನು ಬೆಳಗಿನ ತಿಂಡಿಗೆ ಮಾಡುವುದು ಹೇಗೆ ನೋಡೋಣ.
ಖರ್ಜೂರದ ಖೀರ್ ಆರೋಗ್ಯಕರ ಟ್ವಿಸ್ಟ್ ಕೊಡುತ್ತೆ. ಉತ್ತಮ ಆರೋಗ್ಯವನ್ನು ನೀಡುತ್ತದೆ. ಖರ್ಜೂರ ಮೆಗ್ನೀಸಿಯಮ್ ಮತ್ತು ಫೈಬರ್ನ ಉತ್ತಮ ಮೂಲವಾಗಿದೆ. ಶೂನ್ಯ ಕೊಲೆಸ್ಟ್ರಾಲ್ ಅನ್ನು ಹೊಂದಿದೆ.
ಖರ್ಜೂರ ಸಿಹಿ ಖೀರ್ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಮಕ್ಕಳ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಇದು ಮಕ್ಕಳ ಬೆಳವಣಿಗೆಗೆ ತುಂಬಾ ಆರೋಗ್ಯಕರ ಆಯ್ಕೆ ಆಗಿದೆ.
ಖರ್ಜೂರದ ಖೀರ್ ಪಾಕವಿಧಾನಕ್ಕೆ ಬೇಕಾಗುವ ಸಾಮಗ್ರಿಗಳು
ಎಂಟು ಕಪ್ ಹಾಲು, ಹಸಿರು ಏಲಕ್ಕಿ ಪುಡಿ 1 ಟೀಸ್ಪೂನ್, ಅಕ್ಕಿ 1/2 ಕಪ್, ಫ್ಲೇಕ್ಡ್ ಬಾದಾಮಿ 1/2 ಕಪ್, ಖರ್ಜೂರ 2 ಕಪ್, ಸಣ್ಣದಾಗಿ ಕೊಚ್ಚಿದ ಪಿಸ್ತಾ 1/2 ಕಪ್ ಬೇಕು.
ಖರ್ಜೂರದ ಖೀರ್ ರೆಸಿಪಿ ಮಾಡುವ ವಿಧಾನ
ಮೊದಲು ಅಕ್ಕಿಯನ್ನು ತೊಳೆದು 15 ನಿಮಿಷ ನೀರಿನಲ್ಲಿ ನೆನೆಸಿಡಿ. ಬೀಜಗಳನ್ನು ಬೇರ್ಪಡಿಸುವ ಮೂಲಕ ಖರ್ಜೂರವನ್ನು ಕತ್ತರಿಸಿಟ್ಟುಕೊಳ್ಳಿ. ನಂತರ ಮಧ್ಯಮ ಉರಿಯಲ್ಲಿ ಬಾಣಲೆ ಇರಿಸಿ, ಅದಕ್ಕೆ ಅಕ್ಕಿ, ಖರ್ಜೂರ ಮತ್ತು ಹಾಲು ಸೇರಿಸಿ.
ಅಕ್ಕಿಯನ್ನು 15 ನಿಮಿಷ ಮೃದುವಾಗುವವರೆಗೆ ಬೇಯಿಸಿ. ನಂತರ ಬಾಣಲೆಗೆ ಬಾದಾಮಿ ಮತ್ತು ಕತ್ತರಿಸಿದ ಪಿಸ್ತಾ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು 5 ನಿಮಿಷ ಬೇಯಿಸಿ. ಈಗ ಖೀರ್ ಗೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ. ಗ್ಯಾಸ್ ಆಫ್ ಮಾಡಿ ಖೀರ್ ತಣ್ಣಗಾಗಲು ಬಿಡಿ. ಈಗ ಖೀರ್ ರೆಡಿಯಾಗಿದೆ ಸವಿಯಿರಿ.
ಖರ್ಜೂರವು ರಕ್ತಹೀನತೆ ಗುಣಪಡಿಸುತ್ತದೆ
ಆಯುರ್ವೇದದ ಪ್ರಕಾರ, ಖರ್ಜೂರವು ಪ್ರಕೃತಿಯಲ್ಲಿ ತಂಪಾಗಿರುತ್ತದೆ ಮತ್ತು ಶಕ್ತಿ ನೀಡುತ್ತದೆ. ಅವು ಹೆಚ್ಚಿನ ಫೈಬರ್ ಹೊಂದಿದೆ. ಇದು ನಿಮ್ಮ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ
ಖರ್ಜೂರದಲ್ಲಿ ಉತ್ತಮ ಪ್ರಮಾಣದ ಕಬ್ಬಿಣಾಂಶವಿದೆ. ಇದು ನಿಮಗೆ ಶಕ್ತಿಯನ್ನು ನೀಡುತ್ತದೆ. ಖರ್ಜೂರದ ಸೇವನೆಯು ಅಧಿಕ ಕೊಲೆಸ್ಟ್ರಾಲ್ ಮಟ್ಟ ಮತ್ತು ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ. ರಕ್ತದೊತ್ತಡ ರೋಗಿಗಳಿಗೂ ಆರೋಗ್ಯಕರ.
ಇದನ್ನೂ ಓದಿ: ಬೆಳಗಿನ ತಿಂಡಿಗೆ ಟೇಸ್ಟಿ ಮತ್ತು ಹೆಲ್ದೀ ಗ್ರಾನೋಲಾ ರೆಸಿಪಿ ಮಾಡುವುದು ಹೇಗೆ?
ಖರ್ಜೂರ ಸ್ವಾಭಾವಿಕ ಸಕ್ಕರೆ ಅಂಶ ಹೊಂದಿದೆ. ಇದಕ್ಕೆ ಮತ್ತೆ ಸಕ್ಕರೆ ಬಳಸಬೇಕಿಲ್ಲ. ತೂಕ ಇಳಿಕೆಗೆ ಇದು ಪ್ರಯೋಜನಕಾರಿ. ಮೊಣಕಾಲು ನೋವನ್ನು ನಿವಾರಿಸುತ್ತದೆ. ಖರ್ಜೂರದಲ್ಲಿ ಮೆಗ್ನೀಸಿಯಮ್, ಸಂಧಿವಾತದಿಂದ ಬಳಲುತ್ತಿರುವವರ ಸ್ಥಿತಿ ಸುಧಾರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ