Morning Breakfast: ಬೆಳಗಿನ ತಿಂಡಿಗೆ ರುಚಿಯಾದ ಬ್ರೆಡ್ ಪುಲಾವ್ ಮಾಡಿ ಸವಿಯಿರಿ!

ಬ್ರೆಡ್ ಪುಲಾವ್ ಜನಪ್ರಿಯ ಉಪಹಾರ ಮತ್ತು ಪಾಕ ವಿಧಾನವಾಗಿದೆ. ಇದನ್ನು ಸಾಮಾನ್ಯ ಎಲ್ಲಾ ಮಸಾಲೆ ಮತ್ತು ತರಕಾರಿಗಳಿಂದ ಮಾಡಬಹುದು. ಬ್ರೆಡ್ ಪುಲಾವ್ ಮತ್ತು ಉತ್ತಮ ರುಚಿ ಹೊಂದಿರುತ್ತದೆ. ನೀವು ಬ್ರೆಡ್ ಪುಲಾವ್ ರೆಸಿಪಿ ಟ್ರೈ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಳಗಿನ ತಿಂಡಿಗೆ (Morning Breakfast) ನೀವು ಎಲ್ಲಾ ರೀತಿಯ ಪದಾರ್ಥ (Ingredients) ಸೇವನೆ ಮಾಡಬಹುದು. ಪುಲಾವ್ (Pulao), ಲೆಮನ್ ರೈಸ್, ಪಾಲಕ್ ರೈಸ್ ಹೀಗೆ ವಿವಿಧ ರೀತಿಯ ಅನ್ನದ ರೆಸಿಪಿ (Rice Recipe) ಮಾಡಿ ಸೇವನೆ ಮಾಡಬಹುದು. ನಾವು ಇಂದು ಬೆಳಗಿನ ತಿಂಡಿಗೆ ಬ್ರೆಡ್ ಪುಲಾವ್ ಮಾಡಿ ಸವಿಯುವ ಬಗ್ಗೆ ಹೇಳಲಿದ್ದೇವೆ. ದಿನವೂ ಒಂದೇ ರೀತಿಯ ತಿಂಡಿ ಸೇವನೆ ಬೋರ್ ಆಗುತ್ತದೆ. ಹಾಗಾದಾಗ ನೀವು ಬ್ರೆಡ್ ಪುಲಾವ್ ರೆಸಿಪಿ ಟ್ರೈ ಮಾಡಬಹುದು. ಆರೋಗ್ಯಕರ ಮತ್ತು ತರಕಾರಿಗಳಿಂದ ಮಾಡಿದ ಪುಲಾವ್ ಆರೋಗ್ಯಕ್ಕೂ ಉತ್ತಮ. ಬ್ರೆಡ್ ಪುಲಾವ್ ಜನಪ್ರಿಯ ಮತ್ತು ಟೇಸ್ಟಿ ಪಾಕ ವಿಧಾನ ಆಗಿದೆ.

    ಬ್ರೆಡ್ ಪುಲಾವ್ ಜನಪ್ರಿಯ ಉಪಹಾರ

    ಕರ್ನಾಟಕದಲ್ಲಿ ಬ್ರೆಡ್ ಪುಲಾವ್ ಜನಪ್ರಿಯ ಉಪಹಾರ ಮತ್ತು ಪಾಕ ವಿಧಾನವಾಗಿದೆ. ಇದನ್ನು ಸಾಮಾನ್ಯ ಎಲ್ಲಾ ಮಸಾಲೆ, ತರಕಾರಿಗಳಿಂದ ಮಾಡಬಹುದು. ಬ್ರೆಡ್ ಪುಲಾವ್ ಮತ್ತು ಉತ್ತಮ ರುಚಿ ಹೊಂದಿರುತ್ತದೆ.

    ಬೆಳಗಿನ ತಿಂಡಿಗೆ ಬ್ರೆಡ್ ಪುಲಾವ್ ತಯಾರಿಸಲು ಬೇಕಾಗುವ ಸಾಮಗ್ರಿಗಳು

    ಮೂರು ಸ್ಲೈಸ್ ಬ್ರೆಡ್, ಎರಡು ಚಮಚ ಎಣ್ಣೆ, ಒಂದು ಟೀಸ್ಪೂನ್ ತುಪ್ಪ, ಒಂದು ಬೇ ಎಲೆ, ಒಂದು ಇಂಚಿನ ದಾಲ್ಚಿನ್ನಿ, ಮೂರು ಏಲಕ್ಕಿ, ಆರು ಲವಂಗ, ಒಂದು ಟೀಸ್ಪೂನ್ ಜೀರಿಗೆ, ಅರ್ಧ ಟೀಸ್ಪೂನ್ ಸೋಂಪು, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದು ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್,

    ಇದನ್ನೂ ಓದಿ: ನಿಂಬೆ ಅಷ್ಟೇ ಅಲ್ಲ ಅದರ ಎಲೆಗಳೂ ಸಹ ಹಲವು ಆರೋಗ್ಯ ಪ್ರಯೋಜನ ನೀಡುತ್ತವೆ! ಹೇಗೆ ಎಂದು ನೋಡಿ

    ಒಂದು ತುರಿದ ಕ್ಯಾರೆಟ್, ಒಂದು ಸಣ್ಣಗೆ ಕತ್ತರಿಸಿದ ಆಲೂಗಡ್ಡೆ, ಒಂದು ಚಿಕ್ಕ ಬಟ್ಟಲು ಬಟಾಣಿ, ಅರ್ಧ ಟೀಸ್ಪೂನ್ ಅರಿಶಿನ, ಒಂದು ಟೀಸ್ಪೂನ್ ಮೆಣಸಿನ ಪುಡಿ, ಅರ್ಧ ಟೀಸ್ಪೂನ್ ಜೀರಿಗೆ ಪುಡಿ, ಮುಕ್ಕಾಲು ಟೀಸ್ಪೂನ್ ಕೊತ್ತಂಬರಿ ಪುಡಿ, ಅರ್ಧ ಟೀಸ್ಪೂನ್ ಗರಂ ಮಸಾಲಾ, ಒಂದು ಟೀಸ್ಪೂನ್ ಉಪ್ಪು,

    ಅರ್ಧ ಕಪ್ ಮೊಸರು, ಮೂರು ಚಮಚ ಸಣ್ಣಗೆ ಹೆಚ್ಚಿದ ಪುದೀನಾ, ಒಂದೂವರೆ ಕಪ್ ನೆನೆಸಿದ ಬಾಸ್ಮತಿ ಅಕ್ಕಿ, ಮೂರು ಕಪ್ ಬಿಸಿ ನೀರು, ಕೊತ್ತಂಬರಿ ಸೊಪ್ಪು, ಎರಡು ಟೀಸ್ಪೂನ್ ಹುರಿದ ಗೋಡಂಬಿ.

    ಬೆಳಗಿನ ತಿಂಡಿಗೆ ಬ್ರೆಡ್ ಪುಲಾವ್ ತಯಾರಿಸುವ ವಿಧಾನ

    ಮೊದಲು ಬ್ರೆಡ್‌ನ ಬದಿಗಳನ್ನು ಕತ್ತರಿಸಿ, ಸಮ ಗಾತ್ರದಲ್ಲಿ ಕಟ್ ಮಾಡಿ, ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಮಧ್ಯಮ ಉರಿಯಲ್ಲಿ ಬೇಯಿಸಿ. ಬ್ರೆಡ್ ಚೂರುಗಳು ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಹುರಿದ ಬ್ರೆಡ್ ಅನ್ನು ಒಣಗಿಸಿ ಮತ್ತು ಅದನ್ನು ಪಕ್ಕಕ್ಕೆ ಇರಿಸಿ.

    ದೊಡ್ಡ ಕಡಾಯಿಯಲ್ಲಿ ಎರಡು ಟೀಸ್ಪೂನ್ ಎಣ್ಣೆ, ಒಂದು ಟೀಸ್ಪೂನ್ ತುಪ್ಪ ಬಿಸಿ ಮಾಡಿ. ಒಂದು ಬೇ ಎಲೆ, ಒಂದು ಇಂಚಿನ ದಾಲ್ಚಿನ್ನಿ, ಮೂರು ಏಲಕ್ಕಿ, ಆರು ಲವಂಗ, ಒಂದು ಟೀಸ್ಪೂನ್ ಜೀರಿಗೆ, ಮತ್ತು ಅರ್ಧ ಟೀಸ್ಪೂನ್ ಸೋಂಪು ಸೇರಿಸಿ. ಮಸಾಲೆಗಳು ಆರೊಮ್ಯಾಟಿಕ್ ಆಗುವವರೆಗೆ ಹುರಿಯಿರಿ.

    ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದು ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸೇರಿಸಿ ಮತ್ತು ಚೆನ್ನಾಗಿ ಹುರಿಯಿರಿ. ನಂತರ ಒಂದು ತುರಿದ ಕ್ಯಾರೆಟ್, ಒಂದು ಸಣ್ಣಗೆ ಕತ್ತರಿಸಿದ ಆಲೂಗಡ್ಡೆ, ಒಂದು ಚಿಕ್ಕ ಬಟ್ಟಲು ಬಟಾಣಿ, ಅರ್ಧ ಟೀಸ್ಪೂನ್ ಅರಿಶಿನ, ಒಂದು ಟೀಸ್ಪೂನ್ ಮೆಣಸಿನ ಪುಡಿ, ಅರ್ಧ ಟೀಸ್ಪೂನ್ ಜೀರಿಗೆ ಪುಡಿ, ಮುಕ್ಕಾಲು ಟೀಸ್ಪೂನ್ ಕೊತ್ತಂಬರಿ ಪುಡಿ, ಅರ್ಧ ಟೀಸ್ಪೂನ್ ಗರಂ ಮಸಾಲಾ ಸೇರಿಸಿ.

    ತರಕಾರಿಗಳು ಕುರುಕುಲಾಗುವವರೆಗೆ ಹುರಿಯಿರಿ. ಅರ್ಧ ಕಪ್ ಮೊಸರು, ಮೂರು ಚಮಚ ಸಣ್ಣಗೆ ಹೆಚ್ಚಿದ ಪುದೀನಾ, ಒಂದೂವರೆ ಕಪ್ ನೆನೆಸಿದ ಬಾಸ್ಮತಿ ಅಕ್ಕಿ, ಮೂರು ಕಪ್ ಬಿಸಿ ನೀರು, ಕೊತ್ತಂಬರಿ ಸೊಪ್ಪು ಸೇರಿಸಿ ಆರೊಮ್ಯಾಟಿಕ್ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.

    ಇದನ್ನೂ ಓದಿ: ಗರ್ಭಧಾರಣೆಯ ನಂತರ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?

    ನಂತರ ಒಂದೂವರೆ ಕಪ್ ನೆನೆಸಿದ ಬಾಸ್ಮತಿ ಅಕ್ಕಿ ಸೇರಿಸಿ. ಮತ್ತು ಹುರಿಯಿರಿ. ಮೂರು ಕಪ್ ಬಿಸಿ ನೀರಿನಲ್ಲಿ ಸೇರಿಸಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ. ನೀರು ಕುದಿಯಲಿ ಅದಕ್ಕೆ ಈಗ ಹುರಿದ ಬ್ರೆಡ್, ಹುರಿದ ಗೋಡಂಬಿ, ಕೊತ್ತಂಬರಿ ಸೇರಿಸಿ. ಮಿಶ್ರಣ ಮಾಡಿ. ನೀರು ಎಲ್ಲಾ ಹೀರಿಕೊಂಡ ನಂತರ ರೈತಾ ಜೊತೆ ಬ್ರೆಡ್ ಪುಲಾವ್ ಸೇವಿಸಿ.
    Published by:renukadariyannavar
    First published: