ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಸಮಸ್ಯೆ (Heart Attack Problem) ಹೆಚ್ಚುತ್ತಾ ಇದೆ. ಪ್ರಸ್ತುತ ಹೃದಯಾಘಾತವು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಾಡಾಗಿದೆ. ಯುವಕರು (Youngster), ಹಿರಿಯರು, ವಯಸ್ಕರರು, ಮಕ್ಕಳು (Children’s) ಹೀಗೆ ಎಲ್ಲಾ ವರ್ಗದವರೂ ಸಹ ಹೃದಯಾಘಾತ ಸಮಸ್ಯೆ ಎದುರಿಸುತ್ತಿದ್ದಾರೆ. ನೃತ್ಯ ಮಾಡುವಾಗ ಅಥವಾ ತಿರುಗಾಡುವಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗುವುದು, ಕೆಲವು ನಿಮಿಷದಲ್ಲಿ ಸಾಯುವುದು (Death) ನಿಜಕ್ಕೂ ಎದೆ ಝಲ್ ಅನ್ನಿಸುತ್ತದೆ. ಇನ್ನು ಕೆಲವರು ಒಂದಕ್ಕಿಂತ ಹೆಚ್ಚು ಬಾರಿ ಹೃದಯಾಘಾತ ಸಮಸ್ಯೆ ಎದುರಿಸಬೇಕಾಗುತ್ತದೆ. ಎರಡು ಬಾರಿ ಹೃದಯಾಘಾತಕ್ಕಿಂತ ಮೂರನೇ ಬಾರಿ ಆಗುವ ಹೃದಯಾಘಾತವು ಮಾರಣಾಂತಿಕವಾಗಿರುತ್ತದೆ (Deadly) ಎಂದು ಹೇಳಲಾಗುತ್ತದೆ.
ವಿಶ್ವದಲ್ಲಿ ಹೆಚ್ಚು ಸಾವಿಗೆ ಕಾರಣವಾಗಿದೆ ಹೃದಯಾಘಾತ
ಹೃದಯಾಘಾತ ಸಮಸ್ಯೆ ಅತೀಯಾಗಿ ಗಂಭೀರ ಪ್ರಮಾಣದಲ್ಲಿರುತ್ತದೆ. ಇದು ಸಾಕಷ್ಟು ಸಮಸ್ಯೆ ತಂದೊಡ್ಡುತ್ತದೆ. ಹೃದಯಾಘಾತ ಯಾವ ಸಮಯದಲ್ಲಿ ಬೇಕಾದ್ರೂ, ಯಾರಿಗೆ ಬೇಕಾದ್ರೂ ಉಂಟಾಗಬಹುದು. ಇದು ಜೀವಕ್ಕೆ ಕುತ್ತು ತಂದೊಡ್ಡುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ಈ ಹೃದಯಾಘಾತ ಸಮಸ್ಯೆಯು ವಿಶ್ವಾದ್ಯಂತ ಸಾವುಗಳಿಗೆ ದೊಡ್ಡ ಕಾರಣ ಎಂದು ಹೇಳಲಾಗಿದೆ. ಈ ಹೃದಯಾಘಾತ ಸಮಸ್ಯೆಯಿಂದ ಪ್ರತಿ ವರ್ಷ ಸುಮಾರು 1 ಕೋಟಿ 80 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಒಂದು ವರದಿಯ ಪ್ರಕಾರ, ಹೃದಯಾಘಾತವು ದೌರ್ಬಲ್ಯ, ರಕ್ತದ ಹರಿವಿಗೆ ತಡೆಯುಂಟಾಗುವುದು ಹಾಗೂ ರಕ್ತನಾಳಗಳಲ್ಲಿ ಕಳಪೆ ರಕ್ತದ ಹರಿವು ಸಮಸ್ಯೆಯಿಂದ ಉಂಟಾಗುತ್ತದೆ. ಇದಕ್ಕೆ ಕಾರಣ ನಮ್ಮ ಕೆಲವು ಕೆಟ್ಟ ಅಭ್ಯಾಸಗಳು. ಹಾಗಾಗಿ ಇಂತಹ ಕೆಟ್ಟ ಅಭ್ಯಾಸಗಳನ್ನು ಬೇಗನೇ ಬದಲಾಯಿಸಿಕೊಳ್ಳಿ. ನಿಮ್ಮ ಆರೋಗ್ಯ ಕಾಪಾಡಿ.
ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರ ಸೇವನೆ ಇಂದೇ ತಪ್ಪಿಸಿ
ಕೆಟ್ಟ ಕೊಲೆಸ್ಟ್ರಾಲ್ ಎಂಬುದು ಮೇಣದಂಥಹ ಒಂದು ಜಿಗುಟಾದ ವಸ್ತುವಾಗಿದೆ. ಇದು ಹೃದಯಕ್ಕೆ ಅಪಾಯಕಾರಿ. ಯಾಕಂದ್ರೆ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ. ನಂತರ ರಕ್ತದ ಹರಿವನ್ನು ನಿಲ್ಲಿಸುತ್ತದೆ.
ಹುರಿದ ಆಹಾರ, ಕೆಂಪು ಮಾಂಸ, ಡೈರಿ ಉತ್ಪನ್ನಗಳು, ಜಂಕ್ ಫುಡ್ ಇತ್ಯಾದಿ ಪದಾರ್ಥಗಳಲ್ಲಿ ಕೊಳಕು ಕೊಬ್ಬು ತುಂಬಿರುತ್ತದೆ. ಆಗ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.
ಮಧುಮೇಹ ಕಾಯಿಲೆ ಹೆಚ್ಚಿಸುವ ಪದಾರ್ಥಗಳ ಸೇವನೆ ಮತ್ತು ಕೆಟ್ಟ ಜೀವನಶೈಲಿ ಸುಧಾರಿಸಿ
ಮಧುಮೇಹದಿಂದ ಕಿಡ್ನಿ ಹಾಳಾಗುತ್ತದೆ. ಹಾಗಾಗಿ ಮಧುಮೇಹ ಕಾಯಿಲೆ ಹೆಚ್ಚಿಸುವ ಪದಾರ್ಥಗಳ ಸೇವನೆ ಬಿಡಿ. ಮಧುಮೇಹ ಸಮಸ್ಯೆಯು ಕಿಡ್ನಿ ಮತ್ತು ನರಗಳ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಇದು ಹೃದಯವು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಂತೆ ತಡೆಯುತ್ತದೆ.
ಮತ್ತು ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಹಾಗಾಗಿ ಸಿಹಿ ತಿಂಡಿಗಳ ಸೇವನೆ, ಕೃತಕ ಸಕ್ಕರೆ, ಬಿಳಿ ಬ್ರೆಡ್, ಜೇನುತುಪ್ಪ, ಬಿಳಿ ಅಕ್ಕಿ ಇತ್ಯಾದಿ ಸೇವನೆ ತಪ್ಪಿಸಿ.
ರಕ್ತದೊತ್ತಡ ಹೆಚ್ಚಿಸುವ ಆಹಾರ ಸೇವನೆ ಬಿಟ್ಟು ಬಿಡಿ
ಅಧಿಕ ರಕ್ತದೊತ್ತಡ ಸಹ ಹೃದಯದ ಕಾಯಿಲೆಗೆ ಮುಖ್ಯ ಕಾರಣವಾಗಿದೆ. ಹಾಗಾಗಿ ಇದು ಹೃದಯದ ಮೇಲೆ ಅತಿಯಾದ ಒತ್ತಡ ಉಂಟು ಮಾಡುತ್ತದೆ. ಹೆಚ್ಚು ಸೋಡಿಯಂ ಮತ್ತು ಉಪ್ಪು ಇರುವ ಆಹಾರ ಸೇವನೆ ತಪ್ಪಿಸಿ. ಫೈಬರ್ ಸಮೃದ್ಧ ಪದಾರ್ಥ ಮತ್ತು ಕಡಿಮೆ ಕೊಬ್ಬಿನ ಆಹಾರ ಸೇವನೆ ಮಾಡಿ.
ವ್ಯಾಯಾಮ ಮಾಡದೇ ಇರುವ ಅಭ್ಯಾಸ ಸುಧಾರಿಸಿ, ನಿತ್ಯವೂ ವ್ಯಾಯಾಮ ಮಾಡಿ
ವ್ಯಾಯಾಮ ಮಾಡುವ ಅಭ್ಯಾಸವಿಲ್ಲದಿದ್ದರೆ ಬೊಜ್ಜು ಬರುತ್ತದೆ. ಇದು ಕೊಬ್ಬನ್ನು ರಕ್ತನಾಳಗಳಲ್ಲಿ ಸಂಗ್ರಹಿಸಲು ಕಾರಣವಾಗುತ್ತದೆ. ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಪ್ರತಿದಿನ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಮಾಡಿದರೆ ಉತ್ತಮ.
ಇದನ್ನೂ ಓದಿ: ತೂಕ ಇಳಿಸುವ ಮುನ್ನ ಹೆಚ್ಚಳಕ್ಕೆ ಕಾರಣ ಏನೆಂದು ತಿಳಿದುಕೊಳ್ಳಿ
ಧೂಮಪಾನ ಮಾಡಬೇಡಿ
ಹೃದಯಾಘಾತ ಸಮಸ್ಯೆ ತಪ್ಪಿಸಲು, ಧೂಮಪಾನ, ಮದ್ಯಪಾನ ಬಿಡಿ. ಧೂಮಪಾನ ಹೃದಯ ಮತ್ತು ನರಗಳನ್ನು ದುರ್ಬಲವಾಗಿಸುತ್ತದೆ. ವಿಷಕಾರಿ ಅಂಶಗಳೂ ಸಹ ದೇಹದಲ್ಲಿ ಹೆಚ್ಚಾಗಲು ಕಾರಣವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ