• Home
  • »
  • News
  • »
  • lifestyle
  • »
  • Morning Breakfast: ಮನೆಯಲ್ಲಿಯೇ ಮಾಡಿ ಹೋಟೆಲ್ ಶೈಲಿಯ ಗ್ರೀನ್ ಪಾವ್​ ಭಾಜಿ

Morning Breakfast: ಮನೆಯಲ್ಲಿಯೇ ಮಾಡಿ ಹೋಟೆಲ್ ಶೈಲಿಯ ಗ್ರೀನ್ ಪಾವ್​ ಭಾಜಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಾವ್ ಭಾಜಿ ತಿಂದ್ರೆ ತೂಕ ಹೆಚ್ಚಾಗುತ್ತೆ ಅನ್ನೋ ಚಿಂತೆಯಿದ್ರೆ ಅದ್ರಿಂದ ಹೊರ ಬನ್ನಿ. ಯಾಕಂದ್ರೆ ಇಲ್ಲಿ ನಾವು ಆರೋಗ್ಯಕರವಾಗಿ ಪಾವ್ ಭಾಜಿ ಹೇಗೆ ಮಾಡ್ಬೇಕು ಅಂತಾ ಹೇಳಿ ಕೊಡ್ತಿದ್ದೀವಿ. ಇದು ನಿಮ್ಮ ರುಚಿಯನ್ನು ತಣಿಸುತ್ತದೆ. ಆರೋಗ್ಯಕರ ಮತ್ತು ಟೇಸ್ಟಿ ಗ್ರೀನ್ ಪಾವ್ ಭಾಜಿ ರೆಸಿಪಿ ಹೇಗೆ ಮಾಡಿದ್ರೆ ಆರೋಗ್ಯಕರ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಅಂತಾ ನೋಡೋಣ.

ಮುಂದೆ ಓದಿ ...
  • Share this:

    ಸ್ಟ್ರೀಟ್ ಫುಡ್‌ ನಿಂದ ಹಿಡಿದು ಬೆಳಗಿನ ಉಪಾಹಾರದ (Morning Breakfast) ತನಕ ತುಂಬಾ ಜನರಿಗೆ ಪಾವ್ ಭಾಜಿ (Pav Bhaji) ಅಂದ್ರೆ ಸಖತ್ ಇಷ್ಟ. ಹಾಗಾದ್ರೆ ಇಂದು ನಾವು ಪಾವ್ ಭಾಜಿ ಪ್ರಿಯರಿಗಾಗಿ ಆರೋಗ್ಯಕರ (Healthy) ಪಾವ್ ಭಾಜಿ ರೆಸಿಪಿಯನ್ನು (Recipe) ಬೆಳಗಿನ ಉಪಹಾರಕ್ಕೆ ಮನೆಯಲ್ಲೇ ಮಾಡೋದು ಹೇಗೆ ಅಂತಾ ನೋಡೋಣ. ಪಾವ್ ಭಾಜಿ ಎಲ್ಲರ ಮೆಚ್ಚಿನ ಆಹಾರ ಆಗಿದೆ. ಇದರ ಕಟುವಾದ ರುಚಿಯು ಮಕ್ಕಳಿಂದ ಹಿಡಿದು ದೊಡ್ಡವರನ್ನೂ ಸೆಳೆಯುತ್ತದೆ. ನೀವು ಸಹ ಪಾವ್ ಭಾಜಿ ರುಚಿಗೆ ಮನಸೋತಿದ್ದರೆ, ತುಂಬಾ ಇಷ್ಟ ಪಡ್ತಿದ್ರೆ ಆರೋಗ್ಯಕರ ಪಾವ್ ಭಾಜಿಯನ್ನು ಮನೆಯಲ್ಲೇ ಮಾಡಿ ಸೇವಿಸಿ.


    ಬೆಳಗಿನ ತಿಂಡಿಗೆ ಆರೋಗ್ಯಕರ ಗ್ರೀನ್ ಪಾವ್ ಭಾಜಿ


    ಪಾವ್ ಭಾಜಿ ತಿಂದ್ರೆ ತೂಕ ಹೆಚ್ಚಾಗುತ್ತೆ ಅನ್ನೋ ಚಿಂತೆಯಿದ್ರೆ ಅದ್ರಿಂದ ಹೊರ ಬನ್ನಿ. ಯಾಕಂದ್ರೆ ಇಲ್ಲಿ ನಾವು ಆರೋಗ್ಯಕರವಾಗಿ ಪಾವ್ ಭಾಜಿ ಹೇಗೆ ಮಾಡ್ಬೇಕು ಅಂತಾ ಹೇಳಿ ಕೊಡ್ತಿದ್ದೀವಿ.


    ಇದು ನಿಮ್ಮ ರುಚಿಯನ್ನು ತಣಿಸುತ್ತದೆ. ಆರೋಗ್ಯಕರ ಮತ್ತು ಟೇಸ್ಟಿ ಗ್ರೀನ್ ಪಾವ್ ಭಾಜಿ ರೆಸಿಪಿ ಹೇಗೆ ಮಾಡಿದ್ರೆ ಆರೋಗ್ಯಕರ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಅಂತಾ ನೋಡೋಣ.




    ಗ್ರೀನ್ ಪಾವ್ ಭಾಜಿ ರೆಸಿಪಿ ಮಾಡಲು ಬೇಕಾಗುವ ಪದಾರ್ಥಗಳು


    ಪಾಲಕ ಎರಡು ಕಪ್, ಕ್ಯಾಪ್ಸಿಕಂ ನಾಲ್ಕು, ಹಸಿರು ಬಟಾಣಿ ಒಂದು ಕಪ್, ಆರು ಹಸಿರು ಟೊಮ್ಯಾಟೊ, ಐದು ಈರುಳ್ಳಿ, ಹಸಿರು ಬೀನ್ಸ್ ಒಂದು ಕಪ್, ಐದು ಹಸಿರು ಮೆಣಸಿನಕಾಯಿ, ಹಸಿರು ಕೊತ್ತಂಬರಿ ಸೊಪ್ಪು ಒಂದು ಚಿಕ್ಕ ಬಟ್ಟಲು, ಒಂದು ಚಮಚ ಪುದೀನ, ಎಲೆಕೋಸು ಒಂದು ಕಪ್ ಬೇಕು.


    ಮಸಾಲೆಗೆ ಬೇಕಾಗುವ ಪದಾರ್ಥಗಳು


    ಕಲ್ಲು ಉಪ್ಪು ರುಚಿಗೆ ತಕ್ಕಂತೆ, ಕೆಂಪು ಮೆಣಸಿನಕಾಯಿ ಪುಡಿ ಟೀಸ್ಪೂನ್, ಪಾವ್ ಭಾಜಿ ಮಸಾಲಾ  ಐದು ಟೀಸ್ಪೂನ್, ಅರಿಶಿನ ಪುಡಿ ಅರ್ಧ ಟೀಚಮಚ, ಇಂಗು ಎರಡು ಪಿಂಚ್ಗಳು,


    ಜೀರಿಗೆ ಒಂದು ಟೀಚಮಚ, ಕೊತ್ತಂಬರಿ ಪುಡಿ ಒಂದು ಟೀಸ್ಪೂನ್, ಬೆಳ್ಳುಳ್ಳಿ ಹಾಗೂ ಶುಂಠಿ ಪೇಸ್ಟ್ ಒಂದು ಟೀಸ್ಪೂನ್, ದೇಸಿ ತುಪ್ಪ ಮೂರು ಟೀ ಸ್ಪೂನ್, ಗೋಧಿ ಪಾವ್ ಅಗತ್ಯಕ್ಕೆ ತಕ್ಕಷ್ಟು ಬೇಕು.


    ಆರೋಗ್ಯಕರ ಗ್ರೀನ್ ಪಾವ್ ಭಾಜಿ ಹೇಗೆ ತಯಾರಿಸುವುದು?


    ಮೊದಲು ಪಾಲಕ ಕುದಿಸಿ ಮತ್ತು ಸ್ವಲ್ಪ ತಣ್ಣಗಾದ ನಂತರ ಮಿಕ್ಸಿಯಲ್ಲಿ ಹಸಿರು ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ, ಪಾಲಕ್ ಸೊಪ್ಪು ಸೇರಿಸಿ ಪಾಲಕ್ ಪ್ಯೂರಿ ತಯಾರಿಸಿ. ಹಾಗೂ ತರಕಾರಿಗಳನ್ನು ನುಣ್ಣಗೆ ಕತ್ತರಿಸಿಡಿ.


    ಪಾತ್ರೆ ಬಿಸಿ ಮಾಡಿ, ಚಮಚ ದೇಸಿ ತುಪ್ಪ ಸೇರಿಸಿ. ಇಂಗು ಮತ್ತು ಜೀರಿಗೆ ಸೇರಿಸಿ ಮತ್ತು ಸಣ್ಣದಾಗಿ ಕೊಚ್ಚಿದ ಈರುಳ್ಳಿ ಸೇರಿಸಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಕತ್ತರಿಸಿದ ಟೊಮ್ಯಾಟೊ ಸೇರಿಸಿ ಬೆರೆಸಿ.


    ಟೊಮೆಟೊ ಮತ್ತು ಈರುಳ್ಳಿ ಬೆಂದ ನಂತರ ಬೇಯಿಸಿದ ಹಸಿರು ಬಟಾಣಿ, ಕ್ಯಾಪ್ಸಿಕಂ, ಎಲೆಕೋಸು ಮತ್ತು ಬೀನ್ಸ್ ಸೇರಿಸಿ. ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. ಕಪ್ಪು ಉಪ್ಪು, ಕೆಂಪು ಮೆಣಸಿನಕಾಯಿ, ಭಜಿ ಮಸಾಲಾ ಮತ್ತು ಅರಿಶಿನ ಪುಡಿ ಸೇರಿಸಿ. ತರಕಾರಿಗಳು ಮೃದುವಾದಾಗ ಪಾಲಕ್ ಪ್ಯೂರಿ ಸೇರಿಸಿ, 20 ನಿಮಿಷ ಬೇಯಿಸಿ. ಅದನ್ನು ಬ್ಲೆಂಡರ್ನೊಂದಿಗೆ ಮಿಶ್ರಣ ಮಾಡಿ.


    ಇದನ್ನೂ ಓದಿ: ತುಪ್ಪವನ್ನು ಈ ರೀತಿ ತಿಂದರೆ ತೂಕ ಇಳಿಸೋದು ಬಲು ಸುಲಭ


    ಭಾಜಿಯನ್ನು ಲಘುವಾಗಿ ಮಿಶ್ರಣ ಮಾಡಿ. ದೊಡ್ಡ ಚಮಚದಿಂದ ರುಬ್ಬಿ. ಅಗತ್ಯವಿದ್ದರೆ ಅರ್ಧ ಕಪ್ ನೀರು ಸೇರಿಸಿ. ಗೋಧಿ ಪಾವ್ ಅನ್ನು ಗ್ರಿಡಲ್ ಮೇಲೆ ಸ್ವಲ್ಪ ತುಪ್ಪದಿಂದ ಹುರಿದು ಬಿಸಿ ಪಾವ್ ಭಾಜಿ ಬಡಿಸಿ ಈಗ ನಿಮ್ಮ ನೆಚ್ಚಿನ ಉಪಹಾರ ಸಿದ್ಧ.

    Published by:renukadariyannavar
    First published: