ಬೆಳಗ್ಗಿನ ತಿಂಡಿಗೆ (Morning Breakfast) ರುಚಿಯಾದ ಹಾಗೂ ಪೋಷಕಾಂಶ ಭರಿತ ವೆರೈಟಿ ಖಾದ್ಯ (Verity Recipe) ತಿನ್ನುವುದು ಆರೋಗ್ಯದ (Health) ದೃಷ್ಟಿಯಿಂದ ತುಂಬಾ ಮುಖ್ಯ. ಹಲವರು ಬೆಳಗಿನ ತಿಂಡಿಗೆ ಬ್ರೆಡ್ ಜಾಮ್ ತಿನ್ನುತ್ತಾರೆ. ಇನ್ನು ಕೆಲವರು ಆಮ್ಲೇಟ್ ತಿನ್ನುತ್ತಾರೆ. ಕೆಲವರು ಓಟ್ಸ್ ತಿನ್ನುತ್ತಾರೆ. ಮನೆಯಲ್ಲಿ ಮಕ್ಕಳು ಮತ್ತು ದೊಡ್ಡವರು ಹಾಗೂ ಎಲ್ಲಾ ವಯಸ್ಸಿನವರಿಗೆ ಇಷ್ಟವಾಗುವ ತಿಂಡಿ ಮಾಡಿಕೊಡುವುದು ಕಷ್ಟಸಾಧ್ಯ. ನೀವು ಎಗ್ ಪ್ಯಾನ್ ಕೇಕ್ ಇಷ್ಟ ಪಟ್ಟು ತಿಂದಿರಬಹುದು. ಆದ್ರೆ ಶುದ್ಧ ಶಾಖಾಹಾರಿಗಳಿಗೆ ಇದು ಸಾಧ್ಯವಿಲ್ಲ. ಹಾಗಾಗಿ ಇಂದು ನಾವು ಶಾಖಾಹಾರಿಗಳೀಗಾಗಿ ಎಗ್ ಲೆಸ್ ಪ್ಯಾನ್ ಕೇಕ್ ಹೊಸ ಪಾಕವಿಧಾನ ತಂದಿದ್ದೇವೆ.
ಬೆಳಗಿನ ಉಪಹಾರಕ್ಕೆ ಎಗ್ ಲೆಸ್ ಪ್ಯಾನ್ ಕೇಕ್ ರೆಸಿಪಿ
ಇದು ನಿಮ್ಮ ರುಚಿಯನ್ನು ತಣಿಸುತ್ತದೆ. ಅಂದ ಹಾಗೇ ಇಂದು ನಾವು ಬೆಳಗಿನ ಉಪಹಾರಕ್ಕೆ ಎಗ್ ಲೆಸ್ ಪ್ಯಾನ್ ಕೇಕ್ ರೆಸಿಪಿ ಮಾಡುವುದು ಹೇಗೆ ಅಂತಾ ತಿಳಿಯೋಣ. ನಯವಾದ, ಮೃದುವಾದ ಎಗ್ ಲೆಸ್ ಪ್ಯಾನ್ ಕೇಕ್ ರೆಸಿಪಿ ಆರೋಗ್ಯಕರ ಮತ್ತು ರುಚಿಕರ ಉಪಹಾರವಾಗಿದೆ.
ಗೋಧಿ ಹಿಟ್ಟು, ಹಾಲು, ಸಕ್ಕರೆ ಮತ್ತು ಸುವಾಸನೆ ಹೊಂದಿರುತ್ತದೆ. ಮೊಟ್ಟೆ ರಹಿತ ಸರಳ ಮತ್ತು ಸುಲಭ ಪಾಕವಿಧಾನ ಇದಾಗಿದೆ. ಎಗ್‌ಲೆಸ್ ಪ್ಯಾನ್ ಕೇಕ್ ರೆಸಿಪಿ ಹದಿನೈದು ನಿಮಿಷದಲ್ಲಿ ತ್ವರಿತ ಮತ್ತು ಸುಲಭವಾಗಿ ಮಾಡಬಹುದು. ಹಾಲು ಮತ್ತು ಬೆಣ್ಣೆಯ ಮಿಶ್ರಣ, ಒಣ ಪದಾರ್ಥ ಮಿಶ್ರಣದಿಂದ ತಯಾರಿಸಲಾಗುತ್ತದೆ. ಪ್ಯಾನ್ ಕೇಕ್‌ಗಳನ್ನು ಬಿಸಿ ಗ್ರಿಡಲ್ ನಲ್ಲಿ ತ್ವರಿತವಾಗಿ ಬೇಯಿಸಲಾಗುತ್ತದೆ.
ಎಗ್ ಲೆಸ್ ಪ್ಯಾನ್ ಕೇಕ್ ಪಾಕ ವಿಧಾನ ಹೇಗೆ ಮಾಡುವುದು?
ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ. ಅದರಕ್ಕೆ ಒಂದು ಕಪ್ ಗೋಧಿ ಹಿಟ್ಟು ಹಾಕಿ. ನಂತರ ಅದಕ್ಕೆ ಉಪ್ಪು ರುಚಿಗೆ ತಕ್ಕಷ್ಟು ಸೇರಿಸಿ. ಉಪ್ಪು ಸಹಿತ ಬೆಣ್ಣೆ ಬಳಕೆ ಬೇಡ. ಮೂರು ಚಮಚ ಸಕ್ಕರೆ ಸೇರಿಸಿ. ಒಂದು ಟೀ ಚಮಚ ಬೇಕಿಂಗ್ ಪೌಡರ್ ಸೇರಿಸಿ. ಕಾಲು ಟೀ ಚಮಚ ದಾಲ್ಚಿನ್ನಿ ಪುಡಿ ಸೇರಿಸಿ.
ಎಲ್ಲಾ ಒಣ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇರಿಸಿ. ಒಂದು ಪ್ಯಾನ್ ಗೆ ಒಂದೂವರೆ ಕಪ್ ಹಾಲು ಸೇರಿಸಿ. ಮಧ್ಯಮ ಶಾಖದ ಮೇಲೆ ಒಲೆಯ ಮೇಲೆ ಇರಿಸಿ ಹಾಲನ್ನು ಬಿಸಿ ಮಾಡಿ. ಹಾಲು ಕುದಿಯಲು ಬಿಡಬೇಡಿ. ನಂತರ ಒಂದು ಚಮಚ ಬೆಣ್ಣೆ ಸೇರಿಸಿ. ಬಿಸಿ ಹಾಲಿನಲ್ಲಿ ಬೆಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಗ್ಯಾಸ್ ಆಫ್ ಮಾಡಿ.
ಒಣ ಪದಾರ್ಥಗಳನ್ನು ಬಟ್ಟಲಿಗೆ ಹಾಕಿ ಹಾಲು ಮತ್ತು ಬೆಣ್ಣೆ ಮಿಶ್ರಣ ನಿಧಾನವಾಗಿ ಸುರಿಯಿರಿ. ಅರ್ಧ ಟೀಚಮಚ ವೆನಿಲ್ಲಾ ಸಾರ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ತೆಳುವಾದ ಸ್ಥಿರತೆ ಇರಲಿ. ನಂತರ ಮಧ್ಯಮ ಉರಿಯಲ್ಲಿ ಫ್ರೈಯಿಂಗ್ ಪ್ಯಾನ್ ಬಿಸಿ ಮಾಡಿ.
ಬಿಸಿ ಪ್ಯಾನ್ ಮೇಲೆ ಬೆಣ್ಣೆ ಅಥವಾ ಎಣ್ಣೆ ಹಾಕಿ. ನಂತರ ಹಿಟ್ಟನ್ನು ದೋಸೆ ಆಕಾರದಲ್ಲಿ ಹರಡಿ. ನಂತರ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ಗರಿಗರಿಯಾದ ಮತ್ತು ಗೋಲ್ಡನ್ ಕಲರ್ ಗೆ ಬಂದಾಗ ಪ್ಯಾನ್ ಕೇಕ್ ರೆಡಿಯಾಗಿದೆ. ನಿಧಾನವಾಗಿ ಸರ್ವ್ ಮಾಡಿ ಸವಿಯಿರಿ.
ಇದನ್ನೂ ಓದಿ: ಈ ವಿಶೇಷ ನೀರು ಕರುಳಿನ ಸಮಸ್ಯೆಯನ್ನೂ ಕ್ಷಣಮಾತ್ರದಲ್ಲಿ ಸರಿಮಾಡುತ್ತೆ!
ಮೊಟ್ಟೆರಹಿತ ಪ್ಯಾನ್ ಕೇಕ್ ಬೆಚ್ಚಗಾಗಿಸಲು ಒಲೆ ಬಳಸಬಹುದು. ಟ್ರೇ ಅನ್ನು ಒಲೆ ಮೇಲಿರಿಸಿ. 30 ನಿಮಿಷದವರೆಗೆ ಬೇಯಿಸಿ. ಅದಕ್ಕಿಂತ ಹೆಚ್ಚು ಸಮಯ ಇರಿಸಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ