• Home
  • »
  • News
  • »
  • lifestyle
  • »
  • Breakfast: ಬೆಳಗಿನ ತಿಂಡಿಗೆ ಬತುವಾ ಸೊಪ್ಪಿನ ಪರಾಠಾ, ಪಕೋಡಾ, ಕೋಫ್ತಾ, ಭುಜಿಯಾ ಮಾಡುವ ವಿಧಾನ

Breakfast: ಬೆಳಗಿನ ತಿಂಡಿಗೆ ಬತುವಾ ಸೊಪ್ಪಿನ ಪರಾಠಾ, ಪಕೋಡಾ, ಕೋಫ್ತಾ, ಭುಜಿಯಾ ಮಾಡುವ ವಿಧಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲಕ್ಕೆ ಬೇಕಾದಷ್ಟು ಹಸಿರೆಲೆ ತಿಂಡಿಯು ಶಕ್ತಿ ಒದಗಿಸುತ್ತದೆ. ದೇಹವನ್ನು ಬೆಚ್ಚಗಿಡುತ್ತದೆ. ಹಾಗೂ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಂತಹ ಒಂದು ಸೊಪ್ಪು ಬತುವಾ. ಇದನ್ನು ಕನ್ನಡದಲ್ಲಿ ಚಕ್ಕವತ್ತಿ ಎಂದು ಕರೆಯುತ್ತಾರೆ. ಬತುವಾ ಸೊಪ್ಪು ಆರೋಗ್ಯಕರ. ಹಲವು ಪದಾರ್ಥಗಳಲ್ಲಿ ಸೇರಿಸಿ ಸೇವನೆ ಮಾಡಬಹುದಾಗಿದೆ.

ಮುಂದೆ ಓದಿ ...
  • Share this:

    ನಮ್ಮ ಬೆಳಗಿನ ತಿಂಡಿಯಲ್ಲಿ (Morning Breakfast) ನಾವು ಹಲವು ತರಹದ ಆಹಾರ ಪದಾರ್ಥಗಳನ್ನು (Food Ingredients) ಸೇರಿಸುತ್ತೇವೆ. ವಿವಿಧ ರೀತಿಯ ತರಕಾರಿಗಳು ಮತ್ತು ಗ್ರೀನ್ಸ್ ಅನ್ನು ಸೇರಿಸುತ್ತೇವೆ. ಚಳಿಗಾಲದಲ್ಲಿ ಹೆಚ್ಚಾಗಿ ಸೊಪ್ಪಿನ ಪದಾರ್ಥಗಳು ಸಿಗುತ್ತವೆ. ಆರೋಗ್ಯಕರ ರೀತಿಯಲ್ಲಿ ತಯಾರಿಸಿದ ಹಸಿರೆಲೆ ತಿಂಡಿ, ರುಚಿ ಮತ್ತು ಪೌಷ್ಟಿಕಾಂಶವನ್ನು ದೇಹಕ್ಕೆ ನೀಡುತ್ತದೆ. ಚಳಿಗಾಲಕ್ಕೆ ಬೇಕಾದಷ್ಟು ಹಸಿರೆಲೆ ತಿಂಡಿಯು ಶಕ್ತಿ ಒದಗಿಸುತ್ತದೆ. ದೇಹವನ್ನು ಬೆಚ್ಚಗಿಡುತ್ತದೆ. ಹಾಗೂ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಂತಹ ಒಂದು ಸೊಪ್ಪು ಬತುವಾ. ಇದನ್ನು ಕನ್ನಡದಲ್ಲಿ ಚಕ್ಕವತ್ತಿ ಎಂದು ಕರೆಯುತ್ತಾರೆ. ಬತುವಾ ಸೊಪ್ಪು ಆರೋಗ್ಯಕರ. ಇದನ್ನು ತಿಂಡಿ, ಪಲ್ಯ, ಸಾಗ್ ಮತ್ತು ಸಾಂಬಾರ್, ಪರಾಠಾ, ರೊಟ್ಟಿ ಸೇರಿದಂತೆ ಹಲವು ಪದಾರ್ಥಗಳಲ್ಲಿ ಸೇರಿಸಿ ಸೇವನೆ ಮಾಡಬಹುದಾಗಿದೆ.


    ಬೆಳಗಿನ ತಿಂಡಿಗೆ ಬತುವಾ ಸೊಪ್ಪಿನ ರೆಸಿಪಿ ಹೀಗಿದೆ.


    ಡಯೆಟರಿ ಫೈಬರ್ ಮತ್ತು ಪ್ರೊಟೀನ್ ವರ್ಷವಿಡೀ ಲಭ್ಯವಿರುವ ಬತುವಾದಲ್ಲಿ ಹೇರಳವಾಗಿದೆ. ವಿಟಮಿನ್ ಎ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ಮ್ಯಾಂಗನೀಸ್, ರಂಜಕ, ಸೋಡಿಯಂ, ಸತು ಸೇರಿ ಹಲವು ಪೋಷಕಾಂಶಗಳು ಇದರಲ್ಲಿವೆ.


    ಬತುವಾದ ಆರೋಗ್ಯಕರ ರೆಸಿಪಿ ಹೀಗಿದೆ


    ಬತುವಾವನ್ನು ಪೌಷ್ಠಿಕಾಂಶದ ರೀತಿಯಲ್ಲಿ ಆಹಾರದಲ್ಲಿ ಸೇರಿಸಿದರೆ ದೇಹಕ್ಕೆ ಸಂಪೂರ್ಣ ಪೋಷಣೆ ನೀಡುತ್ತದೆ.




    ಬತುವಾ ಪಕೋಡ


    ಬತುವಾ ಎಲೆಗಳನ್ನು ಸ್ವಚ್ಛಗೊಳಿಸಿ, ಕುದಿಸಿ. ಇದರಲ್ಲಿ 1 ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಬೇಳೆ ಹಿಟ್ಟು ಮತ್ತು 1 ಚಮಚ ಗೋಧಿ ಹಿಟ್ಟನ್ನು ಮಿಶ್ರಣ ಮಾಡಿ. ನುಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ, ಕತ್ತರಿಸಿದ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಮಿಶ್ರಣ ಮಾಡಿ. ಅದನ್ನು ಚೌಕಾಕಾರ ಮಾಡಿ ಬಾಣಲೆಯಲ್ಲಿ ಬೇಯಿಸಿ ತಿನ್ನಿರಿ. ಇದು ಬೆಳಗಿನ ತಿಂಡಿಗೆ ಉತ್ತಮ ಆಯ್ಕೆ.


    ಬತುವಾ ಕೋಫ್ತಾ ರೆಸಿಪಿ


    ಬತುವಾ ಕೋಫ್ತಾಗಳು ಕೂಡ ತುಂಬಾ ರುಚಿ. ಬತುವಾ ಎಲೆಗಳನ್ನು ಕುದಿಸಿ. ಅದರಲ್ಲಿ 1 ಚಮಚ ಅಕ್ಕಿ ಹಿಟ್ಟು, 1 ಚಮಚ ಬೇಳೆ ಹಿಟ್ಟು ಮತ್ತು 1 ಚಮಚ ಗೋಧಿ ಹಿಟ್ಟನ್ನು ಮಿಶ್ರಣ ಮಾಡಿ. ನುಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು


    ಹಸಿರು ಮೆಣಸಿನಕಾಯಿಗಳು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಮಿಶ್ರಣ ಮಾಡಿ. ಸಣ್ಣದಾಗಿ ತೆಗೆದುಕೊಂಡು ಬಾಣಲೆಯಲ್ಲಿ ಬೇಯಿಸಿ. ನಂತರ ಇದನ್ನು ಈರುಳ್ಳಿ ಬೆಳ್ಳುಳ್ಳಿ, ಟೊಮ್ಯಾಟೊ ಮತ್ತು 1 ಚಮಚ ಹಿಟ್ಟು, ಗರಂ ಮಸಾಲಾ ಪುಡಿಯ ಗ್ರೇವಿಯಲ್ಲಿ ಅದ್ದಿ.


    ಬತುವಾ ಭುಜಿಯಾ ರೆಸಿಪಿ


    ಆಲೂಗಡ್ಡೆ ಕುದಿಸಿ, ಸಣ್ಣದಾಗಿ ಕತ್ತರಿಸಿ. ಬಾಣಲೆಯಲ್ಲಿ 1 ಚಮಚ ಸಾಸಿವೆ ಎಣ್ಣೆ, ಹಸಿಮೆಣಸಿನಕಾಯಿ, ಇಂಗು, ಸಾಸಿವೆ ಹಾಕಿ ಬಿಸಿ ಮಾಡಿ. ಅದರಲ್ಲಿ ಸಣ್ಣಗೆ ಕತ್ತರಿಸಿದ ಬತುವಾ ಹಾಕಿ. ಉಪ್ಪು ಮತ್ತು ಅರಿಶಿನ ಸೇರಿಸಿ ಮತ್ತು ಬೇಯಿಸಿದ ಆಲೂಗಡ್ಡೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಸರ್ವ್ ಮಾಡಿ.


    ಇದನ್ನೂ ಓದಿ: ಉಷ್ಣವಾಗಿರುವ ಬಾಡಿಯನ್ನು ಕೂಲ್ ಮಾಡಲು ಇಲ್ಲಿದೆ ಮನೆಮದ್ದು!


    ಬತುವಾ ಪರಾಠ ರೆಸಿಪಿ      


    ಚಳಿಗಾಲದಲ್ಲಿ ಇದು ಅತ್ಯಂತ ಇಷ್ಟವಾದ ಉಪಹಾರ. ಇದಕ್ಕಾಗಿ ಬತುವಾ ಎಲೆಗಳನ್ನು ಕುದಿಸಿ. ಅದರಲ್ಲಿ ಗೋಧಿ ಹಿಟ್ಟು, ಉಪ್ಪು, ಸೊಪ್ಪು, ಇಂಗು ಸೇರಿಸಿ ಮಿಶ್ರಣ ಮಾಡಿ. ಹಿಟ್ಟನ್ನು ಚೆನ್ನಾಗಿ ಕಲಸಿ, ಸಣ್ಣ ಉಂಡೆ ಮಾಡಿ. ಪರಾಠಾ ಮಾಡಿ ತವೆಯ ಮೇಲೆ ಬೇಯಿಸಿ ಸರ್ವ್ ಮಾಡಿ. ನಿಮ್ಮಿಷ್ಟದ ಚಟ್ನಿ ಜೊತೆ ಸೇವಿಸಿ. ಹೀಗೆ ಬತುವಾ ರೆಸಿಪಿ ಬೆಳಗಿನ ತಿಂಡಿಗೆ ಆರೋಗ್ಯಕರ ಆಯ್ಕೆ ಆಗಿದೆ.

    Published by:renukadariyannavar
    First published: