ಬೆಳಗಿನ ತಿಂಡಿಗೆ (Morning Breakfast) ನೀವು ಹಲವು ಪದಾರ್ಥಗಳನ್ನು (Ingredients) ಮಾಡಿ ಸೇವನೆ ಮಾಡಿರಬಹುದು. ಕೆಲವೊಮ್ಮೆ ಬೆಳಗಿನ ತಿಂಡಿಯನ್ನು ಬ್ರಂಚ್ ಆಗಿ ತಿಂದಿರಬಹುದು. ಕೆಲವರು ಬೆಳಗಿನ ತಿಂಡಿಯನ್ನು ಒಂಭತ್ತು ಗಂಟೆಯೊಳಗೆ ಮಾಡಲ್ಲ. ಬದಲಾಗಿ ಬೆಳಗಿನ ಎಲ್ಲಾ ಕೆಲಸ ಮುಗಿಸಿ ಹತ್ತುವರೆ ಹನ್ನೊಂದು ಗಂಟೆಗೆ ತಿಂಡಿ ತಿನ್ನುತ್ತಾರೆ. ಹೀಗೆ ನೀವು ತಿಂಡಿಯ ಸಮಯ ತುಂಬಾ ಲೇಟ್ ಆಗುತ್ತಿದ್ದರೆ, ನಿಮಗಾಗಿ ಗುಜರಾತ್ ನ (Gujrat) ಸಖತ್ ಫೇಮಸ್ ಖಾದ್ಯವೊಂದನ್ನು (Famous Recipe) ತಂದಿದ್ದೇವೆ. ಅದೇ ಗುಜರಾತ್ ನಲ್ಲಿ ಪ್ರತೀ ಮನೆಗಳಲ್ಲಿ ತಯಾರಾಗುವ ಖಖ್ರಾ ರೆಸಿಪಿ. ಇಂದು ನಾವು ಗುಜರಾತ್ ಶೈಲಿಯ ಮಸಾಲಾ ಖಖ್ರಾ ರೆಸಿಪಿ ಮಾಡುವುದು ಹೇಗೆ ಅಂತಾ ಇಲ್ಲಿ ತಿಳಿಯೋಣ.
ಬೆಳಗಿನ ತಿಂಡಿಗೆ ಗುಜರಾತ್ ಶೈಲಿಯ ಮಸಾಲಾ ಖಖ್ರಾ ರೆಸಿಪಿ
ಬೆಳಗಿನ ತಿಂಡಿ ಸೇವನೆ ಮಾಡದೇ ಇದ್ದರೆ, ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗುತ್ತದೆ. ಹಾಗಾಗಿ ಬೆಳಗಿನ ತಿಂಡಿಯಲ್ಲಿ ನೀವು ಲಘು ಆಹಾರ ಸೇವನೆ ಮಾಡಬಹುದು. ತಡವಾದ್ರೂ ಪರವಾಗಿಲ್ಲ, ಸಲಾಡ್, ಜ್ಯೂಸ್, ಅವಲಕ್ಕಿಯಂತಹ ಕೆಲ ಖಾದ್ಯಗಳನ್ನು ಮಾಡಿ ಸೇವಿಸುವುದು ಉತ್ತಮ.
ಇಂದು ನಾವು ಹಿಟ್ಟು ಅಥವಾ ಎಣ್ಣೆಯುಕ್ತ ಪದಾರ್ಥಗಳ ಬದಲು ಹೆಲ್ದೀ ಖಾದ್ಯ ಖಖ್ರಾ ಮಾಡುವುದು ಹೇಗೆ ಅಂತಾ ನೋಡೋಣ. ಹಗುರ ಮತ್ತು ಆರೋಗ್ಯಕರ ಪದಾರ್ಥವಾಗಿದೆ ಖಖ್ರಾ. ಗುಜರಾತಿ ಶೈಲಿಯ ಮಸಾಲಾ ಖಖ್ರಾ ಮಾಡುವ ಆರೋಗ್ಯಕರ ಮತ್ತು ಗರಿಗರಿಯಾದ ಪಾಕವಿಧಾನ ಹೀಗಿದೆ. ಇದು ಹಸಿವನ್ನು ನೀಗಿಸಲು ಸಹಾಯ ಮಾಡುತ್ತದೆ.
ಗುಜರಾತಿ ಶೈಲಿಯ ಮಸಾಲಾ ಖಖ್ರಾ ಮಾಡಲು ಬೇಕಾಗುವ ಪದಾರ್ಥಗಳು
ಎರಡು ಕಪ್ ಗೋಧಿ ಹಿಟ್ಟು, ಎರಡು ಟೀ ಸ್ಪೂನ್ ಕಡಲೆಬೆಳೆ ಹಿಟ್ಟು, ನಾಲ್ಕು ಟೀ ಸ್ಪೂನ್ ದೇಸಿ ತುಪ್ಪ, ಒಂದು ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಕಪ್ ಕಡಿಮೆ ಕೊಬ್ಬಿನ ಹಾಲು, ಎಲ್ಲಾ ರೀತಿಯ ಮಸಾಲೆ, ಕಲ್ಲುಪ್ಪು, ಅರ್ಧ ಚಮಚ ಕೆಂಪು ಮೆಣಸಿನಕಾಯಿ, ಅರ್ಧ ಟೀಚಮಚ ಗರಂ ಮಸಾಲಾ, ಅರ್ಧ ಟೀಚಮಚ ಅರಿಶಿನ ಪುಡಿ, ಅರ್ಧ ಟೀಚಮಚ ಜೀರಿಗೆ ಪುಡಿ ಬೇಕು.
ಗುಜರಾತಿ ಶೈಲಿಯ ಮಸಾಲಾ ಖಖ್ರಾ ಪಾಕವಿಧಾನ ಹೀಗಿದೆ
ಮೊದಲು ದೊಡ್ಡ ಬಟ್ಟಲಿಗೆ ಗೋಧಿ ಹಿಟ್ಟು ಹಾಕಿ. ಅದಕ್ಕೆ ತುಪ್ಪ ಸೇರಿಸಿ. ಉಪ್ಪು ಮತ್ತು ಇತರೆ ಎಲ್ಲಾ ಮಸಾಲೆ ಸೇರಿಸಿ. ಉಗುರು ಬೆಚ್ಚಗಿನ ನೀರನ್ನು ಸೇರಿಸಿ ಹಿಟ್ಟನ್ನು ಕಲೆಸಿ. ನಂತರ ಹಿಟ್ಟನ್ನು ಚೆನ್ನಾಗಿ ನಾದಿ, ಮೇಲೆ ಸ್ವಲ್ಪ ತುಪ್ಪ ಹಚ್ಚಿರಿ. 25 ನಿಮಿಷ ನೆನೆಯಲು ಬಿಡಿ.
ನಂತರ ಸಣ್ಣ ಸಣ್ಣ ಹಿಟ್ಟಿನ ಉಂಡೆ ಮಾಡಿ. ಒಂದೊಂದೇ ಹಿಟ್ಟಿನ ಉಂಡೆಯನ್ನು ಚಪಾತಿಯಂತೆ ಲಟ್ಟಿಸಿ, ದುಂಡನೆಯ ಆಕಾರಕ್ಕೆ ತನ್ನಿ. ನಂತರ ತವಾದ ಮೇಲೆ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ನಂತರ ಬೆಂಕಿಯ ಝಳಕ್ಕೆ ಖಖ್ರಾ ಹಾಕಿ ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿ ತೆಗೆಯಿರಿ. ಅದು ತಣ್ಣಗಾದ ನಂತರ ಚಹಾ ಅಥವಾ ಚಟ್ನಿ ಜೊತೆ ತಿನ್ನಿರಿ.
ಸಂಪೂರ್ಣ ಗೋಧಿ ಹಿಟ್ಟನ್ನು ಇಲ್ಲಿ ಬಳಸಿದ್ದರಿಂದ ಉತ್ತಮ ಪ್ರಮಾಣದ ಆಹಾರದ ಫೈಬರ್, ರಂಜಕ, ಪ್ರೋಟೀನ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ಗಳು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೋಲೇಟ್ ಮತ್ತು ಥಯಾಮಿನ್ ಅನ್ನು ದೇಹಕ್ಕೆ ಒದಗಿಸುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಮಕ್ಕಳನ್ನು ಕಾಡುತ್ತೆ ಚರ್ಮದ ಸಮಸ್ಯೆ! ಹೀಗಿರಲಿ ನಿಮ್ಮ ಕಾಳಜಿ
ಇದು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ. ಜೊತೆಗೆ ರೋಗ ನಿರೋಧಕ ವ್ಯವಸ್ಥೆ ಸುಧಾರಿಸುತ್ತದೆ. ಕಡಲೆಬೇಳೆ ಹಿಟ್ಟು ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತದೆ. ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ