• Home
  • »
  • News
  • »
  • lifestyle
  • »
  • Weight Loss: ಈ ಸಿಂಪಲ್ ಸಲಹೆ ಫಾಲೋ ಮಾಡಿದ್ರೆ ಬೇಗ ಕಡಿಮೆಯಾಗುತ್ತೆ ದೇಹದ ತೂಕ!

Weight Loss: ಈ ಸಿಂಪಲ್ ಸಲಹೆ ಫಾಲೋ ಮಾಡಿದ್ರೆ ಬೇಗ ಕಡಿಮೆಯಾಗುತ್ತೆ ದೇಹದ ತೂಕ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹವು ಆಹಾರದ ರೂಪದಲ್ಲಿ ಕ್ಯಾಲೊರಿ ಪಡೆಯುತ್ತದೆ. ಆದರೆ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಹೋದ್ರೆ ಹಲವು ಸಮಸ್ಯೆ ತಲೆದೋರುತ್ತವೆ. ದೈಹಿಕ ಚಟುವಟಿಕೆಯ ಕೊರತೆಯಿಂದ ಕ್ಯಾಲೊರಿ ಬರ್ನ್ ಆಗಲ್ಲ. ಇದರಿಂದ ದೇಹದಲ್ಲಿ ಕೊಬ್ಬಿನ ಶೇಖರಣೆ ಆಗುತ್ತಾ ಹೋಗುತ್ತದೆ.

  • Share this:

    ಜೀವನಶೈಲಿ (Lifestyle) ಮತ್ತು ಆಹಾರದ (Food) ಕಳಪೆ ವಿಧಾನದಿಂದ ಹಲವು ಆರೋಗ್ಯ ಸಮಸ್ಯೆ (Health Problem) ಎದುರಾಗುತ್ತವೆ. ಅದರಲ್ಲಿ ಸ್ಥೂಲಕಾಯ (Obesity), ತೂಕ ಹೆಚ್ಚಾಗುವುದು (Weight Gain) ಮತ್ತು ಬೊಜ್ಜು ಸಮಸ್ಯೆ ಕೂಡ ಒಂದು. ಹಲವು ಕಾಯಿಲೆಗಳು ಬೊಜ್ಜಿನಿಂದ ಬರುತ್ತವೆ. ನಿರಂತರವಾಗಿ ಒಂದೇ ಸ್ಥಳದಲ್ಲಿ ಗಂಟೆಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವುದು, ಹೆಚ್ಚು ನಡೆದಾಡದೇ ಇರುವುದು, ವಾಕಿಂಗ್, ವ್ಯಾಯಾಮ ಹಾಗೂ ಯಾವುದೇ ದೈಹಿಕ ಚಟುವಟಿಕೆ ಮಾಡದೇ ಇರುವುದು ಸಾಕಷ್ಟು ಸಮಸ್ಯೆ ತಂದೊಡ್ಡುತ್ತದೆ. ದೇಹದಲ್ಲಿ ಯಾವುದೇ ಚಲನೆ ಇಲ್ಲದಿದ್ದರೆ ಅದು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವಾಗುತ್ತದೆ. ಯಾವುದೇ ಚಟುವಟಿಕೆ ಇಲ್ಲದೇ ಹೋದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆಗ ಅರ್ಜೀರ್ಣತೆ ಸಮಸ್ಯೆ ಕಾಡುತ್ತದೆ.


    ಬೊಜ್ಜು ಕರಗಿಸಲು ಸಿಂಪಲ್ ಟಿಪ್ಸ್


    ದೇಹವು ಆಹಾರದ ರೂಪದಲ್ಲಿ ಕ್ಯಾಲೊರಿ ಪಡೆಯುತ್ತದೆ. ಆದರೆ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಹೋದ್ರೆ ಹಲವು ಸಮಸ್ಯೆ ತಲೆದೋರುತ್ತವೆ. ದೈಹಿಕ ಚಟುವಟಿಕೆಯ ಕೊರತೆಯಿಂದ ಕ್ಯಾಲೊರಿ ಬರ್ನ್ ಆಗಲ್ಲ. ಇದರಿಂದ ದೇಹದಲ್ಲಿ ಕೊಬ್ಬಿನ ಶೇಖರಣೆ ಆಗುತ್ತಾ ಹೋಗುತ್ತದೆ.


    ಇದು ಹೆಚ್ಚು ಅಪಾಯಕಾರಿ. ಹಾಗಾಗಿ ಸಮತೋಲಿತ ಆಹಾರ, ಚಟುವಟಿಕೆ ಮೂಲಕ ದೇಹ ದಂಡಿಸಿ, ತೂಕವನ್ನು ಕಳೆದುಕೊಳ್ಳುವುದು, ನಿಯಂತ್ರಣದಲ್ಲಿ ಇಡುವುದು ತುಂಬಾ ಮುಖ್ಯ. ಕೆಲವು ವೈಜ್ಞಾನಿಕ ನಿಯಮಗಳ ಮೂಲಕ ತೂಕ ನಿಯಂತ್ರಣ ಮತ್ತು ತೂಕ ನಷ್ಟ ಮಾಡಬಹುದು.




    ವ್ಯಾಯಾಮ ಮತ್ತು ಆಹಾರದ ಮೇಲೆ ನಿಗಾವಹಿಸಿ


    ಕೇವಲ ವ್ಯಾಯಾಮ ಮತ್ತು ಆಹಾರದತ್ತ ನೀವು ಹೆಚ್ಚು ಗಮನಹರಿಸಿ. ಫಿಟ್ನೆಸ್ ಗಾಗಿ ಮೊದಲು ಬೆಳಗ್ಗೆ ಬೇಗ ಏಳುವುದು, ಡಯಟ್, ವಾಕಿಂಗ್, ವ್ಯಾಯಾಮ, ರನ್ನಿಂಗ್ ಮಾಡುವುದು ತುಂಬಾ ಮುಖ್ಯ. ಇದು ನಿಮ್ಮ ತೂಕ ಕಡಿಮೆ ಮಾಡಲು ಮತ್ತು ತೂಕ ನಿಯಂತ್ರಣಕ್ಕೆ ಸಹಕಾರಿ.


    ಹೆಚ್ಚುವರಿ ಕೊಬ್ಬಿನ ಶೇಖರಣೆ ತಡೆಯುವುದು ಮುಖ್ಯ


    ಪರಿಣಾಮಕಾರಿ ತೂಕ ನಿರ್ವಹಣೆ ಮತ್ತು ತೂಕ ನಷ್ಟಕ್ಕೆ ಮೊದಲು ಮಾಡಬೇಕಾದ ಕೆಲಸ ಅಂದ್ರೆ ಹೆಚ್ಚುವರಿ ಕೊಬ್ಬಿನ ಶೇಖರಣೆ ತಡೆಯುವುದು.


    ಇದು ತೂಕ ನಷ್ಟದ ಜೊತೆಗೆ ಆರೋಗ್ಯಕರ ದೇಹ ಮತ್ತು ಸಂಯೋಜನೆಯ ನಿರ್ವಹಣೆ ಉತ್ತೇಜಿಸುತ್ತದೆ. ಆರೋಗ್ಯಕರ ದೇಹದ ತೂಕ ಕಾಪಾಡಲು ಅಧಿಕ ತೂಕಕ್ಕೆ ಕಾರಣವಾಗುವ ಅಂಶಗಳತ್ತ ಮೊದಲು ಗಮನಹರಿಸಬೇಕು.


    ದೈಹಿಕ ಚಟುವಟಿಕೆಗೆ ಪ್ರಾಮುಖ್ಯತೆ ನೀಡಿ


    ತೂಕ ನಷ್ಟಕ್ಕೆ ಮೊದಲು ನಿಯಮಿತ ವ್ಯಾಯಾಮ ಮಾಡುವುದು ಮುಖ್ಯ. ದೈಹಿಕ ಚಟುವಟಿಕೆಯು ವೇಗವಾಗಿ ಕಡಿಮೆ ಅವಧಿಯಲ್ಲಿ ತೂಕ ಇಳಿಕೆಗೆ ಸಹಕಾರಿ. ಏರೋಬಿಕ್ ವ್ಯಾಯಾಮದಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ, ಉತ್ತಮ ಕೊಲೆಸ್ಟ್ರಾಲ್ ಉಂಟಾಗುತ್ತದೆ.


    ಸಾಂದರ್ಭಿಕ ಚಿತ್ರ


    ಏರೋಬಿಕ್ ವ್ಯಾಯಾಮ ಮಾಡಿ


    ಏರೋಬಿಕ್ ವ್ಯಾಯಾಮ ತೂಕ ನಿರ್ವಹಣೆಗೆ ಉತ್ತಮ ಆಯ್ಕೆ ಆಗಿದೆ. ಏರೋಬಿಕ್ ವ್ಯಾಯಾಮದ ಜೊತೆಗೆ ಶಕ್ತಿ ತರಬೇತಿ ಮತ್ತು ಪ್ರತಿರೋಧ ವ್ಯಾಯಾಮ ಮಾಡುವುದು ಮುಖ್ಯ. ಇದು ಸ್ನಾಯುಗಳನ್ನು ನಿರ್ಮಿಸುತ್ತದೆ. ತೂಕ ನಷ್ಟ ಹಾಗೂ ದೇಹದ ಚಯಾಪಚಯ ದರ ಹೆಚ್ಚುತ್ತದೆ.


    ಆಹಾರ ಕ್ರಮ


    ತೂಕ ಕಳೆದುಕೊಳ್ಳಲು ಮತ್ತು ನಿಯಂತ್ರಿಸಲು ಕರಿದ, ಜಂಕ್ ಫುಡ್, ಬೇಕರಿ, ಸಕ್ಕರೆ, ಮೈದಾ, ಸೋಡಾ ಪದಾರ್ಥ ತಿನ್ನುವುದು ತಪ್ಪಿಸಿ. ಹಣ್ಣು, ತರಕಾರಿ, ಕೊಬ್ಬು ರಹಿತ ಡೈರಿ ಉತ್ಪನ್ನ, ಕಡಿಮೆ ಶಕ್ತಿಯ ಸಾಂದ್ರತೆ ಆಹಾರ


    ಇದನ್ನೂ ಓದಿ: 30 ವಯಸ್ಸಿನ ನಂತರ ಈ ಆಹಾರಗಳನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ!


    ಮತ್ತು ಹೆಚ್ಚಿನ ಪೌಷ್ಟಿಕಾಂಶ ಪದಾರ್ಥ, ಪೌಷ್ಟಿಕ ಆಹಾರ ಸೇವಿಸಿ. ತೂಕ ನಷ್ಟಕ್ಕೆ ನಿಮ್ಮ ದಿನಚರಿಯನ್ನು ಉತ್ತಮವಾಗಿ ಬದಲಾಯಿಸಿ, ಇದು ಉತ್ತಮ ಫಲಿತಾಂಶ ನೀಡುತ್ತದೆ.

    Published by:renukadariyannavar
    First published: