• Home
  • »
  • News
  • »
  • lifestyle
  • »
  • Health Care: ಆರೋಗ್ಯಕರ ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಈ ಪದಾರ್ಥ ಸೇವನೆಯಿಂದ ಏನಾಗುತ್ತೆ ತಿಳಿಯಿರಿ

Health Care: ಆರೋಗ್ಯಕರ ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಈ ಪದಾರ್ಥ ಸೇವನೆಯಿಂದ ಏನಾಗುತ್ತೆ ತಿಳಿಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಬ್ಬಿಣವು ಒಂದು ರೀತಿಯ ಖನಿಜ. ಇದು ಬಹುತೇಕ ಎಲ್ಲಾ ಜೀವಿಗಳಿಗೆ ಅಗತ್ಯವಾಗಿದೆ. ಇದು ಆಮ್ಲಜನಕ ಸಾಗಿಸುವ ಚಯಾಪಚಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ವಾಸ್ತವದಲ್ಲಿ ಕಬ್ಬಿಣವು ಹಿಮೋಗ್ಲೋಬಿನ್ ಪ್ರೋಟೀನ್ ನ ಭಾಗವಾಗಿದೆ. ಇದು ಶ್ವಾಸಕೋಶದಿಂದ ಇಡೀ ದೇಹಕ್ಕೆ ಆಮ್ಲಜನಕ ರವಾನೆ ಮಾಡುತ್ತದೆ.

ಮುಂದೆ ಓದಿ ...
  • Share this:

    ದೇಹದಲ್ಲಿ (Body) ಎಲ್ಲಾ ಪೋಷಕಾಂಶಗಳು (Nutrients) ಸಮ ಪ್ರಮಾಣದಲ್ಲಿ ಇದ್ದಾಗ ಮಾತ್ರ ನಾವು ಸದೃಢ ಆರೋಗ್ಯ (Health) ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆರೋಗ್ಯಕರ ದೇಹಕ್ಕೆ ವಿಟಮಿನ್ (Vitamin), ಕಬ್ಬಿಣ (Iron), ಕ್ಯಾಲ್ಸಿಯಂ ಬಹಳ ಮುಖ್ಯ. ಕಬ್ಬಿಣವನ್ನು ನಮ್ಮ ದೇಹಕ್ಕೆ ಬಹಳ ಮುಖ್ಯ ಪದಾರ್ಥವೆಂದು ಹೇಳಲಾಗುತ್ತದೆ. ಕಬ್ಬಿಣದಂಶದ ಕೊರತೆ ದೇಹದಲ್ಲಿ ಹಲವು ಸಮಸ್ಯೆಗೆ ಕಾರಣ ಆಗುತ್ತದೆ. ರಕ್ತದ ಕೊರತೆ ಉಂಟು ಮಾಡುತ್ತದೆ. ಹೀಗಾಗಿ ರಕ್ತಹೀನತೆ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದು ಆಯಾಸ ಮತ್ತು ಸ್ನಾಯು ನೋವು ಉಂಟು ಮಾಡುತ್ತದೆ. ಹಾಗಾಗಿ ಕಬ್ಬಿಣದಂಶ ಎಲ್ಲರಿಗೂ ಬೇಕೇ ಬೇಕು. ಹಾಗಾದ್ರೆ ದೇಹದಲ್ಲಿ ಕಬ್ಬಿಣವನ್ನು  ಸಮತೋಲನದಲ್ಲಿ ಇಡುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.


    ಕಬ್ಬಿಣ ಎಂದರೇನು?


    ಕಬ್ಬಿಣವು ಒಂದು ರೀತಿಯ ಖನಿಜ. ಇದು ಬಹುತೇಕ ಎಲ್ಲಾ ಜೀವಿಗಳಿಗೆ ಅಗತ್ಯವಾಗಿದೆ. ಇದು ಆಮ್ಲಜನಕ ಸಾಗಿಸುವ ಚಯಾಪಚಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ವಾಸ್ತವದಲ್ಲಿ ಕಬ್ಬಿಣವು ಹಿಮೋಗ್ಲೋಬಿನ್ ಪ್ರೋಟೀನ್ ನ ಭಾಗವಾಗಿದೆ. ಇದು ಶ್ವಾಸಕೋಶದಿಂದ ಇಡೀ ದೇಹಕ್ಕೆ ಆಮ್ಲಜನಕ ರವಾನೆ ಮಾಡುತ್ತದೆ.


    ಗ್ಲೋಬಲ್ ನ್ಯೂಟ್ರಿಷನ್ ವರದಿ ಹೇಳುವ ಪ್ರಕಾರ, ಭಾರತದಲ್ಲಿ ಎಲ್ಲಾ ವಯಸ್ಸಿನ 51 ಪ್ರತಿಶತ ಮಹಿಳೆಯರು ಗರ್ಭಾವಸ್ಥೆಯಲ್ಲಿ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮತ್ತು ಭಾರತದಲ್ಲಿ ಸುಮಾರು 80 ಪ್ರತಿಶತ ಮಹಿಳೆಯರು ರಕ್ತಹೀನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಅದರ ಕೊರತೆಯನ್ನು ತಪ್ಪಿಸುವುದು ಬಹಳ ಮುಖ್ಯ.


    ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


    ಹೋಲಿಸ್ಟಿಕ್ ನ್ಯೂಟ್ರಿಷನ್ ತರಬೇತುದಾರರಾದ ಪ್ರಿಯಾಂಶಿ ಭಟ್ನಾಗರ್ ಪ್ರಕಾರ, ಕಬ್ಬಿಣವು ದೇಹಕ್ಕೆ ಆಮ್ಲಜನಕ ಸಾಗಿಸಲು ಸಹಾಯ ಮಾಡುವ ಅತ್ಯಗತ್ಯ ಖನಿಜವಾಗಿದೆ. ಕಬ್ಬಿಣ ಸಮೃದ್ಧ ಆಹಾರಗಳ ಸೇವನೆಯು ಕಬ್ಬಿಣದ ಕೊರತೆ, ರಕ್ತಹೀನತೆ ಸಮಸ್ಯೆ ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.


    ಕಬ್ಬಿಣದ ಕೊರತೆ ತೋರಿಸುವ ರೋಗಲಕ್ಷಣಗಳು


    ಆಗಾಗ್ಗೆ ತಲೆನೋವು ಮತ್ತು ತಲೆತಿರುಗುವಿಕೆ, ಹೃದಯ ಬಡಿತದಲ್ಲಿನ ಏರಿಳಿತ, ಉಗುರುಗಳು ದುರ್ಬಲವಾಗಿ ಆಗಾಗ್ಗೆ ಮುರಿಯುವುದು, ಆಗಾಗ್ಗೆ ಕೂದಲು ಉದುರುವಿಕೆ, ಉಸಿರಾಟದ ತೊಂದರೆ ಮತ್ತು ಆಯಾಸ, ಬಾಯಿ ಹುಣ್ಣು, ಚರ್ಮ ಹಳದಿಯಾಗುವುದು ಆಗಿದೆ.


    ಈ ಸಮಸ್ಯೆಗಳನ್ನು ತಪ್ಪಿಸಲು ಆಹಾರದಲ್ಲಿ ಕಬ್ಬಿಣದ ಸಮೃದ್ಧ ಆಹಾರ ಸೇರಿಸಿ. ಕಬ್ಬಿಣದ ಕೊರತೆಯನ್ನು ನೈಸರ್ಗಿಕ ಮೂಲಗಳಿಂದ ಸುಲಭವಾಗಿ ಪೂರೈಸಬಹುದು. ಕಬ್ಬಿಣದಿಂದ ದೇಹವು ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ.


    ಕಬ್ಬಿಣದ ನೈಸರ್ಗಿಕ ಆಹಾರ ಮೂಲ ಯಾವುದು?


    ಪಾಲಕ್ ಸೊಪ್ಪು


    ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿದ್ದರೆ ಪಾಲಕ್ ಸೊಪ್ಪನ್ನು ಆಹಾರದಲ್ಲಿ ಸೇರಿಸಿ. ಪಾಲಕ್ ಸೊಪ್ಪು ಸೇವನೆ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ. ಪಾಲಕ್ ಸೊಪ್ಪು ಕ್ಯಾಲ್ಸಿಯಂ, ಸೋಡಿಯಂ, ಪ್ರೊಟೀನ್ ಮತ್ತು ಕ್ಲೋರಿನ್, ಫಾಸ್ಪರಸ್ ನಂತಹ ಖನಿಜಹೊಂದಿರುತ್ತದೆ.


    ದಾಳಿಂಬೆ


    ದಾಳಿಂಬೆ ದೇಹದಲ್ಲಿ ಕಬ್ಬಿಣದ ಕೊರತೆ ಪೂರೈಸುತ್ತದೆ. ಅನೇಕ ಪ್ರಯೋಜನ ನೀಡುತ್ತದೆ. ದಾಳಿಂಬೆ ತಿನ್ನುವುದರಿಂದ ಶಕ್ತಿ ಬರುತ್ತದೆ. ರಕ್ತಹೀನತೆ ರೋಗ ದೂರವಾಗುತ್ತವೆ.


    ಬೀಟ್ರೂಟ್ ಗೆಡ್ಡೆ


    ಬೀಟ್ಗೆಡ್ಡೆ ತಿನ್ನುವುದರಿಂದ, ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ. ಮತ್ತು ಕೆಂಪು ರಕ್ತ ಕಣಗಳು ರೂಪುಗೊಳ್ಳುತ್ತವೆ. ಪ್ರತಿನಿತ್ಯ ಬೀಟ್ರೂಟ್ ಸೇವಿಸುವುದು ದೇಹದಲ್ಲಿ ರಕ್ತದ ಕೊರತೆ ದೂರವಾಗುತ್ತದೆ. ಬೀಟ್ರೂಟ್ ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ.


    ಕಾಳುಗಳು ಮತ್ತು ಧಾನ್ಯಗಳು


    ಕಾಳುಗಳು ಮತ್ತು ಧಾನ್ಯಗಳು ಕಬ್ಬಿಣದ ಕೊರತೆ ನಿವಾರಿಸುತ್ತದೆ. ಪ್ರತಿದಿನ ಬೇಳೆಕಾಳುಗಳನ್ನು ತಿನ್ನುವುದರಿಂದ ದೇಹದಲ್ಲಿ ಕಬ್ಬಿಣಾಂಶ ಸಿಗುತ್ತದೆ. ಇದು ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ.


    ಇದನ್ನೂ ಓದಿ: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ವಿಶೇಷ ಹೇರ್ ಟಾನಿಕ್ ಮನೆಮದ್ದು!


    ತುಳಸಿ


    ತುಳಸಿಯನ್ನು ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿದ್ದರೆ ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸಿ. ಇದು ರಕ್ತದ ಕೊರತೆ ಹೋಗಲಾಡಿಸಿ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ.

    Published by:renukadariyannavar
    First published: