• Home
  • »
  • News
  • »
  • lifestyle
  • »
  • Hair Care: ಮೃದುವಾದ ಮತ್ತು ಹೊಳೆಯುವ ಕೂದಲು ಬೇಕೇ? ಹಾಗಾದ್ರೆ ಪ್ರತಿದಿನ ಈ ಹೂವುಗಳ ಹೇರ್ ಮಾಸ್ಕ್ ಹಾಕೊಳ್ಳಿ

Hair Care: ಮೃದುವಾದ ಮತ್ತು ಹೊಳೆಯುವ ಕೂದಲು ಬೇಕೇ? ಹಾಗಾದ್ರೆ ಪ್ರತಿದಿನ ಈ ಹೂವುಗಳ ಹೇರ್ ಮಾಸ್ಕ್ ಹಾಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದು ನಾವು ನಿಮ್ಮ ಕೂದಲನ್ನು ಪೋಷಿಸುವ ಮತ್ತು ದಪ್ಪ ಮತ್ತು ಆರೋಗ್ಯಕರವಾಗಿಸುವ ಐದು ಹೂವುಗಳ ಬಗ್ಗೆ ನೋಡೋಣ. ಕೂದಲ ಆರೈಕೆಗೆ ಆ ಹೂವುಗಳನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ...

  • Share this:

    ಕೂದಲು ಉದುರುವುದು (Hair Fall), ಅಕಾಲಿಕ ಕೂದಲು ಬಿಳಿಯಾಗುವುದು (White Hair) ಸಾಮಾನ್ಯ ಸಮಸ್ಯೆ ಆಗಿವೆ. ಈ ಎಲ್ಲಾ ಸಮಸ್ಯೆಗಳ (Problem) ಹಿಂದಿನ ಪ್ರಮುಖ ಕಾರಣ ಅಂದ್ರೆ ಕೂದಲಿನ ಪೋಷಣೆ ಕೊರತೆ. ಕೂದಲಿಗೆ ಪೌಷ್ಟಿಕಾಂಶದ ಕೊರತೆಗೆ ಹಲವು ಕಾರಣಗಳಿವೆ. ಇಂದಿನ ವೇಗದ ಜೀವನಶೈಲಿ (Lifestyle) ಜನರು ಹೆಚ್ಚು ಸಮಯದ ಕೊರತೆ ಹೊಂದಿದ್ದಾರೆ. ಹಾಗಾಗಿ ಅವರು ತಮ್ಮ ಕೂದಲನ್ನು ದಪ್ಪ ಮತ್ತು ಉದ್ದ ಕೂದಲು (Thick And Long Hair) ಹೊಂದಲು ಬಯಸುತ್ತಾರೆ. ಆದರೆ ಅದನ್ನು ನೋಡಿಕೊಳ್ಳಲು ಸಮಯ ನೀಡಲು ಅವರಿಗೆ ಸಾಧ್ಯ ಆಗುತ್ತಿಲ್ಲ. ಆದರೆ ಅಂತಹ ಕೆಲವು ಕ್ರಮಗಳಿವೆ. ಅದು ಹೆಚ್ಚು ಸಮಯ ತೆಗೆದುಕೊಳ್ಳಲ್ಲ.


    ಹೆಚ್ಚು ವೆಚ್ಚವೂ ಆಗಲ್ಲ. ಕೂದಲಿಗೆ ಪ್ರಯೋಜನಕಾರಿ ಆಗುವ 5 ಹೂವುಗಳ ಬಗ್ಗೆ ನಾವು ಇಲ್ಲಿ ತಿಳಿಯೋಣ. ಇಂದು ನಾವು ನಿಮ್ಮ ಕೂದಲನ್ನು ಪೋಷಿಸುವ ಮತ್ತು ದಪ್ಪ ಮತ್ತು ಆರೋಗ್ಯಕರವಾಗಿಸುವ ಐದು ಹೂವುಗಳ ಬಗ್ಗೆ ನೋಡೋಣ. ಕೂದಲ ಆರೈಕೆಗೆ ಆ ಹೂವುಗಳನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ.


    ಮೃದುವಾದ ಮತ್ತು ಹೊಳೆಯುವ ಕೂದಲಿಗೆ ಪ್ರತಿದಿನ ಬಳಸಿ ಗುಲಾಬಿ


    ಗುಲಾಬಿ ಕೆನ್ನೆಗೆ ಮಾತ್ರವಲ್ಲದೆ ಕೂದಲ ಆರೈಕೆಗೂ ತುಂಬಾ ಪ್ರಯೋಜನಕಾರಿಯಾಗಿದ್ದು, ಅದನ್ನು ಕೂದಲಿಗೆ ಕೂಡ ಗುಲಾಬಿಯನ್ನು ಬಳಸಬಹುದು. ನಿಮ್ಮ ಕೂದಲಿನ ಸಮಸ್ಯೆ ಹೋಗಲಾಡಿಸಲು ಬಳಸಿ.  ನಿಮ್ಮ ಕೂದಲ ರಕ್ಷಣೆಯ ದಿನಚರಿಯಲ್ಲಿ ಗುಲಾಬಿ ಸೇರಿಸಿ.


    ಇದನ್ನೂ ಓದಿ: ರುಚಿಗೆ ಮಾತ್ರವಲ್ಲ, ಚರ್ಮದ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೂ ಬೇಕು ಬಟಾಣಿ ಕಾಳು


    ರೋಸ್ ವಾಟರ್ ಬಳಸುವುದರಿಂದ ನೆತ್ತಿಯಲ್ಲಿ ಹೆಚ್ಚುವರಿ ಎಣ್ಣೆ ಉತ್ಪಾದನೆ ಕಡಿಮೆ ಆಗುತ್ತದೆ. ಇದು ತಲೆಹೊಟ್ಟು ಸಮಸ್ಯೆ ಕಡಿಮೆ ಮಾಡುತ್ತದೆ. ಕೂದಲು ಮೃದುವಾಗಿ ಹೊಳೆಯುವಂತೆ ಮಾಡುತ್ತದೆ. ಇದು ಸುಕ್ಕುಗಟ್ಟಿದ ಮತ್ತು ಸುರುಳಿಯಾಕಾರದ ಕೂದಲನ್ನು ಸರಿಪಡಿಸಲು ಸಹಾಯ ಮಾಡುತ್ತದೆ.


    ಕೂದಲ ಆರೈಕೆ ಮತ್ತು ತೇವಗೊಳಿಸಲು ಮಲ್ಲಿಗೆ ಸಹಕಾರಿ


    ಜಾಸ್ಮಿನ್ ಒಂದು ಬಲವಾದ ಸುಗಂಧ ಹೊಂದಿರುವ ಹೂವು. ಇದು ನಿಮ್ಮ ಕೂದಲಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದುದೆ. ಒಣ ಕೂದಲನ್ನು ಪೋಷಿಸುತ್ತದೆ. ಮತ್ತು ಅದರಲ್ಲಿ ತೇವಾಂಶ ಉಳಿಸುತ್ತದೆ. ಈ ಹೂವಿನಲ್ಲಿರುವ ಆ್ಯಂಟಿಮೈಕ್ರೊಬಿಯಲ್ ಮತ್ತು ಕ್ಲೆನ್ಸಿಂಗ್ ಗುಣಲಕ್ಷಣಗಳು ಕೂದಲಿನಲ್ಲಿರುವ ಪರೋಪಜೀವಿಗಳನ್ನು ನಿವಾರಿಸುತ್ತದೆ.


    ಈ ಹೂವು ನೆತ್ತಿಯಲ್ಲಿ ಸಂಗ್ರಹವಾಗಿರುವ ಕೂದಲಿನ ಉತ್ಪನ್ನ ಸ್ವಚ್ಛಗೊಳಿಸುತ್ತದೆ. ಮತ್ತು ಆರೋಗ್ಯಕರವಾಗಿಸುತ್ತದೆ. ಜಾಸ್ಮಿನ್ ಎಣ್ಣೆಯ ನಿಯಮಿತ ಬಳಕೆ ಕೂದಲು ಬಲವಾದ, ದಪ್ಪ ಮತ್ತು ಕಪ್ಪು ಕೂದಲು ಹೊಂದಲು ಸಹಾಯ ಮಾಡುತ್ತದೆ.


    ದಾಸವಾಳ ಕೂದಲು ಉದುರುವಿಕೆ ತಡೆಯುತ್ತದೆ


    ದಾಸವಾಳದ ಹೂವನ್ನು ಬಳಸುವುದರಿಂದ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಕೂದಲು ಉದುರುವುದು, ಅಕಾಲಿಕವಾಗಿ ಬಿಳಿಯಾಗುವುದು ಮತ್ತು ಕೂದಲು ಉದುರುವಿಕೆ ತಡೆಯುತ್ತದೆ. ಕೂದಲಿಗೆ ಪೋಷಣೆ ನೀಡುತ್ತದೆ.


    ಮತ್ತು ಸುಕ್ಕು, ಶುಷ್ಕತೆ ಮತ್ತು ಕೂದಲು ಉದುರುವಿಕೆ ನಿಯಂತ್ರಿಸುತ್ತದೆ. ಕೂದಲು ದಪ್ಪವಾಗುತ್ತದೆ. ದಾಸವಾಳದ 5 ರಿಂದ 6 ಹೂಗಳನ್ನು ಪುಡಿ ಮಾಡಿ ಹೇರ್ ಮಾಸ್ಕ್ ಆಗಿ ಬಳಸಿ. ಬೇಕಿದ್ದರೆ ತೆಂಗಿನೆಣ್ಣೆಯಲ್ಲಿ 1 ಚಮಚ ಅದರ ಪುಡಿ ಬೆರೆಸಿ. ಮಸಾಜ್ ಕೂಡ ಮಾಡಬಹುದು.


    ರೋಸ್ಮರಿ ಹೂವು ರಕ್ತ ಪರಿಚಲನೆ ಹೆಚ್ಚಿಸುತ್ತದೆ


    ರೋಸ್ಮರಿ ಹೂವಿನ ಬಳಕೆ ನಿಮ್ಮ ಕೂದಲಿಗೆ ತುಂಬಾ ಪ್ರಯೋಜನಕಾರಿ. ಈ ಹೂವಿನ ಬಳಕೆಯಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಕಾರಿ. ಬೋಳು ಮತ್ತು ತಲೆಹೊಟ್ಟು ಇರುವವರಿಗೆ ಇದರ ಬಳಕೆ ತುಂಬಾ ಒಳ್ಳೆಯದು. ಇದು ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ.


    ಇದನ್ನೂ ಓದಿ: ದೀಪಾವಳಿ ನಂತರ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯ ತಡೆಯಲು ಹೀಗೆ ಮಾಡಿ


    ಬೆರ್ಗಮಾಟ್ ಹೂವು ನೆತ್ತಿ ಆರೋಗ್ಯಕರವಾಗಿರಿಸುತ್ತದೆ


    ಬೆರ್ಗಮಾಟ್ ಹೂವಿನಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಇದರ ಬಳಕೆ ಕೂದಲು ಮತ್ತು ಹೊರಪೊರೆ ಬಲಪಡಿಸುತ್ತದೆ. ವಿಟಮಿನ್ ಸಿ ನೆತ್ತಿ ಆರೋಗ್ಯವಾಗಿಸುತ್ತದೆ ಮತ್ತು ಕೂದಲನ್ನು ದಪ್ಪವಾಗಿಸುತ್ತದೆ. ಇದು ಕೂದಲಿನ ಶುಷ್ಕತೆ ಕಡಿಮೆ ಮಾಡುತ್ತದೆ. ಮತ್ತು ಕೂದಲು ಸೀಳುವಿಕೆ ತಡೆಯುತ್ತದೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು