ಚಳಿಗಾಲದ (Winter) ಈ ದಿನಗಳಲ್ಲಿ ನೀವು ಎಲ್ಲೆಲ್ಲೂ ಕ್ಯಾರೆಟ್ (Carrot) ನೋಡಬಹುದು. ಮಾರುಕಟ್ಟೆಯಲ್ಲಿ ಗುಲಾಬಿ, ಕೇಸರಿ ಬಣ್ಣದ ಕ್ಯಾರೆಟ್ ಕೈ ಬೀಸಿ ಕರೆಯುತ್ತದೆ. ಅದಾಗ್ಯೂ ಕ್ಯಾರೆಟ್ ಸೇವನೆ ಸಾಕಷ್ಟು ಆರೋಗ್ಯ (Health) ವರ್ಧಕ ತರಕಾರಿ (Vegetable) ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹಾಗಿದ್ರೆ ಯಾಕೆ ನಮ್ಮ ದಿನವನ್ನು ಕ್ಯಾರೆಟ್ ಸ್ವೀಟ್ ನಿಂದ ಆರಂಭ ಮಾಡ್ಬಾರ್ದು ? ಹೌದು.. ಎಷ್ಟೋ ಜನರಿಗೆ ಬೆಳಗ್ಗೆ ಸಿಹಿ ತಿನ್ನುವ ಅಭ್ಯಾಸ ಇದೆ. ಅವರು ಬೆಳಗಿನ ತಿಂಡಿಗೆ (Morning Breakfast) ರವೆಯ ಶಿರಾ ತಿನ್ನುತ್ತಾರೆ. ಅಂತವರು ಕ್ಯಾರೆಟ್ ನಿಂದ ಮಾಡಿದ ಹಲ್ವಾ ತಿನ್ನುವ ಮೂಲಕ ದಿನದ ಆರಂಭ ಮಾಡಬಹುದು. ಇದು ಅವರಿಗೆ ಹೆಲ್ದೀ ಮತ್ತು ರುಚಿ ಎರಡನ್ನೂ ನೀಡುತ್ತದೆ.
ಬೆಳಗಿನ ತಿಂಡಿಗೆ ಕ್ಯಾರೆಟ್ ಹಲ್ವಾ ರೆಸಿಪಿ
ಕ್ಯಾರೆಟ್ ಫುಡಿಂಗ್ ಅನ್ನು ತುಂಬಾ ಜನ ಇಷ್ಟ ಪಡ್ತಾರೆ. ಕ್ಯಾರೆಟ್ ನ್ನು ಹಲ್ವಾ ಮಾಡಿ ಸೇವಿಸಲು ತುಂಬಾ ಜನ ಬಯಸ್ತಾರೆ. ಜೊತೆಗೆ ದೊಡ್ಡವರು, ಮಕ್ಕಳು ಎಲ್ಲರೂ ಕ್ಯಾರೆಟ್ ಹಲ್ವಾವನ್ನು ಪ್ರೀತಿಯಿಂದ ಇಷ್ಟ ಪಟ್ಟು ತಿಂತಾರೆ. ಹಾಗಾದ್ರೆ ನಾವು ಇವತ್ತು ಬೆಳಗಿನ ತಿಂಡಿಗೆ ಕ್ಯಾರೆಟ್ ಹಲ್ವಾ ಮಾಡೋದು ಹೇಗೆ ಅಂತಾ ನೋಡೋಣ.
ಕ್ಯಾರೆಟ್ ಹಲ್ವಾ ತಯಾರಿಸಲು, ಸಕ್ಕರೆ ಬದಲು ಬೆಲ್ಲ ಬಳಸುವುದು ಆರೋಗ್ಯಕರ ಆಯ್ಕೆ ಆಗಿದೆ. ಸೀಮಿತ ಪ್ರಮಾಣದ ಬೆಲ್ಲ ಬಳಕೆ ಹಲ್ವಾವನ್ನು ಆರೋಗ್ಯಕರವಾಗಿಸುತ್ತದೆ. ಆರೋಗ್ಯಕ್ಕೆ ಹಾನಿಯಾಗದಂತೆ ಹಲ್ವಾದಲ್ಲಿರುವ ಕ್ಯಾರೆಟ್ ಮತ್ತು ಇತರೆ ಪ್ರಮುಖ ಪೋಷಕಾಂಶಗಳನ್ನು ಸವಿಯಬಹುದು.
ಕ್ಯಾರೆಟ್ ರುಚಿ ಮತ್ತು ಪೌಷ್ಟಿಕಾಂಶಭರಿತ ಫುಡ್ ಆಗಿದೆ
ಕ್ಯಾರೆಟ್ ಫೈಬರ್, ವಿಟಮಿನ್ ಕೆ 1, ಪೊಟ್ಯಾಸಿಯಮ್, ಬೀಟಾ-ಕ್ಯಾರೋಟಿನ್ ಮತ್ತು ಉತ್ಕರ್ಷಣ ನಿರೋಧಕಗಳಿವೆ. ಇದು ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ಇ, ರಂಜಕ, ಫೋಲೇಟ್ ಮತ್ತು ವಿಟಮಿನ್ ಎ ಹೊಂದಿದೆ.
ಈ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಅತ್ಯಗತ್ಯ. ಶೀತ ಋತುವಿನಲ್ಲಿ ಕ್ಯಾರೆಟ್ ಸೇವನೆಯು ವಿವಿಧ ರೀತಿಯ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಕ್ಯಾರೆಟ್ ಹಲ್ವಾ ರೆಸಿಪಿಗೆ ಬೇಕಾಗುವ ಪದಾರ್ಥಗಳು
ನುಣ್ಣಗೆ ತುರಿದ ಕ್ಯಾರೆಟ್, ತುಪ್ಪ, ಹಾಲು, ಖೋಯಾ, ಬೆಲ್ಲ, ಏಲಕ್ಕಿ ಪುಡಿ, ಸಣ್ಣದಾಗಿ ಕತ್ತರಿಸಿದ ಬಾದಾಮಿ, ಗೋಡಂಬಿ, ಪಿಸ್ತಾ ಒಣ ಹಣ್ಣುಗಳು ಬೇಕು.
ಕ್ಯಾರೆಟ್ ಹಲ್ವಾ ರೆಸಿಪಿ ತಯಾರಿಸುವುದು ಹೇಗೆ?
ಮೊದಲು ಪ್ಯಾನ್ ನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ನಂತರ ಅದಕ್ಕೆ ತುಪ್ಪ ಸೇರಿಸಿ. ತುರಿದ ಕ್ಯಾರೆಟ್ ಸೇರಿಸಿ, 5 ನಿಮಿಷ ಫ್ರೈ ಮಾಡಿ. ನಂತರ ಹಾಲು ಸೇರಿಸಿ 20 ನಿಮಿಷ ಬೆರೆಸಿ. ನಂತರ ಅದಕ್ಕೆ ಏಲಕ್ಕಿ ಪುಡಿ ಮತ್ತು ಬೆಲ್ಲ ಸೇರಿಸಿ 10 ನಿಮಿಷ ಬೇಯಿಸಿ.
ನಂತರ ಇದಕ್ಕೆ ಖೋಯಾ ಮತ್ತು ಡ್ರೈ ಫ್ರೂಟ್ಸ್ ಅನ್ನು ಹಾಕಿ ಬೇಯಿಸಿ. ಈಗ ನಿಮ್ಮ ಕ್ಯಾರೆಟ್ ಹಲ್ವಾ ರೆಡಿ. ಒಣ ಹಣ್ಣುಗಳಿಂದ ಅಲಂಕರಿಸಿ, ಬಿಸಿಯಾಗಿ ಸೇವಿಸಿ.
ಕ್ಯಾರೆಟ್ ಹಲ್ವಾ ಆರೋಗ್ಯಕರ ಹೇಗೆ?
ಕ್ಯಾರೆಟ್ ನಲ್ಲಿ ಅನೇಕ ಅಗತ್ಯ ಪೋಷಕಾಂಶಗಳಿವೆ. ಇದು ಚರ್ಮದ ಆರೋಗ್ಯ ಕಾಪಾಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ. ಕಚ್ಚಾ ಸಲಾಡ್ ಅಥವಾ ಜ್ಯೂಸ್ ರೂಪದಲ್ಲಿಯೂ ಸೇವಿಸಬಹುದು.
ಇದನ್ನೂ ಓದಿ: ಮದುವೆಯಲ್ಲಿ ಮದುಮಗಳು ಚಂದ್ರನಂತೆ ಹೊಳೆಯಬೇಕೇ? ನಿಮಗೆ ಗೊತ್ತಿರಲಿ ಈ ರಹಸ್ಯ!
ಹಾಲು, ಡ್ರೈಫ್ರೂಟ್ಸ್, ಖೋಯಾ ಪೌಷ್ಟಿಕಾಂಶದ ಗುಣ ಹೊಂದಿವೆ. ಸಾಕಷ್ಟು ಪ್ರಮಾಣದ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಹೊಂದಿವೆ. ಮೂಳೆ ಸಾಂದ್ರತೆ ಸುಧಾರಿಸುತ್ತದೆ. ಮತ್ತು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆ ತಡೆಯುತ್ತದೆ.
ತುಪ್ಪ ಮೂಳೆಗಳಿಗೆ ಪ್ರಯೋಜನಕಾರಿ. ಚರ್ಮದ ಆರೋಗ್ಯ ಕಾಪಾಡುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ