• Home
  • »
  • News
  • »
  • lifestyle
  • »
  • Morning Breakfast: ಬೆಳಗಿನ ತಿಂಡಿಗೆ ಮಧುಮೇಹ ಸ್ನೇಹಿ ಮಸಾಲಾ ಓಟ್ಸ್ ಇಡ್ಲಿ ರೆಸಿಪಿ ಮಾಡುವುದು ಹೇಗೆ?

Morning Breakfast: ಬೆಳಗಿನ ತಿಂಡಿಗೆ ಮಧುಮೇಹ ಸ್ನೇಹಿ ಮಸಾಲಾ ಓಟ್ಸ್ ಇಡ್ಲಿ ರೆಸಿಪಿ ಮಾಡುವುದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದು ನಾವು ಮನೆಯಲ್ಲೇ ಮಾಡಿ ಸವಿಯಬಹುದಾದ ಮಧುಮೇಹ ಸ್ನೇಹಿ ಇಡ್ಲಿಸ್ ಪಾಕವಿಧಾನ ಕಲಿಯೋಣ. ಅದು ರುಚಿ ಮತ್ತು ರಕ್ತದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುತ್ತದೆ. ಹಾಗಾಗಿ ಇದು ಮಧುಮೇಹ ಸ್ನೇಹಿ ಇಡ್ಲಿ ಆಗಿದೆ.

  • Share this:

    ಭಾರತದಲ್ಲಿ (India) ಹಲವು ಭಾಗಗಳಲ್ಲಿ ಹಲವು ರೀತಿಯ ಬೆಳಗಿನ ಉಪಾಹಾರ (Morning Breakfast) ಭಕ್ಷ್ಯ ಮಾಡಿ ಸೇವಿಸುತ್ತಾರೆ. ಅದರಲ್ಲೂ ದಕ್ಷಿಣ ಭಾರತದ ಆಹಾರಗಳು (Food) ವಿಭಿನ್ನ ಮತ್ತು ಆರೋಗ್ಯಕರವಾಗಿವೆ (Healthy). ಏಕೆಂದರೆ ಉಪಾಹಾರ ತಯಾರಿಸಲು ಬಳಸುವ ಪದಾರ್ಥಗಳಾದ ರಾಗಿ, ಅಕ್ಕಿ ಹಿಟ್ಟು, ರವೆ, ಹಸಿ ಬೇಳೆ ಹೀಗೆ ಅನೇಕ ಪದಾರ್ಥಗಳು ಎಲ್ಲಾ ರೀತಿಯ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿವೆ. ಇನ್ನು ರೋಗಿಗಳ ವಿಚಾರಕ್ಕೆ ಬಂದ್ರೆ ಹೆಚ್ಚು ರೋಗಿಗಳು ಇಡ್ಲಿ ಸೇವಿಸುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ಮಧುಮೇಹಿಗಳು ಯಾವಾಗಲೂ ಇಡ್ಲಿ ಸೇವನೆ ಮಾಡಲ್ಲ. ಬಹುತೇಕ ಕಡೆಗಳಲ್ಲಿ ಇಡ್ಲಿಯನ್ನು ಅಕ್ಕಿಯಿಂದ ಮಾಡುತ್ತಾರೆ.


    ಮಧುಮೇಹ ಸ್ನೇಹಿ ಇಡ್ಲಿ ರೆಸಿಪಿ


    ಅಕ್ಕಿಯಿಂದ ಮಾಡಿದ ಪದಾರ್ಥಗಳು ಪಿಷ್ಟ ಮತ್ತು ಕಾರ್ಬೋಹೈಡ್ರೇಟ್‌ ಹೊಂದಿದೆ. ಮತ್ತು ಅವುಗಳ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಹೆಚ್ಚು. ಇದು ರಕ್ತದ ಸಕ್ಕರೆ ಮಟ್ಟವು ಇದ್ದಕ್ಕಿದ್ದಂತೆ ಏರಲು ಕಾರಣವಾಗಬಹುದು. ಆದರೆ ಇಡ್ಲಿ ತಯಾರಿಸಲು ಅನ್ನ ಬೇಕಾಗಿಲ್ಲ. ಮಧುಮೇಹ ರೋಗಿಗಳು ನಿಶ್ಚಿಂತೆಯಿಂದ ಸೇವನೆ ಮಾಡಬಹುದಾದ ಇಡ್ಲಿ ಪಾಕ ವಿಧಾನವನ್ನು ನಾವು ಇಂದು ನೋಡೋಣ.


    ಬಾಲಿವುಡ್‌ನಲ್ಲಿ ನಟ ಅನಿಲ್ ಕಪೂರ್ ಈಗಲೂ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿದ್ದಾರೆ. ಅವರಿಗೆ ವಯಸ್ಸಾಗಿದೆ ಎಂದು ಗೊತ್ತೇ ಆಗಲ್ಲ. ಹೀಗಾಗಿ ಅವರು ಯಾವಾಗಲೂ ಚರ್ಚೆಯಲ್ಲಿರ್ತಾರೆ. ಸಂದರ್ಶನವೊಂದರಲ್ಲಿ ನಟ ಅನಿಲ್ ಕಪೂರ್, ತಮ್ಮ ಯುವ ಅಭಿಮಾನಿಗಳಿಗೆ ಇಡ್ಲಿ, ದೋಸೆ, ಸಾಂಬಾರ್ ತಮ್ಮ ಯೌವ್ವನದ ಗುಟ್ಟು ಎಂದಿದ್ದಾರೆ.


    ಇದನ್ನೂ ಓದಿ: ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆ ಕಾಡುತ್ತದೆ ಎಂಬ ಯೋಚನೆಯೇ? ಈ ಪದಾರ್ಥಗಳಲ್ಲಿದೆ ಸಮೃದ್ಧ ಪೋಷಕಾಂಶ!


    ಇಂದು ನಾವು ಮನೆಯಲ್ಲೇ ಮಾಡಿ ಸವಿಯಬಹುದಾದ ಮಧುಮೇಹ ಸ್ನೇಹಿ ಇಡ್ಲಿಸ್ ಪಾಕವಿಧಾನ ಕಲಿಯೋಣ. ಅದು ರುಚಿ ಮತ್ತು ರಕ್ತದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುತ್ತದೆ. ಹಾಗಾಗಿ ಇದು ಮಧುಮೇಹ ಸ್ನೇಹಿ ಇಡ್ಲಿ ಆಗಿದೆ.


    ಮಧುಮೇಹ ಸ್ನೇಹಿ ಮಸಾಲಾ ಓಟ್ಸ್ ಇಡ್ಲಿ ರೆಸಿಪಿ


    ಮಸಾಲಾ ಓಟ್ಸ್ ಇಡ್ಲಿ ರೆಸಿಪಿಗೆ ಬೇಕಾಗುವ ಪದಾರ್ಥಗಳು


    ಎರಡು ಕಪ್ ಓಟ್ಸ್, ಎರಡು ಕಪ್ ಮೊಸರು, ಒಂದು ಟೀ ಸ್ಪೂನ್ ಸಾಸಿವೆ ಬೀಜಗಳು, ಉದ್ದಿನ ಬೇಳೆ ಎರಡು ಟೀ ಸ್ಪೂನ್, ಕಡಲೆ ಬೇಳೆ  ಅರ್ಧ ಟೀ ಚಮಚ, ಅರ್ಧ ಟೀ ಸ್ಪೂನ್ ಅಡುಗೆ ಎಣ್ಣೆ, ಎರಡು ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಎರಡು ಚಮಚ ತುರಿದ ಕ್ಯಾರೆಟ್, ಸಣ್ಣಗೆ ಕೊಚ್ಚಿದ  ಕೊತ್ತಂಬರಿ, ಒಂದು ಚಿಟಿಕೆ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.


    ಮಸಾಲಾ ಓಟ್ಸ್ ಇಡ್ಲಿ ರೆಸಿಪಿ ಹೇಗೆ ತಯಾರಿಸುವುದು?


    ಓಟ್ಸ್ ಅನ್ನು ಎರಡು ನಿಮಿಷ ಒಣಗಿಸಿ. ಈಗ ಓಟ್ಸ್ ಅನ್ನು ತಣ್ಣಗಾಗಿಸಿ, ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ನಂತರ ಈಗ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ನಂತರ ಸಾಸಿವೆ, ಉದ್ದಿನಬೇಳೆ, ಕಡಲೆ ಬೇಳೆ ಹಾಕಿ ಹುರಿಯಿರಿ.


    ನಂತರ ಕತ್ತರಿಸಿದ ಹಸಿಮೆಣಸಿನಕಾಯಿ, ತುರಿದ ಕ್ಯಾರೆಟ್ ಮತ್ತು ಅರಿಶಿನ ಪುಡಿ ಸೇರಿಸಿ ಮತ್ತು ಒಂದು ನಿಮಿಷ ಫ್ರೈ ಮಾಡಿ. ಈಗ ಓಟ್ಸ್ ಹಾಕಿ. ನಂತರ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮೇಲೆ ಸಣ್ಣದಾಗಿ ಕೊಚ್ಚಿದ ಹಸಿರು ಕೊತ್ತಂಬರಿ ಸೊಪ್ಪನ್ನು ಹಾಕಿ. ಈಗ ಎನೋ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.


    ಇದನ್ನೂ ಓದಿ: ಮುಖಕ್ಕೆ ಫೌಂಡೇಶನ್ ಬಳಸುವ ಮುನ್ನ ಈ ವಿಷಯಗಳು ನಿಮಗೆ ಗೊತ್ತಿರಬೇಕು


    ಸಾಮಾನ್ಯ ಇಡ್ಲಿಯಂತೆಯೇ ಸ್ಥಿರತೆ ಇಟ್ಟುಕೊಳ್ಳಿ. ಇಡ್ಲಿ ಅಚ್ಚನ್ನು ಎಣ್ಣೆಯಿಂದ ಗ್ರೀಸ್ ಮಾಡಿ ಮತ್ತು ಅದಕ್ಕೆ ಹಿಟ್ಟು ಸುರಿಯಿರಿ. ಇದನ್ನು ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬೇಯಿಸಿ. ನಂತರ ಹೊರಕ್ಕೆ ತೆಗೆಯಿರಿ. ಈಗ ಮಧುಮೇಹ ಸ್ನೇಹಿ ಇಡ್ಲಿ ರೆಡಿಯಾಗಿದೆ. ನಿಮ್ಮಿಷ್ಟದ ಚಟ್ನಿ ಮತ್ತು ಸಾಂಬಾರ್ ಜೊತೆ ಸೇವಿಸಿ.

    Published by:renukadariyannavar
    First published: