ನೀವು ಬೆಳಗಿನ ತಿಂಡಿಗೆ (Morning Breakfast) ಒಂದೇ ರೀತಿಯ ಪದಾರ್ಥ (Ingredient) ತಿಂದು ಬೇಸರಗೊಂಡಿದ್ರೆ ಇಂದು ನಾವು ಹೊಸದಾಗಿ ಕೆಲವು ತೂಕ ನಷ್ಟಕ್ಕೆ (Weight Loss) ಸಹಾಯ ಮಾಡುವ ರೆಸಿಪಿಗಳನ್ನು (Recipe) ನೋಡೋಣ. ಈ ರೆಸಿಪಿಗಳು ನಿಮ್ಮ ಡಯಟ್ ಪ್ಲಾನ್ ಗೆ ಸಹಾಯ ಮಾಡುತ್ತವೆ. ತೂಕ ನಷ್ಟದ ಜರ್ನಿಯಲ್ಲಿರುವ ಜನರು ಈ ತಿಂಡಿಗಳನ್ನು ಮಾಡಿ ತಿನ್ನುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹಣ್ಣುಗಳು, ಚೀಸ್, ಕಡಲೆಕಾಯಿ ಬೆಣ್ಣೆ, ಡಾರ್ಕ್ ಚಾಕೊಲೇಟ್, ಸೇಬು ಈ ಆರೋಗ್ಯಕರ ಪದಾರ್ಥಗಳು ಯಾರಿಗೆ ತಾನೇ ಇಷ್ಟವಾಗಲ್ಲ. ಅವುಗಳನ್ನು ನೀವು ಆರೋಗ್ಯಕರ ರೀತಿಯಲ್ಲಿ ಮಾಡಿ ತಿನ್ನಬಹುದು.
ತ್ವರಿತ ತೂಕ ನಷ್ಟಕ್ಕೆ ಬೆಳಗಿನ ತಿಂಡಿಗೆ ಆಯ್ಕೆಗಳು ಹೀಗಿವೆ
ಸೇಬು ಮತ್ತು ಕಡಲೆಕಾಯಿ ಬೆಣ್ಣೆ
ಸೇಬು ಮತ್ತು ಕಡಲೆಕಾಯಿ ಬೆಣ್ಣೆಯ ಸಂಯೋಜನೆಯು ಪ್ರತಿ ಫಿಟ್ನೆಸ್ ಫ್ರೀಕ್ನ ನೆಚ್ಚಿನ ಆಯ್ಕೆ ಅಂತಾರೆ ತಜ್ಞರು. ಸಿಹಿ ಮತ್ತು ಕೆನೆ ರುಚಿಯು ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ಇದನ್ನು ನೀವು ಬೆಳಗಿನ ತಿಂಡಿಗೆ ಸೇರಿಸಿದರೆ ಸಾಕಷ್ಟು ಪೋಷಕಾಂಶಗಳು ದೇಹ ಸೇರುತ್ತವೆ. ದೇಹ ಗಟ್ಟಿಯಾಗುತ್ತದೆ. ಶಕ್ತಿ ಬರುತ್ತದೆ.
ಸೇಬಿನಲ್ಲಿ ಬಹಳಷ್ಟು ಫೈಬರ್ ಇದೆ. ಆರೋಗ್ಯಕರ ಕೊಬ್ಬಿನ ಜೊತೆಗೆ, ಕಡಲೆಕಾಯಿಗಳು ಸಸ್ಯ ಆಧಾರಿತ ಪ್ರೋಟೀನ್ ಮತ್ತು ಫೈಬರ್ ಹೊಂದಿವೆ. ಈ ಎಲ್ಲಾ ಪೋಷಕಾಂಶಗಳು ಇದನ್ನು ಆರೋಗ್ಯಕರ ಲಘು ಆಯ್ಕೆ ಆಗಿದೆ.
ಚೀಸ್ ಮತ್ತು ಹಣ್ಣು
ಚೀಸ್ ಮತ್ತು ಪನೀರ್ ಅನ್ನು ಪ್ರೋಟೀನ್‌ನ ಅತ್ಯುತ್ತಮ ಮೂಲ ಎಂದು ಹೇಳಲಾಗಿದೆ. ಒಂದು ಕಪ್ ಪನೀರ್ ನಿಂದ ನೀವು ಸುಮಾರು 24 ಗ್ರಾಂ ಪ್ರೋಟೀನ್ ಪಡೆಯಬಹುದು. ನೆಚ್ಚಿನ ಹಣ್ಣುಗಳೊಂದಿಗೆ ಪನೀರ್ ಸೇವನೆ ಸಾಕಷ್ಟು ಪ್ರಯೋಜನ ನೀಡುತ್ತದೆ.
ಋತುಮಾನದ ಹಣ್ಣುಗಳನ್ನು ಆನಂದಿಸಲು ಉತ್ತಮ ಮಾರ್ಗ. ಹಣ್ಣಿನ ಮಾಧುರ್ಯ ಮತ್ತು ಪನೀರ್‌ನ ಕಟುವಾದ ಕೆನೆ ಇದು ಪರಿಪೂರ್ಣ ತಿಂಡಿ ಆಯ್ಕೆ. ನೀವು ನಿಮ್ಮಿಷ್ಟದ ಹಣ್ಣುಗಳನ್ನು ಚಿಕ್ಕದಾಗಿ ಕತ್ತರಿಸಿ ಒಂದು ಬಟ್ಟಲಿಗೆ ಹಾಕಿರಿ. ಇದಕ್ಕೆ ಫ್ರೈ ಮಾಡಿದ ಪನೀರ್ ಸೇರಿಸಿ ಅದರ ಮೇಲೆ ಚೀಸ್ ಆಗಿ ಸೇವನೆ ಮಾಡಬಹುದು.
ಚಿಯಾ ಪುಡಿಂಗ್
ಬೆಳಗಿನ ತಿಂಡಿಯಲ್ಲಿ ಚಿಯಾ ಬೀಜಗಳನ್ನು ನೆನೆಸಿ ಅದಕ್ಕೆ ನಿಮ್ಮಿಷ್ಟದ ಬಾಳೆಹಣ್ಣು, ಸೇಬು, ಬಾದಾಮಿ, ಪೀಸ್ತಾ, ಹಾಗೂ ಡ್ರೈಫ್ರೂಟ್ಸ್ ಸೇರಿಸಿ ತಿನ್ನುವುದು ತೂಕ ನಷ್ಟದ ಜೊತೆಗೆ ದೇಹಕ್ಕೆ ಅಗತ್ಯ ಪೋಷಕಾಂಶ ಒದಗಿಸುತ್ತದೆ. ಉಪಹಾರಕ್ಕೆ ಇದು ಪರಿಪೂರ್ಣ ಆಯ್ಕೆ ಆಗಿದೆ. ಚಿಯಾ ಬೀಜಗಳಲ್ಲಿ ಫೈಬರ್ ಮತ್ತು ಸಸ್ಯ ಆಧಾರಿತ ಪ್ರೋಟೀನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲ ಇದೆ.
ಚಿಯಾ ಪುಡಿಂಗ್ ಗಾಗಿ ನೀವು 15 ಗ್ರಾಂ ರಾತ್ರಿ ನೆನೆಸಿದ ಚಿಯಾ ಬೀಜಗಳನ್ನು ¼ ಕಪ್ ಕೊಬ್ಬು-ಮುಕ್ತ ಹಾಲಿನೊಂದಿಗೆ ಮಿಶ್ರಣ ಮಾಡಿ. ನಂತರ ಅದನ್ನು ½ ಟೀಚಮಚ ಕಡಲೆಕಾಯಿ ಬೆಣ್ಣೆ, ಒಂದು ಟೀಚಮಚ ಜೇನುತುಪ್ಪ ಮತ್ತು ½ ಕಪ್ ಮಿಶ್ರ ಬೆರ್ರಿ ಹಣ್ಣುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ, ಒಂದು ಗಂಟೆಯ ನಂತರ ತಿನ್ನಿ.
ಇದನ್ನೂ ಓದಿ: ಸದೃಢ ಆರೋಗ್ಯಕ್ಕೆ ಈ ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ!
ಆವಕಾಡೊ
ಆವಕಾಡೋ ಒಟ್ಟಾರೆ ಆರೋಗ್ಯಕ್ಕೆ ಸಹಕಾರಿ. ಆವಕಾಡೊಗೆ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಮತ್ತು ಕೆಲವು ಗಿಡಮೂಲಿಕೆ ಸೇರಿಸಿ, ತಿನ್ನಿ. ಆವಕಾಡೊದ ಕೆನೆ ಮತ್ತು ಕಟುವಾದ ರುಚಿ ಹೆಚ್ಚಿಸುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಫೈಬರ್ ರಿಚ್ ಫುಡ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ