ಚಳಿಗಾಲದಲ್ಲಿ ತಾಜಾ ಕ್ಯಾರೆಟ್ ತರಕಾರಿ (Fresh Carrot Vegetable) ಸಿಗುತ್ತದೆ. ಕ್ಯಾರೆಟ್ ನ್ನು ಹೆಚ್ಚಾಗಿ ಆರೋಗ್ಯ (Healthy) ವರ್ಧಕವೆಂದೇ ಕರೆಯುತ್ತಾರೆ. ಇದಕ್ಕೆ ಕಾರಣ ಕ್ಯಾರೆಟ್ ನಲ್ಲಿರುವ ಪೋಷಕಾಂಶಗಳು (Nutrients) ಹೇರಳವಾಗಿರುವುದು. ನೀವು ಕ್ಯಾರೆಟ್ ನ್ನು ಕಚ್ಚಾ ಆಗಿ ತಿನ್ನಬಹುದು. ತರಕಾರಿ ಹಾಗೂ ಹಣ್ಣುಗಳ ಸಲಾಡ್ ಜೊತೆಗೂ ತಿನ್ನಬಹುದು. ಕ್ಯಾರೆಟ್ ಹಲ್ವಾ, ಟಿಕ್ಕಿ, ಕಟ್ಲೆಟ್ ಹೀಗೆ ಹಲವು ಖಾದ್ಯಗಳ ಮೂಲಕವೂ ಸೇವನೆ ಮಾಡಬಹುದು. ಅದಾಗ್ಯೂ ಬೆಳಗಿನ ತಿಂಡಿಗೆ (Morning Breakfast) ನೀವು ಲಘು ಉಪಹಾರ ಸೇವಿಸುವವರಾಗಿದ್ದರೆ, ಅಥವಾ ಯಾವಾಗ್ಲೂ ತರಕಾರಿ, ಹಣ್ಣುಗಳ ಸಲಾಡ್ ತಿಂದು ಬೇಜಾರಾಗಿದ್ರೆ ಹೊಸ ರೆಸಿಪಿ ಟ್ರೈ ಮಾಡಿ. ಬೆಳಗಿನ ತಿಂಡಿಗೆ ನೀವು ಕ್ಯಾರೆಟ್ ಕಟ್ಲೆಟ್ ಸೇವನೆ ಮಾಡಬಹುದು.
ಬೆಳಗಿನ ತಿಂಡಿಗೆ ಕ್ಯಾರೆಟ್ ಕಟ್ಲೆಟ್ ರೆಸಿಪಿ
ಬೆಳಗ್ಗೆ, ರಾತ್ರಿ, ಮಧ್ಯಾಹ್ನ, ಸಾಯಂಕಾಲ ಹೀಗೆ ನಿಮಗೆ ಯಾವಾಗ ಬೇಕೋ ಆಗ ನೀವು ಕ್ಯಾರೆಟ್ ಕಟ್ಲೆಟ್ ಮಾಡಿ ಸೇವನೆ ಮಾಡಬಹುದು. ಅದಾಗ್ಯೂ ಇದನ್ನು ಬೆಳಗಿನ ತಿಂಡಿಯಾಗಿ ಸೇವಿಸಿದ್ರೆ, ರುಚಿ ದುಪ್ಪಟ್ಟಾಗುತ್ತದೆ. ದಿನವೂ ಪುರಿ, ದೋಸೆ ತಿಂದು ಬೋರ್ ಆಗಿದ್ರೆ ಕ್ಯಾರೆಟ್ ಕಟ್ಲೆಟ್ ಟ್ರೈ ಮಾಡಿ.
ಕ್ಯಾರೆಟ್ ಕಟ್ಲೆಟ್ ಉತ್ತಮ ರುಚಿ ಹಾಗೂ ಆರೋಗ್ಯಕ್ಕೂ ಉತ್ತಮ ಪದಾರ್ಥವಾಗಿದೆ. ಋತುಮಾನದ ತರಕಾರಿ ಕ್ಯಾರೆಟ್ ಹೆಚ್ಚಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಎಲ್ಲರೂ ಕ್ಯಾರೆಟ್ ತಿನ್ನುತ್ತಾರೆ. ಪೋಷಕಾಂಶಗಳಿಂದ ಕೂಡಿದ ಕ್ಯಾರೆಟ್ ಆರೋಗ್ಯ ಉತ್ತಮವಾಗಿ ಕಾಪಾಡಲು ಸಹಕಾರಿ ಆಗಿದೆ. ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆ ತೆಗೆದು ಹಾಕುತ್ತದೆ.
ರುಚಿಕರ ಕ್ಯಾರೆಟ್ ಕಟ್ಲೆಟ್ ರೆಸಿಪಿಗೆ ಬೇಕಾಗುವ ಪದಾರ್ಥಗಳು
ಎರಡು ಕ್ಯಾರೆಟ್, ಒಂದು ಈರುಳ್ಳಿ, ಎರಡು ಹಸಿರು ಮೆಣಸಿನಕಾಯಿ, ನಾಲ್ಕು ಬೇಯಿಸಿದ ಆಲೂಗಡ್ಡೆ, ಒಂದು ಹಿಡಿ ಕೊತ್ತಂಬರಿ ಸೊಪ್ಪು, ಅಗತ್ಯಕ್ಕೆ ತಕ್ಕಷ್ಟು ಬ್ರೆಡ್ ಕ್ರಂಪ್ಸ್, ಮೂರು ಚಮಚ ಕಾರ್ನ್ ಹಿಟ್ಟು,
ಮಸಾಲೆ, ಕಪ್ಪು ಉಪ್ಪು ರುಚಿಗೆ ತಕ್ಕಂತೆ, ಒಂದು ಚಮಚ ಚಾಟ್ ಮಸಾಲಾ, ಕಪ್ಪು ಮೆಣಸು ರುಚಿಗೆ ತಕ್ಕಂತೆ, ಒಂದು ಚಮಚ ಜೀರಿಗೆ ಪುಡಿ, ಅರ್ಧ ಚಮಚ ಅರಿಶಿನ ಪುಡಿ, ಒಂದು ಚಮಚ ಕೊತ್ತಂಬರಿ ಪುಡಿ ಬೇಕು.
ಟೇಸ್ಟಿ ಕ್ಯಾರೆಟ್ ಕಟ್ಲೆಟ್ ಮಾಡುವ ವಿಧಾನ
ಮೊದಲು ಕ್ಯಾರೆಟ್ ಮತ್ತು ಈರುಳ್ಳಿಯನ್ನು ತುರಿದು ಒಂದು ಬಟ್ಟಲಿಗೆ ಹಾಕಿಡಿ. ನಂತರ ಬೇಯಿಸಿದ ಆಲೂಗಡ್ಡೆ, ಕೊತ್ತಂಬರಿ, ಹಸಿರು ಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ಮಸಾಲೆ ಮತ್ತು ಕಾರ್ನ್ ಫ್ಲೋರ್, ಬ್ರೆಡ್ ತುಂಡು ಸೇರಿಸಿ ಕಟ್ಲೆಟ್ ಬೇಸ್ ಸಿದ್ಧಪಡಿಸಿ.
ಈ ಮಿಶ್ರಣದಿಂದ ಸಣ್ಣ ಉಂಡೆ ಮಾಡಿ ಬೇರೆ ಪ್ಲೇಟ್ ನಲ್ಲಿ ಇಡಿ. ಒಂದು ಬಟ್ಟಲಿನಲ್ಲಿ 2 ಚಮಚ ಕಾರ್ನ್ ಫ್ಲೋರ್, ಸ್ವಲ್ಪ ನೀರು ಸೇರಿಸಿ ಮತ್ತು ದಪ್ಪ ಮಿಶ್ರಣ ತಯಾರಿಸಿ.
ಈಗ ಈ ಕ್ಯಾರೆಟ್ ಬೇಸ್ ಉಂಡೆಗಳನ್ನು ಕಾರ್ನ್ ಫ್ಲೋರ್ ಮಿಶ್ರಣದಲ್ಲಿ ಅದ್ದಿ, ಬ್ರೆಡ್ ತುಂಡುಗಳಲ್ಲಿ ಸುತ್ತಿ ಮತ್ತು ಪಕ್ಕಕ್ಕೆ ಇರಿಸಿ. ನಂತರ ನಾನ್ ಸ್ಟಿಕ್ ಪ್ಯಾನ್ ಗೆ ಆಲಿವ್ ಎಣ್ಣೆ ಅನ್ವಯಿಸಿ. ಕ್ಯಾರೆಟ್ ಕಟ್ಲೆಟ್ ನ್ನು ತವೆ ಮೇಲೆ ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ.
ಇದನ್ನೂ ಓದಿ: ಶ್ವಾಸಕೋಶದ ಕಾಯಿಲೆಗೆ ಯೋಗ ಪರಿಣಾಮಕಾರಿ ಪರಿಹಾರವಂತೆ
ಎರಡೂ ಬದಿ ಗೋಲ್ಡನ್ ಬ್ರೌನ್ ಆದ ನಂತರ ಪ್ಲೇಟ್ ಗೆ ತೆಗೆದಿಡಿ. ನಂತರ ನಿಮ್ಮಿಷ್ಟದ ಚಟ್ನಿ ಮತ್ತು ಚಹಾ ಜೊತೆ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ