• Home
  • »
  • News
  • »
  • lifestyle
  • »
  • Breakfast: ಬೆಳಗಿನ ತಿಂಡಿಗೆ ಆರೋಗ್ಯಕರ, ತೂಕ ನಿಯಂತ್ರಣಕ್ಕೆ ಕ್ವಿನೋವಾ ಖಿಚಡಿ ಮಾಡಿ ಸೇವಿಸಿ

Breakfast: ಬೆಳಗಿನ ತಿಂಡಿಗೆ ಆರೋಗ್ಯಕರ, ತೂಕ ನಿಯಂತ್ರಣಕ್ಕೆ ಕ್ವಿನೋವಾ ಖಿಚಡಿ ಮಾಡಿ ಸೇವಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕ್ವಿನೋವಾ ಆಹಾರ ಪದಾರ್ಥ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಜೊತೆಗೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಕ್ವಿನೋವಾದಲ್ಲಿ ಪ್ರೋಟೀನ್ ಮತ್ತು ಕಬ್ಬಿಣದಂಶ ಸಮೃದ್ಧವಾಗಿದೆ. ಅಷ್ಟೇ ಅಲ್ಲದೇ ಇದು ವಯಸ್ಸಾಗುವಿಕೆ ಪ್ರಕ್ರಿಯೆಯನ್ನ ನಿಧಾನಗೊಳಿಸುತ್ತದೆ. ಬೆಳಗಿನ ತಿಂಡಿಗೆ ಹಗುರವಾದ ಮತ್ತು ಆರೋಗ್ಯಕರ ಕ್ವಿನೋವಾ ಖಿಚಡಿ ಬೆಸ್ಟ್ ಆಯ್ಕೆ.

ಮುಂದೆ ಓದಿ ...
  • Share this:

    ಈಗ ಯಾರನ್ನೇ ಕೇಳಿದ್ರೂ ಹೆಲ್ದೀ ಫುಡ್ (Healthy Food) ಬೇಕು ಅಂತಾರೆ. ಕೊರೊನಾ ನಂತರದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು (People) ಆರೋಗ್ಯದ (Health) ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಹೀಗಾಗಿ ಬೆಳಗಿನ ತಿಂಡಿಗೆ (Morning Breakfast) ಹೆಲ್ದೀ ರೆಸಿಪಿ (Recipe) ಹುಡುಕಾಡ್ತಾರೆ. ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಮತ್ತು ಫಿಟ್ನೆಸ್ ಬಯಸುವವರು, ತೂಕ ನಿಯಂತ್ರಿಸುವವರು ಹಲವು ಡಯಟ್ ಪ್ಲಾನ್ ಫಾಲೋ ಮಾಡ್ತಿದ್ದಾರೆ. ಈಗ ಫಿಟ್ನೆಸ್ ಪ್ರೀಕ್ಸ್ ಕ್ವಿನೋವಾ ಪದಾರ್ಥ ಸೇವನೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲವರು ಕ್ವಿನೋವಾ ಹೇಗೆ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಿಳಿದು ಸೇವನೆ ಮಾಡ್ತಾರೆ. ಇನ್ನು ಕೆಲವರು ಅದರ ರೆಸಿಪಿ ರುಚಿಯಿಂದಾಗಿ.


    ಕ್ವಿನೋವಾ ಖಿಚಡಿ ರೆಸಿಪಿ


    ಕ್ವಿನೋವಾ ಆಹಾರ ಪದಾರ್ಥ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಜೊತೆಗೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಕ್ವಿನೋವಾದಲ್ಲಿ ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದಂಶ ಸಮೃದ್ಧವಾಗಿದೆ. ಅಷ್ಟೇ ಅಲ್ಲದೇ ಇದು ವಯಸ್ಸಾಗುವಿಕೆ ಪ್ರಕ್ರಿಯೆಯನ್ನ ನಿಧಾನಗೊಳಿಸುತ್ತದೆ.


    ಕ್ವಿನೋವಾ ಆಂಟಿಸೆಪ್ಟಿಕ್ ಮತ್ತು ಆಂಟಿಕ್ಯಾನ್ಸರ್ ನಂತಹ ಗುಣ ಹೊಂದಿದೆ. ಬೆಳಗಿನ ತಿಂಡಿಗೆ ನೀವು ಹಗುರವಾದ ಮತ್ತು ಆರೋಗ್ಯಕರ ಏನನ್ನಾದರೂ ತಿನ್ನಲು ಬಯಸಿದರೆ ಕ್ವಿನೋವಾ ಖಿಚಡಿ ಆರೋಗ್ಯಕರ ಪಾಕ ವಿಧಾನ ಮಾಡಿ ಸೇವಿಸಿ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


    ಕ್ವಿನೋವಾ ಇದು ಹೂಬಿಡುವ ಸಸ್ಯ. ಇದು ದಕ್ಷಿಣ ಅಮೆರಿಕಾದಲ್ಲಿ ಕಂಡು ಬರುತ್ತದೆ. ಇದರ ಎತ್ತರವು ಒಂದರಿಂದ ಎರಡು ಮೀಟರ್. ಕ್ವಿನೋವಾ ಬೀಜಗಳನ್ನು ಆಹಾರ ಪದಾರ್ಥವಾಗಿ ಬಳಸ್ತಾರೆ.


    ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುತ್ತದೆ. ತೂಕ ಇಳಿಕೆಗೆ ಸಹಕಾರಿ. ನೀವು ತೂಕ ಇಳಿಸುವ ಆಹಾರ ಕ್ರಮ ಫಾಲೋ ಮಾಡ್ತಿದ್ದರೆ ಕ್ವಿನೋವಾ ಖಿಚಡಿ ಪಾಕ ವಿಧಾನ ಟ್ರೈ ಮಾಡಿ.


    ಕ್ವಿನೋವಾ ಖಿಚಡಿ ರೆಸಿಪಿ


    ಬೇಕಾಗುವ ಪದಾರ್ಥಗಳು


    ಒಂದು ಕಪ್ ಹೆಸರು ಬೇಳೆ, ಒಂದು ಕಪ್ ಕ್ವಿನೋವಾ, ಅರ್ಧ ಕಪ್ ಹಸಿರು ಬಟಾಣಿ, ಕಾಲು ಕಪ್ ಸಣ್ಣಗೆ ಹೆಚ್ಚಿದ ಕ್ಯಾರೆಟ್,  ಕಾಲು ಕಪ್ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, 2 ರಿಂದ 3 ಚಮಚ ದೇಸಿ ತುಪ್ಪ, ಶುಂಠಿ ಪೇಸ್ಟ್, ಒಂದು ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಒಂದು ಇಂಚು ದಾಲ್ಚಿನ್ನಿ ತುಂಡು, 2 ರಿಂದ 3 ಬೇ ಎಲೆ, ಒಂದು ದೊಡ್ಡ ಏಲಕ್ಕಿ,


    ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಟೀಸ್ಪೂನ್ ಅರಿಶಿನ ಪುಡಿ, ಒಂದು ಟೀಸ್ಪೂನ್ ಕೊತ್ತಂಬರಿ ಪುಡಿ, ಕಾಲು ಟೀಸ್ಪೂನ್ ಕೆಂಪು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ನಿಂಬೆ ರಸ, ಎರಡು ಸಣ್ಣದಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿ, ಸಣ್ಣದಾಗಿ ಹೆಚ್ಚಿದ ಹಸಿರು ಕೊತ್ತಂಬರಿ ಸೊಪ್ಪು ಬೇಕು.


    ಕ್ವಿನೋವಾ ಖಿಚಡಿ ತಯಾರಿಸುವ ವಿಧಾನ


    ಮೊದಲು ಹೆಸರು ಬೇಳೆ ಮತ್ತು ಕ್ವಿನೋವಾ ವನ್ನು ಸುಮಾರು 15 ರಿಂದ 20 ನಿಮಿಷ ನೆನೆಸಿಡಿ. ಈಗ ಎಲ್ಲಾ ತರಕಾರಿಗಳನ್ನು ಒಂದು ಪಾತ್ರೆಗೆ ಹಾಕಿ 10 ನಿಮಿಷ ಕುದಿಸಿ. ಕುಕ್ಕರ್‌ನಲ್ಲಿ ಒಂದು ಚಮಚ ತುಪ್ಪ ಹಾಕಿ ಅದಕ್ಕೆ ಹೆಸರು ಬೇಳೆ, ಹಸಿರು ಬಟಾಣಿ ಮತ್ತು ಕ್ವಿನೋವಾ ಹಾಕಿ 2 ರಿಂದ 3 ಸೀಟಿಗೆ ಬೇಯಿಸಿ.


    ಬಾಣಲೆಗೆ ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ಸಂಪೂರ್ಣ ಮಸಾಲೆ ಹಾಕಿ, ನಂತರ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಹಾಕಿ ಗೋಲ್ಡನ್ ಬ್ರೌನ್ ಬರುವವರೆಗೆ ಬೇಯಿಸಿ. ನಂತರ ಅದರಲ್ಲಿ ಎಲ್ಲಾ ಮಸಾಲೆ ಮಿಶ್ರಣ ಮಾಡಿ ಮತ್ತು 4 ರಿಂದ 5 ನಿಮಿಷ ಬೇಯಿಸಿ


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


    ಮಸಾಲೆ ಬೆಂದ ನಂತರ ಅದಕ್ಕೆ ಎಲ್ಲಾ ಬೇಯಿಸಿದ ತರಕಾರಿ ಸೇರಿಸಿ. 3 ನಿಮಿಷ ಬೇಯಿಸಿ. ನಂತರ ಅದಕ್ಕೆ ಹೆಸರು ಬೇಳೆ ಮತ್ತು ಕ್ವಿನೋವಾ, ಹಸಿರು ಬಟಾಣಿ ಸೇರಿಸಿ. 5 ನಿಮಿಷ ಬೇಯಿಸಿ. ಮತ್ತು ಖಿಚಡಿ ಬೆಂದ ನಂತರ ಅದಕ್ಕೆ ಹಸಿರು ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತು ಬಿಸಿಯಾಗಿ ತಿನ್ನಿರಿ.

    Published by:renukadariyannavar
    First published: