ತುಂಬಾ ಜನರು (People) ಇಡ್ಲಿ ಇಷ್ಟಪಟ್ಟು ತಿನ್ನುತ್ತಾರೆ. ಒಂದು ದಿನ ತಪ್ಪಿದ್ರೂ ಮತ್ತೊಂದು ದಿನಕ್ಕೆ ಇಡ್ಲಿ (Idli) ಬೇಕು, ತಿನ್ನಬೇಕು ಅನ್ನಿಸುತ್ತೆ. ಇಡ್ಲಿ, ಚಟ್ನಿ, ಸಾಂಬಾರ್ ಖಾದ್ಯವು (Recipe) ಬಹುತೇಕರ ಪ್ರಿಯವಾದ ರೆಸಿಪಿ ಆಗಿದೆ. ಬಹುಜನರ ಅತ್ಯಂತ ಬೇಡಿಕೆಯ ಉಪಹಾರಗಳಲ್ಲಿ ಇಡ್ಲಿ ಖಾದ್ಯ ಸಹ ಒಂದಾಗಿದೆ. ಈ ದಕ್ಷಿಣ ಭಾರತದ ಖಾದ್ಯ ಈಗ ವಿಶ್ವದಾದ್ಯಂತ ಜನಪ್ರಿಯತೆ (Famous) ಪಡೆದುಕೊಂಡಿದೆ. ಬಹುತೇಕ ಜನರಿಗೆ ಇಡ್ಲಿ ಪ್ರಿಯವಾದ ಉಪಹಾರವಾಗಿದೆ. ಕೆಲವು ಪ್ರದೇಶಗಳಲ್ಲಿ ಜನರು ವಿವಿಧ ಶೈಲಿಯಲ್ಲಿ, ವಿವಿಧ ಹೆಸರಿನ ಇಡ್ಲಿ ಮಾಡಿ ಉಣಬಡಿಸುತ್ತಾರೆ. ಇಂದು ನಾವು ಇಂತಹದ್ದೇ ವಿಶೇಷ (Special) ಆರೋಗ್ಯಕರ (Healthy) ಇಡ್ಲಿ ರೆಸಿಪಿ ಮಾಡುವುದು ಹೇಗೆ ಅಂತಾ ನೋಡೋಣ.
ಬೆಳಗಿನ ತಿಂಡಿಗೆ ಆರೋಗ್ಯಕರ ಇಡ್ಲಿ ರೆಸಿಪಿ
ಬೆಳಗಿನ ತಿಂಡಿಗೆ ಟೇಸ್ಟಿ ಮತ್ತು ಆರೋಗ್ಯಕರ ಇಡ್ಲಿಯ ವಿಶೇಷ ವಿಧಾನಗಳನ್ನು ನೋಡೋಣ. ನೀವು ದಹಿ ವಡಾದ ಬಗ್ಗೆ ಕೇಳಿರಬಹುದು. ಆದ್ರೆ ಯಾವತ್ತಾದ್ರೂ ದಹಿ ಇಡ್ಲಿ ರೆಸಿಪಿ ಬಗ್ಗೆ ಕೇಳಿದ್ದೀರಾ? ಇನ್ನುಇಡ್ಲಿ ಸ್ವಿಸ್ ತವಾ ಇಡ್ಲಿ, ಇಡ್ಲಿ ಫ್ರೈ ಹೇಗೆ ಮಾಡುವುದು ಎಂದು ಇಲ್ಲಿ ನೋಡೋಣ.
ಇದು ಆರೋಗ್ಯಕರ ರೆಸಿಪಿ ಆಗಿದೆ. ಎಲ್ಲರೂ ಸಾದಾ ಇಡ್ಲಿ ಮಾಡ್ತಾರೆ. ಜೊತೆಗೆ ಇಡ್ಲಿ ಜೊತೆ ಸಾಂಬಾರ್ ಮತ್ತೆ ಚಟ್ನಿ ಬೇಕೇ ಬೇಕು. ಬೆಳಗ್ಗೆ ನಿಮಗೆ ಸಾಂಬಾರ್ ಮಾಡಲು ಸಮಯವಿಲ್ಲದೇ ಹೋದರೆ ದಹಿ ಇಡ್ಲಿ ಮಾಡಬಹುದು. ಹಾಗಾದ್ರೆ ಈಗ ರೆಸಿಪಿ ಬಗ್ಗೆ ನೋಡೋಣ.
ದಹಿ ಇಡ್ಲಿ ರೆಸಿಪಿ
ಬೇಕಾಗುವ ಪದಾರ್ಥಗಳು
ಇಡ್ಲಿ, ಮೊಸರು, ಸಕ್ಕರೆ ಮತ್ತು ಉಪ್ಪು ಬೇಕು. ಹದಗೊಳಿಸಲು ಎಣ್ಣೆ ಸ್ವಲ್ಪ, ಸಾಸಿವೆ, ಜೀರಿಗೆ, ಕರಿಬೇವು, ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಇಂಗು ಚಿಟಿಕೆ ಬೇಕು.
ಮೊಸರು ಇಡ್ಲಿ ಮಾಡುವುದು ಹೇಗೆ?
ಮೊಸರಿಗೆ ಉಪ್ಪು ಮತ್ತು ಸಕ್ಕರೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಫ್ರಿಜ್ನಲ್ಲಿ ಒಂದು ಗಂಟೆ ಇರಿಸಿ. ಎಣ್ಣೆ ಬಿಸಿ ಮಾಡಿ. ಎಲ್ಲಾ ಪದಾರ್ಥಗಳನ್ನು ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿ. ಈಗ ಅದರಲ್ಲಿ ಇಡ್ಲಿ ಇಟ್ಟು ಮೊಸರು ಮಿಶ್ರಣ ಸುರಿಯಿರಿ ನಂತರ ಸವಿಯಿರಿ.
ಮಸಾಲೆ ತವಾ ಇಡ್ಲಿ ರೆಸಿಪಿ
ಬೇಕಾಗುವ ಪದಾರ್ಥಗಳು
ಇಡ್ಲಿ, ಸಣ್ಣದಾಗಿ ಕೊಚ್ಚಿದ ಈರುಳ್ಳಿ, ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕೆಲವು ಕರಿಬೇವಿನ ಎಲೆಗಳು, ಇಡ್ಲಿ ಪುಡಿ ಎರಡು ಚಮಚ, ಬೆಣ್ಣೆ 2 ಚಮಚ ಬೇಕು.
ಮಸಾಲೆ ತವಾ ಇಡ್ಲಿ ತಯಾರಿಸುವುದು ಹೇಗೆ?
ಗ್ರಿಡಲ್ ಅನ್ನು ಬಿಸಿ ಮಾಡಿ ಮತ್ತು ಅದಕ್ಕೆ ಬೆಣ್ಣೆ ಅಥವಾ ಎಣ್ಣೆ ಸೇರಿಸಿ. ಎಣ್ಣೆ ಅಥವಾ ಬೆಣ್ಣೆ ಬಿಸಿಯಾದಾಗ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪು ಹಾಕಿ ಒಂದು ನಿಮಿಷ ಫ್ರೈ ಮಾಡಿ. ನಂತರ ಇಡ್ಲಿ ಮಸಾಲಾ ಸೇರಿಸಿ ಫ್ರೈ ಮಾಡಿ. ನಂತರ ಇಡ್ಲಿ ಸೇರಿಸಿ ಮತ್ತು ಮಸಾಲೆಗಳಲ್ಲಿ ಟಾಸ್ ಮಾಡಿ ಮತ್ತು ಎರಡೂ ಬದಿ ಬೇಯಿಸಿ. ತೆಂಗಿನಕಾಯಿ ಚಟ್ನಿ ಇಲ್ಲವೇ ನಿಮ್ಮಿಷ್ಟದ ಯಾವುದೇ ಚಟ್ನಿ ಜೊತೆ ಸೇವಿಸಬಹದು.
ಇಡ್ಲಿ ಫ್ರೆಂಚ್ ಫ್ರೈಸ್ ರೆಸಿಪಿ
ಬೇಕಾಗುವ ಪದಾರ್ಥಗಳು
ರೆಫ್ರಿಜರೇಟೆಡ್ ಇಡ್ಲಿ, ಚಾಟ್ ಮಸಾಲಾ ಅಥವಾ ಪಾವ್ ಭಾಜಿ ಮಸಾಲಾ, ಉಪ್ಪು, ಹುರಿಯಲು ಎಣ್ಣೆ ಬೇಕು.
ಇಡ್ಲಿ ಫ್ರೈ ರೆಸಿಪಿ ತಯಾರಿಸುವ ವಿಧಾನ
ಫ್ರಿಜ್ ನಲ್ಲಿಟ್ಟ ಇಡ್ಲಿಯನ್ನು ಫ್ರೆಂಚ್ ಫ್ರೈಸ್ ನಂತೆ ಕತ್ತರಿಸಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಗೋಲ್ಡನ್ ಆಗುವವರೆಗೆ ಫ್ರೈ ಮಾಡಿ. ಇಡ್ಲಿ ತುಂಡುಗಳು ಹೊರಭಾಗದಲ್ಲಿ ಗರಿಗರಿಯಾಗುವಂತೆ ನೋಡಿಕೊಳ್ಳಿ.
ಇದನ್ನೂ ಓದಿ: ಪರಂಗಿ ಹಣ್ಣಿನ ಬೀಜದಿಂದ ಸಿಗೋ ಲಾಭ ಕೇಳಿದ್ರೆ ನೀವು ಎಸೆಯೋದೇ ಇಲ್ಲ
ಸಿದ್ಧವಾದ ಇಡ್ಲಿ ಮೇಲೆ ಪಾವ್ ಭಾಜಿ ಮಸಾಲಾ ಅಥವಾ ಚಾಟ್ ಮಸಾಲಾ ಸೇರಿಸಿ, ಫ್ರೈ ಮಾಡಿ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ