• Home
  • »
  • News
  • »
  • lifestyle
  • »
  • Breakfast Recipe: ಬೆಳಗಿನ ತಿಂಡಿಗೆ ಗುಜರಾತ್ ಜನಪ್ರಿಯ ಮೆಂತ್ಯ ಥೆಪ್ಲಾ ರೆಸಿಪಿ

Breakfast Recipe: ಬೆಳಗಿನ ತಿಂಡಿಗೆ ಗುಜರಾತ್ ಜನಪ್ರಿಯ ಮೆಂತ್ಯ ಥೆಪ್ಲಾ ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗುಜರಾತ್ ನಲ್ಲಿ ಸಾಕಷ್ಟು ಜನಪ್ರಿಯ ಉಪಹಾರವಾಗಿದೆ ಮೆಂತ್ಯ ಥೆಪ್ಲಾ. ಗುಜರಾತಿ ಮೆಂತ್ಯ ಸೊಪ್ಪಿನ ಥೆಪ್ಲಾ ಪಾಕವಿಧಾನವು ಆರೋಗ್ಯಕರ ಆಗಿದೆ. ಇದನ್ನು ತಯಾರಿಸಲು ಸಾಮಾನ್ಯವಾಗಿ ಕಡಲೆ ಎಣ್ಣೆ ಬಳಕೆ ಮಾಡ್ತಾರೆ. ಮೆಂತ್ಯ ಥೆಪ್ಲಾ ತಿಂಡಿಯು ಗುಜರಾತಿನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಹಲವು ಕಡೆ ಪ್ರಸಿದ್ಧಿ ಪಡೆದಿವೆ.

ಮುಂದೆ ಓದಿ ...
  • Share this:

    ದೇಶದಲ್ಲಿ (Country) ಹಲವು ರಾಜ್ಯಗಳು (States) ಹಲವು ತರಹದ ಭಕ್ಷ್ಯ ಮತ್ತು ಪಾಕವಿಧಾನ (Recipes) ಪದ್ಧತಿ ಹೊಂದಿದೆ. ಒಂದೊಂದು ರಾಜ್ಯಗಳು ಒಂದೊಂದು ರೀತಿಯ ಆಹಾರಕ್ಕೆ (Food) ಪ್ರಸಿದ್ಧಿ ಪಡೆದುಕೊಂಡಿವೆ. ನಿಮಗೆ ದಿನವೂ ಒಂದೇ ರೀತಿಯ ಆಹಾರ ಪದಾರ್ಥ ತಯಾರಿಸಿ, ಸೇವಿಸಿ ಬೋರ್ ಆಗಿದ್ದರೆ, ಹೊಸ ರುಚಿ ಟ್ರೈ ಮಾಡಿ. ಇಂದು ನಾವು ಬೆಳಗಿನ ತಿಂಡಿಗೆ (Morning Breakfast) ಗುಜರಾತ್ (Gujrat) ನಲ್ಲಿ ಸಾಕಷ್ಟು ಜನಪ್ರಿಯ ಉಪಹಾರವಾಗಿರುವ ಥೆಪ್ಲಾ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಅಂದ ಹಾಗೇ, ಗುಜರಾತಿಗಳು ಮತ್ತು ಥೆಪ್ಲಾ ಉಪಾಹಾರದ ನಡುವಿನ ಸಂಬಂಧವು ತುಂಬಾ ಆಳವಾಗಿದೆ. ಥೇಪ್ಲಾ ಆಹಾರದ ಈ ಭಾಗವು ಆನುವಂಶಿಕವಾಗಿದೆ.


    ಮೆಂತ್ಯ ಸೊಪ್ಪಿನ ಥೆಪ್ಲಾ ಪಾಕವಿಧಾನ


    ಗುಜರಾತ್ ನಲ್ಲಿ ಥೆಪ್ಲಾ ಉಪಾಹಾರವನ್ನು ಸಾಮಾನ್ಯವಾಗಿ ಊಟವಾಗಿಯೂ ತಿನ್ನುತ್ತಾರೆ. ಪ್ರಯಾಣ ಮತ್ತು ಪಿಕ್ನಿಕ್‌ ಹೋಗುವಾಗ ಥೆಪ್ಲಾ ತೆಗೆದುಕೊಂಡು ಹೋಗುತ್ತಾರೆ. ಗುಜರಾತಿ ಮೇಥಿ ಥೆಪ್ಲಾ ಪಾಕ ವಿಧಾನ ತುಂಬಾ ತ್ವರಿತ ಮತ್ತು ಸುಲಭವಾಗಿದೆ.


    ಗುಜರಾತಿ ಮೆಂತ್ಯ ಸೊಪ್ಪಿನ ಥೆಪ್ಲಾ ಪಾಕವಿಧಾನವು ಆರೋಗ್ಯಕರ ಆಗಿದೆ. ಇದನ್ನು ತಯಾರಿಸಲು ಸಾಮಾನ್ಯವಾಗಿ ಕಡಲೆ ಎಣ್ಣೆ ಬಳಕೆ ಮಾಡ್ತಾರೆ. ಮೆಂತ್ಯ ಥೆಪ್ಲಾ ತಿಂಡಿಯು ಗುಜರಾತಿನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಹಲವು ಕಡೆ ಪ್ರಸಿದ್ಧಿ ಪಡೆದಿವೆ.


    ಇದನ್ನೂ ಓದಿ: ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆ ಕಾಡುತ್ತದೆ ಎಂಬ ಯೋಚನೆಯೇ? ಈ ಪದಾರ್ಥಗಳಲ್ಲಿದೆ ಸಮೃದ್ಧ ಪೋಷಕಾಂಶ!


    ಮಧುಮೇಹ ರೋಗಿಗಳಿಗೂ ಉತ್ತಮ ತಿಂಡಿ ಆಯ್ಕೆ


    ಆರೋಗ್ಯಕರ ಗುಜರಾತಿ ಮೆಂತ್ಯ ಥೆಪ್ಲಾವನ್ನು ಮಧುಮೇಹ ರೋಗಿಗಳು ತಿಂಡಿಯಾಗಿ ಸೇವಿಸುವುದು ಉತ್ತಮ ಪ್ರಯೋಜನ ನೀಡುತ್ತದೆ. ಮೆಂತ್ಯ ಎಲೆಗಳು ಇನ್ಸುಲಿನ್ ಮತ್ತು ಗ್ಲೂಕೋಸ್ ಪ್ರತಿಕ್ರಿಯೆ ಸುಧಾರಿಸುತ್ತವೆ. ಹಾಗೂ ಮಧುಮೇಹಿಗಳು ಒಂದರಿಂದ ಎರಡು ಥೆಪ್ಲಾಸ್‌ ತಿನ್ನುವುದು ಆರೋಗ್ಯಕರ ವಿಧಾನ ಆಗಿದೆ.


    ಥೆಪ್ಲಾ ಮಾಡಲು ಸಂಪೂರ್ಣವಾಗಿ ಗೋಧಿ ಹಿಟ್ಟನ್ನು ಬಳಸುವುದರಿಂದ ಫೈಬರ್ ಪ್ರಮಾಣವೂ ಇರುತ್ತದೆ. ಇದು ಖಂಡಿತವಾಗಿ ಸಂಸ್ಕರಿಸಿದ ಮೈದಾ ಹಿಟ್ಟಿನ ಪದಾರ್ಥಕ್ಕಿಂತ ಪೌಷ್ಟಿಕ ಪರ್ಯಾಯವಾಗಿದೆ. ಸ್ವಲ್ಪ ಕಬ್ಬಿಣದಂಶ ಪಡೆಯಲು ನೀವು ಇದಕ್ಕೆ ಅರ್ಧ ಗೋಧಿ ಹಿಟ್ಟು ಮತ್ತು ಇನ್ನರ್ಧ ಜೋಳದ ಹಿಟ್ಟು ಬಳಸಬಹುದು.


    ತಿನ್ನಲು ಹೆಚ್ಚು ರುಚಿ


    ಆರೋಗ್ಯಕರ ಮೆಂತ್ಯ ಸೊಪ್ಪಿನ ಥೆಪ್ಲಾ ಕ್ರೀಡಾಪಟುಗಳಿಗೆ ಪರಿಪೂರ್ಣವಾದ ತಿಂಡಿ ಆಗಿದೆ. ಮಕ್ಕಳ ಬೆಳವಣಿಗೆಗೂ ಸಹಕಾರಿಯಾಗುವ ರೆಸಿಪಿ ಇದಾಗಿದೆ. ಥೆಪ್ಲಾ ಮೃದುವಾಗಿದ್ದರೆ ತಿನ್ನಲು ಹೆಚ್ಚು ರುಚಿ ಮತ್ತು ಸ್ಪಷ್ಟವಾಗಿರುತ್ತದೆ. ಥೆಪ್ಲಾ ಮಾಡುವಾಗ ಮೊಸರು ಸೇರಿಸದಿದ್ದರೆ ದೀರ್ಘ ಕಾಲದವರೆಗೆ ಸಂಗ್ರಹಿಸಿ ಇಡಬಹುದು.


    ಆಹಾರದಲ್ಲೂ ಗುಜರಾತ್ ವೈವಿಧ್ಯ ಖಾದ್ಯಗಳ ರುಚಿ ಹೊಂದಿದೆ. ಮೆಂತ್ಯ ಥೆಪ್ಲಾ ತಿಂಡಿಯನ್ನು ಸಾಂಬಾರ, ಚಟ್ನಿ, ಚಹಾ, ಮೊಸರು ಅಥವಾ ಉಪ್ಪಿನಕಾಯಿ ಜೊತೆಯೂ ಸೇವನೆ ಮಾಡಬಹುದು. ಹಾಗಾದ್ರೆ ಗುಜರಾತ್ ನ ಮೆಂತ್ಯ ಥೆಪ್ಲಾ ಮಾಡುವ ರೆಸಿಪಿ ಬಗ್ಗೆ ತಿಳಿಯೋಣ.


    ಮೆಂತ್ಯ ಥೆಪ್ಲಾ ರೆಸಿಪಿ


    ಬೇಕಾಗುವ ಸಾಮಗ್ರಿಗಳು


    ಒಂದು ಕಪ್ ಗೋಧಿ ಹಿಟ್ಟು, ಕಾಲು ಕಪ್ ಕಡಲೆ ಬೇಳೆ ಹಿಟ್ಟು, ಕಾಲು ಕಪ್ ಮೊಸರು, ಒಂದು ಕಪ್ ಸಣ್ಣದಾಗಿ ಕೊಚ್ಚಿದ ಮೆಂತ್ಯ, ಒಂದು ಟೀ ಚಮಚ ನುಣ್ಣಗೆ ಕತ್ತರಿಸಿದ ಕೊತ್ತಂಬರಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಟೀ ಚಮಚ ಅರಿಶಿನ ಪುಡಿ, ಒಂದು ಟೀ ಸ್ಪೂನ್ ಕೆಂಪು ಮೆಣಸಿನ ಪುಡಿ, ಒಂದು ಟೀ ಸ್ಪೂನ್ ಸೆಲರಿ, ಒಂದು ಟೀ ಸ್ಪೂನ್ ಕೊತ್ತಂಬರಿ ಪುಡಿ, ಹಿಟ್ಟನ್ನು ಬೆರೆಸಲು ಒಂದು ಕಪ್ ಎಣ್ಣೆ, ಥೆಪ್ಲಾ ತಯಾರಿಸಲು ಒಂದು ಕಪ್ ಎಣ್ಣೆ ಬೇಕಾಗುತ್ತದೆ.


    ಮೆಂತ್ಯ ಥೆಪ್ಲಾ ರೆಸಿಪಿ ಮಾಡುವುದು ಹೇಗೆ?


    ಒಂದು ಪಾತ್ರೆಯಲ್ಲಿ ಕಡಲೆ ಬೇಳೆ ಹಿಟ್ಟು, ಗೋಧಿ ಹಿಟ್ಟು, ಕೆಂಪು ಮೆಣಸಿನ ಪುಡಿ, ಅರಿಶಿನ, ಕೊತ್ತಂಬರಿ ಪುಡಿ, ಮೊಸರು, ಉಪ್ಪು, ಕೇರಂ ಬೀಜಗಳು, ಕತ್ತರಿಸಿದ ಮೆಂತ್ಯ, ಎರಡು ಟೀ ಸ್ಪೂನ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇವೆಲ್ಲವನ್ನೂ ಸೇರಿಸಿ ಮೃದುವಾದ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ಅಗತ್ಯವಿರುವಷ್ಟು ನೀರು ಸೇರಿಸಿ. ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ನಂತರ ಈಗ ಹಿಟ್ಟನ್ನು ಮುಚ್ಚಿಡಿ.


    ಸುಮಾರು ಹದಿನೈದು ನಿಮಿಷಗಳ ನಂತರ ಹಿಟ್ಟು ಮೃದುವಾದ ನಂತರ ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಿ. ಈಗ ಥೆಪ್ಲಾ ಮಾಡಲು ಬೇಕಾದಷ್ಟು ಹಿಟ್ಟಿನ ಉಂಡೆ ಮಾಡಿರಿ. ಒಣ ಹಿಟ್ಟು ಇಲ್ಲವೇ ಎಣ್ಣೆ ಹಾಕಿ ದುಂಡನೆಯ ಆಕಾರದಲ್ಲಿ ಹಿಟ್ಟಿನಿಂದ ಥೆಪ್ಲಾ ಲಟ್ಟಿಸಿ. ಮಧ್ಯಮ ಉರಿಯಲ್ಲಿ ಪ್ಯಾನ್ ಬಿಸಿ ಮಾಡಿ.


    ಇದನ್ನೂ ಓದಿ: ರಕ್ತದೊತ್ತಡ ಸುಧಾರಿಸುವ ಖರ್ಜೂರದ ಪ್ರಯೋಜನ ತಿಳಿದರೆ ಇಂದೇ ಸೇವಿಸಲು ಪ್ರಾರಂಭಿಸುವಿರಿ


    ತವಾ ಬಿಸಿಯಾದಾಗ, ತವಾ ಮೇಲೆ ಎಣ್ಣೆ ಹಚ್ಚಿ ಥೆಪ್ಲಾ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ತೆಗೆದು ತಟ್ಟೆಗೆ ಹಾಕಿ. ಈಗ ರುಚಿಕರ ಥೆಪ್ಲಾಗಳು ಸಿದ್ಧವಾಗಿವೆ. ನಿಮಗಿಷ್ಟದ ಉಪ್ಪಿನಕಾಯಿ, ಮೊಸರು ಅಥವಾ ಚಟ್ನಿಯೊಂದಿಗೆ ತಿನ್ನಿ.

    Published by:renukadariyannavar
    First published: