• Home
  • »
  • News
  • »
  • lifestyle
  • »
  • Breakfast: ಬೆಳಗಿನ ತಿಂಡಿಗೆ ಆರೋಗ್ಯಕರ ಕಾಜು ಮಟರ್ ಮಖಾನಾ, ಅಕ್ಕಿ ರೊಟ್ಟಿಗೆ ಹೀಗೆ ಮಾಡಿ!

Breakfast: ಬೆಳಗಿನ ತಿಂಡಿಗೆ ಆರೋಗ್ಯಕರ ಕಾಜು ಮಟರ್ ಮಖಾನಾ, ಅಕ್ಕಿ ರೊಟ್ಟಿಗೆ ಹೀಗೆ ಮಾಡಿ!

ಅಕ್ಕಿ ರೊಟ್ಟಿ

ಅಕ್ಕಿ ರೊಟ್ಟಿ

ಕಾಜು ಮಟರ್ ಮಖಾನಾ ರೆಸಿಪಿ ಮತ್ತು ಅಕ್ಕಿ ರೊಟ್ಟಿ ತುಂಬಾ ಜನರು ಇಷ್ಟ ಪಟ್ಟು ತಿನ್ನುವ ಪದಾರ್ಥ ಆಗಿದೆ. ಈಗ ಪ್ರತಿಯೊಬ್ಬರೂ ಡಯಟ್ ಕಾನ್ಷಿಯಸ್ ಆಗಿದ್ದಾರೆ. ಮಖಾನಾ ಒಂದು ರೀತಿಯ ಆರೋಗ್ಯಕರ ತಿಂಡಿ. ಇದನ್ನು ಎಲ್ಲರೂ ಇಷ್ಟ ಪಡುತ್ತಾರೆ. ಇಂದು ನಾವು ನಿಮಗಾಗಿ ಟೇಸ್ಟಿ ರೆಸಿಪಿ ತಂದಿದ್ದೇವೆ. ಇದು ಮಾಡಲು ತುಂಬಾ ಸುಲಭ ಮತ್ತು ತುಂಬಾ ಆರೋಗ್ಯಕರ.

ಮುಂದೆ ಓದಿ ...
  • Share this:

    ಹಬ್ಬ (Festival) ಹರಿದಿನಗಳಲ್ಲಿ ಮನೆಯಲ್ಲಿ (Home) ಇರುವ ಎಲ್ಲರೂ ಕುಳಿತು ಸವಿಯಬಹುದಾದ ಬೆಳಗಿನ ತಿಂಡಿ (Morning Breakfast) ಬಗ್ಗೆ ನಾವು ಇಂದು ನೋಡೋಣ. ಬೆಳಗಿನ ತಿಂಡಿ ಹೊಟ್ಟೆ ತುಂಬಿಸುವಂತಿರಬೇಕು. ಮತ್ತು ಶಕ್ತಿ (Energy) ನೀಡುವಂತಿರಬೇಕು. ಬೆಳಗಿನ ತಿಂಡಿಗೆ ನಾವು ಇಂದು ಅಕ್ಕಿ ರೊಟ್ಟಿ ಮತ್ತು ಕಾಜು ಮಟರ್ ಮಖಾನಾ ರೆಸಿಪಿ (Recipe) ಹೇಗೆ ಮಾಡುವುದು ಎಂದು ತಿಳಿಯೋಣ. ನೀವು ಕಾಜು ಮಟರ್ ಮಖಾನಾಗೆ ನಿಮ್ಮಿಷ್ಟದ ಬೇರೆ ರೊಟ್ಟಿ ಮಾಡಿ ಸೇವನೆ ಮಾಡಬಹುದು. ಆರೋಗ್ಯಕರ ಮತ್ತು ರುಚಿಕರ ಪದಾರ್ಥ ಮನೆಯ ಎಲ್ಲಾ ಸದಸ್ಯರೂ ಒಟ್ಟಿಗೆ ಕುಳಿತು ಸವಿಯಬಹುದು. ಅದು ಎಲ್ಲರಿಗೂ ಇಷ್ಟವಾಗುತ್ತದೆ.


    ಅದರಲ್ಲೂ ಕಾಜು ಮಟರ್ ಮಖಾನಾ ಮತ್ತು ಅಕ್ಕಿ ರೊಟ್ಟಿ ತುಂಬಾ ಜನರು ಇಷ್ಟ ಪಟ್ಟು ತಿನ್ನುವ ಪದಾರ್ಥ ಆಗಿದೆ. ಈಗ ಪ್ರತಿಯೊಬ್ಬರೂ ಡಯಟ್ ಕಾನ್ಷಿಯಸ್ ಆಗಿದ್ದಾರೆ. ಮತ್ತು ಯಾರೂ ಹೆಚ್ಚು ಕರಿದ ವಸ್ತುಗಳನ್ನು ತಿನ್ನಲು ಇಷ್ಟ ಪಡಲ್ಲ. ಇಂದು ನಾವು ನಿಮಗಾಗಿ ಟೇಸ್ಟಿ ರೆಸಿಪಿ ತಂದಿದ್ದೇವೆ. ಇದು ಮಾಡಲು ತುಂಬಾ ಸುಲಭ ಮತ್ತು ತುಂಬಾ ಆರೋಗ್ಯಕರ.


    ಮಖಾನಾ ಮತ್ತು ಗೋಡಂಬಿ ಬಳಕೆ ಈ ಪಾಕವಿಧಾನವು ಪ್ರೋಟೀನ್, ಫೈಬರ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಮಖಾನಾ ಒಂದು ರೀತಿಯ ಆರೋಗ್ಯಕರ ತಿಂಡಿ. ಇದನ್ನು ಎಲ್ಲರೂ ಇಷ್ಟ ಪಡುತ್ತಾರೆ. ಜೊತೆಗೆ ಇದು ಬಟಾಣಿಗಳನ್ನು ಸಹ ಹೊಂದಿದೆ. ಇದು ಫೋಲೇಟ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಉತ್ತಮವಾಗಿದೆ.


    ಇದನ್ನೂ ಓದಿ: ರುಚಿಗೆ ಮಾತ್ರವಲ್ಲ, ಚರ್ಮದ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೂ ಬೇಕು ಬಟಾಣಿ ಕಾಳು


    ಕಾಜು ಮಟರ್ ಮಖಾನಾ ಕರಿ ರೆಸಿಪಿ


    ಬೇಕಾಗುವ ಪದಾರ್ಥಗಳು


    ಮೂರು ಕಪ್ ಮಖಾನಾ, ಮೂರು ಟೀ ಸ್ಪೂನ್ ಎಣ್ಣೆ, ಹಸಿರು ಬಟಾಣಿ ಕಾಲು ಕಪ್, ಎರಡು ಕಪ್ ಸಣ್ಣಗೆ ಕತ್ತರಿಸಿದ ಟೊಮೆಟೊ, ಕಾಲು ಕಪ್ ಗೋಡಂಬಿ, ಒಂದು ಟೀ ಸ್ಪೂನ್ ಶುಂಠಿ, ಒಂದು ಟೀ ಸ್ಪೂನ್ ಎಣ್ಣೆ, ಅರ್ಧ ಟೀ ಸ್ಪೂನ್ ಜೀರಿಗೆ, ಎರಡು ಚಿಟಿಕೆ ಇಂಗು, ಎರಡು ಟೀ ಸ್ಪೂನ್ ಕೊತ್ತಂಬರಿ,


    ಕೆಂಪು ಮೆಣಸಿನ ಪುಡಿ ಅರ್ಧ ಟೀಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಒಂದು ಟೀ ಸ್ಪೂನ್ ಸಕ್ಕರೆ, ಕಾಲು ಟೀ ಸ್ಪೂನ್ ಗರಂ ಮಸಾಲಾ ಎರಡು ಟೀ ಸ್ಪೂನ್, ಹಸಿರು ಕೊತ್ತಂಬರಿ ಸಣ್ಣದಾಗಿ ಕೊಚ್ಚಿದ ಕಾಲು ಕಪ್.


    ಮಟರ್ ಮಖಾನಾ ಮಾಡುವ ವಿಧಾನ


    ಒಂದು ಕಡಾಯಿಯಲ್ಲಿ 3 ಚಮಚ ಎಣ್ಣೆ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಮಖಾನಾ ಸೇರಿಸಿ ಮತ್ತು ಗರಿಗರಿಯಾಗುವವರೆಗೆ ಫ್ರೈ ಮಾಡಿ, ನಿರಂತರವಾಗಿ ಬೆರೆಸಿ. ಇದು 3 ರಿಂದ 4 ನಿಮಿಷ ತೆಗೆದುಕೊಳ್ಳುತ್ತದೆ. ನಂತರ ಅದನ್ನು ಪಕ್ಕಕ್ಕೆ ಇರಿಸಿ.


    ಈಗ ಟೊಮೆಟೊ, ಗೋಡಂಬಿ ಮತ್ತು ಶುಂಠಿ ಬೆರೆಸಿ ಪ್ಯೂರೀ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ ಸಿಡಿಯಲು ಬಿಡಿ. ಅದಕ್ಕೆ ಇಂಗು ಸೇರಿಸಿ ಮತ್ತು ಅದು ಸಿಡಿಯುವಾಗ ಟೊಮೆಟೊ ಪೇಸ್ಟ್, ಕೊತ್ತಂಬರಿ, ಮೆಣಸಿನ ಪುಡಿ, ಉಪ್ಪು ಮತ್ತು ಸಕ್ಕರೆ ಸೇರಿಸಿ.


    ನಂತರ ಎಣ್ಣೆಯು ಮಿಶ್ರಣದಿಂದ ಬೇರ್ಪಡುವವರೆಗೆ ಎರಡರಿಂದ ಮೂರು ನಿಮಿಷ ಹುರಿಯಿರಿ. ಹುರಿದ ಮಖಾನಾ ಮತ್ತು ಬಟಾಣಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಮತ್ತು ಸುಮಾರು ಒಂದೂವರೆ ಕಪ್ ನೀರು ಸೇರಿಸಿ. ಕಡಿಮೆ ಉರಿಯಲ್ಲಿ ಬೇಯಿಸಲು ಬಿಡಿ.


    ಉರಿಯನ್ನು ಆಫ್ ಮಾಡಿ. ಗರಂ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ರೋಟಿ, ಪರಾಠ, ಪೂರಿ ಅಥವಾ ಅನ್ನದೊಂದಿಗೆ ಮಖಾನಾ ಮಟರ್ ಕರಿ ಸೇವಿಸಿ.


    ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ಪದಾರ್ಥಗಳು


    ಎರಡು ಕಪ್ ಅಕ್ಕಿ ಹಿಟ್ಟು, ಒಂದು ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಕಪ್ ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಎಂಟು ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆಗಳು, ಒಂದು ಇಂಚಿನ ತುರಿದ ಶುಂಠಿ, ಎರಡು ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿಗಳು, ಒಂದು ಟೀ ಚಮಚ ಜೀರಿಗೆ, ರುಚಿಗೆ ಉಪ್ಪು, ತೈಲ.


    ಅಕ್ಕಿ ರೊಟ್ಟಿ ಮಾಡುವ ವಿಧಾನ


    ಅಕ್ಕಿ ರೊಟ್ಟಿ ಮಾಡಲು ಎರಡು ಕಪ್ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪು ಸೇರಿಸಿ. ಇದರ ನಂತರ, ಅದಕ್ಕೆ ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಜೀರಿಗೆ ಮತ್ತು ಉಪ್ಪು ಸೇರಿಸಿ.


    ಇದನ್ನೂ ಓದಿ: ದೀಪಾವಳಿ ನಂತರ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯ ತಡೆಯಲು ಹೀಗೆ ಮಾಡಿ


    ಈಗ ನಯವಾದ ಮತ್ತು ಮೃದುವಾದ ಹಿಟ್ಟನ್ನು ಬೆರೆಸಿ. ಹತ್ತು ನಿಮಿಷ ಮುಚ್ಚಿಡಿ. ಹಿಟ್ಟನ್ನು ಎಣ್ಣೆಯಿಂದ ಗ್ರೀಸ್ ಮಾಡಿ. ನಾನ್ ಸ್ಟಿಕ್ ತವಾ ತೆಗೆದುಕೊಳ್ಳಿ. ಅದರ ಮೇಲೆ ಎಣ್ಣೆ ಸುರಿಯಿರಿ ಮತ್ತು ಬಿಸಿ ಮಾಡಿ. ಈಗ ಅಕ್ಕಿ ಹಿಟ್ಟಿನ ಉಂಡೆಗಳನ್ನು ಮಾಡಿ, ದುಂಡಗೆ ಆಕಾರ ಮಾಡಿ. ತವಾಗೆ ಹಾಕಿ. ಎರಡೂ ಬದಿ ಚೆನ್ನಾಗಿ ಬೇಯಿಸಿ. ಈಗ ರೊಟ್ಟಿ ರೆಡಿಯಾಗಿದೆ.

    Published by:renukadariyannavar
    First published: