• Home
  • »
  • News
  • »
  • lifestyle
  • »
  • Breakfast: ಬೆಳಗಿನ ಚುಮು ಚುಮು ಚಳಿಗೆ ಮಾಡಿ ಮೆಂತ್ಯ ಸೊಪ್ಪಿನ ಪರಾಠಾ

Breakfast: ಬೆಳಗಿನ ಚುಮು ಚುಮು ಚಳಿಗೆ ಮಾಡಿ ಮೆಂತ್ಯ ಸೊಪ್ಪಿನ ಪರಾಠಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೀಸನಲ್ ಕೆಲವು ತರಕಾರಿಗಳು ಮತ್ತು ಹಣ್ಣುಗಳು ಸಿಗುತ್ತವೆ. ಅವುಗಳ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಆಯಾ ಸೀಸನ್ ಗೆ ಬೇಕಾದ ಪೋಷಕಾಂಶ ನೀಡುತ್ತದೆ. ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆರೋಗ್ಯ ಕಾಪಾಡುತ್ತದೆ. ಹೀಗೆ ಸೀಸನಲ್ ತರಕಾರಿಗಳಲ್ಲಿ ಚಳಿಗಾಲದಲ್ಲಿ ಹೆಚ್ಚು ಸಿಗುವ ತರಕಾರಿ ಅಂದ್ರೆ ಮೆಂತ್ಯ ಸೊಪ್ಪು.

ಮುಂದೆ ಓದಿ ...
  • Share this:

    ಚಳಿಗಾಲದಲ್ಲಿ ಬೆಳಗಿನ ತಿಂಡಿಗೆ (Morning Breakfast) ಬಿಸಿ ಬಿಸಿಯಾಗಿ ಹಾಗೂ ದೀರ್ಘಕಾಲ ಹೊಟ್ಟೆ ತುಂಬುವ ಪದಾರ್ಥಗಳ ಸೇವನೆ ಮಾಡುವುದು ತುಂಬಾ ಮುಖ್ಯ. ಕೆಲವರು ಬೆಳಗ್ಗೆ ತಿಂಡಿ ಮಾಡಲು ರೊಟ್ಟಿ, ಚಪಾತಿ, ಪರಾಠಾ, ಮಿಕ್ಸ್ ವೆಜಿಟೇಬಲ್ ಸಲಾಡ್ (Salad) ತರಹದ ಉಪಾಹಾರವನ್ನು ತುಂಬಾ ಇಷ್ಟ ಪಟ್ಟು ಸೇವನೆ ಮಾಡ್ತಾರೆ. ಅದಾಗ್ಯೂ ಬೆಳಗಿ ತಿಂಡಿ ಆರೋಗ್ಯಕರವಾಗಿರಬೇಕು (Healthy). ಪೋಷಕಾಂಶಗಳಿಂದ ಸಮೃದ್ಧವಾಗಿರಬೇಕು. ವರ್ಷ ಪೂರ್ತಿ ಮಳೆಗಾಲ, ಬೇಸಿಗೆ ಕಾಲ ಮತ್ತು ಚಳಿಗಾಲ ಬರುತ್ತದೆ. ಈ ಸಮಯದಲ್ಲಿ ಸೀಸನಲ್  (Seasonal) ಕೆಲವು ತರಕಾರಿಗಳು ಮತ್ತು ಹಣ್ಣುಗಳು ಸಿಗುತ್ತವೆ. ಅವುಗಳ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಆಯಾ ಸೀಸನ್ ಗೆ ಬೇಕಾದ ಪೋಷಕಾಂಶ ನೀಡುತ್ತದೆ.


    ಬೆಳಗಿನ ತಿಂಡಿಗೆ ಮೆಂತ್ಯ ಪರಾಠಾ ರೆಸಿಪಿ


    ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆರೋಗ್ಯ ಕಾಪಾಡುತ್ತದೆ. ಹೀಗೆ ಸೀಸನಲ್ ತರಕಾರಿಗಳಲ್ಲಿ ಚಳಿಗಾಲದಲ್ಲಿ ಹೆಚ್ಚು ಸಿಗುವ ತರಕಾರಿ ಅಂದ್ರೆ ಮೆಂತ್ಯ ಸೊಪ್ಪು. ಮೆಂತ್ಯ ಬೀಜ ಮತ್ತು ಸೊಪ್ಪು ಆರೋಗ್ಯಕ್ಕೆ ಹಲವು ಲಾಭ ನೀಡುತ್ತದೆ.


    ಡಯಾಬಿಟಿಸ್, ಸ್ಥೂಲಕಾಯ ಹೀಗೆ ಹಲವು ಕಾಯಿಲೆ ಇರುವವರು ಈ ಸೀಸನಲ್ ತರಕಾರಿ, ಸೊಪ್ಪು ಸೇವನೆ ಮಾಡಬಹುದು. ದಿನವೂ ಮೆಂತ್ಯ ಬೀಜವನ್ನು ನೆನೆಸಿ ತಿನ್ನುವುದು ಸ್ಥೂಲಕಾಯ ಕಡಿಮೆ ಮಾಡುತ್ತದೆ. ಚರ್ಮ ಮತ್ತು ಕೂದಲ ಆರೋಗ್ಯಕ್ಕೆ ಸಹಕಾರಿ.




    ಮೆಂತ್ಯ ಸೊಪ್ಪು ಸೇವನೆ ಮಾಡಿದ್ರೆ ಹಲವು ಪೋಷಕಾಂಶಗಳು ಸಿಗುತ್ತವೆ. ಹಾಗಾದ್ರೆ ಇಲ್ಲಿ ಬೆಳಗಿನ ತಿಂಡಿಗೆ ಮೆಂತ್ಯ ಸೊಪ್ಪಿನಿಂದ ಯಾವೆಲ್ಲಾ ರೆಸಿಪಿ ಮಾಡಿ ಸೇವಿಸಬಹುದು ನೋಡೋಣ.


    ಬೆಳಗಿನ ತಿಂಡಿಗೆ ಮೆಂತ್ಯ ಪರಾಠ ಮಾಡುವುದು ಹೇಗೆ?


    ತಾಜಾ ಮೆಂತ್ಯ ಎಲೆಗಳು, ಅಜ್ವೈನ್, ಅಕ್ಕಿ ಮತ್ತು ಗೋಧಿ ಹಿಟ್ಟು ಮತ್ತು ಉಪ್ಪು, ಕತ್ತರಿಸಿದ ಹಸಿ ಮೆಣಸಿನಕಾಯಿ ಎಲ್ಲವನ್ನೂ ಚೆನ್ನಾಗಿ ಒಟ್ಟಿಗೆ ಬೆರೆಸಿ. ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ಹಿಟ್ಟನ್ನು ನಾದಿಕೊಳ್ಳಿ.


    ನಂತರ ಹಿಟ್ಟಿನ ಚಿಕ್ಕ ಚಿಕ್ಕ ಉಂಡೆ ಮಾಡಿ, ಅದರಿಂದ ಪರಾಠಾ ತಯಾರಿಸಿ, ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ, ಪರಾಠಾವನ್ನು ಎರಡೂ ಬದಿ ಚೆನ್ನಾಗಿ ಬೇಯಿಸಿ. ನಂತರ ನಿಮ್ಮಿಷ್ಟದ ಚಟ್ನಿ ಮತ್ತು ಪಲ್ಯದ ಜೊತೆ ಸವಿಯಿರಿ.


    ಟೇಸ್ಟಿ ಮತ್ತು ಆರೋಗ್ಯಕರ ಪರಾಠ ಆರೋಗ್ಯಕ್ಕೆ ಸಖತ್ ಲಾಭ ನೀಡುತ್ತದೆ. ಈ ಪೌಷ್ಟಿಕಾಂಶ-ಸಮೃದ್ಧ ಪರಾಠಗಳು ರುಚಿಕರ ಹಾಗೂ ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.


    ಸಾಂದರ್ಭಿಕ ಚಿತ್ರ


    ಆಲೂಗಡ್ಡೆ ಮೆಂತ್ಯ ತರಕಾರಿ ಪಲ್ಯ


    ಆಲೂಗಡ್ಡೆ ಮೆಂತ್ಯ ಪಲ್ಯ ಮಾಡಲು ತಾಜಾ ಮೆಂತ್ಯದ ಎಲೆಗಳು, ಬೇಯಿಸಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೋ, ಸಾಸಿವೆ, ಜೀರಿಗೆ, ಮಸಾಲೆ, ಖಾರ, ಸಣ್ಣಗೆ ಕೊಚ್ಚಿದ ಕರಿಬೇವು, ಕೊತ್ತಂಬರಿ ಬೇಕಾಗುತ್ತದೆ. ಮೊದಲು ಆಲೂಗಡ್ಡೆ ಬೇಯಿಸಿ,


    ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ ಇಟ್ಟಕೊಳ್ಳಿ ನಂತರ ಪ್ಯಾನ್ ಗೆ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಮಾಡಿ. ಅದಕ್ಕೆ ಮೆಂತ್ಯ ಮತ್ತು ಬೇಯಿಸಿದ ಆಲೂಗಡ್ಡೆ ಹಾಕಿ ಚೆನ್ನಾಗಿ ಬೇಯಿಸಿ, ತೆಗೆಯಿರಿ. ಇದು ಪರಾಠಾಕ್ಕೆ ಉತ್ತಮ ಕಾಂಬಿನೇಷನ್ ಆಗಿದೆ.


    ಇದನ್ನೂ ಓದಿ: ಪ್ರತಿನಿತ್ಯ ನೆಲ್ಲಿಕಾಯಿ ಸೇವಿಸಿದರೆ ಏನಾಗುತ್ತೆ? ಇಲ್ಲಿದೆ ಮಾಹಿತಿ


    ಮೆಂತ್ಯ ಸಲಾಡ್


    ಮೆಂತ್ಯದ ಎಲೆಗಳನ್ನು ಸಲಾಡ್ ರೂಪದಲ್ಲಿ ಸೇವನೆ ಮಾಡಿದ್ರೆ ಸಾಕಷ್ಟು ಆರೋಗ್ಯ ಲಾಭ ಹಾಗೂ ಅದರ ಪೋಷಕಾಂಶಗಳ ಲಾಭ ಪಡೆಯಲು ಸುಲಭ ಮತ್ತು ಸಾಧ್ಯ. ಮೆಂತ್ಯ ಎಲೆಗಳ ಸಲಾಡ್ ಮಾಡಲು ಆರೋಗ್ಯಕರ ಹಣ್ಣುಗಳು ಮತ್ತು ತರಕಾರಿ ಬಳಸಿ. ಬೆಲ್ಲ ಬಳಸಿದ್ರೆ ಉತ್ತಮ ಮತ್ತು ಆರೋಗ್ಯಕರ ಸಲಾಡ್ ಹೆಚ್ಚು ಪ್ರಯೋಜನಕಾರಿ.

    Published by:renukadariyannavar
    First published: