ಬೆಳಗಿನ ತಿಂಡಿಗೆ (Morning Breakfast) ಪೋಷಕಾಂಶ (Nutrients) ಭರಿತ ಹಾಗೂ ಉತ್ತಮ ಆಹಾರ (Good Food) ಸೇವನೆ ಮಾಡುವುದು ತುಂಬಾ ಮುಖ್ಯ. ತಿಂಡಿಯು ಬೆಳಗಿನ ಮೊದಲ ಊಟವಾಗಿದೆ. ನೀವು ದಿನವೂ ಒಂದೇ ರೀತಿಯ ಆಹಾರ ಮಾಡಿ ಸೇವಿಸುವ ಬದಲು ವಿಶಿಷ್ಟವಾಗಿ ಖಿಚಡಿ (Khichdi) ತಯಾರಿಸಿ ಸೇವಿಸಿ. ಆರೋಗ್ಯಕರ (Healthy) ಆಹಾರ ಪದಾರ್ಥಗಳಲ್ಲಿ ಖಿಚಡಿ ಪ್ರಮುಖ ಸ್ಥಾನ ಹೊಂದಿದೆ. ಖಿಚಡಿ ಬೇಗ ಜೀರ್ಣವಾಗುತ್ತದೆ. ಖಿಚಡಿಯು ಅನಾರೋಗ್ಯದ ಸಮಯದಲ್ಲೂ ಸೇವನೆ ಮಾಡಬಹುದಾದ ಆಹಾರ ಪದಾರ್ಥ. ವಾರಕ್ಕೊಮ್ಮೆ ಆದರೂ ಖಿಚಡಿ ಸೇವನೆ ಮಾಡಿ. ಇಂದು ನಾವು ಖಿಚಡಿ ಮಾಡುವುದು ಹೇಗೆ? ಯಾವ ಪದಾರ್ಥ ಬಳಸಿ ಖಿಚಡಿ ಖಾದ್ಯ ತಯಾರಿಸಲಾಗುತ್ತದೆ ಎಂದು ಇಲ್ಲಿ ನೋಡೋಣ.
ಬೆಳಗಿನ ತಿಂಡಿಗೆ ಆರೋಗ್ಯಕರ ಖಿಚಡಿ ರೆಸಿಪಿ
ಭಾರತದ ಹಲವು ಭಾಗಗಳಲ್ಲಿ ಜನರು ಖಿಚಡಿ ಖಾದ್ಯ ತಯಾರಿಸಿ ತಿನ್ನಲು ಇಷ್ಟ ಪಡುತ್ತಾರೆ. ಜನಪ್ರಿಯ ಖಾದ್ಯಗಳಲ್ಲಿ ಖಿಚಡಿ ಸಹ ಒಂದಾಗಿದೆ. ಹಬ್ಬಗಳಲ್ಲಿ ಹಾಗೂ ಅನಾರೋಗ್ಯದ ಸಮಯದಲ್ಲೂ ಖಿಚಡಿ ಸೇವನೆ ಮಾಡುವುದು ಸಾಕಷ್ಟು ಆರೋಗ್ಯಕರ ಆಯ್ಕೆ ಆಗಿದೆ.
ಖಿಚಡಿ ಖಾದ್ಯವನ್ನು ಎಲ್ಲಾ ವಯೋಮಾನದವರು ತಿನ್ನಬೇಕು. ಹಲವು ದೇವಾಲಯಗಳಲ್ಲಿ ಖಿಚಡಿಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಪೋಷಕಾಂಶ ಸಮೃದ್ಧ ಖಿಚಡಿಯು ಅಜೀರ್ಣ, ಅತಿಸಾರ, ಮಲಬದ್ಧತೆ ಹಾಗೂ ಜೀರ್ಣಕ್ರಿಯೆ ಸಂಬಂಧಿಸಿದ ಎಲ್ಲಾ ಸಮಸ್ಯೆ ನಿವಾರಣೆಗೆ ಸಹಕಾರಿ.
ಆಯುರ್ವೇದ ಆಹಾರ ಪದ್ಧತಿಯಲ್ಲಿ ಖಿಚಡಿಗೆ ವಿಶೇಷ ಸ್ಥಾನವಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಖಿಚಡಿ ಸಹಕಾರಿ ಆಗಿದೆ. ಆಹಾರದ ಗುಣಮಟ್ಟ ಹೆಚ್ಚಿಸುತ್ತದೆ.
ಖಿಚಡಿ ರೆಸಿಪಿ
ಬೇಕಾಗುವ ಸಾಮಗ್ರಿಗಳು
ಅರ್ಧ ಕಪ್ ಅಕ್ಕಿ, ಅರ್ಧ ಕಪ್ ಹೆಸರು ಬೇಳೆ, ಕಾಲು ಕಪ್ ಕ್ಯಾರೆಟ್, ಕಾಲು ಕಪ್ ಬಟಾಣಿ, ಕಾಲು ಕಪ್ ಎಲೆಕೋಸು, ಕಾಲು ಕಪ್ ಟೊಮೆಟೊ, ಕೊತ್ತಂಬರಿ ಸೊಪ್ಪು, ಆರು ಚಮಚ ತುಪ್ಪ, ಒಂದು ಚಮಚ ಜೀರಿಗೆ, ಒಂದು ಚಮಚ ಸಾಸಿವೆ, ಎರಡು ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ,
ತುರಿದ ಶುಂಠಿ ಒಂದು ಟೀಸ್ಪೂನ್, ಎಂಟು ಎಸಳು ಬೆಳ್ಳುಳ್ಳಿ, ಹತ್ತು ಲವಂಗ, ಕಾಲು ಚಮಚ ಅರಿಶಿನ, ಅರ್ಧ ಟೀಸ್ಪೂನ್ ಕರಿಮೆಣಸಿನ ಪುಡಿ, ಅರ್ಧ ಚಮಚ ಕೊತ್ತಂಬರಿ ಪುಡಿ, ಅರ್ಧ ಟೀಸ್ಪೂನ್ ಗರಂ ಮಸಾಲಾ, ಉಪ್ಪು ರುಚಿಗೆ ತಕ್ಕಷ್ಟು.
ಖಿಚಡಿ ರೆಸಿಪಿ ತಯಾರಿಸುವ ವಿಧಾನ
ಅಕ್ಕಿ ಮತ್ತು ಹೆಸರು ಬೇಳೆಯನ್ನು 20 ನಿಮಿಷ ನೀರಿನಲ್ಲಿ ನೆನೆಸಿ. ನಂತರ ಅಕ್ಕಿ ಮತ್ತು ಹೆಸರು ಬೇಳೆಯನ್ನು ಪ್ರೆಶರ್ ಕುಕ್ಕರ್ ಗೆ ಹಾಕಿ. ನಂತರ ಬೇಳೆ ಮತ್ತು ಅಕ್ಕಿಯ ಪ್ರಮಾಣಕ್ಕಿಂತ ಮೂರು ಪಟ್ಟು ಹೆಚ್ಚು ನೀರು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
ನಂತರ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ. 6 ಸೀಟಿಯ ನಂತರ ಗ್ಯಾಸ್ ಆಫ್ ಮಾಡಿ. ನಂತರ ಕ್ಯಾರೆಟ್, ಎಲೆಕೋಸು ಮತ್ತು ಟೊಮೆಟೊ ಸಣ್ಣದಾಗಿ ಕತ್ತರಿಸಿ ಇಡಿ. ಗ್ಯಾಸ್ ಆನ್ ಮಾಡಿ ಪಾತ್ರೆ ಇಡಿ. ಪಾತ್ರೆ ಬಿಸಿಯಾದ ಕೂಡಲೇ ತುಪ್ಪ ಹಾಕಿ.
ತುಪ್ಪ ಬಿಸಿಯಾದ ಕೂಡಲೇ ಅದಕ್ಕೆ ಹಸಿ ಮೆಣಸಿನಕಾಯಿ, ಜೀರಿಗೆ, ಸಾಸಿವೆ ಹಾಕಿ. ಅದು ಚಟ ಪಟ ಸಿಡಿದ ನಂತರ ತುರಿದ ಶುಂಠಿ ಮತ್ತು ಕತ್ತರಿಸಿದ ಬೆಳ್ಳುಳ್ಳಿ ಸೇರಿಸಿ ಫ್ರೈ ಮಾಡಿ. ನಂತರ ಅದಕ್ಕೆ ಕತ್ತರಿಸಿದ ಕ್ಯಾರೆಟ್, ಎಲೆಕೋಸು, ಬಟಾಣಿ ಮತ್ತು ಟೊಮ್ಯಾಟೊ ಸೇರಿಸಿ ಫ್ರೈ ಮಾಡಿ.
ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಈ ಸೂಪರ್ ಫುಡ್ ಸೇವಿಸಿ
ನಂತರ ಅರಿಶಿನ, ಕರಿಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲಾ ಸೇರಿಸಿ. 5 ನಿಮಿಷ ಫ್ರೈ ಮಾಡಿ. ನಂತರ ಕುದಿಸಿದ್ದ ಅಕ್ಕಿ ಮತ್ತು ಬೇಳೆ ಖಿಚಡಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕೊತ್ತಂಬರಿ ಸೊಪ್ಪು ಹಾಕಿ. ಈಗ ಬಿಸಿ ಬಿಸಿಯಾದ ಖಿಚಡಿ ರೆಡಿಯಾಗಿದೆ. ಸರ್ವ್ ಮಾಡಿ ಸವಿಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ