ಬೆಳಗ್ಗಿನ ತಿಂಡಿಗೆ (Morning Breakfast) ದಿನವೂ ಒಂದೇ ರೀತಿಯ ಆಹಾರ (Food) ಸೇವನೆ ಬೋರ್ ಆಗುತ್ತದೆ. ಜೊತೆಗೆ ಎಲ್ಲಾ ರೀತಿಯ ಪೋಷಕಾಂಶ (Nutrients) ಸಿಗುವುದಿಲ್ಲ. ಹಾಗಾಗಿ ದಿನದ ಮೊದಲ ಹಾಗೂ ಪ್ರಮುಖ ಊಟವಾದ (Main Meal) ಬೆಳಗ್ಗಿನ ತಿಂಡಿಗೆ ಪೋಷಕಾಂಶ ಭರಿತ ಹಾಗೂ ಆರೋಗ್ಯಕರ ಪದಾರ್ಥ ಸೇವನೆ ಮಾಡುವುದು ಮುಖ್ಯವಾಗುತ್ತದೆ. ಕೆಲವರಿಗೆ ಬೆಳಗಿನ ತಿಂಡಿ ಪ್ರಿಪೇರ್ ಮಾಡೋಕೆ ತುಂಬಾ ಸಮಯ ಇರಲ್ಲ. ಹಾಗಾಗಿ ಅವರು ಕೆಲವೊಮ್ಮೆ ಬ್ರೇಕ್ ಫಾಸ್ಟ್ ಸ್ಕಿಪ್ ಮಾಡ್ತಾರೆ. ಆದ್ರೆ ಹಾಗೇ ಮಾಡುವ ಬದಲು ನೀವು ಮನೆಯಲ್ಲಿ ತರಕಾರಿ ಮತ್ತು ಹಣ್ಣುಗಳ ಸಿಂಪಲ್ ಮತ್ತು ಆರೋಗ್ಯಕರ ಸ್ಮೂಥಿ (Healthy Smoothie) ಮಾಡಿ ಸೇವನೆ ಮಾಡಬಹುದು.
ಬೆಳಗಿನ ತಿಂಡಿಗೆ ಆರೋಗ್ಯಕರ ಸ್ಮೂಥಿ ಪಾಕವಿಧಾನ
ಬೇಕಾಗುವ ಸಾಮಗ್ರಿಗಳು
ನಾಲ್ಕು ಬಾಳೆಹಣ್ಣು, ಮುನ್ನೂರು ಗ್ರಾಂ ಪಾಲಕ್, ನಾಲ್ಕು ಚಮಚ ಜೇನುತುಪ್ಪ, ಹಾಲು, ಬಾದಾಮಿ, ತೆಂಗಿನಕಾಯಿ, ಓಟ್ಸ್ ಬೇಕು.
ಪಾಲಕ್ ಮತ್ತು ಬಾಳೆಹಣ್ಣಿನ ಸ್ಮೂಥಿ ರೆಸಿಪಿ ತಯಾರಿಸುವ ವಿಧಾನ
ಬಾಳೆ ಹಣ್ಣಿನ ಸಿಪ್ಪೆ ತೆಗೆಯಿರಿ. ನಂತರ ಹಣ್ಣನ್ನು ಬ್ಲೆಂಡರ್ ಜಾರ್ ಗೆ ಹಾಕಿರಿ. ಜೊತೆಗೆ ಪಾಲಕ್ ಹಾಕಿ ಮತ್ತು ಅಗತ್ಯಕ್ಕೆ ತಕ್ಕಷ್ಟು ಹಾಲನ್ನು ಹಾಕಿ ಜಾರ್ ನಲ್ಲಿ ರುಬ್ಬಿರಿ. ಅವುಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. ಈಗ ಗ್ಲಾಸ್ ಗೆ ಸ್ಮೂಥಿ ಸರ್ವ್ ಮಾಡಿ. ಅದಕ್ಕೆ ಜೇನುತುಪ್ಪ ಸೇರಿಸಿ ಸವಿಯಿರಿ.
ಆರೋಗ್ಯಕರ ಉಪಹಾರ
ಪಾಲಕ್ ಮತ್ತು ಬಾಳೆಹಣ್ಣಿನ ಸ್ಮೂಥಿ, ಬೆಳಗಿನ ತಿಂಡಿಗೆ ಆರೋಗ್ಯಕರ ಆಯ್ಕೆ ಆಗಿದೆ ಅಂತಾರೆ ತಜ್ಞೆ ಪೂನಂ ದುನೇಜಾ. ಪಾಲಕ್ ಮತ್ತು ಬಾಳೆಹಣ್ಣಿನ ಸಂಯೋಜನೆಯು ಆರೋಗ್ಯ ಹಾಗೂ ಉತ್ತಮ ಪೋಷಕಾಂಶ ಒದಗಿಸುತ್ತದೆ.
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಚಳಿಗಾಲದಲ್ಲಿ ಇದರ ಸೇವನೆಯು ಶೀತ ಮತ್ತು ಕೆಮ್ಮು ನಿವಾರಣೆಗೆ ಸಹಕಾರಿ.
ಪಾಲಕದಲ್ಲಿರುವ ಕ್ಯಾಲ್ಸಿಯಂ, ವಿಟಮಿನ್ ಎ, ಕಬ್ಬಿಣ ಮತ್ತು ವಿಟಮಿನ್ ಕೆ ಸಮೃದ್ಧವಾಗಿದೆ. ಅಲ್ಲದೆ, ಇದು ಪೊಟ್ಯಾಸಿಯಮ್, ಸೋಡಿಯಂ, ಮೆಗ್ನೀಸಿಯಂ ಅಗತ್ಯ ಖನಿಜಗಳು ಮಲಬದ್ಧತೆ, ಜೀರ್ಣಕಾರಿ ಸಮಸ್ಯೆ ನಿವಾರಣೆ ಮಾಡುತ್ತದೆ.
ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ಮಕ್ಕಳು ಮತ್ತು ವಯಸ್ಕರರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಬಿ 6, ವಿಟಮಿನ್ ಸಿ, ಮ್ಯಾಂಗನೀಸ್, ಕಬ್ಬಿಣ, ವಿಟಮಿನ್ ಎ, ಫೈಬರ್, ಪೊಟ್ಯಾಸಿಯಮ್, ಬಯೋಟಿನ್ ಇದೆ.
ಬಾಳೆಹಣ್ಣುಗಳು ತುಂಬಾ ಉಪಯುಕ್ತವಾದ ಕೊಬ್ಬನ್ನು ಹೊಂದಿವೆ. ಇದು ದೈಹಿಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಚಾಕೊಲೇಟ್ ಕಡಲೆಕಾಯಿ ಬೆಣ್ಣೆ ಬಾಳೆಹಣ್ಣಿನ ಸ್ಮೂಥಿ
ಬಾಳೆಹಣ್ಣು, ಕೋಕೋ ಪೌಡರ್, ಕಡಲೆಕಾಯಿ ಬೆಣ್ಣೆ ಒಂದೆರಡು ಟೇಬಲ್ ಸ್ಪೂನ್, ವೆನಿಲ್ಲಾ ಸಾರ, ಹಾಲು, ಡ್ರೈ ಫ್ರೂಟ್ಸ್, ಬಾದಾಮಿ, ಗೋಡಂಬಿ, ದ್ರಾಕ್ಷಿ, ವಾಲ್ನಟ್ಸ್ ಬೇಕು.
ಚಾಕೊಲೇಟ್ ಕಡಲೆಕಾಯಿ ಬೆಣ್ಣೆ ಬಾಳೆಹಣ್ಣಿನ ಸ್ಮೂಥಿ ಮಾಡುವ ವಿಧಾನ
ಬಾಳೆಹಣ್ಣು, ಕೋಕೋ ಪೌಡರ್, ಕಡಲೆಕಾಯಿ ಬೆಣ್ಣೆ ಒಂದೆರಡು ಟೇಬಲ್ ಸ್ಪೂನ್, ವೆನಿಲ್ಲಾ ಸಾರ, ಹಾಲನ್ನು ಬ್ಲೆಂಡರ್ ಜಾರ್ ಗೆ ಹಾಕಿ ಚೆನ್ನಾಗಿ ರುಬ್ಬಿರಿ. ನಂತರ ಡ್ರೈ ಫ್ರೂಟ್ಸ್, ಬಾದಾಮಿ, ಗೋಡಂಬಿ, ದ್ರಾಕ್ಷಿ, ವಾಲ್ನಟ್ಸ್ ಹಾಕಿ , ಗ್ಲಾಸ್ ಗೆ ಸರ್ವ್ ಮಾಡಿ, ಸವಿಯಿರಿ.
ಇದನ್ನೂ ಓದಿ: ರೆಡ್ ರಾಸ್ಪ್ಬೆರಿ ಟೀ ಆರೋಗ್ಯಕಾರಿಯೇ? ಇದು ಹೇಗೆ ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ?
ಈ ಚಾಕೊಲೇಟ್ ಕಡಲೆಕಾಯಿ ಬೆಣ್ಣೆ ಬಾಳೆಹಣ್ಣಿನ ಸ್ಮೂಥಿ ಸಾಕಷ್ಟು ರುಚಿಕರ ಮತ್ತು ಹೆಲ್ದೀ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ