• Home
  • »
  • News
  • »
  • lifestyle
  • »
  • Morning Breakfast: ಬೆಳಗಿನ ತಿಂಡಿಗೆ ಕಡಲೆಬೇಳೆ ಚಿಲ್ಲಾ ರೆಸಿಪಿ ಮಾಡುವುದು ಹೇಗೆ?

Morning Breakfast: ಬೆಳಗಿನ ತಿಂಡಿಗೆ ಕಡಲೆಬೇಳೆ ಚಿಲ್ಲಾ ರೆಸಿಪಿ ಮಾಡುವುದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಡಲೆಬೇಳೆ ಚಿಲ್ಲಾ ಮಾಡುವುದು ತುಂಬಾ ಸುಲಭ. ಇದಕ್ಕಾಗಿ ತುಂಬಾ ಶ್ರಮ ಪಡಬೇಕಾಗಿಲ್ಲ. ಇದು ಹೊಟ್ಟೆಗೆ ತುಂಬಾ ಹಗುರ. ಕಡಿಮೆ ಎಣ್ಣೆಯ ಅಗತ್ಯವಿದೆ. ಎಣ್ಣೆ ಅಥವಾ ತುಪ್ಪವಿಲ್ಲದೆ ಮಾಡಬಹುದು. ದಿನವನ್ನು ಪ್ರಾರಂಭಿಸಲು ಸಾಕಷ್ಟು ಪ್ರೋಟೀನ್ ಅನ್ನು ಒದಗಿಸುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ಉತ್ತಮ ಉಪಹಾರ.

ಮುಂದೆ ಓದಿ ...
  • Share this:

    ಬೆಳಗಿನ ತಿಂಡಿಗೆ (Morning Breakfast) ನಾವು ಇವತ್ತು ಕಡಲೆಬೇಳೆ ಚಿಲ್ಲಾ (Besan Chilla) ಮಾಡುವುದು ಹೇಗೆ ಅಂತಾ ನೋಡೋಣ. ಕಡಲೆಬೇಳೆ ಚಿಲ್ಲಾ ಮಾಡುವ ಪಾಕವಿಧಾನ (Recipe) ಒಂದು ಸುಲಭವಾದ ರೆಸಿಪಿ ಆಗಿದೆ. ನೀವು ಇದನ್ನು ಕಡಿಮೆ ಸಮಯದಲ್ಲಿ ಮಾಡಬಹುದು. ಇದು ನಿಮ್ಮ ಹಸಿವು ನಿವಾರಿಸುತ್ತದೆ. ಜೊತೆಗೆ ದೀರ್ಘಕಾಲದವರೆಗೆ ನಿಮ್ಮನ್ನು ಹೊಟ್ಟೆ ತುಂಬಿಸಿಡುತ್ತದೆ. ಕಡಲೆಬೇಳೆ ಚಿಲ್ಲಾ ಮಾಡುವುದು ತುಂಬಾ ಸುಲಭ (Easy). ನೀವು ಇದಕ್ಕಾಗಿ ತುಂಬಾ ಶ್ರಮ ಪಡಬೇಕಾಗಿಲ್ಲ. ಕಡಲೆಬೇಳೆ ಚಿಲ್ಲಾವನ್ನು ನೀವು ನಿಮ್ಮಿಷ್ಟದ ಚಟ್ನಿ ಅಥವಾ ಚಹಾದ ಜೊತೆಗೂ ಸೇವನೆ ಮಾಡಬಹುದು. ಹಾಗಾದ್ರೆ ಕಡಲೆಬೇಳೆ ಚಿಲ್ಲಾ ಮಾಡುವ ಪಾಕ ವಿಧಾನವನ್ನು ತಿಳಿಯೋಣ.


    ಕಡಲೆಬೇಳೆ ಚಿಲ್ಲಾ ರೆಸಿಪಿ


    ಬೇಕಾಗುವ ಪದಾರ್ಥಗಳು


    ಕಡಲೆಬೇಳೆ ಚಿಲ್ಲಾ ರೆಸಿಪಿಗೆ ಬೇಕಾದ ಪದಾರ್ಥಗಳು ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಸಣ್ಣದಾಗಿ ಕೊಚ್ಚಿದ ಟೊಮ್ಯಾಟೊ, ಸಣ್ಣದಾಗಿ ಕೊಚ್ಚಿದ ಶುಂಠಿ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿಗಳು, ಕೆಂಪು ಮೆಣಸಿನಕಾಯಿ, ಗರಂ ಮಸಾಲಾ, ಉಪ್ಪು, ನೀರು ಮತ್ತು ಕಡಲೆ ಬೇಳೆ ಹಿಟ್ಟು ಬೇಕು.


    ಕಡಲೆಬೇಳೆ ಚಿಲ್ಲಾ ರೆಸಿಪಿ ಮಾಡುವ ವಿಧಾನ


    ಕಡಲೆಬೇಳೆ ಚಿಲ್ಲಾ ಮಾಡಲು, ಮೊದಲು ಒಂದು ಬಟ್ಟಲಿನಲ್ಲಿ ಕಡಲೆಬೇಳೆ ಹಿಟ್ಟು ತೆಗೆದುಕೊಳ್ಳಿ. ನಂತರ ಅದಕ್ಕೆ ರುಬ್ಬಿದ ಕೆಂಪು ಮೆಣಸಿನಕಾಯಿ, ಗರಂ ಮಸಾಲಾ, ರುಚಿಗೆ ತಕ್ಕಂತೆ ಉಪ್ಪು ಮತ್ತು ನಂತರ ನೀರು ಸೇರಿಸಿ. ಈಗ ಬೇಳೆ ಹಿಟ್ಟನ್ನು ಗಂಟುಗಳು ಇರದಂತೆ ಚೆನ್ನಾಗಿ ಮಿಶ್ರಣ ಮಾಡಿ.


    ಇದನ್ನೂ ಓದಿ: ಹೊಟ್ಟೆ ಸಮಸ್ಯೆ ತಪ್ಪಿಸಲು ಅಗಸೆ ಬೀಜಗಳನ್ನು ಆಹಾರದಲ್ಲಿ ಈ ರೀತಿ ಸೇರಿಸಿ ಸೇವಿಸಿ!


    ನಂತರ ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಸಣ್ಣದಾಗಿ ಕೊಚ್ಚಿದ ಟೊಮ್ಯಾಟೊ, ಸಣ್ಣದಾಗಿ ಕೊಚ್ಚಿದ ಶುಂಠಿ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ತುಂಬಾ ದಪ್ಪವಾಗಿರಬಾರದು ಅಥವಾ ತುಂಬಾ ತೆಳುವಾಗಿರಬಾರದು.


    ಈಗ ಹಿಟ್ಟು ಸಿದ್ಧವಾಗಿದೆ. ನಂತರ ಒಲೆಯ ಮೇಲೆ ತವಾ ಇರಿಸಿ, ಬಿಸಿ ಮಾಡಿ, ನಂತರ ಸ್ವಲ್ಪ ಎಣ್ಣೆ ಹಚ್ಚಿರಿ. ನಂತರ ಹಿಟ್ಟನ್ನು ಸುರಿದು ದುಂಡಗಿನ ಆಕಾರಕ್ಕೆ ತನ್ನಿರಿ. ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ಈಗ ನಿಮ್ಮ ಕಡಲೆಬೇಳೆ ಚಿಲ್ಲಾ ಸಿದ್ಧವಾಗಿದೆ. ನಿಮ್ಮಿಷ್ಟದ ಚಟ್ನಿ ಜೊತೆ ಸೇವಿಸಿ.


    ಕಡಲೆಬೇಳೆ ಚಿಲ್ಲಾ ರೆಸಿಪಿ ಪ್ರಯೋಜನಗಳು


    ಇದು ಹೊಟ್ಟೆಗೆ ತುಂಬಾ ಹಗುರ. ಕಡಿಮೆ ಎಣ್ಣೆಯ ಅಗತ್ಯವಿದೆ. ಎಣ್ಣೆ ಅಥವಾ ತುಪ್ಪವಿಲ್ಲದೆ ಮಾಡಬಹುದು. ಇದು ಈರುಳ್ಳಿ, ಟೊಮ್ಯಾಟೊ ಮತ್ತು ಮಸಾಲೆಗಳೊಂದಿಗೆ ಬೆರೆಸಿದೆ. ದಿನವನ್ನು ಪ್ರಾರಂಭಿಸಲು ಸಾಕಷ್ಟು ಪ್ರೋಟೀನ್ ಅನ್ನು ಒದಗಿಸುತ್ತದೆ.


    ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ಉತ್ತಮ ಉಪಹಾರ. ನೀವು ಇದಕ್ಕೆ ತುರಿದ ತರಕಾರಿಗಳು ಮತ್ತು ಪನೀರ್ ಅನ್ನು ಕೂಡ ಸೇರಿಸಬಹುದು. ಇದು ತುಂಬಾ ಸರಳ ಪಾಕ ವಿಧಾನವಾಗಿದೆ. ಹೆಚ್ಚು ರುಚಿಕರವಾಗಿದೆ.


    ಕಡಲೆಬೇಳೆ ಚಿಲ್ಲಾ ಎಷ್ಟು ಕ್ಯಾಲೊರಿ ಹೊಂದಿದೆ?


    ಕಡಲೆಬೇಳೆ ಚಿಲ್ಲಾ ಕ್ಯಾಲೊರಿ ಬಗ್ಗೆ ನೋಡುವುದಾದರೆ ಇದು 387 ಕ್ಯಾಲೋರಿ ಹೊಂದಿದೆ. ಮತ್ತು ಅದರಲ್ಲಿರುವ ಕ್ಯಾಲೋರಿಗಳು ಕಡಲೆಬೇಳೆ ಚಿಲ್ಲಾ ಹಿಟ್ಟಿನ ಚೀಲವನ್ನು ತಯಾರಿಸುವ ವಿಧಾನದ ಮೇಲೆ ಅವಲಂಬಿಸಿದೆ.


    ಇದನ್ನೂ ಓದಿ: ಕೈಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮಧುಮೇಹ ಕಾಯಿಲೆಯ ಸಂಕೇತಗಳಾಗಿರಬಹುದು ಎಚ್ಚರ!


    ನೀವು ಅದನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ತೀರಿ. ಎಷ್ಟು ಬೇಯಿಸುತ್ತೀರಿ, ಹೆಚ್ಚು ಬೇಯಿಸಿದರೆ ಅದರ ಗುಣಲಕ್ಷಣ ಹಾಳಾಗುತ್ತದೆಯೇ? ಹೀಗೆ ಎಲ್ಲಾ ಅಂಶಗಳನ್ನು ಗಮನದಲ್ಲಿ ಇರಿಸಿ. ಕಡಿಮೆ ಅಡುಗೆ ಯಾವುದೇ ಪಾಕವಿಧಾನದಲ್ಲಿ ನೀವು ಬಯಸಿದ ರುಚಿ ನೀಡುವುದಿಲ್ಲ ಎಂಬುದನ್ನು ಸದಾ ನೆನಪಿಡಿ.

    Published by:renukadariyannavar
    First published: