• Home
  • »
  • News
  • »
  • lifestyle
  • »
  • Breakfast: ಹಸಿರು ಕಡಲೆಕಾಳು ಸಲಾಡ್ ಮತ್ತು ಕಟ್ಲೆಟ್ ರೆಸಿಪಿ; ಇದು ಚಳಿಗಾಲದ ತಿಂಡಿ

Breakfast: ಹಸಿರು ಕಡಲೆಕಾಳು ಸಲಾಡ್ ಮತ್ತು ಕಟ್ಲೆಟ್ ರೆಸಿಪಿ; ಇದು ಚಳಿಗಾಲದ ತಿಂಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಸಿರು ಕಡಲೆಕಾಳು ಹಾಗೂ ಎಳೆಯ ಚಿಗುರು ಸೊಪ್ಪನ್ನು ಸಹ ಪಲ್ಯ ಮಾಡಿ ಸೇವಿಸಲಾಗುತ್ತದೆ. ಹಸಿರು ಕಡಲೆಕಾಳುಗಳು ಹುರುಳಿ ಹಿಟ್ಟು ಮತ್ತು ಇತರೆ ಕೆಲವು ಪದಾರ್ಥಗಳ ಜೊತೆಗೆ ಸೇವನೆ ಮಾಡಲಾಗುತ್ತದೆ. ಹಸಿರು ಕಡಲೆಕಾಳುಗಳು ಪ್ರೋಟೀನ್ ಸಮೃದ್ಧವಾಗಿದೆ. ಇದು ಎಲ್ಲಾ ಅಗತ್ಯ ಅಮೈನೋ ಆಮ್ಲಗಳ ಗಮನಾರ್ಹ ಪ್ರಮಾಣ ಹೊಂದಿದೆ.

ಮುಂದೆ ಓದಿ ...
  • Share this:

    ಚಳಿಗಾಲದಲ್ಲಿ (Winter) ಅತಿ ಹೆಚ್ಚು ಇಷ್ಟ ಪಟ್ಟು ಸೇವಿಸುವ ಆಹಾರಗಳಲ್ಲಿ (Food) ಹಸಿರು ಕಡಲೆಕಾಯಿ (Green Chana) ಸಹ ಒಂದು. ಹಸಿರು ಕಡಲೆಕಾಳುಗಳು ಸಾಕಷ್ಟು ಪೋಷಕಾಂಶಗಳಿಂದ (Nutrients) ಕೂಡಿವೆ. ಬೆಳಗಿನ ತಿಂಡಿಗೆ ಹಸಿರು ಕಡಲೆಕಾಳುಗಳು ಹಲವು ಖಾದ್ಯಗಳನ್ನು (Recipe) ಮಾಡಿ ಸೇವನೆ ಮಾಡಬಹುದು. ಹಸಿರು ಕಡಲೆಕಾಳುಗಳು ಚಳಿಗಾಲದಲ್ಲಿ ಮಾತ್ರ ಕೆಲ ತಿಂಗಳು ಸಿಗುತ್ತವೆ. ಕೆಲವರು ಹಸಿಯಾಗಿ ತಿನ್ನುತ್ತಾರೆ. ಇನ್ನು ಕೆಲವರು ಹುರಿದು, ಕುದಿಸಿ ತಿನ್ನುತ್ತಾರೆ. ಕೆಲವರು ರೆಸಿಪಿ ಮುಖಾಂತರ ತಿನ್ನುತ್ತಾರೆ. ಹಸಿರು ಕಡಲೆಕಾಳುಗಳು ತಿನ್ನಲು ರುಚಿಕರ. ಹಾಗೂ ತೂಕ ನಷ್ಟ, ರಕ್ತದ ಸಕ್ಕರೆ ನಿಯಂತ್ರಣ ಮತ್ತು ಹೃದಯದ ಆರೋಗ್ಯಕ್ಕೂ ಇದು ಪ್ರಯೋಜನಕಾರಿ ಆಗಿದೆ.


    ಹಸಿರು ಕಡಲೆಕಾಳುಗಳು ಪಾಕವಿಧಾನ ಮತ್ತು ಪ್ರಯೋಜನಗಳು


    ಹಸಿರು ಕಡಲೆಕಾಳು ಹಾಗೂ ಎಳೆಯ ಚಿಗುರು ಸೊಪ್ಪನ್ನು ಸಹ ಪಲ್ಯ ಮಾಡಿ ಸೇವಿಸಲಾಗುತ್ತದೆ. ಹಸಿರು ಕಡಲೆಕಾಳುಗಳು ಹುರುಳಿ ಹಿಟ್ಟು ಮತ್ತು ಇತರೆ ಕೆಲವು ಪದಾರ್ಥಗಳ ಜೊತೆಗೆ ಸೇವನೆ ಮಾಡಲಾಗುತ್ತದೆ.


    ಹಸಿರು ಕಡಲೆಕಾಳುಗಳು ಪೋಷಕಾಂಶಗಳು ಸಮೃದ್ಧವಾಗಿವೆ


    ಹಸಿರು ಕಡಲೆಕಾಳುಗಳು ಪ್ರೋಟೀನ್ ಸಮೃದ್ಧವಾಗಿದೆ. ಇದು ಎಲ್ಲಾ ಅಗತ್ಯ ಅಮೈನೋ ಆಮ್ಲಗಳ ಗಮನಾರ್ಹ ಪ್ರಮಾಣ ಹೊಂದಿದೆ. ಕಾರ್ಬೋಹೈಡ್ರೇಟ್‌, ಫೈಬರ್, ಆಲಿಗೋಸ್ಯಾಕರೈಡ್‌, ಗ್ಲೂಕೋಸ್ ಮತ್ತು ಸುಕ್ರೋಸ್‌ ಕಂಡು ಬರುತ್ತವೆ. ಲಿನೋಲಿಕ್ ಮತ್ತು ಒಲೀಕ್ ಆಮ್ಲದಂತಹ ಪ್ರಮುಖ ಅಪರ್ಯಾಪ್ತ ಆಮ್ಲಗಳು ಸಮೃದ್ಧವಾಗಿವೆ.




    ಹಸಿರು ಕಡಲೆಕಾಳುಗಳು ರೈಬೋಫ್ಲಾವಿನ್, ನಿಯಾಸಿನ್, ಥಯಾಮಿನ್, ಫೋಲೇಟ್ ಮತ್ತು ವಿಟಮಿನ್ ಎ, ಬೀಟಾ ಕ್ಯಾರೋಟಿನ್ ನಂತಹ ಪ್ರಮುಖ ಜೀವಸತ್ವ ಹೊಂದಿದೆ.


    ಹಸಿರು ಕಡಲೆಕಾಳುಗಳು ಪ್ರಯೋಜನಗಳು


    ಹಸಿರು ಕಡಲೆಕಾಳುಗಳು ಟೈಪ್ 2 ಮಧುಮೇಹ, ಜೀರ್ಣಕಾರಿ ಮತ್ತು ಕೆಲವು ಕ್ಯಾನ್ಸರ್‌ ಗಳ ವಿರುದ್ಧ ರಕ್ಷಣೆ ನೀಡುತ್ತದೆ. ಹಸಿರು ಗ್ರಾಂ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸರಾಗವಾದ ರಕ್ತದ ಹರಿವಿಗೆ ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯ ಬಲಪಡಿಸುತ್ತದೆ.


    ಹಸಿರು ಕಡಲೆಕಾಳುಗಳು ಕೊಬ್ಬು ಮತ್ತು ಸೋಡಿಯಂ ಕಡಿಮೆ ಹೊಂದಿವೆ. ಇವುಗಳಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚ. ಇದು ತೂಕ ನಿರ್ವಹಣೆಗೆ ಸಹ ಸಹಾಯ ಮಾಡುತ್ತದೆ. ಹಸಿರು ಕಡಲೆಕಾಳುಗಳು ಫೈಬರ್ ಹೊಂದಿದ್ದು, ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ.


    ಹಸಿರು ಕಡಲೆಕಾಳುಗಳು ಪಾಕ ವಿಧಾನ


    ಹಸಿರು ಕಡಲೆಕಾಳು ಸಲಾಡ್


    ಹಸಿರು ಕಡಲೆಕಾಳುಗಳನ್ನು ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಟೊಮ್ಯಾಟೊ, ಕೊತ್ತಂಬರಿ ಸೊಪ್ಪು, ಕಪ್ಪು ಉಪ್ಪಿನೊಂದಿಗೆ ಬೆರೆಸಿ ರುಚಿಕರ ಸಲಾಡ್ ತಯಾರಿಸಿ ಸೇವಿಸಿ.


    ಹಸಿರು ಕಡಲೆಕಾಳು ಕಟ್ಲೆಟ್


    ಇದಕ್ಕಾಗಿ ಹಸಿರು ಕಡಲೆಕಾಳು, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿಮೆಣಸಿನಕಾಯಿ ಒಟ್ಟಿಗೆ ರುಬ್ಬಿ. ಅದರಲ್ಲಿ ರವೆ ಮಿಶ್ರಣ ಮಾಡಿ. ಕೊತ್ತಂಬರಿ ಸೊಪ್ಪನ್ನು ಸಹ ನುಣ್ಣಗೆ ಮಿಶ್ರಣ ಮಾಡಿ. ಬಾಣಲೆಯಲ್ಲಿ 1 ಟೀ ಸ್ಪೂನ್ ಸಾಸಿವೆ ಎಣ್ಣೆ ಬಿಸಿ ಮಾಡಿ ಮತ್ತು ತಯಾರಿಸಿದ ಹಸಿರು ಕಟ್ಲೆಟ್‌ ತಲೆಕೆಳಗಾಗಿ ಬೇಯಿಸಿ. ಬಿಸಿ ಕೊತ್ತಂಬರಿ ಚಟ್ನಿ ಜೊತೆ ತಿನ್ನಿರಿ.


    ಹಸಿರು ಕಡಲೆಕಾಳು ಭುಜಿಯಾ


    ಬಾಣಲೆಗೆ ಈರುಳ್ಳಿ, ಟೊಮೆಟೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಫ್ರೈ ಮಾಡಿ. ಅದಕ್ಕೆ ಹಸಿಬೇಳೆ ಹಿಟ್ಟು ಹಾಕಿ ಹುರಿಯಿರಿ. ನಂತರ ಪ್ಯಾನ್ ಅನ್ನು ಮುಚ್ಚಿ ಮತ್ತು ಈ ಮಿಶ್ರಣವನ್ನು 5 ನಿಮಿಷ ಬೇಯಿಸಿ.


    ಇದನ್ನೂ ಓದಿ: ದಿನಕ್ಕೊಂದು ಕಿವಿ ಹಣ್ಣು ತಿಂದ್ರೆ ಸಾಕು ಈ ಸಮಸ್ಯೆಗಳು ಬರಲ್ಲ


    ಹಸಿರು ಕಡಲೆಕಾಳು ಪಕೋಡ


    ಎರಡು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಬೇಳೆ ಹಿಟ್ಟು, ಹಸಿರು ಕಡಲೆಕಾಳು, ಹಸಿಮೆಣಸಿನಕಾಯಿ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಬೇಳೆ ಹಿಟ್ಟು ಮಿಶ್ರಣ ಮಾಡಿ. ಮತ್ತು ಸಣ್ಣ ಪಕೋಡ ಫ್ರೈ ಮಾಡಿ ಸೇವಿಸಿ.

    Published by:renukadariyannavar
    First published: