ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು (Hair Loss), ಕೂದಲು ಬಿಳಿಯಾಗುವುದು (White Hair), ಒಣ ಕೂದಲು, ಎಣ್ಣೆಯುಕ್ತ ನೆತ್ತಿ ಸಮಸ್ಯೆ, ಕೂದಲು ಬೆಳವಣಿಗೆ ಕುಂಠಿತವಾಗುವುದು, ಕೂದಲ ತುದಿ ಸೀಳುವಿಕೆ ಹೀಗೆ ಹಲವು ರೀತಿಯ ಸಮಸ್ಯೆಗಳನ್ನು (Problems) ತುಂಬಾ ಜನರು (People) ಎದುರಿಸುತ್ತಿದ್ದಾರೆ. ಈ ಸಮಸ್ಯೆ ತಡೆಗೆ ಹಲವು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಸಾಕಷ್ಟು ಹಣ ಖರ್ಚು ಮಾಡಿ, ಮನೆಗೆ ಕೊಂಡು ತಂದು ಹಚ್ಚುತ್ತಾರೆ. ಕೊನೆಗೆ ಯಾವುದೇ ಫಲಿತಾಂಶ ಸಿಗದೇ ಇದ್ದ ಕೂದಲು ಕಡಿಮೆಯಾಗಿ ಬೈಯುತ್ತಾ, ಗೊಣಗುತ್ತಾ ಸುಮ್ಮನಾಗಿ ಬಿಡ್ತಾರೆ. ಇನ್ನು ಕೂದಲ ಆರೋಗ್ಯ ಹಾಳಾಗಲು ಹಲವು ಕಾರಣಗಳು ಇವೆ.
ಕೂದಲ ಆರೋಗ್ಯ ಹಾಳಾಗಲು ಕಾರಣಗಳು
ಕಾಲೋಚಿತ ಬದಲಾವಣೆ, ಪರಿಸರ ಮಾಲಿನ್ಯ, ಒತ್ತಡದ ಜೀವನ, ಅನಾರೋಗ್ಯಕರ ಆಹಾರ, ರಸಾಯನಿಕ ಯುಕ್ತ ಶಾಂಪೂ ಬಳಕೆ, ಕೂದಲಿಗೆ ಬಣ್ಣ ಹಾಕವುದು, ಅನಾರೋಗ್ಯಕರ ಜೀವನಶೈಲಿ, ಪೋಷಕಾಂಶ ಸಮೃದ್ಧ ಪದಾರ್ಥ ಸೇವಿಸದಿರುವುದು,
ಕೂದಲಿನ ಆರೋಗ್ಯದತ್ತ ಹೆಚ್ಚು ಗಮನಹರಿಸದೇ ಇರುವುದು ಹೀಗೆ ಹಲವು ಕಾರಣಗಳು ಕೂದಲಿನ ಆರೋಗ್ಯ ಹಾಳು ಮಾಡುತ್ತವೆ. ಇದು ಕೂದಲು ಉದುರುವಿಕೆ, ತಲೆಹೊಟ್ಟು ಸಮಸ್ಯೆ, ಒಣಗಿ ನಿರ್ಜೀವವಾದ ಕೂದಲು ಹೀಗೆ ಕೂದಲಿನ ಆರೋಗ್ಯ ಕೆಡಿಸುತ್ತದೆ.
ಹಾಗಾಗಿ ಕೂದಲ ರಕ್ಷಣೆಯ ದಿನಚರಿ ಫಾಲೋ ಮಾಡಿ. ಕೂದಲ ಆರೈಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡ್ಬೇಡಿ. ಮನೆಯಲ್ಲಿ ಇರುವ ಕೆಲವು ವಿಶೇಷ ಪದಾರ್ಥಗಳ ಸಹಾಯದಿಂದ ಎಣ್ಣೆ ತಯಾರಿಸಿ, ಹಚ್ಚಿರಿ. ಅದು ಯಾವ ಎಣ್ಣೆ? ತಯಾರಿಸುವುದು ಹೇಗೆ ಎಂದು ಇಲ್ಲಿ ನೋಡೋಣ.
ಕೂದಲ ಆರೈಕೆಗೆ ಮನೆಮದ್ದು ಎಣ್ಣೆ
ಮನೆಯಲ್ಲಿಯೇ ತಯಾರಿಸಬಹುದು. ಇದು ನಿಮ್ಮ ಕೂದಲಿಗೆ ಅಗತ್ಯವಾದ ಪೋಷಣೆಯನ್ನು ಒದಗಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮನೆಯಲ್ಲಿ ತಯಾರಿಸಿದ ಈ ಆಯುರ್ವೇದ ತೈಲವು ಕೂದಲಿನಲ್ಲಿ ವಿಭಿನ್ನ ಹೊಳಪು ತರುತ್ತದೆ. ಇದು ನಿಮ್ಮ ಕೂದಲನ್ನು ತೇವಗೊಳಿಸುತ್ತದೆ. ಮೃದುವಾಗಿರಿಸುತ್ತದೆ.
ಈ ಎಣ್ಣೆಯಲ್ಲಿರುವ ಗಿಡಮೂಲಿಕೆಗಳು ನೆತ್ತಿ ಮತ್ತು ಕೋಶಗಳಿಗೆ ತುಂಬಾ ಪ್ರಯೋಜನ ನೀಡುತ್ತವೆ. ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಸಮಸ್ಯೆಯಿದ್ದರೆ ಇದು ಸೂಕ್ತ ಚಿಕಿತ್ಸೆಯಾಗಿದೆ. ಆಯುರ್ವೇದ ತೈಲ ತಯಾರಿಸುವುದು ಹೇಗೆ?
ಕೂದಲಿನ ಆರೋಗ್ಯಕ್ಕೆ ಮನೆಯಲ್ಲಿ ತಯಾರಿಸಿ ಆಯುರ್ವೇದ ತೈಲ
ತೆಂಗಿನ ಎಣ್ಣೆ, ಮೆಂತೆ ಕಾಳು, ಅಲೋವೆರಾ, ಕರಿಬೇವು, ಲವಂಗ, ಕಲೋಂಜಿ, ಸಣ್ಣಕಂಬಗಳು, ತುಳಸಿ ಎಲೆಗಳು, ದಾಸವಾಳ ಹೂವಿನ ದಳ, ಬೇವಿನ ಎಲೆಗಳು, ಗುಲಾಬಿ ದಳಗಳು ಬೇಕು.
ಮೊದಲು ಪ್ಯಾನ್ ನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದರಲ್ಲಿ ತೆಂಗಿನ ಎಣ್ಣೆ ಹಾಕಿ. ಎಣ್ಣೆಯ ಪ್ರಮಾಣ ಸ್ವಲ್ಪ ಹೆಚ್ಚು ಇರಿಸಿ. ನಂತರ ಕರಿಬೇವಿನ ಎಲೆಗಳು ಮತ್ತು ಅಲೋವೆರಾವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ತೆಂಗಿನ ಎಣ್ಣೆಗೆ ಮೆಂತ್ಯ ಬೀಜಗಳು, ಲವಂಗ ಮತ್ತು ಸೋಂಪು ಬೀಜಗಳನ್ನು ಹಾಕಿ.
ನಂತರ ಈರುಳ್ಳಿ, ಅಲೋವೆರಾ, ಕರಿಬೇವಿನ ಎಲೆಗಳು, ತುಳಸಿ ಎಲೆಗಳು, ಗುಲಾಬಿ ದಳಗಳು, ಬೇವಿನ ಎಲೆಗಳು ಮತ್ತು ಗುಲಾಬಿ ದಳಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. 20 ನಿಮಿಷ ಬೇಯಿಸಿ.
ನಂತರ ಗ್ಯಾಸ್ ಆಫ್ ಮಾಡಿ. ತಣ್ಣಗಾದ ನಂತರ ಜರಡಿ ಸಹಾಯದಿಂದ ಎಣ್ಣೆ ಶೋಧಿಸಿ. ಈ ಎಣ್ಣೆಯನ್ನು ವಾರಕ್ಕೆ ಎರಡು ಬಾರಿ ಕೂದಲಿಗೆ ಅನ್ವಯಿಸಿ.
ಇದನ್ನೂ ಓದಿ: ತೂಕ ಇಳಿಕೆಯಿಂದ ಸಂಧಿವಾತ ಸಮಸ್ಯೆಗೂ ಪರಿಹಾರ, ಹೇಗೆ ಅಂತೀರಾ? ಇಲ್ಲಿದೆ ವಿವರ
ಇದು ಕೂದಲಿಗೆ ವಿಭಿನ್ನ ಹೊಳಪು ನೀಡುತ್ತದೆ. ಇದು ತಲೆಹೊಟ್ಟು, ಕೂದಲು ಉದುರುವಿಕೆ ಮುಂತಾದ ಸಮಸ್ಯೆ ನಿವಾರಣೆಗೆ ಪ್ರಯೋಜನ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ