ಬೆಳಗಿನ ತಿಂಡಿಗೆ (Morning Breakfast) ಹಲವು ಪದಾರ್ಥಗಳ ವೆರೈಟಿ ಖಾದ್ಯ (Verity Recipe) ತಿನ್ನುವುದು ಆರೋಗ್ಯ (Health) ದೃಷ್ಟಿಯಿಂದ ತುಂಬಾ ಮುಖ್ಯ. ಹಲವರು ಬೆಳಗಿನ ತಿಂಡಿಗೆ ಬ್ರೆಡ್ ಜಾಮ್ ತಿನ್ನುತ್ತಾರೆ. ಮಕ್ಕಳು ಬ್ರೆಡ್ ಮತ್ತು ಟೊಮೆಟೋ ಕೆಚಪ್ ಕಾಂಬಿನೇಷನ್ ನ್ನು ತಿನ್ನಲು ತುಂಬಾ ಇಷ್ಟ ಪಡ್ತಾರೆ. ನೀವು ಬ್ರೆಡ್ ಸೇವನೆ ಇಷ್ಟ ಪಡ್ತೀರಿ ಅಂದ್ರೆ ಹೊಸ ಪಾಕವಿಧಾನ ಟ್ರೈ ಮಾಡಿ. ಇದು ನಿಮ್ಮ ರುಚಿಯನ್ನು ತಣಿಸುತ್ತದೆ. ಅಂದ ಹಾಗೇ ಇಂದು ನಾವು ಬೆಳಗಿನ ಉಪಹಾರಕ್ಕೆ ಬ್ರೆಡ್ ಉಪ್ಪಿಟ್ಟು ರೆಸಿಪಿ ತಂದಿದ್ದೇವೆ. ನಾವು ಇಂದು ಬ್ರೆಡ್ ಉಪ್ಪಿಟ್ಟು ಮಾಡುವುದು ಹೇಗೆ ಅಂತಾ ತಿಳಿಯೋಣ. ಬ್ರೆಡ್ ಉಪ್ಪಿಟ್ಟು ರೆಸಿಪಿ ತಯಾರಿಸುವುದು ತುಂಬಾ ಸುಲಭ.
ಬೆಳಗಿನ ಉಪಹಾರಕ್ಕೆ ಬ್ರೆಡ್ ಉಪ್ಪಿಟ್ಟು ರೆಸಿಪಿ
ತುಂಬಾ ಜನರಿಗೆ ಬೆಳಗಿನ ತಿಂಡಿಗೆ ರವೆ ಉಪ್ಪಿಟ್ಟು ಅಂದ್ರೆ ಮಾರುದ್ದ ದೂರ ಓಡಿ ಹೋಗ್ತಾರೆ. ಉಪ್ಪಿಟ್ಟಾ ಅಂತ ತಿನ್ನೋಕೆ ಬೇಸರ ಮಾಡಿಕೊಳ್ತಾರೆ. ಹಾಗಾಗಿ ನೀವು ಬ್ರೆಡ್ ಉಪ್ಪಿಟ್ಟು ಮಾಡಿ ಕುಟುಂಬದ ಸದಸ್ಯರಿಗೆ ಅವರ ರುಚಿ ಹೆಚ್ಚಿಸಬಹುದು. ಬ್ರೆಡ್ ಉಪ್ಪಿಟ್ಟು ತ್ವರಿತ ಮತ್ತು ಟೇಸ್ಟಿ ಫುಡ್ ಆಗಿದೆ.
ದಕ್ಷಿಣ ಭಾರತೀಯ ಖಾದ್ಯಗಳಲ್ಲಿ ಬ್ರೆಡ್ ಉಪ್ಪಿಟ್ಟು ಕೂಡ ಒಂದು. ಬೆಳಗಿನ ಉಪಾಹಾರಕ್ಕೆ ಬ್ರೆಡ್ ಉಪ್ಪಿಟ್ಟು ಸೂಕ್ತವಾದ ಫುಡ್ ಆಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ ನೀವು ಬ್ರೆಡ್ ಉಪ್ಪಿಟ್ಟು ಮಾಡಿ ತಿನ್ನಬಹುದು. ರವೆ ಉಪ್ಪಿಟ್ಟಿನ ವಿಧಾನವೇ ಇಲ್ಲೂ ಕೂಡ ಫಾಲೋ ಮಾಡಲಾಗುತ್ತದೆ.
ಬ್ರೆಡ್ ಉಪ್ಪಿಟ್ಟು ತಯಾರಿಸಲು ಅಡುಗೆ ಮನೆಯಲ್ಲಿ ಸಿಗುವ ಎಲ್ಲಾ ಸಾಮಗ್ರಿಗಳನ್ನು ಬಳಕೆ ಮಾಡಲಾಗುತ್ತದೆ. ಇದನ್ನು ಸುಲಭವಾಗಿ ತಯಾರಿಸಲಾಗುತ್ತದೆ. ಹಾಗಾದ್ರೆ ಬ್ರೆಡ್ ಉಪ್ಪಿಟ್ಟು ಪಾಕವಿಧಾನ ಮಾಡುವುದು ಹೇಗೆ ನೋಡೋಣ.
ಬ್ರೆಡ್ ಉಪ್ಪಿಟ್ಟು ರೆಸಿಪಿಗೆ ಬೇಕಾಗುವ ಸಾಮಗ್ರಿಗಳು
ಐದು ಬಿಳಿ ಅಥವಾ ಕಂದು ಬ್ರೆಡ್ ಸ್ಲೈಸ್ ಗಳು, ಕಾಲು ಟೀಸ್ಪೂನ್ ಸಾಸಿವೆ, ಕಾಲು ಟೀ ಸ್ಪೂನ್ ಜೀರಿಗೆ, ಕಾಲು ಟೀಸ್ಪೂನ್ ಉದ್ದಿನ ಬೇಳೆ, ಒಂದು ಚಿಟಿಕೆ ಇಂಗು, ಏಳು ಕರಿಬೇವು, ಸಣ್ಣದಾಗಿ ಹೆಚ್ಚಿದ ಒಂದು ದೊಡ್ಡ ಈರುಳ್ಳಿ, ಸಣ್ಣದಾಗಿ ಹೆಚ್ಚಿದ ಎರಡು ಮಧ್ಯಮ ಟೊಮೆಟೊ,
ಸಣ್ಣಗೆ ಕತ್ತರಿಸಿದ ಒಂದು ಹಸಿರು ಮೆಣಸಿನಕಾಯಿ, ಎರಡು ಟೀಸ್ಪೂನ್ ಕಡಲೆಕಾಳು, ಶೇಂಗಾ, ಐದು ಗೋಡಂಬಿ, ಚಿಟಿಕೆ ಅರಿಶಿನ ಪುಡಿ, ಒಂದೂವರೆ ಚಮಚ ಎಣ್ಣೆ, ನೀರು, ರುಚಿಗೆ ತಕ್ಕಷ್ಟು ಉಪ್ಪು, ನುಣ್ಣಗೆ ಕತ್ತರಿಸಿದ ಎರಡು ಟೀ ಸ್ಪೂನ್ ಕೊತ್ತಂಬರಿ ಸೊಪ್ಪು, ಸೆವ್ ಬೇಕಾಗುತ್ತದೆ.
ಬ್ರೆಡ್ ಉಪ್ಪಿಟ್ಟು ರೆಸಿಪಿ ತಯಾರಿಸುವ ವಿಧಾನ
ಬ್ರೆಡ್ ಉಪ್ಪಿಟ್ಟು ಪಾಕವಿಧಾನದಲ್ಲಿ ನೀವು ಬಿಳಿ ಬ್ರೆಡ್ ಅಥವಾ ಕಂದು ಬ್ರೆಡ್ ಬಳಸಬಹುದು. ಸಾಧ್ಯವಾದರೆ ಬ್ರೌನ್ ಬ್ರೆಡ್ ಬಳಸಿ. ಇದು ಆರೋಗ್ಯಕರ ಆಯ್ಕೆಯಾಗಿದೆ. ಪೌಷ್ಟಿಕ ಫುಡ್ ಆಗಿದೆ. ಬ್ರೆಡ್ ಸ್ಲೈಸ್ ಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
ನಂತರ ಮಧ್ಯಮ ಉರಿಯಲ್ಲಿ ಬಾಣಲೆ ಇರಿಸಿ. ನಂತರ ಸದಕ್ಕೆ ಒಂದೂವರೆ ಚಮಚ ಎಣ್ಣೆ ಹಾಕಿ, ಬಿಸಿ ಮಾಡಿ. ನಂತರ ಸಾಸಿವೆ, ಜೀರಿಗೆ ಮತ್ತು ಉದ್ದಿನಬೇಳೆ ಹಾಕಿ ಬೇಯಿಸಿ. ಸಾಸಿವೆ ಸಿಡಿದಾಗ ಕಡಲೆಕಾಳು, ಇಂಗು ಮತ್ತು ಕರಿಬೇವಿನ ಎಲೆ ಹಾಕಿರಿ. ನಂತರ ಇದಕ್ಕೆ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಕಡಲೆಕಾಯಿ ಮತ್ತು ಗೋಡಂಬಿ ಸೇರಿಸಿ ಫ್ರೈ ಮಾಡಿ.
ಇದನ್ನೂ ಓದಿ: ಜೀರಿಗೆ ನೀರು - ನಿಂಬೆರಸದ ನೀರು ಎರಡರಲ್ಲಿ ಯಾವುದರಿಂದ ತೂಕ ಬೇಗ ಇಳಿಯುತ್ತೆ?
ನಂತರ ಟೊಮ್ಯಾಟೊ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೀರು ಸೇರಿಸಿ ಮಿಶ್ರಣ ಮಾಡಿ ಬೇಯಿಸಿ. ನಂತರ ಬ್ರೆಡ್ ತುಂಡು ಸೇರಿಸಿ, ಮಿಶ್ರಣ ಮಾಡಿ. ಎರಡು ನಿಮಿಷ ಬೇಯಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಸೆವ್ ಹಾಕಿ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ