• Home
  • »
  • News
  • »
  • lifestyle
  • »
  • Breakfast: ಬೆಳಗಿನ ತಿಂಡಿಗೆ ಆರೋಗ್ಯಕರ ಓಟ್ಸ್ ಇಡ್ಲಿ ರೆಸಿಪಿ ಮಾಡುವ ವಿಧಾನ; ತೂಕ ನಷ್ಟಕ್ಕೆ ಬೆಸ್ಟ್​ ಉಪಹಾರ

Breakfast: ಬೆಳಗಿನ ತಿಂಡಿಗೆ ಆರೋಗ್ಯಕರ ಓಟ್ಸ್ ಇಡ್ಲಿ ರೆಸಿಪಿ ಮಾಡುವ ವಿಧಾನ; ತೂಕ ನಷ್ಟಕ್ಕೆ ಬೆಸ್ಟ್​ ಉಪಹಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೂಕ ನಷ್ಟದ ಆಹಾರ ಕ್ರಮ ಫಾಲೋ ಮಾಡುವಾಗ ಓಟ್ಸ್ ಸೇವನೆ ಮಾಡುವಂತೆ ಸೂಚನೆ ನೀಡಲಾಗುತ್ತದೆ. ಓಟ್ಸ್ ನಿಮಗೆ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ತೂಕ ಇಳಿಸು ಕ್ರಮದಲ್ಲಿ ಆಹಾರ ತುಂಬಾ ಮುಖ್ಯವಾಗಿದೆ. ಡಯಟ್ ಮಾಡುವಾಗ ಅನಾರೋಗ್ಯಕರ ಆಹಾರ ಸೇವನೆ ಬಿಟ್ಟು ಉತ್ತಮ ಆಹಾರ ಸೇವನೆ ರೂಢಿಸಿಕೊಳ್ಳಿ.

ಮುಂದೆ ಓದಿ ...
  • Share this:

    ಆರೋಗ್ಯದ (Health) ವಿಚಾರದಲ್ಲಿ ಬೆಳಗಿನ ತಿಂಡಿ (Morning Breakfast) ಸೇವನೆಯ ಪಾತ್ರ ಮುಖ್ಯವಾಗಿದೆ. ಬೆಳಗಿನ ತಿಂಡಿಯಲ್ಲಿ ಯಾವಗಲೂ ಪೋಷಕಾಂಶ (Nutrients) ಭರಿತ ಖಾದ್ಯ (Recipe) ಸೇವನೆ ಮಾಡಬೇಕು ಎಂದು ಹೇಳಲಾಗುತ್ತದೆ. ಪ್ರೊಟೀನ್, ಫೈಬರ್ ಸಮೃದ್ಧ ಆಹಾರ ಸೇವನೆಯು ಆರೋಗ್ಯ ವೃದ್ಧಿಸುತ್ತದೆ. ಜೊತೆಗೆ ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಈಗೆಲ್ಲಾ ಜನರು ಕೆಟ್ಟ ಜೀವನಶೈಲಿ, ವರ್ಕ್ ಫ್ರಂ ಹೋಮ್ ನಿಂದ ಸಾಕಷ್ಟು ತಿನ್ನುವ ರೂಢಿ ಬೆಳೆಸಿಕೊಂಡಿದ್ದಾರೆ. ಕಳಪೆ ಜೀವನಶೈಲಿಯಿಂದ ಹಲವು ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ನಮ್ಮ ಆಹಾರ ಪದ್ಧತಿ ಚೆನ್ನಾಗಿರಬೇಕು. ಅದರಲ್ಲೂ ಬೆಳಗಿನ ತಿಂಡಿಗೆ ಉತ್ತಮ ಆಹಾರ ಪದಾರ್ಥ ಸೇವನೆ ಮಾಡಬೇಕು.


    ಬೆಳಗಿನ ತಿಂಡಿಗೆ ಹೆಲ್ದೀ ಓಟ್ಸ್ ಇಡ್ಲಿ ರೆಸಿಪಿ


    ತೂಕ ನಷ್ಟದ ಆಹಾರ ಕ್ರಮ ಫಾಲೋ ಮಾಡುವಾಗ ಓಟ್ಸ್ ಸೇವನೆ ಮಾಡುವಂತೆ ಸೂಚನೆ ನೀಡಲಾಗುತ್ತದೆ. ಓಟ್ಸ್ ನಿಮಗೆ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.


    ತೂಕ ಇಳಿಸು ಕ್ರಮದಲ್ಲಿ ಆಹಾರ ತುಂಬಾ ಮುಖ್ಯವಾಗಿದೆ. ಡಯಟ್ ಮಾಡುವಾಗ ಅನಾರೋಗ್ಯಕರ ಆಹಾರ ಸೇವನೆ ಬಿಟ್ಟು ಉತ್ತಮ ಆಹಾರ ಸೇವನೆ ರೂಢಿಸಿಕೊಳ್ಳಿ.




    ರುಚಿಕರವಾದ ಆಹಾರ ಪದಾರ್ಥಗಳ ಡಯಟ್ ಚಾರ್ಟ್‌ನಲ್ಲಿ ಓಟ್ಸ್ ಸೇರಿಸಿ. ಇದು ನಿಮ್ಮನ್ನು ಸಂಪೂರ್ಣವಾಗಿರಿಸುತ್ತದೆ. ಜೊತೆಗೆ ತೂಕ ಇಳಿಕೆ ಮತ್ತು ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಇಂದು ನಾವು ಆರೋಗ್ಯಕರ ಸ್ಟೀಮ್ ಫುಡ್ ರೆಸಿಪಿ ಎಂದೇ ಕರೆಯಿಸಿಕೊಳ್ಳುವ ಓಟ್ಸ್ ಇಡ್ಲಿ ಮಾಡೋದು ಹೇಗೆ ಅಂತಾ ನೋಡೋಣ.


    ಓಟ್ಸ್ ಇಡ್ಲಿ ರೆಸಿಪಿಗೆ ಬೇಕಾಗುವ ಪದಾರ್ಥಗಳು


    ಎರಡು ಕಪ್ ಓಟ್ಸ್, ನಾಲ್ಕು ಕಪ್ ಮೊಸರು, ಅರ್ಧ ಚಮಚ ಸಾಸಿವೆ ಬೀಜ, ಎರಡು ಚಮಚ ಉದ್ದಿನ ಬೇಳೆ, ಎರಡು ಚಮಚ ಕಡಲೆ ಬೇಳೆ, ನಾಲ್ಕು ಚಮಚ ತುಪ್ಪ, ಎರಡು ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ,


    ಒಂದು ತುರಿದ ಕ್ಯಾರೆಟ್, ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಅರಿಶಿನ, ಒಂದು ಚಮಚ ಎನೋ / ಹಣ್ಣಿನ ಉಪ್ಪು, ರುಚಿಗೆ ತಕ್ಕಷ್ಟು ಉಪ್ಪು ಬೇಕು.


    ಓಟ್ಸ್ ಇಡ್ಲಿ ರೆಸಿಪಿಗೆ ತಯಾರಿಸುವ ವಿಧಾನ


    ಮೊದಲು ಓಟ್ಸ್ ಅನ್ನು ತಿಳಿ ಕಂದು ಬಣ್ಣ ಬರುವವರೆಗೆ ತವಾ ಮೇಲೆ ಹುರಿದುಕೊಳ್ಳಿ. ನಂತರ ಹುರಿದ ಓಟ್ಸ್ ನ್ನು ಸ್ವಲ್ಪ ತಣ್ಣಗಾಗಲು ಬಿಡಿ ಮತ್ತು ನಂತರ ಅದನ್ನು ಮಿಕ್ಸಿಗೆ ಹಾಕಿ ರುಬ್ಬಿರಿ. ನಂತರ ಗ್ಯಾಸ್ ಮೇಲೆ ಬಾಣಲೆ ಇಟ್ಟು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ, ನಂತರ ಅದಕ್ಕೆ ತುಪ್ಪ, ಸಾಸಿವೆ, ಉದ್ದಿನಬೇಳೆ ಹಾಕಿ.


    ಸಾಂದರ್ಭಿಕ ಚಿತ್ರ


    ಈಗ ಸಾಸಿವೆ ಕಾಳು ಚಿಮುಕಿಸಿ ಮತ್ತು ದಾಲ್ ಗೋಲ್ಡನ್ ಬಣ್ಣ ಬರುವವರೆಗೆ ಎಲ್ಲವನ್ನೂ ಒಟ್ಟಿಗೆ ಫ್ರೈ ಮಾಡಿ. ನಂತರ ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೆಟ್ ಮತ್ತು ಅರಿಶಿನ ಪುಡಿ ಎಲ್ಲವನ್ನೂ ಚೆನ್ನಾಗಿ ಸೇರಿಸಿ ಮಿಕ್ಸ್ ಮಾಡಿ. ಒಂದು ನಿಮಿಷ ಫ್ರೈ ಮಾಡಿ.


    ನಂತರ ಅದಕ್ಕೆ ರುಬ್ಬಿದ ಓಟ್ಸ್‌ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇಡ್ಲಿ ಹಿಟ್ಟಿನ ಸ್ಥಿರತೆಗೆ ತಕ್ಕಂತೆ ಮೊಸರು ಸೇರಿಸಿ. ಹಿಟ್ಟಿನ ಸ್ಥಿರತೆ ಸರಿಯಾಗಿರುವಂತೆ ನೋಡಿಕೊಳ್ಳಿ. ನಂತರ ಎನೋ/ಹಣ್ಣಿನ ಉಪ್ಪನ್ನು ಸೇರಿಸಿ 20 ನಿಮಿಷ ನೆನೆಯಲು ಬಿಡಿ.


    ಇದನ್ನೂ ಓದಿ: ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಆಹಾರ ಸೇವಿಸಿ


    ನಂತರ ಇಡ್ಲಿ ಸ್ಟೀಮರ್ ಪ್ಲೇಟ್‌ ಗೆ ತುಪ್ಪ ಗ್ರೀಸ್ ಮಾಡಿ, ಓಟ್ಸ್ ಹಿಟ್ಟು ಸುರಿದು, 15 ನಿಮಿಷ ಸ್ಟೀಮರ್‌ ನಲ್ಲಿ ಬೇಯಿಸಿ. ಈಗ ರುಚಿಕರ ಓಟ್ಸ್ ಇಡ್ಲಿ ರೆಡಿ. ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರಿ.

    Published by:renukadariyannavar
    First published: