ಬೆಳಗಿನ ತಿಂಡಿಗೆ (Morning Breakfast) ಪುಳಿಯೊಗರೆ ರೆಸಿಪಿ (Recipe) ತುಂಬಾ ಚೆನ್ನಾಗಿರುತ್ತದೆ. ಅದರಲ್ಲೂ ಆಂಧ್ರ ಶೈಲಿಯ ಪುಳಿಯೊಗರೆ ರೆಸಿಪಿ ಸಖತ್ ಫೇಮಸ್ (Famous). ಹುಣಸೆಹಣ್ಣು. ಬೇಯಿಸಿದ ಅನ್ನ, ಹುಣಸೆ ಹಣ್ಣಿನ ಸಾರ ಮತ್ತು ಮಸಾಲೆ ಜೊತೆ ಮಾಡಿದ ಪರಿಮಳ ಭರಿತ ಪುಳಿಯೊಗರೆ ಎಲ್ಲರನ್ನೂ ಆಕರ್ಷಿಸುತ್ತದೆ. ಆಂಧ್ರ ಶೈಲಿಯ (Andra Style) ಪುಳಿಯೊಗರೆ ಮಾಡುವುದು ತುಂಬಾ ಸುಲಭ. ಇದು ತುಂಬಾ ರುಚಿಯಾಗಿರುತ್ತದೆ. ಹಾಗೂ ಆರೋಗ್ಯಕರವೂ ಆಗಿರುತ್ತದೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಈ ಪುಳಿಯೊಗರೆ ಪಾಕವಿಧಾನ ಮಾಡಲಾಗುತ್ತದೆ. ಅದನ್ನು ನೀವೆಲ್ಲ ಪ್ರಸಾದವಾಗಿ ತಿಂದಿರಬಹುದು. ರಾತ್ರಿಯ ಊಟಕ್ಕೂ ಈ ಪುಳಿಯೊಗರೆ ಮಾಡಬಹುದು. ಅದ್ಭುತ ರುಚಿಕರ ಪುಳಿಯೊಗರೆ ಮಾಡುವುದು ಹೇಗೆ ನೋಡೋಣ.
ಬೆಳಗಿನ ತಿಂಡಿಗೆ ಆಂಧ್ರ ಶೈಲಿಯ ಪುಳಿಯೊಗರೆ ಪಾಕವಿಧಾನ
ಆಂಧ್ರ ಶೈಲಿಯ ಈ ಪಾಕ ವಿಧಾನವು ಹುಳಿ ಮೊಸರು ಅಥವಾ ಯಾವುದೇ ಮಸಾಲೆಯುಕ್ತ ಗ್ರೇವಿ ಆಧಾರಿತ ಮೇಲೋಗರದ ಜೊತೆ ಸೇವಿಸಿ. ಇದು ನಿಮ್ಮ ರುಚಿಯನ್ನು ಇಮ್ಮಡಿಗೊಳಿಸುತ್ತದೆ. ಇದು ದಕ್ಷಿಣ ಭಾರತದ ಪ್ರಧಾನ ಆಹಾರ. ಭಾರತದ ಅನೇಕ ರಾಜ್ಯಗಳಲ್ಲಿ ಪುಳಿಯೊಗರೆ ಹೆಚ್ಚು ಜನಪ್ರಿಯ ಪಾಕವಿಧಾನವಾಗಿದೆ.
ದಕ್ಷಿಣ ಭಾರತದ ಪ್ರತಿಯೊಂದು ರಾಜ್ಯದಲ್ಲಿ ವಿಭಿನ್ನ ರೀತಿಯಲ್ಲಿ ಈ ಪುಳಿಯೊಗರೆ ತಯಾರಿಸುತ್ತಾರೆ. ವಿಭಿನ್ನ ಮಸಾಲೆ ಬಳಸ್ತಾರೆ. ವಿಭಿನ್ನ ಸ್ಥಳೀಯ ಹೆಸರಿನಿಂದ ಕರೆಯುತ್ತಾರೆ. ಹಾಗಾದ್ರೆ ಈಗ ಆಂಧ್ರ ಶೈಲಿಯ ಪುಳಿಯೊಗರೆ ಮಾಡುವುದು ಹೇಗೆ ತಿಳಿಯೋಣ.
ಆಂಧ್ರ ಶೈಲಿಯ ಪುಳಿಯೊಗರೆ ಪಾಕವಿಧಾನ
ಬೇಕಾಗುವ ಪದಾರ್ಥಗಳು
ಪುಳಿಯೊಗರೆ ವಗ್ಗರಣೆಗಾಗಿ ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಅನ್ನ, 250 ಗ್ರಾಂ ಹುಣಿಸೇ ಹಣ್ಣು, 5 ಸಣ್ಣಗೆ ಕತ್ತರಿಸಿದ ಮೆಣಸಿನಕಾಯಿ, ಕರಿಬೇವಿನ ಎಲೆ, 3 ಟೀಸ್ಪೂನ್ ಉಪ್ಪು, 2 ಚಮಚ ಬೆಲ್ಲ, 1 ಟೀಸ್ಪೂನ್ ಅರಿಶಿನ,
ಪುಳಿಯೊಗರೆ ಮಸಾಲೆ ಮಿಶ್ರಣಕ್ಕೆ ಬೇಕಾಗುವ ಸಾಮಗ್ರಿಗಳು
ಎರಡು ಚಮಚ ಎಳ್ಳು, ಒಂದು ಚಮಚ ಕೊತ್ತಂಬರಿ ಬೀಜ, ಒಂದು ಚಮಚ ಜೀರಿಗೆ, ಒಂದು ಚಮಚ ಮೆಣಸು, ಒಂದು ಚಮಚ ಸಾಸಿವೆ, ಕಾಲು ಟೀಸ್ಪೂನ್ ಮೆಂತ್ಯ ಬೇಕು.
ಹದಗೊಳಿಸಲು ಬೇಕಾಗುವ ಸಾಮಗ್ರಿಗಳು
ಎಣ್ಣೆ, ಕಡಲೆ ಬೀಜ, ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಹಿಂಗ್, ಒಣಗಿದ ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳು ಬೇಕು.
ಆಂಧ್ರ ಶೈಲಿಯ ಪುಳಿಯೊಗರೆ ಪಾಕವಿಧಾನ ಮಾಡುವುದು ಹೇಗೆ?
ಮೊದಲು ಅನ್ನ ಮಾಡಿ ಸೈಡ್ ಗೆ ತೆಗೆದಿರಿಸಿ. ನಂತರ 250 ಗ್ರಾಂ ಹುಣಸೆ ಹಣ್ಣನ್ನು 2 ಕಪ್ ಬಿಸಿ ನೀರಿನಲ್ಲಿ ಅರ್ಧ ಗಂಟೆ ನೆನೆಸಿ ನಂತರ ತಿರುಳನ್ನು ಹಿಂಡಿ, ಫಿಲ್ಟರ್ ಮಾಡಿ. ಹುಣಸೆ ಹಣ್ಣಿನ ತಿರುಳು ಸಿದ್ಧವಾಗಿದೆ. ಇದನ್ನು ದೊಡ್ಡ ಕಡಾಯಿಗೆ ಹಾಕಿ. ಮೆಣಸಿನಕಾಯಿ, ಒಂದು ಹಿಡಿ ಕರಿಬೇವಿನ ಎಲೆ, ಉಪ್ಪು, ಬೆಲ್ಲ ಮತ್ತು ಅರಿಶಿನ ಅದಕ್ಕೆ ಸೇರಿಸಿ ಚೆನ್ನಾಗಿ ಬೆರೆಸಿ. ಇಪ್ಪತ್ತು ನಿಮಿಷ ಕುದಿಸಿ.
ನಂತರ ಪುಳಿಯೊಗರೆ ಮಸಾಲೆ ಮಿಶ್ರಣ ತಯಾರಿಸಲು, ಪ್ಯಾನ್ ನಲ್ಲಿ ಎಳ್ಳು, ಕೊತ್ತಂಬರಿ ಬೀಜಗಳು, ಜೀರಿಗೆ, ಮೆಣಸು, ಸಾಸಿವೆ ಮತ್ತು ಮೆಂತ್ಯವನ್ನು ಆರೊಮ್ಯಾಟಿಕ್ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ತಣ್ಣಗಾಗಿಸಿ, ಪುಡಿಮಾಡಿ. ಇದನ್ನು ಹುಣಸೆ ಹಣ್ಣಿನ ಮಿಶ್ರಣಕ್ಕೆ ಸೇರಿಸಿ ಬೇಯಿಸಿ.
ನಂತರ ಹದಗೊಳಿಸಲು ಎಣ್ಣೆ ಬಿಸಿ ಮಾಡಿ, ಕಡಲೆ ಬೀಜ ಫ್ರೈ ಮಾಡಿ. ಕುರುಕುಲಾದ ಕೂಡಲೇ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೆಳೆ, ಹಿಂಗ್, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಬೆರೆಸಿ.
ಇದನ್ನೂ ಓದಿ: ಮಹಿಳೆಯರೇ, ದಿನಕ್ಕೊಂದು ಚಮಚ ಜೇನುತುಪ್ಪ ತಿನ್ನಿ, ಮ್ಯಾಜಿಕ್ ನೋಡಿ
ನಂತರ ಹುಣಿಸೇಹಣ್ಣು ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಬೆರೆಸಿ. ಈಗ ಪುಳಿಯೊಗರೆ ವಗ್ಗರಣೆ ರೆಡಿಯಿದೆ. ಇದನ್ನು ಅನ್ನಕ್ಕೆ ಹಾಕಿ ಚೆನ್ನಾಗಿ ಕಲೆಸಿ, ನಿಮ್ಮಿಷ್ಟದ ಚಟ್ನಿ, ಗ್ರೇವಿ ಜೊತೆ ಸವಿಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ