ಬೆಳಗಿನ ತಿಂಡಿಗೆ ( Morning Breakfast ) ನೀವು ಒಂದೇ ರೀತಿಯ ದೋಸೆ (Dosa) ಮಾಡಿ ತಿಂದು ಬೇಸರವಾಗಿದ್ರೆ ಇವತ್ತು ಹೊಸ ರೆಸಿಪಿ (Recipe) ಬಗ್ಗೆ ಹೇಳಲಿದ್ದೇವೆ. ಇಂದು ನಾವು ಕಪ್ಪು ಕಡಲೆ ಕಾಳಿನ ದೋಸೆ ಮಾಡುವುದು ಹೇಗೆ ಅಂತಾ ನೋಡೋಣ. ಈ ಪಾಕವಿಧಾನ ತುಂಬಾ ಸರಳ ಮತ್ತು ಸುಲಭವಾಗಿದೆ. ಕಪ್ಪು ಕಡಲೆ ಕಾಳಿನ ದೋಸೆ ಬೆಳಗಿನ ತಿಂಡಿ ಆಯ್ಕೆಗೆ ತುಂಬಾ ಹೆಲ್ದೀ (Healthy) ಆಗಿದೆ. ಕಡಲೆ ಕಾಳಿನಲ್ಲಿ ಸಾಕಷ್ಟು ಪೋಷಕಾಂಶವಿದೆ. ಮುಖ್ಯವಾಗಿ ಕಡಲೆ ಕಾಳು ಪ್ರೋಟೀನ್ ಅತ್ಯುತ್ತಮ ಮೂಲ ಎಂಬುದು ನೀವು ತಿಳಿಯಬೇಕು. ಯಾಕಂದ್ರೆ ಇದನ್ನು ಕಡಲೆ ಬೇಳೆ ಬಳಸಿ ತಯಾರು ಮಾಡಲಾಗುತ್ತೆ.
ಬೆಳಗಿನ ತಿಂಡಿಗೆ ಕಪ್ಪು ಕಡಲೆ ಕಾಳಿನ ದೋಸೆ ರೆಸಿಪಿ
ಉದ್ದಿನ ಬೇಳೆ ಮತ್ತು ಅಕ್ಕಿ ಆಧಾರಿತ ದೋಸೆ ಪಾಕವಿಧಾನಕ್ಕೆ ಹೋಲಿಸಿದರೆ ಕಪ್ಪು ಕಡಲೆ ಕಾಳಿನ ದೋಸೆ ರೆಸಿಪಿ ಹೆಚ್ಚು ಆರೋಗ್ಯಕರ ಹಾಗೂ ಸೂಕ್ತ ಪರ್ಯಾಯ ಆಹಾರ ಆಗಿದೆ. ಈ ದೋಸೆ ಸಾಂಪ್ರದಾಯಿಕ ಮಸಾಲಾ ದೋಸೆ ಪಾಕವಿಧಾನಕ್ಕಿಂತ ಭಿನ್ನವಾಗಿವೆ.
ಹಾಗೆಯೇ ಕಪ್ಪು ಕಡಲೆ ಕಾಳಿನ ದೋಸೆ ರೆಸಿಪಿ ಹೆಚ್ಚು ಗರಿಗರಿಯಾಗಿರುತ್ತದೆ. ಇದು ಊಟದ ರುಚಿ ಹೆಚ್ಚಿಸುತ್ತದೆ. ಗರಿ ಗರಿಯಾದ ಸೋಸೆ ಸೇವನೆಯು ಆದರ್ಶ ಉಪಹಾರ ಪಾಕವಿಧಾನವಾಗಿದೆ.
ದೋಸೆ ರೆಸಿಪಿಯನ್ನು ಹೆಚ್ಚಾಗಿ ಅಕ್ಕಿ ಮತ್ತು ಉದ್ದಿನಬೇಳೆ ಬಳಸಿ ಮಾಡುತ್ತಾರೆ. ಇದು ಸರಳ ಸಂಯೋಜನೆಯಾಗಿದೆ. ದೋಸೆಯನ್ನು ಟೇಸ್ಟಿ ಮತ್ತು ಕ್ರಿಸ್ಪಿಯಾಗಿಸಲು ಕೆಲವು ಬದಲಾವಣೆ ಮಾಡ್ಬೇಕಾಗುತ್ತದೆ. ಉದ್ದಿನ ಬೇಳೆ ಸೇವನೆ ಜೀರ್ಣಕ್ರಿಯೆ, ಗ್ಯಾಸ್ ತೊಂದರೆ ಉಂಟು ಮಾಡುತ್ತದೆ.
ಹಾಗೆಯೇ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಸೆಪ್ಟಿಕ್ ಸಮಸ್ಯೆ ಹೆಚ್ಚಿಸುತ್ತದೆ. ಹಾಗಾಗಿ ಉದ್ದಿನ ಬೇಳೆ ಆಧಾರಿತ ದೋಸೆ ಪಾಕವಿಧಾನಗಳು ಹೆಚ್ಚು ಆರೋಗ್ಯಕರವಲ್ಲ. ಇವು ಜನಪ್ರಿಯ ಆಯ್ಕೆಯಲ್ಲ. ಜನಪ್ರಿಯ ಮತ್ತು ಟೇಸ್ಟಿ ದೋಸೆ ಪಾಕವಿಧಾನವೆಂದರೆ ಕಪ್ಪು ಕಡಲೆ ಕಾಳಿನ ದೋಸೆ ಪಾಕವಿಧಾನ ಆಗಿದೆ.
ಕಪ್ಪು ಕಡಲೆ ಕಾಳಿನ ದೋಸೆ ರೆಸಿಪಿ
ಬೇಕಾಗುವ ಪದಾರ್ಥಗಳು
2 ಕಪ್ ಅಕ್ಕಿ, ಕಪ್ ಬ್ಲಾಕ್ ಚನಾ, ½ ಟೀಸ್ಪೂನ್ ಮೇಥಿ, ನೀರು ಮತ್ತು 1 ಟೀ ಸ್ಪೂನ್ ಉಪ್ಪು, ಎಣ್ಣೆ ಹುರಿಯಲು ಬೇಕು.
ಕಪ್ಪು ಕಡಲೆ ಕಾಳಿನ ದೋಸೆ ರೆಸಿಪಿ ಮಾಡುವ ವಿಧಾನ ಹೀಗಿದೆ
ಮೊದಲು ದೊಡ್ಡ ಬಟ್ಟಲಿಗೆ 2 ಕಪ್ ಅಕ್ಕಿ, ಒಂದು ಕಪ್ ಕಪ್ಪು ಕಡಲೆ ಕಾಳು, ಮತ್ತು ½ ಟೀ ಸ್ಪೂನ್ ಮೇಥಿ ತೆಗೆದುಕೊಳ್ಳಿ. ಅವುಗಳನ್ನು ಚೆನ್ನಾಗಿ ತೊಳೆದು ಕನಿಷ್ಠ 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ನೆನೆಸಿದ ಅಕ್ಕಿ ಮತ್ತು ಹಣ್ಣನ್ನು ಮಿಕ್ಸರ್ ಗ್ರೈಂಡರ್ ಹಾಕಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ ಸ್ವಲ್ಪ ಒರಟಾದ ಪೇಸ್ಟ್ಗೆ ರುಬ್ಬಿಕೊಳ್ಳಿ.
ಹಿಟ್ಟನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ ಮತ್ತು ಹುದುಗುವಿಕೆಗಾಗಿ ಕೈಯಿಂದ ಬೆರೆಸಿ. 8 ಗಂಟೆಗಳ ಕಾಲ ಕವರ್ ಮಾಡಿ ಇರಿಸಿ. ಈಗ ಒಂದು ಟೀ ಸ್ಪೂನ್ ಉಪ್ಪು ಸೇರಿಸಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ.
ಇದನ್ನೂ ಓದಿ: ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಟೊಮ್ಯಾಟೊ ಜ್ಯೂಸ್ ಕುಡಿಯಿರಿ..!
ಈಗ ದೋಸೆ ಪ್ಯಾನ್ ಅನ್ನು ಬಿಸಿ ಮಾಡಿ. ಮತ್ತು ಹಿಟ್ಟನ್ನು ತೆಳುವಾಗಿ ಹರಡಿ. ಸ್ವಲ್ಪ ಎಣ್ಣೆ ಸವರಿ. ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ದೋಸೆಯನ್ನು ಕವರ್ ಮಾಡಿಡಿ. ನಂತರ ಮತ್ತೊಂದು ಬದಿಯನ್ನು ಚೆನ್ನಾಗಿ ಬೇಯಿಸಿ. ಕೊನೆಗೆ ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ