ಅವಲಕ್ಕಿ (Poha) ಕರ್ನಾಟಕದಲ್ಲಿ ಹೆಚ್ಚು ಸೇವಿಸಲಾಗುವ ಖಾದ್ಯವಾಗಿದೆ. (Recipe) ವಿಶೇಷವಾಗಿ ಬೆಳಗಿನ ತಿಂಡಿಗೆ (Morning Breakfast) ಅವಲಕ್ಕಿ ಮಾಡಿ ಸೇವನೆ ಮಾಡ್ತಾರೆ. ಮನೆಗೆ ಅತಿಥಿಗಳು (Guests) ಬಂದಾಗ ಮತ್ತು ಸಂಜೆಯ ತಿಂಡಿಗೂ ಅವಲಕ್ಕಿ ಮಾಡಲಾಗುತ್ತದೆ. ಅವಲಕ್ಕಿ ಸಾಕಷ್ಟು ಪೋಷಕಾಂಶ ಸಮೃದ್ಧ ಪದಾರ್ಥ. ಇದು ವ್ಯಕ್ತಿಯನ್ನು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಪದೇ ಪದೇ ಹಸಿವು ನಿಯಂತ್ರಿಸುತ್ತದೆ. ದೇಹಕ್ಕೆ ಶಕ್ತಿ (Energy) ನೀಡುತ್ತದೆ. ಅಂದ ಹಾಗೇ ಅವಲಕ್ಕಿ ರೆಸಿಪಿ ಮಾಡುವುದು ತುಂಬಾ ಸುಲಭ. ನಾವು ಇವತ್ತು ಆರೋಗ್ಯಕರ ಅವಲಕ್ಕಿ ರೆಸಿಪಿಗಳ ಬಗ್ಗೆ ತಿಳಿಯೋಣ. ಅವಲಕ್ಕಿ ಸುಲಭ ಮತ್ತು ಆರೋಗ್ಯಕರ ದಕ್ಷಿಣ ಭಾರತೀಯ ಉಪಹಾರ ಪಾಕವಿಧಾನ ಆಗಿದೆ.
ಬೆಳಗಿನ ತಿಂಡಿಗೆ ಅವಲಕ್ಕಿ ಉಪ್ಮಾ ರೆಸಿಪಿ
ಭಾರತದ ಅನೇಕ ಭಾಗಗಳಲ್ಲಿ ವಿವಿಧ ಭಕ್ಷ್ಯಗಳ ತಯಾರಿಕೆಯಲ್ಲಿ ಅವಲಕ್ಕಿ ಬಳಕೆ ಮಾಡುತ್ತಾರೆ. ಇದನ್ನು ಸಾಮಾನ್ಯವಾಗಿ ಉಪಹಾರ ಅಥವಾ ಲಘು ಉಪಹಾರವಾಗಿ ಸೇವನೆ ಮಾಡುತ್ತಾರೆ.
ಅವ್ವಲ್ ಉಪ್ಮಾ ರೆಸಿಪಿಯು ದಕ್ಷಿಣ ಭಾರತದ ಪೋಹಾ ತಯಾರಿಸುವ ಶೈಲಿ ಆಗಿದೆ. ಇದು ಮೂಲ ರವಾ ಉಪ್ಪಿಟ್ಟಿಗಿಂತ ಭಿನ್ನವಾಗಿದೆ. ಇದನ್ನು ಸಾದಾ ಮೊಸರು ಇಲ್ಲವೇ ಒಂದು ಕಪ್ ಚಹಾ ಅಥವಾ ಕಾಫಿ ಜೊತೆ ಸೇವನೆ ಮಾಡಬಹುದು.
ಅವ್ವಲ್ ಉಪ್ಪಿಟ್ಟನ್ನು ತ್ವರಿತ ಮತ್ತು ಕೇವಲ 15 ನಿಮಿಷದಲ್ಲಿ ಮಾಡಬಹುದು. ಇದಕ್ಕೆ ನೀವು ಆಲೂಗಡ್ಡೆ, ಬಟಾಣಿ, ಕ್ಯಾಪ್ಸಿಕಂ ಮತ್ತು ಕ್ಯಾರೆಟ್ ನಂತಹ ಕೆಲವು ತರಕಾರಿಗಳನ್ನು ಸಹ ಮಾಡಬಹುದು. ಮಕ್ಕಳಿಗೆ ಹಾಗೂ ದೊಡ್ಡವರಿಗೆ ಇಷ್ಟವಾಗುತ್ತದೆ.
ಅವ್ವಲ್ ಉಪ್ಪಿಟ್ಟನ್ನು ತೆಳು ಅವಲಕ್ಕಿಯಿಂದ ಮಾಡಲಾಗುತ್ತದೆ. ತೊಳೆದಾಗ ಅವು ಒದ್ದೆಯಾಗಿ ಮತ್ತು ಮೆತ್ತಗಾಗುತ್ತವೆ. ದಪ್ಪ ಅಥವಾ ಮಧ್ಯಮ ಪೋಹಾ ನಿಮಗೆ ಉತ್ತಮ ರುಚಿ ನೀಡುತ್ತದೆ. ಆದರೆ ಇದು ಮೆತ್ತಗೆ ಹಾಗೂ ಮೃದುವಾಗಿರುವುದಿಲ್ಲ.
ಅವಲಕ್ಕಿ ಉಪ್ಮಾ (ಅವ್ವಲ್ ಉಪ್ಮಾ) ಮಾಡುವುದು ಹೇಗೆ?
ಒಂದು ಬಟ್ಟಲಿಗೆ 2 ಕಪ್ ಅವಲಕ್ಕಿ ಹಾಕಿರಿ. ಎರಡು ಬಾರಿ ಚೆನ್ನಾಗಿ ತೊಳೆಯಿರಿ. ನೀರನ್ನು ಸಂಪೂರ್ಣವಾಗಿ ಹೋಗಿಸಿ. 10 ನಿಮಿಷ ಮೃದುವಾಗಲು ಬಿಡಿ. ನಂತರ ಮಧ್ಯಮ ಗಾತ್ರದ ಒಂದು ಈರುಳ್ಳಿಯನ್ನು ಕತ್ತರಿಸಿ,
1 ಮಧ್ಯಮ ಗಾತ್ರದ ಟೊಮೆಟೊ, 2 ಹಸಿರು ಮೆಣಸಿನಕಾಯಿ, 1 ಟೀಚಮಚ ತುರಿದ ಶುಂಠಿ, ಸಣ್ಣದಾಗಿ ಕೊಚ್ಚಿದ 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಬೇಕು. 10 ನಿಮಿಷಗಳ ನಂತರ, ಅವಲಕ್ಕಿ ಮೃದುವಾಗಿದೆಯೇ ಎಂದು ಪರಿಶೀಲಿಸಿ.
ಈಗ ಬಾಣಲೆ ಬಿಸಿ ಮಾಡಿ. 1½ ಚಮಚ ಎಣ್ಣೆ ಹಾಕಿ. ಅದಕ್ಕೆ 1 ಟೀಚಮಚ ಕಡಲೆ ಬೇಳೆ, 1 ಟೀಚಮಚ ಉದ್ದಿನ ಬೇಳೆ, 3 ಚಮಚ ಕಡಲೆಕಾಯಿ (ಶೇಂಗಾ), ಹಾಕಿ ಗೋಲ್ಡನ್ ಮತ್ತು ಆರೊಮ್ಯಾಟಿಕ್ ಆಗುವವರೆಗೆ ಫ್ರೈ ಮಾಡಿ. ನಂತರ ¼ ಟೀಚಮಚ ಸಾಸಿವೆ ½ ಟೀಚಮಚ ಜೀರಿಗೆ ಸೇರಿಸಿ. ಸಿಡಿದ ನಂತರ ಹಿಂಗ್ ಸೇರಿಸಿ.
ಹಸಿರು ಮೆಣಸಿನಕಾಯಿ, ಶುಂಠಿ, ಈರುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಈರುಳ್ಳಿ, ಕತ್ತರಿಸಿದ ಟೊಮ್ಯಾಟೊ, ¼ ಟೀಚಮಚ ಉಪ್ಪು ಮತ್ತು ¼ ಟೀಚಮಚ ಅರಿಶಿನ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಕೊನೆಗೆ ನಿಂಬೆ ರಸ ಹಿಂಡಿ. ಪ್ರೈ ಮಾಡಿ.
ಇದನ್ನೂ ಓದಿ: ದೇಹದ ಆರೋಗ್ಯ ಕಾಪಾಡುವ ಸೌತೆಕಾಯಿ ಸೌಂದರ್ಯವನ್ನೂ ಹೆಚ್ಚಿಸುತ್ತದೆ!
ಈಗ ಟೇಬಲ್ಸ್ಪೂನ್ ತೆಂಗಿನಕಾಯಿ ತುರಿ ಅವಲಕ್ಕಿಗೆ ಸೇರಿಸಿ. ಸ್ಟವ್ ಆಫ್ ಮಾಡಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ಅವಲಕ್ಕಿಗೆ ಈ ಒಗ್ಗರಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮೊಸರು ಅಥವಾ ಚಹಾ, ಕಾಫಿ ಜೊತೆ ತಿನ್ನಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ