ಬೆಳಗಿನ ಉಪಾಹಾರಕ್ಕೆ (Morning Breakfast) ನೀವು ಹಲವು ತರಹದ ದೋಸೆ (Dosa) ಮಾಡಿ ಸೇವನೆ ಮಾಡಿರಬಹುದು. ನೀವು ಶಾವಿಗೆ (Semiya) ಉಪ್ಪಿಟ್ಟು ಮಾಡಿ ತಿಂದಿರಬಹುದು. ಕೆಲವರಿಗೆ ನ್ಯೂಡಲ್ಸ್ ಅಂದ್ರೆ ಸಖತ್ ಇಷ್ಟ. ಬೆಳಗ್ಗೆ ತಿಂಡಿ, ಸಾಯಂಕಾಲ ಹೀಗೆ ಯಾವಾಗ ನ್ಯೂಡಲ್ಸ್ ಕೊಟ್ರೂ ಬೇಡ ಅನ್ನಲ್ಲ. ಹಾಗೆಯೇ ಶಾವಿಗೆ ಪ್ರಿಯರೂ ಇದ್ದಾರೆ. ಶಾವಿಗೆ ಉಪ್ಪಿಟ್ಟು, ಶಾವಿಗೆ ಪಾಯಸ ತುಂಬಾ ಫೇಮಸ್ ಖಾದ್ಯಗಳು (Recipes) ಆಗಿವೆ. ಆದ್ರೆ ನೀವು ಯಾವತ್ತಾದ್ರೂ ಶಾವಿಗೆ ದೋಸೆ (Semiya Dosa) ಮಾಡಿ ತಿಂದಿದ್ದೀರಾ? ಇಂದು ನಾವು ಕ್ರಿಸ್ಪಿ ಮತ್ತು ಟೇಸ್ಟಿ (Tasty) ಶಾವಿಗೆ ದೋಸೆ ಹೇಗೆ ಮಾಡುವುದು ಅಂತಾ ನೋಡೋಣ. ಶಾವಿಗೆ ದೋಸೆ ಬೆಳಗಿನ ತಿಂಡಿಗೆ ಉತ್ತಮ ತಿಂಡಿ ಆಗಿದೆ.
ಬೆಳಗಿನ ತಿಂಡಿಗೆ ಶಾವಿಗೆ ದೋಸೆ ಪಾಕವಿಧಾನ
ಯಾವಾಗಲೂ ಬೆಳಗಿನ ಉಪಾಹಾರಕ್ಕೆ ದೋಸೆ ಜನಪ್ರಿಯ ಆಯ್ಕೆ ಆಗಿದೆ. ಇದು ಅತ್ಯಂತ ತ್ವರಿತ, ಮತ್ತು ಸುಲಭ ಪಾಕವಿಧಾನ ಆಗಿದೆ. ರವೆ ಅಥವಾ ಅಕ್ಕಿ ಹಿಟ್ಟಿನ ದೋಸೆ ನೀವು ಪ್ರತೀ ವಾರ ಮಾಡಿ ತಿಂದಿರಬಹುದು.
ಇದರಿಂದ ನಿಮಗೆ ಬೇಸರವಾಗಿದ್ರೆ ಮತ್ತು ನೀವು ಬೇರೆ ಯಾವುದಾದ್ರೂ ದೋಸಾ ಪಾಕವಿಧಾನ ಹುಡುಕುತ್ತಿದ್ದರೆ ಶಾವಿಗೆ ದೋಸೆ ಉತ್ತಮ ಆಯ್ಕೆ ಆಗಿದೆ.
ಸುಲಭ ಮತ್ತು ಸರಳ ತ್ವರಿತ ದೋಸೆ ರೆಸಿಪಿ ಶಾವಿಗೆ ದೋಸೆ ರೆಸಿಪಿ ಆಗಿದೆ. ಗರಿಗರಿ ಹಾಗೂ ಟೇಸ್ಟಿ ದೋಸೆ ಮಾಡುವುದು ಹೇಗೆ ಅಂತಾ ಇಲ್ಲಿ ನೋಡೋಣ. ಗರಿಗರಿಯಾದ ಮತ್ತು ಕುರುಕುಲು ದೋಸೆ ಮಕ್ಕಳಿಂದ ಹಿಡಿದು ದೊಡ್ಡವರತನಕ ಇಷ್ಟಪಟ್ಟು ಸೇವನೆ ಮಾಡ್ತಾರೆ.
ಸರಳ ತ್ವರಿತ ಶಾವಿಗೆ ದೋಸೆ ರೆಸಿಪಿ ಮಾಡುವುದು ಹೇಗೆ?
ಒಂದು ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ರವಾ, ಒಂದು ಟೀಸ್ಪೂನ್ ಜೀರಿಗೆ, ಒಂದು ಟೀಸ್ಪೂನ್ ಉಪ್ಪು, ಐದು ಕಪ್ ನೀರು, ಸಣ್ಣದಾಗಿ ಕೊಚ್ಚಿದ ಅರ್ಧ ಕಪ್ ಈರುಳ್ಳಿ, ಅರ್ಧ ಕಪ್ ತುರಿದ ಕ್ಯಾರೆಟ್, ಕೆಲವು ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆಗಳು,
ಅರ್ಧ ಕಪ್ ಶಾವಿಗೆ, ಎರಡು ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು, ಎರಡು ಸಣ್ಣದಾಗಿ ಕೊಚ್ಚಿದ ಮೆಣಸಿನಕಾಯಿ, ಒಂದು ಇಂಚಿನ ತುರಿದ ಶುಂಠಿ, ಎಣ್ಣೆ ಹುರಿಯಲು ಬೇಕು.
ಶಾವಿಗೆ ದೋಸೆ ರೆಸಿಪಿ ಮಾಡುವ ವಿಧಾನ ಹೀಗಿದೆ
ಮೊದಲು ಅರ್ಧ ಕಪ್ ಶಾವಿಗೆಯನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಸಂಪೂರ್ಣವಾಗಿ ತಣ್ಣಗಾದ ನಂತರ ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಅದಕ್ಕೆ ಒಂದು ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ರವಾ, ಒಂದು ಟೀಸ್ಪೂನ್ ಜೀರಿಗೆ, ಒಂದು ಟೀಸ್ಪೂನ್ ಉಪ್ಪು ಸೇರಿಸಿ.
ನೀರು ಸುರಿಯಿರಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಹತ್ತು ನಿಮಿಷ ಮುಚ್ಚಿ ಮತ್ತು ವಿಶ್ರಾಂತಿಗೆ ಇಡಿ. ಈಗ ಎರಡು ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು, ಎರಡು ಸಣ್ಣದಾಗಿ ಕೊಚ್ಚಿದ ಮೆಣಸಿನಕಾಯಿ, ಒಂದು ಇಂಚಿನ ತುರಿದ ಶುಂಠಿ ಸೇರಿಸಿ ಚೆನ್ನಾಗಿ ಬೆರೆಸಿ.
ಹಿಟ್ಟು ನೀರು ಇರುವಂತೆ ನೋಡಿ. ನೀರನ್ನು ಸೇರಿಸುವ ಮೂಲಕ ನೀವು ಸ್ಥಿರತೆ ಸರಿ ಹೊಂದಿಸಿ. ಗ್ಯಾಸ್ ಒಲೆ ಮೇಲೆ ಪ್ಯಾನ್ ಇಡಿ. ತವಾ ಬಿಸಿ ಆದ್ಮೇಲೆ ದೋಸೆಗೆ ಹಿಟ್ಟನ್ನು ಸುರಿದು ದುಂಡನೆಯ ಆಕಾರಕ್ಕೆ ತನ್ನಿ. ನಂತರ ಎರಡೂ ಬದಿಯನ್ನು ಕ್ರಿಸ್ಪಿಯಾಗಿ ಬೇಯಿಸಿ.
ಇದನ್ನೂ ಓದಿ: ಮಧುಮೇಹ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು
ಟೀಸ್ಪೂನ್ ಎಣ್ಣೆಯನ್ನು ಹರಡಿ ಮತ್ತು 2 ನಿಮಿಷ ದೋಸೆ ಗರಿಗರಿಯಾಗುವವರೆಗೆ ಬೇಯಿಸಿ. ನಂತರ ಗರಿಗರಿಯಾದ ಶಾವಿಗೆ ದೋಸೆಯನ್ನು ನಿಮ್ಮಿಷ್ಟದ ಚಟ್ನಿ ಜೊತೆ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ