Morning Breakfast: ಬೆಳಗಿನ ತಿಂಡಿಗೆ ಚಿಯಾ ಬೀಜಗಳ ರೆಸಿಪಿ ನೀವೂ ಟ್ರೈ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಿಯಾ ಬೀಜಗಳನ್ನು ವಿವಿಧ ರೆಸಿಪಿಗಳ ಮೂಲಕ ಸೇವನೆ ಮಾಡಬಹುದು. ಅದರಲ್ಲೂ ನೀವು ಚಿಯಾ ಬೀಜಗಳನ್ನು ಬೆಳಗಿನ ತಿಂಡಿಯಾಗಿ ಸೇವಿಸಿದರೆ ಹೆಚ್ಚು ಆರೋಗ್ಯವರ್ಧಕ. ಚಿಯಾ ಬೀಜಗಳು ಸಂಪೂರ್ಣ ಪ್ರೋಟೀನ್ ಆಗಿದೆ. ಎಲ್ಲಾ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಚಿಯಾ ಬೀಜಗಳು ಹೊಂದಿವೆ.

  • Share this:

    ಚಿಯಾ ಬೀಜಗಳು (Chia Seeds) ಸಾಕಷ್ಟು ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿದೆ. ಅವುಗಳ ಪ್ರಯೋಜನಗಳಿಂದಾಗಿ (Benefits) ಅದನ್ನು ಸೂಪರ್‌ ಫುಡ್‌ (Super Food) ಎಂದು ಕರೆಯಲಾಗಿದೆ. ಚಿಯಾ ಬೀಜಗಳ ಸೇವನೆ ವಿಶೇಷವಾಗಿ ಮಹಿಳೆಯರಿಗೆ ತುಂಬಾ ಆರೋಗ್ಯಕರ (Healthy) ಎಂದು ಪರಿಗಣಿಸಲಾಗಿದೆ. ಚಿಯಾ ಬೀಜಗಳನ್ನು ವಿವಿಧ ರೆಸಿಪಿಗಳ ಮೂಲಕ ಸೇವನೆ ಮಾಡಬಹುದು. ಅದರಲ್ಲೂ ನೀವು ಚಿಯಾ ಬೀಜಗಳನ್ನು ಬೆಳಗಿನ ತಿಂಡಿಯಾಗಿ (Morning Breakfast) ಸೇವಿಸಿದರೆ ಹೆಚ್ಚು ಆರೋಗ್ಯವರ್ಧಕ ಅಂತಾರೆ ತಜ್ಞರು. ಚಿಯಾ ಬೀಜಗಳನ್ನು ಪುಡಿ ಮಾಡಿ, ಎಣ್ಣೆ ಅಥವಾ ನೆನೆಸಿಟ್ಟು ಸೇವನೆ ಮಾಡಬಹುದು. ಚಿಯಾ ಬೀಜಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇಂದು ನಾವು ಬೆಳಗಿನ ತಿಂಡಿಗೆ ಚಿಯಾ ಬೀಜಗಳ ಪಾಕವಿಧಾನದ ಬಗ್ಗೆ ತಿಳಿಯೋಣ.


    ಬೆಳಗಿನ ತಿಂಡಿಗೆ ಚಿಯಾ ಬೀಜಗಳ ಪಾಕವಿಧಾನ


    ಚಿಯಾ ಬೀಜಗಳು ಸುಮಾರು ಕ್ಯಾಲೋರಿ, ಪ್ರೋಟೀನ್, ಫೈಬರ್, ಅಪರ್ಯಾಪ್ತ ಕೊಬ್ಬು, ಕ್ಯಾಲ್ಸಿಯಂ, ಸತು ಮತ್ತು ತಾಮ್ರ ಒಮೆಗಾ -3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲ.


    ಚಿಯಾ ಬೀಜಗಳು ಸಂಪೂರ್ಣ ಪ್ರೋಟೀನ್ ಆಗಿದೆ. ಎಲ್ಲಾ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಚಿಯಾ ಬೀಜಗಳು ಹೊಂದಿವೆ. ಚಿಯಾ ಬೀಜಗಳು ಫೈಬರ್ ಮತ್ತು ಒಮೆಗಾ -3 ಹೊಂದಿವೆ. ಇದು ಹೃದಯ ಕಾಯಿಲೆಯ ಅಪಾಯ ಕಡಿಮೆ ಮಾಡುತ್ತದೆ.




    ಚಿಯಾ ಬೀಜಗಳು ಮುಖ್ಯವಾಗಿ ಕರಗುವ ಫೈಬರ್ ಹೊಂದಿವೆ. ಚಿಯಾ ಬೀಜಗಳು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೃದಯ ಕಾಯಿಲೆಯ ಅಪಾಯ ಕಡಿಮೆ ಮಾಡುತ್ತದೆ. ದೇಹದ ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ಮಧುಮೇಹಿಗಳಿಗೆ ಒಳ್ಳೆಯದು.


    ಚಿಯಾ ಬೀಜಗಳ ಆರೋಗ್ಯಕರ ಪಾಕವಿಧಾನ


    ಚಿಯಾ ನೀರು ರೆಸಿಪಿ


    1/4 ಕಪ್ ಚಿಯಾ ಬೀಜಗಳನ್ನು 4 ಕಪ್ ನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ. ನಂತರ ಚಿಯಾ ನೀರನ್ನು ಹೆಚ್ಚು ರುಚಿಕರವಾಗಿಸಲು, ಕಿತ್ತಳೆ ಅಥವಾ ಸೇಬಿನ ಹಣ್ಣು ಸೇರಿದಂತೆ ನಿಮ್ಮಿಷ್ಟದ ಹಣ್ಣು ಮತ್ತು ತರಕಾರಿ ಹಾಗೂ ಡ್ರೈ ಫ್ರೂಟ್ಸ್ ಸೇರಿಸಿ ಸೇವನೆ ಮಾಡಿ.


    ಚಿಯಾ ಪುಡಿಂಗ್


    2 ಟೀಸ್ಪೂನ್ ಚಿಯಾ ಬೀಜಗಳು, 1/2 ಕಪ್ ಹಾಲು, 1 ಟೀಚಮಚ ಜೇನುತುಪ್ಪ ಅಥವಾ ಇತರೆ ಸಿಹಿಕಾರಕ, ಸ್ಟ್ರಾಬೆರಿ ಅಥವಾ ನಿಮ್ಮಿಷ್ಟದ ಚೆರ್ರಿ, ಸೇಬು ಹಣ್ಣು ಬೇಕು.


    ಸಾಂದರ್ಭಿಕ ಚಿತ್ರ


    ಎಲ್ಲಾ ಪದಾರ್ಥಗಳನ್ನು ಜಾರ್ನಲ್ಲಿ ಹಾಕಿ ಚೆನ್ನಾಗಿ ರುಬ್ಬಿರಿ. ಮೂರು ನಿಮಿಷ ಬಿಟ್ಟು, ರಾತ್ರಿಯಿಡೀ ಅಥವಾ ಕನಿಷ್ಠ 2 ಗಂಟೆ ನೆನೆಯಲು ಬಿಡಿ. ನಂತರ ಹಣ್ಣನ್ನು ಅದರ ಮೇಲೆ ಹಾಕಿ ಸೇವಿಸಿ.


    ಚಿಯಾ ಸೀಡ್ಸ್ ಮಿಕ್ಸ್ ಚಪಾತಿ


    ಗೋಧಿ ಹಿಟ್ಟು 2 ಕಪ್, ಅಗಸೆ ಬೀಜಗಳು 1 ಕಪ್, ಚಿಯಾ ಬೀಜಗಳು 1 ಕಪ್, ಓಟ್ಸ್ 1 ಕಪ್, ಉಪ್ಪು, ಅಜ್ವೈನ್ 1/2 ಟೀಸ್ಪೂನ್ ಬೇಕು.


    ಮೊದಲು ಚಿಯಾ ಬೀಜ, ಓಟ್ಸ್ ಮತ್ತು ಅಗಸೆ ಬೀಜಗಳನ್ನು ಪ್ರತ್ಯೇಕವಾಗಿ ಬ್ಲೆಂಡರ್ ಗೆ ಹಾಕಿ ಪುಡಿ ಮಾಡಿ. ದೊಡ್ಡ ಪಾತ್ರೆಗೆ ಗೋಧಿ ಹಿಟ್ಟು, ಎಲ್ಲಾ ಮೂರು ಮಿಶ್ರಿತ ಬೀಜ ಸೇರಿಸಿ. ಅದಕ್ಕೆ ಅಜ್ವಾಐನ್ ಮತ್ತು ಉಪ್ಪನ್ನು ಸೇರಿಸಿ. ನೀರು ಹಾಕಿ ನಾದಿರಿ.


    ನಂತರ ಸಣ್ಣ ಉಂಡೆ ಮಾಡಿ, ವೃತ್ತಾಕಾರದಲ್ಲಿ ಲಟ್ಟಿಸಿ. ತವೆ ಬಿಸಿ ಮಾಡಿ ಚಪಾತಿಯ ಎರಡೂ ಬದಿ ಚೆನ್ನಾಗಿ ಬೇಯಿಸಿ. ಸರ್ವ್ ಮಾಡಿ.


    ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ತಯಾರಿಸಿ ವೆಜ್ ಪರೋಟ, ಸಲಾಡ್, ಇಲ್ಲಿದೆ ರೆಸಿಪಿ!


    ಸಲಾಡ್ ಮತ್ತು ಹಣ್ಣುಗಳ ಜೊತೆ ಚಿಯಾ ಬೀಜ ಸೇವಿಸಿ


    ಚಿಯಾ ಬೀಜಗಳನ್ನು ಸೌತೆಕಾಯಿ, ಮೂಲಂಗಿ, ಟೊಮೆಟೊ, ಈರುಳ್ಳಿ, ಕ್ಯಾರೆಟ್‌ ತರಕಾರಿ ಸಲಾಡ್ ಮಾಡಿ ಬೆರೆಸಿ ಸೇವನೆ ಮಾಡಿ. ಸೇಬು, ಪಪ್ಪಾಯಿ, ಬಾಳೆಹಣ್ಣು ಚಾಟ್ ಮಾಡಿ, ಚಿಯಾ ಬೀಜ ಸೇರಿಸಿ ಸೇವಿಸಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು