ಕರಿಬೇವಿನ ಎಲೆ (Curry Leaves) ತನ್ನ ಪರಿಮಳದಿಂದ (Flavor) ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತದೆ. ಕರಿಬೇವು ಕೇವಲ ಪರಿಮಳ ಮಾತ್ರವಲ್ಲದೇ, ಆರೋಗ್ಯಕ್ಕೂ (Health) ಹಲವು ಪ್ರಯೋಜನ (Benefits) ನೀಡುತ್ತದೆ. ಹೀಗಾಗಿ ಕರಿಬೇವು ಎಲೆಗಳನ್ನು ಹಲವು ಖಾದ್ಯಗಳಲ್ಲಿ ದಿನವೂ ಬಳಕೆ ಮಾಡಲಾಗುತ್ತದೆ. ಕರಿಬೇವು ಎಲೆಗಳ ಸೇವನೆ ಬೊಜ್ಜು ಕರಗಿಸುತ್ತದೆ. ಜೊತೆಗೆ ಕೂದಲು (Hair) ಮತ್ತು ನೆತ್ತಿಯ ಆರೋಗ್ಯಕ್ಕೆ ತುಂಬಾ ಲಾಭಕಾರಿ ಆಗಿದೆ. ಅಂದ ಹಾಗೇ ಕರಿಬೇವಿನ ಎಲೆಗಳು ಆರೊಮ್ಯಾಟಿಕ್ ಆಗಿದ್ದು, ಆಂಟಿಮೈಕ್ರೊಬಿಯಲ್ ಗುಣಲಕ್ಷಣ ಹೊಂದಿವೆ. ಕರಿಬೇವಿನ ಎಲೆಗಳು ಬ್ಯಾಕ್ಟೀರಿಯಾವನ್ನು ತೊಡೆದು ಹಾಕಿ, ಕೂದಲನ್ನು ಸೋಂಕು ಮತ್ತು ಮಾಲಿನ್ಯದಿಂದ ರಕ್ಷಣೆ ಮಾಡುತ್ತವೆ.
ಕರಿಬೇವಿನ ಎಲೆಗಳು ಕೂದಲ ಆರೋಗ್ಯಕ್ಕೆ ಹೇಗೆ ಲಾಭಕಾರಿ?
ಕರಿಬೇವಿನ ಎಲೆಗಳು ಕೂದಲ ಸಮಸ್ಯೆ ದೂರ ಮಾಡಲು ಸಹಕಾರಿ ಆಗಿದೆ. ಕೂದಲಿನ ಆರೈಕೆಗೆ ಬೇಕಾದ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಮತ್ತು ವಿಟಮಿನ್ ಬಿ ಮತ್ತು ಸಿ ಯನ್ನು ಕರಿಬೇವಿನ ಎಲೆಗಳು ಹೊಂದಿವೆ.
ಹಾಗಾಗಿ ಕರಿಬೇವಿನ ಎಲೆಗಳು ಕೂದಲಿನ ಆರೈಕೆಗೆ ಬೇಕೇ ಬೇಕು. ಕರಿಬೇವಿನ ಎಲೆಗಳನ್ನು ಹಲವು ರೀತಿಯಲ್ಲಿ ಕೂದಲು ಬೆಳವಣಿಗೆ ಮತ್ತು ಕೂದಲ ಹಾನಿ ಸಮಸ್ಯೆ ತಪ್ಪಿಸಲು ಬಳಕೆ ಮಾಡಬಹುದು.
ಹಾಗಾದ್ರೆ ಕೂದಲಿನ ಆರೈಕೆ ಮತ್ತು ಆರೋಗ್ಯಕ್ಕೆ ಕರಿಬೇವಿನ ಎಲೆಗಳು ಹೇಗೆ ಪ್ರಯೋಜನಕಾರಿ? ಕರಿಬೇವಿನ ಎಲೆಗಳನ್ನು ಹೇರ್ ಮಾಸ್ಕ್ ಆಗಿ ಬಳಕೆ ಮಾಡುವ ವಿಧಾನ ಯಾವುದು? ಮತ್ತು ಕರಿಬೇವಿನ ಎಲೆಗಳನ್ನು ಕೂದಲಿಗೆ ಅನ್ವಯಿಸುವ ಸರಿಯಾದ ಮತ್ತು ಪರಿಣಾಮಕಾರಿ ಮಾರ್ಗ ಯಾವುದು ನೋಡೋಣ.
ಕೂದಲ ಆರೈಕೆಗೆ ಕರಿಬೇವಿನ ಎಲೆಗಳು ಹೇಗೆ ಪ್ರಯೋಜನಕಾರಿ?
ಕೂದಲು ಬೆಳೆಯಲು ಸಹಕಾರಿ
ಕೂದಲಿನ ಬೆಳವಣಿಗೆಗೆ ಕರಿಬೇವಿನ ಎಲೆಗಳು ತುಂಬಾ ಪ್ರಯೋಜನಕಾರಿ. ಕರಿಬೇವಿನ ಎಲೆಗಳು ಮುಚ್ಚಿದ ಕೂದಲು ಕಿರುಚೀಲಗಳನ್ನು ತೆರೆದು, ನೆತ್ತಿಯು ಉಸಿರಾಡಲು ಅವಕಾಶ ಮಾಡಿ ಕೊಡುತ್ತದೆ. ಕೂದಲಿನ ಬೆಳವಣಿಗೆಗೆ ಮೆಂತ್ಯ ಮತ್ತು ಬೆಟ್ಟದ ನೆಲ್ಲಿಕಾಯಿ ಮತ್ತು ಕರಿಬೇವಿನ ಎಲೆಗಳನ್ನು ತೆಗೆದುಕೊಂಡು, ಸಮಾನ ಪ್ರಮಾಣದ ಮೆಂತ್ಯ ಎಲೆಗಳನ್ನು ಮಿಶ್ರಣ ಮಾಡಿ. ಚೆನ್ನಾಗಿ ರುಬ್ಬಿರಿ. ನಂತರ ಕೂದಲಿಗೆ ಹಚ್ಚಿ, ಅರ್ಧ ಗಂಟೆ ನಂತರ ತೊಳೆಯಿರಿ.
ತಲೆ ಹೊಟ್ಟು ನಿವಾರಣೆಗೆ ಸಹಕಾರಿ
ಕರಿಬೇವಿನ ಎಲೆಗಳು ಆಂಟಿಬ್ಯಾಕ್ಟೀರಿಯಲ್ ಗುಣ ಹೊಂದಿವೆ. ಕೂದಲಲ್ಲಿರುವ ತಲೆಹೊಟ್ಟು ಹೋಗಲಾಡಿಸಲು, ಕರಿಬೇವಿನ ಎಲೆಗಳನ್ನು ಮೊಸರಿನಲ್ಲಿ ಬೆರೆಸಿ ಲೇಪಿಸಿ. ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಪುಡಿ ಮಾಡಿ, ಎರಡು ಚಮಚ ಮೊಸರು ಬೆರೆಸಿ, ಕೂದಲಿಗೆ ಹಚ್ಚಿ. 20 ನಿಮಿಷ ಬಿಟ್ಟು ತೊಳೆಯಿರಿ.
ಕೂದಲು ಹಾನಿ ತಡೆಯಲು ಸಹಕಾರಿ
ಧೂಳು, ಮಾಲಿನ್ಯದಿಂದ ಕೂದಲು ತುಂಬಾ ನಿರ್ಜೀವವಾಗಿ, ಶುಷ್ಕವಾಗಿ ಮತ್ತು ಹಾನಿಯಾಗಿದ್ದರೆ, ಕರಿಬೇವಿನ ಎಲೆ ಮಾಸ್ಕ್ ಪರಿಣಾಮಕಾರಿ. ಪಾತ್ರೆಯಲ್ಲಿ ತೆಂಗಿನ ಎಣ್ಣೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಕರಿಬೇವಿನ ಎಲೆ ಹಾಕಿ ಬೇಯಿಸಿ.
ನಂತರ ಕರಿಬೇವಿನ ಎಲೆಗಳು ಕಪ್ಪಾದಾಗ ಗ್ಯಾಸ್ ಆಫ್ ಮಾಡಿ. ಎಣ್ಣೆ ತಣ್ಣಗಾದ ನಂತರ ತಲೆಗೆ ಹಚ್ಚಿ, ಮಸಾಜ್ ಮಾಡಿ. ನಂತರ ಒಂದು ಗಂಟೆ ಬಿಟ್ಟು ಮಸಾಜ್ ಮಾಡಿ, ಇದು ಪರಿಣಾಮಕಾರಿ.
ಇದನ್ನೂ ಓದಿ: ಅತ್ಯಂತ ಕಡಿಮೆ ಸಮಯದಲ್ಲಿ ತೂಕ ಇಳಿಸಿಕೊಂಡ ಶಹನಾಜ್ ಗುಟ್ಟು ರಟ್ಟು
ಕೂದಲು ಉದುರುವಿಕೆ ತಡೆಯಲು ಸಹಕಾರಿ
ಕೂದಲು ಉದುರುವಿಕೆಯ ಸಮಸ್ಯೆ ತಡೆಯಲು ಕರಿಬೇವಿನ ಎಲೆಗಳನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ, ಬೇಯಿಸಿ. ಇದಕ್ಕೆ ಮೆಂತ್ಯ ಕಾಳು ಸೇರಿಸಿ. ವಾರಕ್ಕೊಮ್ಮೆ ತಲೆಯನ್ನು ಮಸಾಜ್ ಮಾಡಿ. ಒಂದೂವರೆ ಗಂಟೆ ನಂತರ ಕೂದಲನ್ನು ತೊಳೆಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ