ತೂಕ ಇಳಿಕೆ (Weight Loss) ಮತ್ತು ಜಿಮ್ ಹೋಗುವವರು, ಫಿಟ್ನೆಸ್ (Fitness) ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಯಾವಾಗಲೂ ಪ್ರೊಟೀನ್ (Protein) ಭರಿತ ಆಹಾರ (Food) ಸೇವಿಸುತ್ತಾರೆ. ಜೊತೆಗೆ ಹೆಚ್ಚಾಗಿ ಬೆಳಗಿನ ತಿಂಡಿಗೆ (Morning Breakfast) ಪ್ರೊಟೀನ್ ಶೇಖ್ ಹಾಗೂ ಪ್ರೊಟೀನ್ ಭರಿತ ಸಮೃದ್ಧ ಆಹಾರ ಸೇವಿಸುತ್ತಾರೆ. ತೂಕ ಇಳಿಸುವವರು, ಜಿಮ್ ಹೋಗುವವರಿಗೆ ಅಷ್ಟೇ ಅಲ್ಲದೇ, ಪ್ರೊಟೀನ್ ಆಹಾರ ಎಲ್ಲಾ ಜನರಿಗೆ ಅವಶ್ಯಕವಾಗಿದೆ. ಬೆಳಗಿನ ತಿಂಡಿಗೆ ಪ್ರೊಟೀನ್ ಮತ್ತು ಫೈಬರ್ ಆಹಾರ ಸೇವನೆ ಹೆಲ್ದೀ ಆಗಿರಿಸುತ್ತದೆ. ದೇಹಕ್ಕೆ ಬೇಕಾದ ಶಕ್ತಿ ನೀಡುತ್ತದೆ. ಪ್ರೊಟೀನ್ ಸದೃಢ ಆರೋಗ್ಯ ಹೊಂದಲು ಸಹಾಯ ಮಾಡುತ್ತದೆ.
ಬೆಳಗಿನ ತಿಂಡಿಗೆ ಪ್ರೊಟೀನ್ ಸಮೃದ್ಧ ಸೋಯಾ ಚಂಕ್ಸ್ ದೋಸೆ ರೆಸಿಪಿ
ಆರೋಗ್ಯಕರ ಪ್ರೋಟೀನ್ ಸಮೃದ್ಧ ಆಹಾರ ಸೇವನೆಯು ದಿನವಿಡೀ ಶಕ್ತಿ ನೀಡುತ್ತದೆ. ಹಾಗೂ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ. ಇಂದು ನಾವು ಬೆಳಗಿನ ತಿಂಡಿಗೆ ಪ್ರೊಟೀನ್ ಸಮೃದ್ಧ ಸೋಯಾ ಚಂಕ್ಸ್ ದೋಸೆ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ.
ಮೂಲ ತರಕಾರಿ ಹಾಗೂ ಅಕ್ಕಿ ಮತ್ತು ಬೇಳೆಕಾಳುಗಳಿಂದ ಮಾಡಿದ ರೆಸಿಪಿಗಿಂತ ಇದು ಭಿನ್ನವಾಗಿದೆ. ಸೋಯಾ ಚಂಕ್ಸ್ ದೋಸೆ ರೆಸಿಪಿ ಪ್ರೋಟೀನ್ ಮತ್ತು ಪೋಷಕಾಂಶಗಳಿಂದ ಕೂಡಿದೆ. ಇದು ವಿಶೇಷವಾಗಿ ಮಕ್ಕಳಿಗೆ ಹಾಗೂ ತೂಕ ಕಡಿಮೆ ಮಾಡುವವರಿಗೆ ಸೂಕ್ತವಾದ ಬೆಳಗಿನ ಉಪಹಾರ ಪಾಕವಿಧಾನ ಇದಾಗಿದೆ.
ಸೋಯಾ ಚಂಕ್ಸ್ ದೋಸೆ ರೆಸಿಪಿ ಬೆಳಗಿನ ಉಪಹಾರವು ದಿನದ ದಿನಚರಿಗೆ ಉತ್ತಮವಾಗಿದೆ. ಎಲ್ಲಾ ವಯೋಮಾನದವರೂ ಇದನ್ನು ತಿನ್ನಬಹುದು. ಆರೋಗ್ಯಕರ ಮತ್ತು ಟೇಸ್ಟಿ ಸೋಯಾ ಚಂಕ್ಸ್ ದೋಸೆ ರೆಸಿಪಿ ಸಖತ್ತಾಗಿರುತ್ತದೆ. ಆರೋಗ್ಯಕರ ದೋಸೆ ತಿನ್ನಲು ಖುಷಿಯಾಗುತ್ತದೆ.
ಹೆಚ್ಚು ಜನರು ಆರೋಗ್ಯಕರ ಮತ್ತು ಪೌಷ್ಟಿಕಾಂಶ-ಭರಿತ ಖಾದ್ಯ ಸೇವನೆಗೆ ಒಲವು ತೋರುತ್ತಿದ್ದಾರೆ. ಅವರಿಗೆಲ್ಲಾ ಸೋಯಾ ಚಂಕ್ಸ್ ದೋಸೆ ರೆಸಿಪಿ ಸೂಕ್ತವಾಗಿದೆ. ಸೋಯಾ ತುಂಡು, ಅಕ್ಕಿ ಹಿಟ್ಟು ಮತ್ತು ಗೋಧಿ ಹಿಟ್ಟು ಸೇರಿಸಲಾಗುತ್ತದೆ. ಇದು ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಸಮೃದ್ಧವಾಗಿದೆ.
ಸೋಯಾ ಚಂಕ್ಸ್ ದೋಸೆ ರೆಸಿಪಿ ತಯಾರಿಸಲು ಬೇಕಾಗುವ ಪದಾರ್ಥಗಳು
ಸೋಯಾ ಮಸಾಲಾ ಪೇಸ್ಟ್ ತಯಾರಿಸಲು ಒಂದು ಕಪ್ ಸೋಯಾ ಚಂಕ್ಸ್, ಒಂದು ಟೊಮೆಟೊ, ಎರಡು ಒಣಗಿದ ಕೆಂಪು ಮೆಣಸಿನಕಾಯಿ, ಒಂದು ಇಂಚಿನ ಶುಂಠಿ, ಎರಡು ಕಪ್ ನೀರು, ಒಂದು ಟೀಸ್ಪೂನ್ ಉಪ್ಪು ಬೇಕು.
ಹಿಟ್ಟಿಗೆ ಒಂದು ಕಪ್ ಗೋಧಿ ಹಿಟ್ಟು, ಮುಕ್ಕಾಲು ಕಪ್ ಅಕ್ಕಿ ಹಿಟ್ಟು, ಅರ್ಧ ಟೀಸ್ಪೂನ್ ಉಪ್ಪು, ಒಂದು ಕಪ್ ನೀರು, ಸಣ್ಣದಾಗಿ ಹೆಚ್ಚಿದ ಅರ್ಧ ಈರುಳ್ಳಿ, ಒಂದು ತುರಿದ ಕ್ಯಾರೆಟ್, ಎರಡು ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಬೇಕು.
ಸೋಯಾ ಚಂಕ್ಸ್ ದೋಸೆ ರೆಸಿಪಿ ತಯಾರಿಸುವ ವಿಧಾನ
ಮೊದಲು ಬಾಣಲೆಗೆ ಒಂದು ಕಪ್ ಸೋಯಾ ಚಂಕ್ಸ್, ಒಂದು ಟೊಮೆಟೊ, ಎರಡು ಒಣಗಿದ ಕೆಂಪು ಮೆಣಸಿನಕಾಯಿ, ಒಂದು ಇಂಚಿನ ಶುಂಠಿ, ಎರಡು ಕಪ್ ನೀರು, ಒಂದು ಟೀಸ್ಪೂನ್ ಉಪ್ಪುನ್ನು ತೆಗೆದುಕೊಳ್ಳಿ. ಹತ್ತು ನಿಮಿಷ ಪ್ಲೇಟ್ ಮುಚ್ಚಿ ಕುದಿಸಿ.
ನಂತರ ಸಂಪೂರ್ಣವಾಗಿ ತಣ್ಣಗಾಗಿಸಿ. ಟೊಮೆಟೊ ಸಿಪ್ಪೆ ತೆಗೆಯಿರಿ. ನಂತರ ಮಿಕ್ಸರ್ ಗೆ ಹಾಕಿ ನಯವಾದ ಪೇಸ್ಟ್ ಬರುವಂತೆ ರುಬ್ಬಿರಿ. ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿರಿ. ನಂತರ ಒಂದು ಕಪ್ ಗೋಧಿ ಹಿಟ್ಟು, ಮುಕ್ಕಾಲು ಕಪ್ ಅಕ್ಕಿ ಹಿಟ್ಟು, ಅರ್ಧ ಟೀಸ್ಪೂನ್ ಉಪ್ಪು ಸೇರಿಸಿ.
ಅಗತ್ಯಕ್ಕೆ ತಕ್ಕಷ್ಟು ನೀರನ್ನು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ. ರೂಪಿಸಲು ಚೆನ್ನಾಗಿ ಮಿಶ್ರಣ ಮಾಡಿ. ಸಣ್ಣದಾಗಿ ಹೆಚ್ಚಿದ ಅರ್ಧ ಈರುಳ್ಳಿ, ಒಂದು ತುರಿದ ಕ್ಯಾರೆಟ್, ಎರಡು ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಇದನ್ನೂ ಓದಿ: ದೇಹದ ಆರೋಗ್ಯ ಕಾಪಾಡುವ ಕಿಡ್ನಿಗಳ ಆರೋಗ್ಯಕ್ಕೆ ಏನು ಮಾಡ್ಬೇಕು? ಈ ಪದಾರ್ಥಗಳ ಸೇವನೆ ಮಾಡಿ ಸಾಕು!
ನಂತರ ಪ್ಯಾನ್ ಬಿಸಿ ಮಾಡಿ. ಪ್ಯಾನ್ ಗೆ ಎಣ್ಣೆ ಗ್ರೀಸ್ ಮಾಡಿ. ಹಿಟ್ಟನ್ನು ಸುರಿದು ವೃತ್ತಾಕಾರವಾಗಿ ಮಾಡಿ. ನಂತರ ಕವರ್ ಮಾಡಿ, ಎರಡೂ ಬದಿಯನ್ನು ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ನಿಮ್ಮಿಷ್ಟದ ಚಟ್ನಿ ಜೊತೆ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ