• Home
  • »
  • News
  • »
  • lifestyle
  • »
  • Morning Breakfast: ಬೆಳಗಿನ ತಿಂಡಿಗೆ ಕ್ಯಾರೆಟ್ ಮತ್ತು ಬತುವಾ ಕಬಾಬ್‌ ರೆಸಿಪಿ ಮಾಡುವುದು ಹೇಗೆ?

Morning Breakfast: ಬೆಳಗಿನ ತಿಂಡಿಗೆ ಕ್ಯಾರೆಟ್ ಮತ್ತು ಬತುವಾ ಕಬಾಬ್‌ ರೆಸಿಪಿ ಮಾಡುವುದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಕ್ಕಳು ಯಾವುದೇ ಪದಾರ್ಥ ತಿನ್ನುವ ಮೊದಲು ತುಂಬಾ ಕಾಡುತ್ತಾರೆ. ಬೇಗ ತರಕಾರಿಗಳನ್ನು ತಿನ್ನುವುದಿಲ್ಲ. ಅವರು ತರಕಾರಿ ಸೇವಿಸಲು ಬೇರೆ ಬೇರೆ ಅವರಿಷ್ಟದ ಖಾದ್ಯಗಳನ್ನು ಮಾಡಿ ತಿನ್ನಿಸಬೇಕಾಗುತ್ತದೆ. ಹಾಗಾಗಿ ಇಂದು ಚೆನೊಪೋಡಿಯಂ ಅಂದ್ರೆ ಬತುವಾ ಸೊಪ್ಪು ಮತ್ತು ಕ್ಯಾರೆಟ್ ಕಬಾಬ್ ರೆಸಿಪಿ ಬಗ್ಗೆ ತಿಳಿಯೋಣ.

ಮುಂದೆ ಓದಿ ...
  • Share this:

    ಚಳಿಗಾಲದಲ್ಲಿ (Winter) ಸಾಕಷ್ಟು ಹಸಿರು ತರಕಾರಿಗಳು (Green Vegetables), ಹಣ್ಣು, ತರಹೇವಾರಿ ಖಾದ್ಯಗಳು (Recipes) ಸಿಗುವ ಸಮಯ. ಈ ಸೀಸನ್ ನಲ್ಲಿ ಹೆಚ್ಚು ಹಸಿರು ತರಕಾರಿ ಹಾಗೂ ಕ್ಯಾರೆಟ್ (Carrot) ಜನರ ಗಮನ ಸೆಳೆಯುತ್ತೆ. ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಹಸಿರು ತರಕಾರಿಗಳು ಕಡಿಮೆ ಬೆಲೆಗೆ ಸಿಗುತ್ವೆ. ಬಣ್ಣ ಬಣ್ಣದ ತರಕಾರಿಗಳು ವಿಶೇಷವಾಗಿ ವಿಂಟರ್ ಸೀಸನ್ ನಲ್ಲಿ ದೊರೆಯುತ್ತವೆ. ಈ ಋತುವಿನಲ್ಲಿ ಉತ್ತಮ ರೋಗ ನಿರೋಧಕ ಶಕ್ತಿ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಹಸಿರು ತರಕಾರಿಗಳು ವಿಂಟರ್ ಸೀಸನ್ ನಲ್ಲಿ ಪ್ರಮುಖ ಮತ್ತು ಉತ್ತಮ ಆಯ್ಕೆಯಾಗಿದೆ. ಕಾಲೋಚಿತ ತರಕಾರಿ ಮತ್ತು ಹಣ್ಣುಗಳ ಸೇವನೆ ಆರೋಗ್ಯ (Health) ಹಾಗೂ ದೇಹಕ್ಕೆ ಪೋಷಕಾಂಶ ಒದಗಿಸುತ್ತದೆ.


    ಬೆಳಗಿನ ತಿಂಡಿಗೆ ಚೆನೊಪೊಡಿಯಂ ಮತ್ತು ಕ್ಯಾರೆಟ್ ಕಬಾಬ್ ರೆಸಿಪಿ


    ಆದರೆ ಮಕ್ಕಳು ಯಾವುದೇ ಪದಾರ್ಥ ತಿನ್ನುವ ಮೊದಲು ತುಂಬಾ ಕಾಡುತ್ತಾರೆ. ಬೇಗ ತರಕಾರಿಗಳನ್ನು ತಿನ್ನುವುದಿಲ್ಲ. ಅವರು ತರಕಾರಿ ಸೇವಿಸಲು ಬೇರೆ ಬೇರೆ ಅವರಿಷ್ಟದ ಖಾದ್ಯಗಳನ್ನು ಮಾಡಿ ತಿನ್ನಿಸಬೇಕಾಗುತ್ತದೆ. ಹಾಗಾಗಿ ಇಂದು ಚೆನೊಪೋಡಿಯಂ ಅಂದ್ರೆ ಬತುವಾ ಸೊಪ್ಪು ಮತ್ತು ಕ್ಯಾರೆಟ್ ಕಬಾಬ್ ರೆಸಿಪಿ ಬಗ್ಗೆ ತಿಳಿಯೋಣ.


    ಮಕ್ಕಳಿಗೆ ಕಬಾಬ್ ಅಂದ್ರೆ ಇಷ್ಟ ಪಟ್ಟು ತಿನ್ನುತ್ತಾರೆ. ಹೀಗಿದ್ದಾಗ ಮಕ್ಕಳಿಗೆ ಬತುವಾ ಸೊಪ್ಪು ಮತ್ತು ಕ್ಯಾರೆಟ್ ಕಬಾಬ್ ಆರೋಗ್ಯಕರವೂ ಹಾಗೂ ರುಚಿಕರವೂ ಆಗಿರುತ್ತದೆ.




    ಬತುವಾ ಸೊಪ್ಪು ಮತ್ತು ಕ್ಯಾರೆಟ್ ಕಬಾಬ್ ರೆಸಿಪಿ ರುಚಿ ದೊಡ್ಡವರಿಂದ ಹಿಡಿದು ಮಕ್ಕಳಿಗೂ ಇಷ್ಟ ಆಗುತ್ತೆ. ಕ್ಯಾರೆಟ್ ಮತ್ತು ಬತುವಾ ಸೊಪ್ಪಿನ ಕಬಾಬ್‌ ಆರೋಗ್ಯಕರ ಮತ್ತು ಟೇಸ್ಟಿ ಪಾಕವಿಧಾನ ಹೀಗಿದೆ.


    ಕ್ಯಾರೆಟ್ ಮತ್ತು ಬತುವಾ ಕಬಾಬ್‌ ರೆಸಿಪಿ


    ಬೇಕಾಗುವ ಸಾಮಗ್ರಿಗಳು


    6 ಕ್ಯಾರೆಟ್, 2 ಕಪ್ ಬತುವಾ, 2 ಮಧ್ಯಮ ಗಾತ್ರ ಈರುಳ್ಳಿ, ಒಂದು ಹಿಡಿ ಕೊತ್ತಂಬರಿ ಸೊಪ್ಪು, 3 ಹಸಿರು ಮೆಣಸಿನಕಾಯಿ, 1 ಕಪ್ ಕಡಲೆಬೇಳೆ, ಮಸಾಲೆ, ಅರ್ಧ ಟೀಚಮಚ ಕಪ್ಪು ಮೆಣಸು, 1 ಟೀಸ್ಪೂನ್ ಕಪ್ಪು ಉಪ್ಪು, 1 ಟೀಸ್ಪೂನ್ ಜೀರಿಗೆ ಪುಡಿ, ಅರ್ಧ ಟೀಚಮಚ ಕೊತ್ತಂಬರಿ ಪುಡಿ, 1 ಟೀಸ್ಪೂನ್ ಬೆಳ್ಳುಳ್ಳಿ ಶುಂಠಿ ಪೇಸ್ಟ್, ಆಲಿವ್ ಎಣ್ಣೆ ಅಗತ್ಯಕ್ಕೆ ತಕ್ಕಷ್ಟು, 2 ಕಪ್ ಬ್ರೆಡ್ ಕ್ರಂಪ್ಸ್ ಬೇಕು.


    ಕ್ಯಾರೆಟ್ ಮತ್ತು ಬತುವಾ ಕಬಾಬ್‌ ಮಾಡುವ ವಿಧಾನ ಹೀಗಿದೆ


    ಒಂದು ಕಪ್ ಕಡಲೆ ಬೇಳೆಯನ್ನು 3 ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಕ್ಯಾರೆಟ್ ತುರಿ ಮಾಡಿ, ಈರುಳ್ಳಿಯನ್ನು ನುಣ್ಣಗೆ ಕತ್ತರಿಸಿಡಿ. ಈಗ ಪ್ರೆಶರ್ ಕುಕ್ಕರ್ ನಲ್ಲಿ ನೆನೆಸಿದ ಬೇಳೆ ಸೇರಿಸಿ. ಬತುವಾ ಮತ್ತು ಆಲೂಗಡ್ಡೆ ಹಾಕಿ ಕುದಿಸಿ.


    ಸಾಂದರ್ಭಿಕ ಚಿತ್ರ


    ಬೇಳೆ ಮತ್ತು ಬತುವಾ ಕುದ್ದ ನಂತರ ತಣ್ಣಗಾಗಲು ಬಿಡಿ ನಂತರ ಅದನ್ನು ಮಿಕ್ಸಿಯಲ್ಲಿ ರುಬ್ಬಿರಿ. ಈಗ ಬತುವಾ ಮತ್ತು ದಾಲ್‌ ನ ದಪ್ಪ ಪೇಸ್ಟ್ ಸಿದ್ಧವಾಗಿದೆ. ಬಟ್ಟಲಿಗೆ ಹಾಕಿರಿ.


    ನಂತರ ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಕೊತ್ತಂಬರಿ ಮತ್ತು ಮೆಣಸಿನಕಾಯಿ ಸೇರಿಸಿ. ಕ್ಯಾರೆಟ್ ನೀರು ಸೇರಿಸಿ ಪದಾರ್ಥ ಮಿಶ್ರಣ ಮಾಡಿ. ಬೆಳ್ಳುಳ್ಳಿ ಶುಂಠಿ ಪೇಸ್ಟ್ ಮತ್ತು ಇತರೆ ಮಸಾಲೆ ಸೇರಿಸಿ. ಯಾವುದೇ ಪ್ರಮಾಣದ ನೀರು ಇರದಂತೆ ನೋಡಿಕೊಳ್ಳಿ.


    ನಂತರ ಮಿಶ್ರಣದ ಸ್ವಲ್ಪ ಭಾಗ ತೆಗೆದುಕೊಂಡು ಚಪ್ಪಟೆಯಾಗಿ ಕಬಾಬ್ ಆಕಾರಕ್ಕೆ ತನ್ನಿರಿ. ಅದನ್ನು ಬ್ರೆಡ್ ಕ್ರಂಬ್ಸ್ನಲ್ಲಿ ರೋಲ್ ಮಾಡಿ. ಪ್ಯಾನ್ ಬಿಸಿ ಮಾಡಿ. ಅದಕ್ಕೆ ಎಣ್ಣೆ ಸೇರಿಸಿ, ರೆಡಿಯಾದ ಕಬಾಬ್ ಹಾಕಿ ಚೆನ್ನಾಗಿ ಬೇಯಿಸಿ.


    ಇದನ್ನೂ ಓದಿ: ದೇಹದಲ್ಲಿ ಕಾಣಿಸಿಕೊಳ್ಳುವ ಈ ನೋವನ್ನು ಲಘುವಾಗಿ ಪರಿಗಣಿಸಬೇಡಿ!


    ಬ್ರೆಡ್ ತುಂಡು ಮತ್ತು ಕಬಾಬ್ ಗರಿಗರಿಯಾದ ನಂತರ ಪ್ಲೇಟ್ ಗೆ ಸರ್ವ್ ಮಾಡಿ. ನಿಮ್ಮಿಷ್ಟದ ಚಟ್ನಿ, ಸಾಸ್ ಜೊತೆ ಸೇವಿಸಿ.

    Published by:renukadariyannavar
    First published: