ಬೆಳಿಗ್ಗೆ ಬೇಗನೆ ಏಳುವುದು (Wakeup), ಇವತ್ತಿನ ತಿಂಡಿ ಏನು ಮಾಡಬೇಕು ಎಂದು ಯೋಚಿಸುವುದು ಅದೇ ದೊಡ್ಡ ಸವಾಲಾಗಿರುತ್ತೆ ಹೆಂಗಳೆಯರಿಗೆ. ಎಷ್ಟೋ ಜನ ಮಹಿಳೆಯರು (Women’s) ರಾತ್ರಿಯೇ ಬೆಳಗಿನ ತಿಂಡಿಗೆ (Morning Breakfast) ಏನು ಮಾಡಬೇಕು ಎಂದು ಯೋಜನೆ ಹಾಕಿಕೊಳ್ತಾರೆ. ಹಾಗೂ ಬೆಳಗ್ಗೆ ಮಕ್ಕಳು, ಗಂಡ, ಅತ್ತೆ-ಮಾವ ಹೀಗೆ ಕುಟುಂಬಸ್ಥರೆಲ್ಲರಿಗೂ ಮೆಚ್ಚುವ ಉಪಹಾರ ತಯಾರಿಸುವುದು ಮುಖ್ಯವಾಗಿರುತ್ತದೆ. ಮಧ್ಯಾಹ್ನದ ಊಟಕ್ಕೆ ಬೇರೆ, ಬೆಳಗಿನ ತಿಂಡಿಗೆ ಬೇರೆ ಪಾಕ ವಿಧಾನ ಮಾಡುವುದು ಕೆಲಸವಾಗಿರುತ್ತದೆ. ಉಪಹಾರವನ್ನು ಯೋಜಿಸುವುದು ಒಂದು ದೊಡ್ಡ ಕೆಲಸವೇ ಹೌದು. ನಮ್ಮಲ್ಲಿ ಅನೇಕರು ಬೆಳಗಿನ ಉಪಾಹಾರ ತ್ಯಜಿಸುತ್ತಾರೆ. ಕೆಲವರಿಗೆ ಸಮಯಕ್ಕೆ ಸರಿಯಾಗಿ ತಿನ್ನಲು ಸಮಯ ಇರಲ್ಲ.
ಬೆಳಗಿನ ತಿಂಡಿ ತಪ್ಪಿಸಿದರೆ ಹೊಟ್ಟೆಯ ಅಸ್ವಸ್ಥತೆ ಕಾಡುತ್ತವೆ
ಇನ್ನು ಕೆಲವರಿಗೆ ತಿಂಡಿ ಇಷ್ಟವಾಗಲ್ಲ. ಹಾಗಾಗಿ ಬೆಳಗಿನ ತಿಂಡಿ ಸೇವನೆ ಬಿಡದಂತೆ ಸಲಹೆ ನೀಡಲಾಗುತ್ತದೆ. ಬೆಳಗಿನ ತಿಂಡಿ ತಪ್ಪಿಸಿದರೆ ಹೊಟ್ಟೆಯ ಅಸ್ವಸ್ಥತೆ ಕಾಡುತ್ತವೆ. ಹಾಗಾಗಿ ಬೆಳಗಿನ ಉಪಹಾರ ಬಿಡುವುದು ಆರೋಗ್ಯಕ್ಕೆ ಎಂದಿಗೂ ಒಳ್ಳೆಯದಲ್ಲ.
ಬೆಳಿಗ್ಗೆ ಆರೋಗ್ಯಕರ ಮತ್ತು ಪೌಷ್ಠಿಕಾಂಶದ ಊಟ ಸೇವಿಸುವುದು ನಮಗೆ ಇಂಧನವಿದ್ದಂತೆ ಅಂದರೆ ದಿನವಿಡೀ ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸುಲಭವಾದ ಬೆಳಗಿನ ಪಾಕವಿಧಾನ ನೋಡಲು ಬಯಸುತ್ತೇವೆ.
ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!
ಈಗ ಅನೇಕ ಜನರಂತೆ ನೀವು ಸಹ ಟೋಸ್ಟ್ ಅಥವಾ ಏಕದಳ ಜೊತೆಗೆ ತ್ವರಿತ ಮತ್ತು ಸುಲಭ ಉಪಹಾರ ಜೋಡಿಸಬಹುದು. ಈ ಸಾಮಾನ್ಯ ತಿನಿಸುಗಳಿಗಿಂತ ಇದನ್ನು ವಿಭಿನ್ನವಾಗಿಸಲು ಕೆಲವು ರುಚಿಕರವಾದ ಭಕ್ಷ್ಯಗಳನ್ನು ಸುಲಭವಾಗಿ ಮತ್ತು ಅತಿ ಶೀಘ್ರವಾಗಿ ತಯಾರಿಸಬಹುದು.
ತವಾ ಸ್ಪಾಟ್ ಇಡ್ಲಿ ರೆಸಿಪಿ
ನೀವೂ ಸಹ ಇಂತಹ ದಿಢೀರ್ ಬೆಳಗಿನ ತಿಂಡಿಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ನಿಮಗಾಗಿ ತವಾ ಸ್ಪಾಟ್ ಇಡ್ಲಿ ರೆಸಿಪಿ. ಇದು ಮಸಾಲೆಯುಕ್ತ, ರುಚಿಕರ ಮತ್ತು ಕೇವಲ ಎರಡು ನಿಮಿಷಗಳಲ್ಲಿ ತಯಾರಿಸಬಹುದಾದ ಇಡ್ಲಿ ಆಗಿದೆ.
ಈ ರೆಸಿಪಿಯನ್ನು ಹೈದರಾಬಾದ್ ನಲ್ಲಿ ಸಖತ್ ಫೇಮಸ್ ಆಗಿದೆ. ಹೈದರಾಬಾದ್ ನ ಜನಪ್ರಿಯ ತವಾ ಇಡ್ಲಿ ಮಾಡುವುದು ಹೇಗೆ ಎಂದು ನೋಡೋಣ.
ಹೈದರಾಬಾದ್ ನ ಜನಪ್ರಿಯ ತವಾ ಇಡ್ಲಿ ರೆಸಿಪಿ
ಬೇಕಾಗುವ ಪದಾರ್ಥಗಳು
ತವಾ ಇಡ್ಲಿ ಖಾದ್ಯವನ್ನು ತಯಾರಿಸಲು - ಎಣ್ಣೆ, ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ, ಸಣ್ಣದಾಗಿ ಕೊಚ್ಚಿದ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಸಣ್ಣದಾಗಿ ಕೊಚ್ಚಿದ ಟೊಮೆಟೊ, ರುಚಿಗೆ ತಕ್ಕಷ್ಟು ಉಪ್ಪು, ಸಾಂಬಾರ್ ಮಸಾಲಾ, ಸಣ್ಣದಾಗಿ ಕೊಚ್ಚಿದ ಹಸಿರು ಕೊತ್ತಂಬರಿ, ರವೆ ಮತ್ತು ಮೊಸರು ಬೇಕಾಗುತ್ತದೆ.
ಹೈದರಾಬಾದ್ ನ ಜನಪ್ರಿಯ ತವಾ ಇಡ್ಲಿ ರೆಸಿಪಿ ಮಾಡುವ ವಿಧಾನ
ಮೊದಲು ಎಣ್ಣೆ ಬಿಸಿ ಮಾಡಿ. ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಎಲ್ಲವನ್ನೂ ಒಟ್ಟಿಗೆ ಬೇಯಿಸಿ. ಟೊಮ್ಯಾಟೊ ಮತ್ತು ಉಪ್ಪು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಬೇಯಿಸಿ. ಹಸಿರು ಕೊತ್ತಂಬರಿ ಸೊಪ್ಪು, ಸಾಂಬಾರ್ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಅಷ್ಟರಲ್ಲಿ ಒಂದು ಬಟ್ಟಲಿನಲ್ಲಿ ರವೆ, ಮೊಸರು, ಉಪ್ಪು, ಎಣ್ಣೆ ಸೇರಿಸಿ ದಪ್ಪ ಹಿಟ್ಟನ್ನು ತಯಾರಿಸಿ. ಅಗತ್ಯವಿದ್ದರೆ ಇದಕ್ಕೆ ನೀರು ಸೇರಿಸಿ. ಈಗ ಟೊಮೆಟೊ ಮತ್ತು ಈರುಳ್ಳಿ ಮಿಶ್ರಣವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ.
ಇದನ್ನೂ ಓದಿ: ಹಣ್ಣುಗಳ ಸೇವನೆ ಎಷ್ಟು ಅನುಕೂಲಕರ? ಇವುಗಳ ಜೊತೆ ಬೇರೆ ಏನನ್ನು ತಿನ್ನಬೇಕು?
ಈ ನಾಲ್ಕು ಮಿಶ್ರಣಗಳಲ್ಲಿ ಹಿಟ್ಟನ್ನು ಹಾಕಿ ಮತ್ತು ಒಂದು ನಿಮಿಷ ಬೇಯಿಸಿ. ನಂತರ ಬದಿಯನ್ನು ತಿರುಗಿಸಿ ಮತ್ತು ಸ್ವಲ್ಪ ಸಮಯ ಬೇಯಿಸಿ. ಈಗ ನಿಮ್ಮ ತವಾ ಇಡ್ಲಿ ರೆಸಿಪಿ ರೆಡಿಯಾಗಿದೆ. ಬಿಸಿ ಬಿಸಿ ತವಾ ಇಡ್ಲಿ ಸಾಂಬಾರ್ ಮತ್ತು ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ