ನೀವು ಅನೇಕ ರೀತಿಯ ಖಾದ್ಯಗಳನ್ನು (Recipes) ಬೆಳಗಿನ ತಿಂಡಿಗೆ (Morning Breakfast) ಮಾಡಿ ಸೇವನೆ ಮಾಡಿರಬಹುದು. ನೀವು ಅನೇಕ ಬಾರಿ ಪರಾಠಾ (Paratha) ಮಾಡಿ ಸೇವನೆ ಮಾಡಿರಬಹುದು. ಪರಾಠಾ ಸೇವನೆ ಬೆಳಗಿನ ತಿಂಡಿಗೆ ಉತ್ತಮ. ಪೋಷಕಾಂಶ (Nutrients) ಭರಿತ ಪರಾಠಾ ಸೇವನೆ ದೀರ್ಘಕಾಲ ಹೊಟ್ಟೆ ಹಸಿವಾಗದಂತೆ ತಡೆಯುತ್ತದೆ. ದೀರ್ಘಕಾಲ ದೇಹಕ್ಕೆ (Body) ಶಕ್ತಿ (Energy) ನೀಡುತ್ತದೆ. ಪರಾಠಾ ಅಂದ ಕೂಡಲೇ ಥಟ್ ಅಂತ ನೆನಪಾಗುವುದೇ ಆಲೂಗಡ್ಡೆ ಪರಾಠಾ. ಆಲೂಗಡ್ಡೆ ಪರಾಠಾ ದೇಶದಾದ್ಯಂತ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ನೀವು ಹಲವು ವಿಧದ ಪರಾಠಾ ಖಾದ್ಯಗಳ ಹೆಸರು ಕೇಳಿರಬಹುದು. ಪನೀರ್ ಪರಾಠ, ಹೂಕೋಸು ಪರಾಠ, ಮೆಂತ್ಯ ಪರಾಠ, ಈರುಳ್ಳಿ ಪರಾಠ ಹೀಗೆ ಸಾಕಷ್ಟು ಪರಾಠಾಗಳಿವೆ.
ಬೆಳಗಿನ ತಿಂಡಿಗೆ ಮೊಟ್ಟೆ ಪರಾಠಾ ಪಾಕವಿಧಾನ
ಬೆಳಗಿನ ತಿಂಡಿಗೆ ಹಲವು ಪರಾಠಾಗಳಲ್ಲಿ ಹಾಗೂ ಆರೋಗ್ಯಕರ ಖಾದ್ಯಗಳಲ್ಲಿ ಮೊಟ್ಟೆ ರೆಸಿಪಿಯು ಒಂದಾಗಿದೆ. ದಿನಕ್ಕೆ ಒಂದು ಮೊಟ್ಟೆ ಸೇವನೆ ಮಾಡುವುದು ಆರೋಗ್ಯ ಹೆಚ್ಚಿಸುತ್ತದೆ. ಡಯಟ್ ನಲ್ಲಿರುವವರು ಮೊಟ್ಟೆ ಸೇವನೆ ಮಾಡುತ್ತಾರೆ. ಮೊಟ್ಟೆ ರೆಸಿಪಿಯು ಅದ್ಭುತ ರುಚಿ ಮತ್ತು ತುಂಬಾ ಆರೋಗ್ಯ ನೀಡುತ್ತದೆ.
ಇಂದು ನಾವು ಮೊಟ್ಟೆ ಪರಾಠ ಖಾದ್ಯ ಮಾಡುವ ವಿಧಾನದ ಬಗ್ಗೆ ತಿಳಿಯೋಣ. ಭಾನುವಾರವಿರಲಿ, ಸೋಮವಾರವಿರಲಿ, ಕೆಲವರು ದಿನವೂ ಮೊಟ್ಟೆ ಸೇವನೆ ಮಾಡ್ತಾರೆ. ಕುದಿಸಿದ ಮೊಟ್ಟೆ ಹಾಗೂ ಆಮ್ಲೇಟ್ ತಿಂದು ಬೇಸರವಾಗಿದ್ರೆ ನೀವು ಬೆಳಗಿನ ತಿಂಡಿಗೆ ಮೊಟ್ಟೆ ಪರಾಠಾ ರೆಸಿಪಿ ಟ್ರೈ ಮಾಡಬಹುದು.
ಮೊಟ್ಟೆ ಪರಾಠ ರೆಸಿಪಿ
ಬೇಕಾಗುವ ಪದಾರ್ಥಗಳು
ಕಾಲು ಕಪ್ ಹಿಟ್ಟು, ಒಂದು ಚಿಟಿಕೆ ಉಪ್ಪು, ಒಂದು ಚಮಚ ಎಣ್ಣೆ, ಮೂರು ಮೊಟ್ಟೆಗಳು, ಕಾಲು ಕಪ್ ಕತ್ತರಿಸಿದ ಈರುಳ್ಳಿ, ಕತ್ತರಿಸಿದ ಒಂದು ಹಸಿರು ಮೆಣಸಿನಕಾಯಿ, ರುಚಿಗೆ ತಕ್ಕಂತೆ ಉಪ್ಪು, ಒಂದು ಟೀಚಮಚ ಕೆಂಪು ಮೆಣಸಿನ ಪುಡಿ, ಎರಡು ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಎರಡು ಚಮಚ ತುಪ್ಪ ಬೇಕು.
ಮೊಟ್ಟೆ ಪರಾಠ ತಯಾರಿಸುವ ವಿಧಾನ ಹೀಗಿದೆ
ಮೊದಲು ಹಿಟ್ಟನ್ನು ಮಿಕ್ಸಿಂಗ್ ಬೌಲ್ ಗೆ ಹಾಕಿ. ಅದಕ್ಕೆ ಉಪ್ಪು ಮತ್ತು ಎಣ್ಣೆ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ನಂತರ ಹಿಟ್ಟನ್ನು 5 ಭಾಗವಾಗಿ ಮಾಡಿ. ಹಿಟ್ಟಿನ ಐದು ಉಂಡೆ ಮಾಡಿ.
ಈಗ ಈ ಉಂಡೆಯನ್ನು ಒಣ ಹಿಟ್ಟಿನಲ್ಲಿ ಸುತ್ತಿರಿ. ನಂತರ ಚೌಕಾಕಾರದಲ್ಲಿ ಲಟ್ಟಿಸಿ. ನಂತರ ಹಿಟ್ಟನ್ನು ಸವರುತ್ತಾ ವೃತ್ತಾಕಾರದಲ್ಲಿ ಲಟ್ಟಿಸಿರಿ. ಈಗ ಸ್ಟಫಿಂಗ್ ಮಾಡಲು, ಮೊಟ್ಟೆಯನ್ನು ಒಡೆದು ಅದಕ್ಕೆ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಹಸಿರು ಕೊತ್ತಂಬರಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪಕ್ಕಕ್ಕೆ ಇರಿಸಿ.
ಈಗ ಒಲೆ ಹಚ್ಚಿ ತವಾ ಬಿಸಿ ಮಾಡಿ. ನಂತರ ರೆಡಿ ಮಾಡಿದ ಪರಾಠಾವನ್ನು ಬಿಸಿ ತವಾ ಮೇಲೆ ಹಾಕಿರಿ. ಮಧ್ಯಮ ಉರಿಯಲ್ಲಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ಪರಾಠಾ ಉಬ್ಬಲು ಪ್ರಾರಂಭಿಸಿದಾಗ, ಗ್ಯಾಸ್ ಆಫ್ ಮಾಡಿ.
ನಂತರ ಪರಾಠವನ್ನು ಮಡಚಿದ ಬದಿಯಲ್ಲಿ ಸ್ವಲ್ಪ ಕಟ್ ಮಾಡಿ. ಪರಾಠವು ತೆರೆದುಕೊಳ್ಳುತ್ತದೆ. ಈಗ ಅದರ ಮಧ್ಯ ಭಾಗದಲ್ಲಿ ಮೊಟ್ಟೆಯ ಮಿಶ್ರಣದ ಕಾಲು ಭಾಗವನ್ನು ಸುರಿಯಿರಿ.
ನಂತರ ಗ್ಯಾಸ್ ಆನ್ ಮಾಡಿ, ತವಾ ಬಿಸಿ ಮಾಡಿ ಪರಾಠವನ್ನು ಮತ್ತೊಮ್ಮೆ ಬೇಯಿಸಿ. ಈಗ ಸ್ಟಫಿಂಗ್ ಕೂಡ ಚೆನ್ನಾಗಿ ಬೇಯುತ್ತದೆ. ಕಡಿಮೆ ಉರಿಯಲ್ಲಿ ಬೇಯಿಸಿ. ಮೊಟ್ಟೆಯ ಮಿಶ್ರಣ ಒಳಗಿನಿಂದ ಸಂಪೂರ್ಣವಾಗಿ ಬೇಯಿಸಿ.
ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಆರೋಗ್ಯಕರ ಬಾಳೆಹಣ್ಣಿನ ಸ್ಮೂಥಿ, ಹೀಗಿದೆ ಹೀಗೆ ತಯಾರಿಸಿ
ತುಪ್ಪ ಹಚ್ಚಿ ಮತ್ತೆ ಬೇಯಿಸಿ. ಗರಿಗರಿಯಾಗುವವರೆಗೆ ಬೇಯಿಸಿ ಪ್ಲೇಟ್ ಗೆ ಸರ್ವ ಮಾಡಿ ನಿಮ್ಮಿಷ್ಟದ ಪಲ್ಯ, ಚಟ್ನಿ ಜೊತೆ ಸವಿಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ