ಜನರು ಬೆಳಗ್ಗಿನ ತಿಂಡಿ (Morning Breakfast) ಹಾಗೂ ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಎಲ್ಲಾ ಸಮಯದಲ್ಲೂ (Time) ಅನ್ನ ಊಟ ಮಾಡಲು ಇಷ್ಟ ಪಡ್ತಾರೆ. ನಿಮಗೂ ಸಹ ಬೆಳಗಿನ ತಿಂಡಿಗೆ ಟೊಮೆಟೋ ರೈಸ್ (Tomato Rice), ಪಾಲಕ್ ರೈಸ್ ಮತ್ತು ಬಿಸಿ ಬೇಳೆ ಬಾತ್ ಹೀಗೆ ವಿವಿಧ ಖಾದ್ಯಗಳು (Recipes) ಸೇವನೆ ಮಾಡಲು ಸಖತ್ ಇಷ್ಟವಾಗಿರಬಹುದು. ಇಂದು ನಾವು ಬೆಳಗ್ಗಿನ ತಿಂಡಿಗೆ ತೆಂಗಿನಕಾಯಿ ಅನ್ನ ಮಾಡುವ ರೆಸಿಪಿ ಬಗ್ಗೆ ತಿಳಿಯೋಣ. ತೆಂಗಿನಕಾಯಿ ರೆಸಿಪಿ ಹೇಗೆ ಮಾಡುವುದು ಎಂದು ಆಲೋಚಿಸಬೇಕಾಗಿಲ್ಲ. ಇದನ್ನು ಮಾಡುವುದು ತುಂಬಾ ಸುಲಭ.
ಬೆಳಗಿನ ತಿಂಡಿಗೆ ತೆಂಗಿನಕಾಯಿ ರೈಸ್
ಜನರಿಗೆ ಅನ್ನ ತುಂಬಾ ಇಷ್ಟ. ಆದರೆ ಯಾರೆಲ್ಲಾ ಬೊಜ್ಜು, ಮಧುಮೇಹ, ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿದ್ದಾರೋ ಅವರು ರೈಸ್ ಸೇವನೆ ತಪ್ಪಿಸುತ್ತಾರೆ. ಆದರೆ ಅಂತಹವರಿಗೂ ಸಹ ಟೊಮೆಟೋ ರೈಸ್ ನಷ್ಟೇ ತೆಂಗಿನಕಾಯಿ ರೈಸ್ ಇಷ್ಟವಾಗುತ್ತದೆ.
ಸಾಮಾನ್ಯ ಆಹಾರದಲ್ಲಿ ತುಸು ಪ್ರಮಾಣದ ಅಕ್ಕಿ ಆಹಾರ ಸೇವನೆ ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡಲ್ಲ. ಅಕ್ಕಿಯನ್ನು ಆರೋಗ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿ. ತೆಂಗಿನಕಾಯಿಯಂತಹ ಕೆಲವು ಆರೋಗ್ಯಕರ ಪದಾರ್ಥ ಸೇರಿಸಿದರೆ ರೈಸ್ ರುಚಿಯಾಗುತ್ತದೆ.
ಪೋಷಕಾಂಶ ಸಮೃದ್ಧ ತೆಂಗಿನಕಾಯಿ ಸೇವನೆ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನ ನೀಡುತ್ತದೆ. ನಿಯಮಿತ ಆಹಾರದಲ್ಲಿ ತೆಂಗಿನಕಾಯಿ ಸೇರಿಸಿ.
ತೆಂಗಿನಕಾಯಿಯ ಉತ್ತಮ ಗುಣ ಹೊಂದಿರುವ ತೆಂಗಿನಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತೆಂಗಿನಕಾಯಿ ಅನೇಕ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ.
ಇದು ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್ ಹೊಂದಿದೆ. ಫೈಬರ್, ಆರೋಗ್ಯಕರ ಕೊಬ್ಬು ಮೆಗ್ನೀಸಿಯಮ್, ತಾಮ್ರ, ಸೆಲೆನಿಯಮ್, ಮ್ಯಾಂಗನೀಸ್, ರಂಜಕ, ಕಬ್ಬಿಣ ಮತ್ತು ಪೊಟ್ಯಾಸಿಯಂ ಹೊಂದಿದೆ. ತೆಂಗಿನಕಾಯಿ ಅನ್ನದ ಆರೋಗ್ಯಕರ ಪಾಕವಿಧಾನ ನೋಡೋಣ.
ತೆಂಗಿನಕಾಯಿಯಲ್ಲಿರುವ ಫೈಬರ್ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಹೆಚ್ಚುತ್ತಿರುವ ತೂಕ ನಿಯಂತ್ರಿಸುವಲ್ಲಿ ಇದರ ಸೇವನೆಯು ಪರಿಣಾಮಕಾರಿ.
ತೆಂಗಿನಕಾಯಿ ಅನ್ನ ರೆಸಿಪಿ
ಬೇಕಾಗುವ ಸಾಮಗ್ರಿಗಳು
ಪುಡಿ ಮಾಡಿದ ಒಣ ತೆಂಗಿನಕಾಯಿ - 2 ಕಪ್, ಬಾಸ್ಮತಿ ಅಕ್ಕಿ - 1 ಕಪ್, ಕಡಲೆಕಾಯಿ - 4 ಟೀಸ್ಪೂನ್, ಗೋಡಂಬಿ - 8 ರಿಂದ 10, ಚನಾ ದಾಲ್ (ನೆನೆಸಿದ) - 4 ಚಮಚ, ನೆನೆಸಿದ ಉದ್ದಿನ ಬೇಳೆ 4 ಟೀಸ್ಪೂನ್, ಸಾಸಿವೆ ಬೀಜಗಳು - 1 ಟೀಸ್ಪೂನ್, ಜೀರಿಗೆ - 1 ಟೀಚಮಚ
ಕರಿಬೇವಿನ ಎಲೆಗಳು - 5 ರಿಂದ 6, ಕಡಿದಾದ ಕೆಂಪು ಮೆಣಸಿನಕಾಯಿ – 1. ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ – 2, ಉಪ್ಪು (ರುಚಿಗೆ), ತುಪ್ಪ - 2 ರಿಂದ 3 ಚಮಚ.
ತಯಾರು ಮಾಡುವ ವಿಧಾನ
ಮೊದಲು ಬಾಸ್ಮತಿ ಅಕ್ಕಿ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ನಂತರ ಅದನ್ನು ಸುಮಾರು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಮಧ್ಯಮ ಉರಿಯಲ್ಲಿ ಪ್ಯಾನ್ ಅನ್ನು ಬಿಸಿ ಮಾಡಿ, ಅದಕ್ಕೆ 1 ಚಮಚ ತುಪ್ಪ ಸೇರಿಸಿ.
ಈಗ ಅದರಲ್ಲಿ ಶೇಂಗಾ ಮತ್ತು ಗೋಡಂಬಿ ಹುರಿದು ತೆಗೆದು ಪಕ್ಕಕ್ಕೆ ಇಡಿ. ಬಾಣಲೆಯಲ್ಲಿ ಒಂದು ಚಮಚ ತುಪ್ಪ ಸೇರಿಸಿ. ನಂತರ ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು, ನೆನೆಸಿದ ಉದ್ದಿನಬೇಳೆ ಮತ್ತು ಬೇಳೆಯನ್ನು ಹಾಕಿ. ಎಲ್ಲವನ್ನೂ ಒಟ್ಟಿಗೆ ಸುಮಾರು 1 ನಿಮಿಷ ಫ್ರೈ ಮಾಡಿ.
ಅದರ ನಂತರ ಹುರಿದ ಗೋಡಂಬಿ ಮತ್ತು ಕಡಲೆಕಾಯಿ ಸೇರಿಸಿ, ಹಾಗೆಯೇ ತುರಿದ ತೆಂಗಿನಕಾಯಿ ಮತ್ತು ಎಲ್ಲಾ ಒಟ್ಟಿಗೆ 2 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಅದರಲ್ಲಿ ನೆನೆಸಿದ ಬಾಸ್ಮತಿ ಹಾಕಿ ರುಚಿಗೆ ತಕ್ಕಂತೆ ಉಪ್ಪು ಹಾಕಿ. ಎಲ್ಲವನ್ನೂ ಒಟ್ಟಿಗೆ 2 ನಿಮಿಷಗಳ ಕಾಲ ಮತ್ತೆ ಫ್ರೈ ಮಾಡಿ.
ಇದನ್ನೂ ಓದಿ: ಹೃದ್ರೋಗ ಸಮಸ್ಯೆ ತಡೆದು, ರಕ್ತ ತೆಳುವಾಗಿಸಲು ಈ ಮನೆಮದ್ದು ಸಹಕಾರಿ!
ಈಗ ಈ ತಯಾರಿಸಿದ ಮಿಶ್ರಣವನ್ನು ಪ್ರೆಶರ್ ಕುಕ್ಕರ್‌ನಲ್ಲಿ ಹಾಕಿ. ಮೇ¯ ನೀರು ಸುರಿಯಿರಿ, ಬೇಯಿಸಿ. ನಿಮ್ಮ ತೆಂಗಿನಕಾಯಿ ಅನ್ನ ಸಿದ್ಧವಾಗಿದೆ. ಸವಿಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ