• Home
  • »
  • News
  • »
  • lifestyle
  • »
  • Breakfast Recipe: ಜೋಳದ ರೊಟ್ಟಿ ಮಾತ್ರ ಅಲ್ಲ, ದೋಸೆ ಕೂಡ ಬಹಳ ರುಚಿಕರ - ಇಲ್ಲಿದೆ ನೋಡಿ ರೆಸಿಪಿ

Breakfast Recipe: ಜೋಳದ ರೊಟ್ಟಿ ಮಾತ್ರ ಅಲ್ಲ, ದೋಸೆ ಕೂಡ ಬಹಳ ರುಚಿಕರ - ಇಲ್ಲಿದೆ ನೋಡಿ ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತುಂಬಾ ಜನರು ದೋಸೆಯನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಹೀಗಾಗಿ ದೋಸೆ ರೆಸಿಪಿ ತುಂಬಾ ಜನಪ್ರಿಯ ಆಯ್ಕೆ ಆಗಿದೆ. ಇದು ಸುಲಭ, ತ್ವರಿತವಾಗಿ ಮಾಡಬಹುದಾದ ಪದಾರ್ಥ ಆಗಿದೆ. ಅತ್ಯಂತ ಜನಪ್ರಿಯ ಮತ್ತು ಆರೋಗ್ಯಕರ ತ್ವರಿತ ದೋಸೆ ಪಾಕವಿಧಾನದಲ್ಲಿ ಜೋಳದ ಹಿಟ್ಟಿನ ದೋಸೆ ಕೂಡ ಒಂದಾಗಿದೆ.

ಮುಂದೆ ಓದಿ ...
  • Share this:

    ಬೆಳಗಿನ ತಿಂಡಿಗೆ (Morning Breakfast) ದೋಸೆಯನ್ನು (Dosa) ಎಲ್ಲರೂ ತಿನ್ನಲು ಇಷ್ಟ ಪಡ್ತಾರೆ. ದಿನವೂ ಅಕ್ಕಿಯಿಂದ ಮತ್ತು ಉದ್ದಿನ ಬೇಳೆ ದೋಸೆ ಮಾಡಿ ತಿಂದು ಬೇಸರ ಆಗಿದ್ದರೆ ನೀವು ಡಿಫರೆಂಟ್ (Different) ಆಗಿ ಜೋಳದ ಹಿಟ್ಟಿನ ದೋಸೆ ಮಾಡಿ ತಿನ್ನಬಹುದು. ಇಂದು ನಾವು ಬೆಳಗಿನ ತಿಂಡಿಗೆ ಪೋಷಕಾಂಶ ಭರಿತ ಮತ್ತು ಹೆಲ್ದೀ (Healthy) ಜೋಳದ ಹಿಟ್ಟಿನ ದೋಸೆ ಹೇಗೆ ಮಾಡುವುದು ಅಂತಾ ನೋಡೋಣ. ಜೋಳದ ಹಿಟ್ಟು ಮತ್ತು ವಿವಿಧ ಮಸಾಲೆಗಳು ಮತ್ತು ಗಿಡಮೂಲಿಕೆಗಳಿಂದ ತಯಾರಿಸಬಹುದಾದ ಅತ್ಯಂತ ಸರಳ ಮತ್ತು ಆರೋಗ್ಯಕರ ದೋಸೆ ಪಾಕವಿಧಾನ (Recipe) ಆಗಿದೆ. ಜೋಳದ ಹಿಟ್ಟಿನ ದೋಸೆ ಜೊತೆಗೆ ನೀವು ಮಸಾಲೆಯುಕ್ತ ಕೆಂಪು ಚಟ್ನಿ ಮಾಡಿ ಸೇವನೆ ಮಾಡಬಹುದು.


    ಬೆಳಗಿನ ತಿಂಡಿಗೆ ಜೋಳದ ಹಿಟ್ಟಿನ ದೋಸೆ


    ತುಂಬಾ ಜನರು ದೋಸೆಯನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಹೀಗಾಗಿ ದೋಸೆ ರೆಸಿಪಿ ತುಂಬಾ ಜನಪ್ರಿಯ ಆಯ್ಕೆ ಆಗಿದೆ. ಇದು ಸುಲಭ, ತ್ವರಿತವಾಗಿ ಮಾಡಬಹುದಾದ ಪದಾರ್ಥ ಆಗಿದೆ. ಅತ್ಯಂತ ಜನಪ್ರಿಯ ಮತ್ತು ಆರೋಗ್ಯಕರ ತ್ವರಿತ ದೋಸೆ ಪಾಕವಿಧಾನದಲ್ಲಿ ಜೋಳದ ಹಿಟ್ಟಿನ ದೋಸೆ ಕೂಡ ಒಂದಾಗಿದೆ.


    ಇದು ತೆಳುವಾದ ನೀರಿನ ದೋಸೆ ಹಿಟ್ಟಿನ ಸ್ಥಿರತೆ ಹೊಂದಿರುತ್ತದೆ. ಹೀಗಾಗಿ ಗರಿಗರಿಯಾದ ಮತ್ತು ಫ್ಲಾಕಿ ವಿನ್ಯಾಸಕ್ಕೆ ಹೆಸರುವಾಸಿ ಆಗಿದೆ. ಇದನ್ನು ತ್ವರಿತವಾಗಿ ಅಥವಾ ಸಾಂಪ್ರದಾಯಿಕವಾಗಿ ಹುದುಗಿಸಿದ ಶೈಲಿಯಲ್ಲಿ ತಯಾರಿಸಬಹುದು. ದೋಸೆಯಂತೆ ಅದೇ ವಿನ್ಯಾಸ ಮತ್ತು ದೋಸೆ ಹಿಟ್ಟಿನ ಸ್ಥಿರತೆಯನ್ನು ಹೊಂದಿರುತ್ತದೆ. ಇದು ಹೆಚ್ಚು ರುಚಿಯಾಗಿರುತ್ತದೆ.


    ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


    ಯಾವುದೇ ಚಟ್ನಿ ಮಾಡಿ ಸೇವಿಸುವ ರುಚಿಕರ ದೋಸೆ


    ತ್ವರಿತ ಬ್ಯಾಟರ್‌ ಗಾಗಿ ರೆಸಿಪಿಯಲ್ಲಿ ನೀವು ಇತರೆ ಮಸಾಲೆಗಳು ಮತ್ತು ಗಿಡಮೂಲಿಕೆ ಮತ್ತು ಜೋಳದ ಹಿಟ್ಟನ್ನು ಬಳಸಿ. ಹಿಟ್ಟಿಗೆ ಅರ್ಧ ಕಪ್ ರವೆ ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ. ಇದರಿಂದ ಅದು ಹೆಚ್ಚು ಗರಿಗರಿಯಾದ ಮತ್ತು ಚಪ್ಪಟೆ ಆಗುತ್ತದೆ. ಗರಿಗರಿಯಾದ ದೋಸೆ ತಯಾರಿಸಲು ನಾನ್ ಸ್ಟಿಕ್ ದೋಸೆ ಪ್ಯಾನ್ ಅನ್ನು ಬಳಸಿ.


    ಈ ಪಾಕವಿಧಾನಕ್ಕೆ ಸೂಕ್ತವಾದ ಭಕ್ಷ್ಯ ಅಥವಾ ಚಟ್ನಿಯ ಜೊತೆ ನೀವು ಸವಿಯಬಹುದು. ಪಾಕವಿಧಾನವು ಮಸಾಲೆಯುಕ್ತ ಟೊಮೆಟೊ ಈರುಳ್ಳಿ ಚಟ್ನಿ ಕಾಂಬಿನೇಷನ್ ಚೆನ್ನಾಗಿರುತ್ತದೆ. ತೆಂಗಿನಕಾಯಿ ಚಟ್ನಿಯು ಚೆನ್ನಾಗಿ ಮತ್ತು ಒಳ್ಳೆಯ ಟೇಸ್ಟ್ ನೀಡುತ್ತದೆ. ಹೆಚ್ಚುವರಿಯಾಗಿ ನೀವು ಇದಕ್ಕೆ ಆಲೂ ಪಲ್ಯ ಮತ್ತು ಇತರೆ ಸಾಂಬಾರ್ ಕೂಡ ಮಾಡಿ ಸೇವಿಸಬಹುದು.


    ಜೋಳದ ಹಿಟ್ಟಿನ ದೋಸೆ ರೆಸಿಪಿ


    ಬೇಕಾಗುವ ಪದಾರ್ಥಗಳು


    ಒಂದೂವರೆ ಕಪ್ ಜೋಳದ ಹಿಟ್ಟು, ಅರ್ಧ ಟೀ ಸ್ಪೂನ್ ಉಪ್ಪು, ನಾಲ್ಕು ಕಪ್ ನೀರು, ಒಂದು ಸಣ್ಣದಾಗಿ ಕೊಚ್ಚಿದ ಈರುಳ್ಳಿ , ಎರಡು ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಕೊಚ್ಚಿದ ಕೆಲವು ಕರಿಬೇವಿನ ಎಲೆಗಳು, ಎರಡು ಸಣ್ಣದಾಗಿ ಕೊಚ್ಚಿದ ಮೆಣಸಿನಕಾಯಿ, ಅರ್ಧ ಟೀಸ್ಪೂನ್ ಪುಡಿ ಮಾಡಿದ ಮೆಣಸು, ಎಣ್ಣೆ ಬೇಯಿಸಲು ಬೇಕು.


    ಜೋಳದ ಹಿಟ್ಟಿನ ದೋಸೆ ರೆಸಿಪಿ ಮಾಡುವ ವಿಧಾನ


    ಮೊದಲು ಒಂದು ದೊಡ್ಡ ಬಟ್ಟಲಿನಲ್ಲಿ ಒಂದೂವರೆ ಕಪ್ ಜೋಳದ ಹಿಟ್ಟು ತೆಗೆದುಕೊಳ್ಳಿ. ಹಿಟ್ಟು ತಾಜಾ ಇರುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ದೋಸೆ ಗರಿಗರಿ ಆಗುವುದಿಲ್ಲ. ಅರ್ಧ ಟೀ ಸ್ಪೂನ್ ಉಪ್ಪು, ನಾಲ್ಕು ಕಪ್ ನೀರು ಸೇರಿಸಿ. ಯಾವುದೇ ಉಂಡೆಗಳಿಲ್ಲದಂತೆ ನೋಡಿಕೊಳ್ಳಿ. ಚೆನ್ನಾಗಿ ಮಿಶ್ರಣ ಮಾಡಿ.




    ಒಂದು ಸಣ್ಣದಾಗಿ ಕೊಚ್ಚಿದ ಈರುಳ್ಳಿ , ಎರಡು ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಕೊಚ್ಚಿದ ಕೆಲವು ಕರಿಬೇವಿನ ಎಲೆಗಳು, ಎರಡು ಸಣ್ಣದಾಗಿ ಕೊಚ್ಚಿದ ಮೆಣಸಿನಕಾಯಿ, ಅರ್ಧ ಟೀಸ್ಪೂನ್ ಪುಡಿ ಮಾಡಿದ ಮೆಣಸು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟನ್ನು 10 ನಿಮಿಷ ಚೆನ್ನಾಗಿ ನೆನೆಯಲು ಬಿಡಿ.


    ಇದನ್ನೂ ಓದಿ: ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಮತ್ತು ಕಣ್ಣುಗಳ ಆರೋಗ್ಯಕ್ಕೆ ಈ ಹಣ್ಣು ಪ್ರಯೋಜನಕಾರಿ


    ಈಗ ಪ್ಯಾನ್ ತುಂಬಾ ಬಿಸಿಯಾದಾಗ ಪ್ಯಾನ್ ಮೇಲೆ ಹಿಟ್ಟನ್ನು ಸುರಿಯಿರಿ. ಒಂದು ಟೀಸ್ಪೂನ್ ಎಣ್ಣೆ ಹರಡಿ ಮತ್ತು 3 ನಿಮಿಷ ದೋಸೆ ಗರಿಗರಿಯಾಗುವವರೆಗೆ ಬೇಯಿಸಿ. ತೆಗೆದು ನಿಮ್ಮ ಇಷ್ಟದ ಚಟ್ನಿ ಜೊತೆ ಸವಿಯಿರಿ.

    Published by:renukadariyannavar
    First published: