• Home
  • »
  • News
  • »
  • lifestyle
  • »
  • Morning Breakfast: ಬೆಳಗಿನ ತಿಂಡಿಗೆ ಆರೋಗ್ಯಕರ ಕ್ಯಾಬೇಜ್ ಖೀರ್ ಮಾಡಿ ಸೇವಿಸಿ!

Morning Breakfast: ಬೆಳಗಿನ ತಿಂಡಿಗೆ ಆರೋಗ್ಯಕರ ಕ್ಯಾಬೇಜ್ ಖೀರ್ ಮಾಡಿ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹದ ಆರೋಗ್ಯಕ್ಕೆ ಫೈಬರ್ ಅತ್ಯಗತ್ಯ ಖನಿಜ ಆಗಿದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸುತ್ತದೆ. ಫೈಬರ್ ಅತ್ಯುತ್ತಮ ಮೂಲವೆಂದು ಎಲೆಕೋಸು ಹೆಸರು ಪಡೆದಿದ್ದು ಉತ್ತಮ ಆಯ್ಕೆಯಾಗಿದೆ. ಹವಾಮಾನದಲ್ಲಿ ಸೌಮ್ಯವಾದ ತಂಪಾಗಿಸುವಿಕೆ ಗುಣ ಹೊಂದಿದೆ ಎಲೆಕೋಸು.

  • Share this:

    ಯಾರು ಹೇಳ್ತಾರೆ ಬೆಳಗಿನ ತಿಂಡಿ (Morning Breakfast) ಯಾವಾಗಲೂ ಖಾರದ ಪದಾರ್ಥ (Spicy Ingredient) ಸೇವನೆಯಿಂದ ಶುರು ಮಾಡ್ಬೇಕು ಅಂತಾ? ಬೆಳಗಿನ ತಿಂಡಿಗೆ ನೀವು ಸಿಹಿ (Sweet) ಪದಾರ್ಥವನ್ನೂ ಸೇವನೆ ಮಾಡಬಹುದು. ದಿನವೂ ಇಡ್ಲಿ, ದೋಸೆ, ರೈಸ್, ಪರೋಠಾ, ಪುರಿ ಸೇವನೆ ಮಾಡುವುದು ಬೋರ್ ಅನ್ನಿಸಿದಾಗ ನೀವು ಕ್ಯಾಬೇಜ್ ಖೀರ್ (Cabbage Kheer) ಮಾಡಿ ಸೇವನೆ ಮಾಡಬಹುದು. ದೇಹದ ಆರೋಗ್ಯಕ್ಕೆ ಫೈಬರ್ ಅತ್ಯಗತ್ಯ ಖನಿಜ ಆಗಿದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸುತ್ತದೆ. ಮತ್ತು ಆರೋಗ್ಯಕರ ತೂಕ ಕಾಪಾಡಲು ಸಹಾಯ ಮಾಡುತ್ತದೆ. ಹಾಗಾಗಿ ದೈನಂದಿನ ಆಹಾರದಲ್ಲಿ ಸರಿಯಾದ ಪ್ರಮಾಣದ ಫೈಬರ್ ಅನ್ನು ಹೊಂದಿರುವುದು ಬಹಳ ಮುಖ್ಯ.


    ಕ್ಯಾಬೇಜ್ ಖೀರ್ ಪಾಕ ವಿಧಾನ


    ಫೈಬರ್ ಅತ್ಯುತ್ತಮ ಮೂಲವೆಂದು ಎಲೆಕೋಸು ಹೆಸರು ಪಡೆದಿದ್ದು, ಉತ್ತಮ ಆಯ್ಕೆಯಾಗಿದೆ. ಹವಾಮಾನದಲ್ಲಿ ಸೌಮ್ಯವಾದ ತಂಪಾಗಿಸುವಿಕೆ ಗುಣ ಹೊಂದಿದೆ ಎಲೆಕೋಸು. ರುಚಿಕರ ಎಲೆಕೋಸು ಮಾರುಕಟ್ಟೆಯಲ್ಲಿ ಹೆಚ್ಚು ಸಿಗುತ್ತದೆ. ಹಾಗಾಗಿ ಅದರಿಂದ ಮಾಡಿದ ಎಲೆಕೋಸು ಖೀರ್ ಸೇವನೆ ಮೂಲಕ ಆರೋಗ್ಯ ಲಾಭ ಪಡೆಯಿರಿ.


    ಒಮ್ಮೆ ಮನೆಯಲ್ಲಿ ಕ್ಯಾಬೇಜ್ ಖೀರ್ ಪಾಕ ವಿಧಾನವನ್ನು ಏಕೆ ಪ್ರಯತ್ನಿಸಬಾರದು? ಇದು ಫೈಬರ್ ಮತ್ತು ಪ್ರೋಟೀನ್‌ನ ಅತ್ಯುತ್ತಮ ಸಸ್ಯ ಆಧಾರಿತ ಮೂಲವಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ ಎಲೆಕೋಸಿನಲ್ಲಿ ಕರಗದ ಫೈಬರ್ ಇದೆ. ದೇಹದಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾ ಕಾಪಾಡಿಕೊಳ್ಳಲು ಇದು ಸಹಕಾರಿ.


    ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


    ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಮತ್ತು ಬಲಪಡಿಸಲು ಇದು ಅವಶ್ಯಕವಾಗಿದೆ. ನಿಮ್ಮ ಆಹಾರದಲ್ಲಿ ನಾರಿನ ಅಗತ್ಯ ಪೂರೈಸಲು ನೀವು ಕ್ಯಾಬೀಜ್ ಖೀರ್‌ ನ್ನು ಆರೋಗ್ಯಕರ ಮತ್ತು ಟೇಸ್ಟಿ ರೆಸಿಪಿ ಮೂಲಕ ಸವಿಯಬಹುದು. ಹಾಗಾದ್ರೆ ಇಲ್ಲಿ ನಾವು ಕ್ಯಾಬೀಜ್ ಖೀರ್ ಪಾಕ ವಿಧಾನ ನೋಡೋಣ.


    ಕ್ಯಾಬೇಜ್ ಖೀರ್ ಪಾಕ ವಿಧಾನಕ್ಕೆ ಬೇಕಾಗುವ ಪದಾರ್ಥಗಳು


    ಒಂದು ಲೀಟರ್ ಕೊಬ್ಬು ಮುಕ್ತ ಹಾಲು, ಒಂದು ಟೀ ಸ್ಪೂನ್ ದೇಸಿ ತುಪ್ಪ, ಒಂದು ಬೌಲ್ ಎಲೆಕೋಸು, ಪಾರಂಪರಿಕ ಸಕ್ಕರೆ ಅರ್ಧ ಬಟ್ಟಲು, ನಾಲ್ಕರಿಂದ ಐದು ಏಲಕ್ಕಿ, ಒಣ ಹಣ್ಣುಗಳಲ್ಲಿ ಹತ್ತರಿಂದ ಹದಿನೈದು ಗೋಡಂಬಿ, ಹತ್ತರಿಂದ ಹದಿನೈದು ಬಾದಾಮಿ, ಹತ್ತರಿಂದ ಹದಿನೈದು ಪಿಸ್ತಾ, ಹತ್ತರಿಂದ ಹದಿನೈದು ಚಿರೋಂಜಿ.


    ಕ್ಯಾಬೇಜ್ ಖೀರ್ ಪಾಕ ವಿಧಾನ ಮಾಡುವ ವಿಧಾನ


    ಮೊದಲು ಎಲೆಕೋಸನ್ನು ನುಣ್ಣಗೆ ತುರಿ ಮಾಡಿ. ನಂತರ ಬಾಣಲೆಯಲ್ಲಿ ನೀರನ್ನು ತುಂಬಿಸಿ ಮತ್ತು ಎಲೆಕೋಸು ಕುದಿಯಲು ಇರಿಸಿ. ಕುದಿಯುತ್ತಿರುವಾಗ ಮಧ್ಯೆ ತಿರುಗಿಸುತ್ತಾ ಇರಿ. ಮೃದುವಾಗುವವರೆಗೆ ಕುದಿಸಿ. ಎಲೆಕೋಸು ಸುಮಾರು 5 ನಿಮಿಷಗಳಲ್ಲಿ ಚೆನ್ನಾಗಿ ಕುದಿಯುತ್ತದೆ.


    ನಂತರ ನೀರಿನಿಂದ ಎಲೆಕೋಸು ತೆಗೆದು ಹಾಕಿ. ತಣ್ಣಗಾದ ನಂತರ ಅದರಿಂದ ಉಳಿದ ನೀರನ್ನು ಹಿಂಡಿ ಹೊರ ತೆಗೆಯಿರಿ. ಮುಂದಿನ ಹಂತದಲ್ಲಿ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಅದಕ್ಕೆ ತುಪ್ಪ ಸೇರಿಸಿ ಮತ್ತು ಎಲೆಕೋಸು ಹುರಿಯಿರಿ. ತಿಳಿ ಕಂದು ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.


    ನಂತರ ಬಾಣಲೆಯಲ್ಲಿ ಹಾಲನ್ನು ಬಿಸಿ ಮಾಡಿ, ಅದರಲ್ಲಿ ಪುಡಿಮಾಡಿದ ಏಲಕ್ಕಿ ಮತ್ತು ಒಣ ಹಣ್ಣು ಸೇರಿಸಿ. ಸುಮಾರು 2 ನಿಮಿಷ ಬೇಯಿಸಿದ ನಂತರ ಅದರಲ್ಲಿ ಹುರಿದ ಎಲೆಕೋಸು ಹಾಕಿ ಮತ್ತು ಕಡಿಮೆ ಉರಿಯಲ್ಲಿ ಬೇಯಿಸಿ. ಖೀರ್ ತಳ ಹಿಡಿಯದಂತೆ ಚೆನ್ನಾಗಿ ಮಿಶ್ರಣ ಮಾಡುತ್ತಾ ಇರಿ.


    ಹಾಲು ದಪ್ಪವಾಗಲು ಪ್ರಾರಂಭಿಸಿದಾಗ, ಅದಕ್ಕೆ ಪಾರಂಪರಿಕ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 5 ರಿಂದ 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಖೀರ್ ಬೇಯಿಸಿ. ನಂತರ ಬಡಿಸಿ.


    ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


    ಕ್ಯಾಬೇಜ್ ಖೀರ್ ಹೇಗೆ ಪ್ರಯೋಜನಕಾರಿ?


    ಎಲೆಕೋಸು ಕಡಿಮೆ ಕ್ಯಾಲೋರಿ ಹೊಂದಿದೆ. ಮತ್ತು ಫೈಬರ್, ವಿಟಮಿನ್ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ನಿಮ್ಮ ತೂಕ ನಷ್ಟದಲ್ಲಿ ಪ್ರಯೋಜನಕಾರಿ ಆಗಿದೆ. ಈ ಖೀರ್‌ನಲ್ಲಿ ಪಾರಂಪರಿಕ ಸಕ್ಕರೆ ಬಳಸಲಾಗುತ್ತದೆ. ಇದು ಕಬ್ಬಿಣ, ಮೆಗ್ನೀಸಿಯಮ್ ನೀಡುತ್ತದೆ. ದೇಹದ ಉಷ್ಣತೆ ಸಮತೋಲನಗೊಳಿಸುತ್ತದೆ.

    Published by:renukadariyannavar
    First published: