• Home
  • »
  • News
  • »
  • lifestyle
  • »
  • Breakfast: ಬೆಳಗಿನ ತಿಂಡಿಗೆ ಆಲೂಗಡ್ಡೆ ಚಿಲ್ಲಿ ಚೀಸ್ ರೆಸಿಪಿ ಹೀಗೆ ಮಾಡಿ ಸೇವಿಸಿ!

Breakfast: ಬೆಳಗಿನ ತಿಂಡಿಗೆ ಆಲೂಗಡ್ಡೆ ಚಿಲ್ಲಿ ಚೀಸ್ ರೆಸಿಪಿ ಹೀಗೆ ಮಾಡಿ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೊಸ ವರ್ಷದ ಮೊದಲ ದಿನವನ್ನು ನೀವು ಚೆನ್ನಾಗಿ ಆರೋಗ್ಯಕರವಾಗಿ ಸ್ವಾಗತಿಸುವ ಮನಸ್ಸು ಮಾಡಿದ್ದರೆ ತೂಕ ಇಳಿಕೆಗೆ ರೆಸ್ಯುಲ್ಯೂಷನ್ ಹಾಕಿಕೊಂಡಿದ್ದಾರೆ ಡಯಟ್ ಮಾಡಲು ಯೋಜನೆ ರೂಪಿಸಿದ್ದರೆ ಬೆಳಗ್ಗೆ ನಿಮ್ಮ ತಿಂಡಿಯಲ್ಲಿ ಆಲೂಗಡ್ಡೆ ಸೇರಿಸಿ. ಬೇಯಿಸಿದ ಆಲೂಗಡ್ಡೆಯಿಂದ ಮಾಡಿದ ಚಿಲ್ಲಿ ಚೀಸ್ ಸಖತ್ ಟೇಸ್ಟಿ ಮತ್ತು ಹೆಲ್ದೀ ಆಗಿದೆ.

ಮುಂದೆ ಓದಿ ...
  • Share this:

    ಬೆಳಗಿನ ತಿಂಡಿಗೆ (Morning Breakfast) ಹಲವು ಖಾದ್ಯಗಳನ್ನು (Recipe) ನೀವು ಮಾಡಿ ಸೇವಿಸಿರಬಹುದು. ಇಂದು ನಾವು ಬೆಳಗಿನ ತಿಂಡಿಗೆ ವಿಶೇಷವಾಗಿ ಆಲೂಗಡ್ಡೆ ಚಿಲ್ಲಿ ಚೀಸ್ ರೆಸಿಪಿ (Aloo Chilli Cheese Recipe) ಹೇಗೆ ಮಾಡುವುದು ಅಂತಾ ತಿಳಿಯೋಣ. ಆಲೂಗಡ್ಡೆ ಅಂದ ತಕ್ಷಣ ತುಂಬಾ ಜನರಿಗೆ (People) ನೆನಪಾಗುವುದು ಚಿಪ್ಸ್ (Chips). ಉಪ್ಪು ಮತ್ತು ಖಾರವನ್ನು ಸಿಂಪಡಿಸಿ ಮಾಡಿದ ಚಿಪ್ಸ್ ನ್ನು ಯಾವಾಗ ಬೇಕಾದ್ರೂ ಸೇವಿಸಬಹುದು. ಪ್ರಯಾಣ ಮಾಡುವಾಗ, ಮೂವಿ ನೋಡುವಾಗ, ಖಾಲಿ ಕುಳಿತಾಗ, ಹಸಿವಾದಾಗ, ಚಟ್ ಪಟ್ ಅಂತ ತಿನ್ನುವ ಮನಸ್ಸಾದಾಗ ಹೀಗೆ ಹಲವು ಸಂದರ್ಭಗಳಲ್ಲಿ ಆಲೂ ಚಿಪ್ಸ್ ತಿನ್ನುವ ಮನಸ್ಸಾಗುತ್ತದೆ.


    ಬೆಳಗಿನ ತಿಂಡಿಗೆ ಆಲೂಗಡ್ಡೆ ಚಿಲ್ಲಿ ಚೀಸ್ ರೆಸಿಪಿ


    ಹೊಸ ವರ್ಷದ ಮೊದಲ ದಿನವನ್ನು ನೀವು ಚೆನ್ನಾಗಿ ಆರೋಗ್ಯಕರವಾಗಿ ಸ್ವಾಗತಿಸುವ ಮನಸ್ಸು ಮಾಡಿದ್ದರೆ, ತೂಕ ಇಳಿಕೆಗೆ ರೆಸ್ಯುಲ್ಯೂಷನ್ ಹಾಕಿಕೊಂಡಿದ್ದಾರೆ, ಡಯಟ್ ಮಾಡಲು ಯೋಜನೆ ರೂಪಿಸಿದ್ದರೆ ಬೆಳಗ್ಗೆ ನಿಮ್ಮ ತಿಂಡಿಯಲ್ಲಿ ಆಲೂಗಡ್ಡೆ ಸೇರಿಸಿ. ಬೇಯಿಸಿದ ಆಲೂಗಡ್ಡೆಯಿಂದ ಮಾಡಿದ ಚಿಲ್ಲಿ ಚೀಸ್ ಸಖತ್ ಟೇಸ್ಟಿ ಮತ್ತು ಹೆಲ್ದೀ ಆಗಿದೆ.


    ಆಲೂ ಚಿಲ್ಲಿ ಸೀಸ್ ಖಾದ್ಯ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ತಿನ್ನಬಹುದು. ಆಲೂಗಡ್ಡೆಯು ವಿಶೇಷ ಪೋಷಕಾಂಶಗಳಿಂದ ತುಂಬಿದೆ. ಭಾರತೀಯ ಪಾಕಪದ್ಧತಿಯಲ್ಲಿ ಆಲೂಗಡ್ಡೆಗೆ ಮುಖ್ಯವಾದ ಸ್ಥಾನವಿದೆ.




    ಇಂದು ನಾವು ಬೇಯಿಸಿದ ಆಲೂಗಡ್ಡೆಯಿಂದ ಮಾಡಿದ ಚಿಲ್ಲಿ ಚೀಸ್ ಖಾದ್ಯದ ಬಗ್ಗೆ ತಿಳಿಯೋಣ. ಬೆಳಗಿನ ತಿಂಡಿಗೆ ಬೇಯಿಸಿದ ಆಲೂಗಡ್ಡೆ ಸೇವನೆ ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಬೇಯಿಸಿದ ಆಲೂಗಡ್ಡೆಯಿಂದ ಮಾಡಿದ ಚಿಲ್ಲಿ ಚೀಸ್ ಖಾದ್ಯ ಮಾಡುವುದು ತುಂಬಾ ಸರಳ ಮತ್ತು ಸುಲಭವಾಗಿದೆ.


    ಆಲೂ ಚಿಲ್ಲಿ ಚೀಸ್ ರೆಸಿಪಿಗೆ ಬೇಕಾಗುವ ಪದಾರ್ಥಗಳು


    ಎರಡು ದೊಡ್ಡ ಆಲೂಗಡ್ಡೆಗಳು, ಒಂದು ಚಮಚ ಚಿಲ್ಲಿ ಫ್ಲೇಕ್ಸ್, ಎರಡು ಕಪ್ ತುರಿದ ಚೆಡ್ಡರ್ ಚೀಸ್, ಎರಡು ಚಮಚ ಕಾರ್ನ್ಸ್ಟಾರ್ಚ್, ಅರ್ಧ ಟೀಸ್ಪೂನ್ ಬೆಳ್ಳುಳ್ಳಿ , ಕಾಲು ಟೀಸ್ಪೂನ್ ಹೊಗೆಯಾಡಿಸಿದ ಕೆಂಪುಮೆಣಸು, ಮುಕ್ಕಾಲು ಕಪ್ ಕೆನೆಭರಿತ ಹಾಲು, ಸಣ್ಣಗೆ ಹೆಚ್ಚಿದ ಈರುಳ್ಳಿ, ಪಾರ್ಸ್ಲಿ ಬೇಕಾಗುತ್ತದೆ.


    ಆಲೂ ಚಿಲ್ಲಿ ಚೀಸ್ ರೆಸಿಪಿ ಮಾಡುವ ವಿಧಾನ


    ಮೊದಲು ಎರಡು ದೊಡ್ಡ ಆಲೂಗಡ್ಡೆಗಳನ್ನು ತೆಗೆದುಕೊಳ್ಳಿ. ಚೆನ್ನಾಗಿ ತೊಳೆಯಿರಿ. ನಂತರ ಗ್ಯಾಸ್ ಮೇಲೆ ನೀಡು ಬಿಸಿ ಮಾಡಿ, ನೀರಿಗೆ ಆಲೂಗಡ್ಡೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಸಿಪ್ಪೆ ತೆಗೆಯಿರಿ. ನಂತರ ಕುದಿಸಿದ ಆಲೂಗಡ್ಡೆಯನ್ನು ಬೆಂಕಿಯಲ್ಲಿ ಗ್ರಿಲ್ ಮಾಡಿ. ಅಥವಾ ಫೋರ್ಕ್ ಸಹಾಯದಿಂದ 45 ರಿಂದ 55 ನಿಮಿಷದವರೆಗೆ ಗರಿಗರಿಯಾಗುವವರೆಗೆ ಬೇಯಿಸಿ.


    ಈಗ ನಂತರ ಸಣ್ಣ ಲೋಹದ ಬೋಗುಣಿಗೆ, ಚೆಡ್ಡಾರ್ ಚೀಸ್ ಮತ್ತು ಕಾರ್ನ್ಸ್ಟಾರ್ಚ್ ಮಿಶ್ರಣ ಮಾಡಿ. ಮಧ್ಯಮ ಶಾಖದ ಮೇಲೆ ಬಿಸಿ ಮಾಡಿ ಮತ್ತು ಚೆಡ್ಡಾರ್ ಕರಗುತ್ತಾ ಹೋದಂತೆ ಚೆನ್ನಾಗಿ ಬೆರೆಸುತ್ತಾ ಇರಿ.


    ಸಾಂದರ್ಭಿಕ ಚಿತ್ರ


    ನಂತರ ಹಾಲು, ಕೆಂಪುಮೆಣಸು ಮತ್ತು ಬೆಳ್ಳುಳ್ಳಿ ಪುಡಿ ಸೇರಿಸಿ. ಮಿಶ್ರಣವು ಒಟ್ಟಿಗೆ ಬರುವವರೆಗೆ ಬೆರೆಸಿ. ನಂತರ ಆಲೂಗಡ್ಡೆಯನ್ನು ಅರ್ಧದಷ್ಟು ಕತ್ತರಿಸಿ, ಸ್ವಲ್ಪ ಮ್ಯಾಶ್ ಮಾಡಿ ಮತ್ತು ಮೇಲೆ ಚಿಲ್ಲಿ ಫ್ಲೇಕ್ಸ್ ಮತ್ತು ಚೆಡ್ಡಾರ್ ಚೀಸ್ ಮಿಶ್ರಣ ಬೆರೆಸಿ. ಈಗ ನಿಮ್ಮ ರೆಸಿಪಿ ರೆಡಿಯಾಗಿದೆ. ಸಂತೋಷದಿಂದ ತಿನ್ನಿರಿ.


    ಚಿಲ್ಲಿ ಫ್ಲೇಕ್ಸ್ ಆಲೂ ರೆಸಿಪಿಯು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?


    ಬೇಯಿಸಿದ ಆಲೂಗಡ್ಡೆ ಉತ್ತಮ ಪ್ರಮಾಣದ ಫೈಬರ್ ಹೊಂದಿದ್ದು ಇದು ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನ ನೀಡುತ್ತದೆ. ಅತಿಸಾರ ಮತ್ತು ಮಲಬದ್ಧತೆ ಎರಡನ್ನೂ ನಿವಾರಿಸುತ್ತದೆ. ಹೆಚ್ಚು ಪೈಬರ್ ಆಲೂಗಡ್ಡೆಯಲ್ಲಿ ಕಂಡು ಬರುತ್ತದೆ.


    ಇದನ್ನೂ ಓದಿ: ಶ್ವಾಸಕೋಶದ ಕಾಯಿಲೆಗೆ ಯೋಗ ಪರಿಣಾಮಕಾರಿ ಪರಿಹಾರವಂತೆ


    ಕಡಿಮೆ ಕೊಲೆಸ್ಟ್ರಾಲ್ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ


    ಬೇಯಿಸಿದ ಆಲೂಗಡ್ಡೆಯಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇದೆ. ಪೊಟ್ಯಾಸಿಯಂ ಇದೆ. ಇದು ಹೃದಯ ಕಾಯಿಲೆ ಅಪಾಯದಿಂದ ರಕ್ಷಿಸುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆಲೂಗಡ್ಡೆಯಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಸಹಕಾರಿ.

    Published by:renukadariyannavar
    First published: