• Home
  • »
  • News
  • »
  • lifestyle
  • »
  • Morning Breakfast: ಬೆಳಗಿನ ತಿಂಡಿಗೆ ಗುಜರಾತ್ ಸ್ಟ್ರೀಟ್ ಸ್ಟೈಲ್ ನ ಗುಗ್ರಾ ಸ್ಯಾಂಡ್ ವಿಚ್ ರೆಸಿಪಿ ಮಾಡುವುದು ಹೇಗೆ?

Morning Breakfast: ಬೆಳಗಿನ ತಿಂಡಿಗೆ ಗುಜರಾತ್ ಸ್ಟ್ರೀಟ್ ಸ್ಟೈಲ್ ನ ಗುಗ್ರಾ ಸ್ಯಾಂಡ್ ವಿಚ್ ರೆಸಿಪಿ ಮಾಡುವುದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗುಗ್ರಾ ಸ್ಯಾಂಡ್ ವಿಚ್ ರೆಸಿಪಿ ಸರಳ ಮತ್ತು ಲಘು ತಿಂಡಿ ಆಗಿದೆ. ಗುಗ್ರಾ ಸ್ಯಾಂಡ್ ವಿಚ್ ರೆಸಿಪಿ ಅಹಮದಾಬಾದ್‌ ನ ಬೀದಿಗಳಲ್ಲಿ ಬಹಳ ಜನಪ್ರಿಯವಾಗಿದೆ. ಪಶ್ಚಿಮ ಭಾರತದ ಹೆಚ್ಚಿನ ಭಾಗಗಳಲ್ಲಿ ಈ ರೆಸಿಪಿ ಕಾಣಬಹುದಾಗಿದೆ. ಅತ್ಯಂತ ಸರಳ ಮತ್ತು ತ್ವರಿತ ಚೀಸ್ ಜೊತೆ ಗ್ರಿಲ್ಡ್ ಮಾಡಿ ತಯಾರಿಸುವ ಸ್ಯಾಂಡ್‌ವಿಚ್ ರೆಸಿಪಿ ಇದಾಗಿದೆ.

ಮುಂದೆ ಓದಿ ...
  • Share this:

    ಬೆಳಗಿನ ತಿಂಡಿಗೆ (Morning Breakfast) ನಾವು ಸಾಕಷ್ಟು ತಿಂಡಿ ರೆಸಿಪಿಗಳನ್ನು (Recipe) ಮಾಡಿ ಸೇವಿಸಿದ್ದೇವೆ. ಇಂದು ನಾವು ಗುಜರಾತ್ ನ (Gujrat) ಸ್ಟ್ರೀಟ್ ಸ್ಟೈಲ್ ನಲ್ಲಿ ಮಾಡುವ ಗುಗ್ರಾ ಸ್ಯಾಂಡ್‌ವಿಚ್ (Gugra Sandwich) ರೆಸಿಪಿಯನ್ನು ಹೇಗೆ ಮಾಡುವುದು ಅಂತಾ ತಿಳಿಯೋಣ. ಗುಜರಾತಿ ಸ್ಟ್ರೀಟ್ ಸ್ಟೈಲ್ ನ ಗುಗ್ರಾ ಸ್ಯಾಂಡ್ ವಿಚ್ ರೆಸಿಪಿಯನ್ನು ತರಕಾರಿ ಸ್ಟಫಿಂಗ್‌ನೊಂದಿಗೆ ತಯಾರಿಸಕಾಗುತ್ತದೆ. ಗುಗ್ರಾ ಸ್ಯಾಂಡ್ ವಿಚ್ ರೆಸಿಪಿಯು ಅತ್ಯಂತ ಸರಳ ಮತ್ತು ತ್ವರಿತ ಚೀಸ್ ಜೊತೆ ಗ್ರಿಲ್ಡ್ ಮಾಡಿ ತಯಾರಿಸುವ ಸ್ಯಾಂಡ್‌ವಿಚ್ ರೆಸಿಪಿ ಇದಾಗಿದೆ. ಗುಗ್ರಾ ಸ್ಯಾಂಡ್ ವಿಚ್ ರೆಸಿಪಿಯಲ್ಲಿ ಸರಳವಾಗಿ ಈರುಳ್ಳಿ ಮತ್ತು ಕ್ಯಾಪ್ಸಿಕಂ ತರಕಾರಿ ಮಸಾಲಾವನ್ನು ತುಂಬಿ ತಯಾರಿಸುವ ಚೀಸ್ ಮಸಾಲೆಯುಕ್ತ ಸ್ಯಾಂಡ್‌ವಿಚ್ ಆಗಿದೆ.


    ಗುಗ್ರಾ ಸ್ಯಾಂಡ್ ವಿಚ್ ರೆಸಿಪಿ


    ಗುಗ್ರಾ ಸ್ಯಾಂಡ್ ವಿಚ್ ರೆಸಿಪಿ ಸರಳ ಮತ್ತು ಲಘು ತಿಂಡಿ ಆಗಿದೆ. ಗುಗ್ರಾ ಸ್ಯಾಂಡ್ ವಿಚ್ ರೆಸಿಪಿ ಅಹಮದಾಬಾದ್‌ ನ ಬೀದಿಗಳಲ್ಲಿ ಬಹಳ ಜನಪ್ರಿಯವಾಗಿದೆ. ಪಶ್ಚಿಮ ಭಾರತದ ಹೆಚ್ಚಿನ ಭಾಗಗಳಲ್ಲಿ ಈ ರೆಸಿಪಿ ಕಾಣಬಹುದಾಗಿದೆ. ವಿವಿಧ ರೀತಿಯ ಸ್ಯಾಂಡ್ ವಿಚ್ ಗಳನ್ನು ನೀವು ಸವಿದಿರಬಹುದು. ಕೆಲವು ಸ್ಯಾಂಡ್ ವಿಚ್ ಗಳಲ್ಲಿ ಪನೀರ್, ಮಶ್ರೂಮ್, ಈರುಳ್ಳಿ, ಟೊಮೆಟೋ, ಕ್ಯಾಪ್ಸಿಕಂ ಹಾಗೂ ಮಾಂಸ, ಚಿಕನ್ ಸೇರಿಸಲಾಗುತ್ತದೆ.


    ವಿವಿಧ ಧಾನ್ಯಗಳನ್ನೂ ನೀವು ಸೇರಿಸಬಹುದು. ವಿವಿಧ ಮಸಾಲೆಯುಕ್ತ ಸ್ಟಫಿಂಗ್‌ ಕೂಡ ಇದಕ್ಕೆ ಸೇರಿಸಬಹುದು. ಸಾಂಪ್ರದಾಯಿಕ ತರಕಾರಿ ಸ್ಯಾಂಡ್‌ವಿಚ್‌ಗಿಂತ ಗುಗ್ರಾದಲ್ಲಿ ಭಿನ್ನವಾಗಿ ತರಕಾರಿಗಳನ್ನು ಕತ್ತರಿಸಿ ಬ್ರೆಡ್ ಸ್ಲೈಸ್‌ಗಳ ನಡುವೆ ಇರಿಸುತ್ತಾರೆ.


    ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


    ಸಣ್ಣದಾಗಿ ಕೊಚ್ಚಿದ ಈರುಳ್ಳಿ ಮತ್ತು ಕ್ಯಾಪ್ಸಿಕಂ ಅನ್ನು ಜೀರಿಗೆ, ಚಾಟ್ ಮಸಾಲಾ ಮತ್ತು ಮೆಣಸುಗಳಂತಹ ಮಸಾಲೆ ಮಿಶ್ರಣದ ಜೊತೆ ಹಾಕಬಹುದು. ಚೀಸ್ ತುರಿಯನ್ನು ಬ್ರೆಡ್ ನಡುವೆ ಮತ್ತು ಬ್ರೆಡ್ ಮೇಲೆ ಹಾಕುತ್ತಾರೆ.


    ಗುಗ್ರಾ ಸ್ಯಾಂಡ್ ವಿಚ್ ರೆಸಿಪಿ ತಯಾರಿಸಲು ಬೇಕಾಗುವ ಸಾಮಗ್ರಿಗಳು


    ಒಂದು ಸಣ್ಣದಾಗಿ ಕತ್ತರಿಸಿದ ಕ್ಯಾಪ್ಸಿಕಂ, ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಎರಡು ಸಣ್ಣದಾಗಿ ಕತ್ತರಿಸಿದ ಮೆಣಸಿನಕಾಯಿ, ಒಂದು ಸಣ್ಣದಾಗಿ ಕತ್ತರಿಸಿದ ಶುಂಠಿ, ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ, ಕಾಲು ಟೀ ಸ್ಪೂನ್ ಮೆಣಸು ಪುಡಿ, ಅರ್ಧ ಟೀ ಸ್ಪೂನ್ ಚಾಟ್ ಮಸಾಲಾ, ಅರ್ಧ ಟೀ ಸ್ಪೂನ್ ಚಿಲ್ಲಿ ಫ್ಲೇಕ್ಸ್, ಕಾಲು ಟೀ ಸ್ಪೂನ್ ಉಪ್ಪು, ಮೂರು ಚಮಚ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಚೀಸ್, ಹಸಿರು ಚಟ್ನಿ, ಬೆಣ್ಣೆ ಮತ್ತು ಬ್ರೆಡ್.


    ಗುಗ್ರಾ ಸ್ಯಾಂಡ್ ವಿಚ್ ರೆಸಿಪಿ ತಯಾರಿಸುವ ವಿಧಾನ


    ಮೊದಲು ಒಂದು ಬಟ್ಟಲಿನಲ್ಲಿ ಒಂದು ಸಣ್ಣದಾಗಿ ಕತ್ತರಿಸಿದ ಕ್ಯಾಪ್ಸಿಕಂ, ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಎರಡು ಸಣ್ಣದಾಗಿ ಕತ್ತರಿಸಿದ ಮೆಣಸಿನಕಾಯಿ, ಒಂದು ಸಣ್ಣದಾಗಿ ಕತ್ತರಿಸಿದ ಶುಂಠಿ ತೆಗೆದುಕೊಳ್ಳಿ.


    ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ, ಕಾಲು ಟೀ ಸ್ಪೂನ್ ಮೆಣಸು ಪುಡಿ, ಅರ್ಧ ಟೀ ಸ್ಪೂನ್ ಚಾಟ್ ಮಸಾಲಾ, ಅರ್ಧ ಟೀ ಸ್ಪೂನ್ ಚಿಲ್ಲಿ ಫ್ಲೇಕ್ಸ್, ಕಾಲು ಟೀ ಸ್ಪೂನ್ ಉಪ್ಪು ಸೇರಿಸಿ. ಮೂರು ಚಮಚ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈಗ ಸ್ಯಾಂಡ್ ವಿಚ್ ಸ್ಟಫಿಂಗ್ ಸಿದ್ಧವಾಗಿದೆ.


    ಸ್ಯಾಂಡ್ವಿಚ್ ತಯಾರಿಸಲು, ಎರಡು ಬ್ರೆಡ್ ಸ್ಲೈಸ್ ಗಳನ್ನು ತೆಗೆದುಕೊಂಡು ಅವುಗಳ ಮೇಲೆ ಬೆಣ್ಣೆ ಹರಡಿ. ಎರಡೂ ಬ್ರೆಡ್ ಸ್ಲೈಸ್‌ಗಳ ಮೇಲೆ ಹಸಿರು ಚಟ್ನಿ ಹರಡಿ. ಈಗ ಪ್ರತಿ ಸ್ಲೈಸ್‌ನಲ್ಲಿ ಎರಡು ಟೀ ಸ್ಪೂನ್ ಸಿದ್ಧಪಡಿಸಿದ ಸ್ಟಫಿಂಗ್ ನ್ನು ಇರಿಸಿ. ಸ್ಯಾಂಡ್ ವಿಚ್ ಮೇಲೆ ಚೀಸ್ ಚೆನ್ನಾಗಿ ಹರಡಿ. ಈಗ ಒಂದರ ಮೇಲೊಂದು ಪದರವನ್ನು ಏಕರೂಪವಾಗಿ ಸೇರಿಸಿ.


    ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


    ಬ್ರೆಡ್ ಸ್ಲೈಸ್‌ನಿಂದ ಮುಚ್ಚಿ. ಅದರ ಮೇಲೆ ಬೆಣ್ಣೆ ಮತ್ತು ಹಸಿರು ಚಟ್ನಿ ಹರಡಿ. ಈಗ ಸ್ಯಾಂಡ್‌ ವಿಚ್ ಅನ್ನು ಸ್ಯಾಂಡ್‌ವಿಚ್ ಮೇಕರ್‌ ನಲ್ಲಿ ಇರಿಸಿ ಮತ್ತು ಮುಚ್ಚಿ. ನಂತರ ಹೊರ ಬಂದ ಬದಿಗಳನ್ನು ಟ್ರಿಮ್ ಮಾಡಿ. ಸ್ಯಾಂಡ್‌ವಿಚ್‌ ಮೇಕರ್‌ ಗೆ ಹಾಕುವ ಮೊದಲು ಬ್ರೆಡ್‌ನ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಬೆಣ್ಣೆ ಹಾಕಿರಿ. ನಂತರ ಸ್ಯಾಂಡ್‌ವಿಚ್ ಗೋಲ್ಡನ್ ಬ್ರೌನ್ ಆಗುವವರೆಗೆ ಎರಡೂ ಬದಿ ಗ್ರಿಲ್ ಮಾಡಿ ತೆಗೆದು ಸೇವನೆ ಮಾಡಿ.

    Published by:renukadariyannavar
    First published: