ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು (People) ಮೊಬೈಲ್ ನಲ್ಲೇ (Mobile) ಕಾಳ ಕಳೆಯುತ್ತಾರೆ. ದೀರ್ಘಕಾಲ ಲ್ಯಾಪ್ ಟಾಪ್ (Laptop) ನಲ್ಲಿ ಕೆಲಸ ಮಾಡುತ್ತಾರೆ. ಆನ್ ಲೈನ್ (Online) ಶೋಗಳು, ಕಾಮಿಟಿ, ಗೇಮಿಂಗ್ ಹೀಗೆ ದಿನದ ಹೆಚ್ಚಿನ ಸಮಯ ಮೊಬೈಲ್ ಮತ್ತು ಕಂಪ್ಯೂಟರ್ (Computer), ಲ್ಯಾಪ್ ಟಾಪ್ ನಲ್ಲಿ ಸಮಯ ವ್ಯಯ ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಪಠ್ಯ ಚಟುವಟಿಕೆ, ಹೋಂ ವರ್ಕ್ ಸಹ ಮೊಬೈಲ್ ನಲ್ಲಿ ಬಿಡಲಾಗುತ್ತಿದೆ. ಹೀಗಾಗಿ ಮಕ್ಕಳು ಮೊಬೈಲ್ ನಲ್ಲಿ ನೋಡಿಕೊಂಡು ಹೋಂ ವರ್ಕ್ ಮಾಡಿಕೊಳ್ತಾರೆ. ಹೀಗಾಗಿ ಹಲಗಲು ರಾತ್ರಿ ಮೊಬೈಲ್ ಸುತ್ತವೇ ಮಕ್ಕಳು ಹಾಗೂ ವಯಸ್ಕರರು, ವೃದ್ಧರು ಕಾಲ ಕಳೆಯುತ್ತಾರೆ.
ಕಣ್ಣುಗಳ ಆರೋಗ್ಯ ಸಮಸ್ಯೆ
ಹೀಗೆ ದಿನವಿಡೀ ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆದರೆ ಕಣ್ಣುಗಳು ಹಾಳಾಗುತ್ತವೆ. ಕಣ್ಣಿನ ಸಮಸ್ಯೆ ಉಂಟಾಗುತ್ತದೆ. ತಡರಾತ್ರಿಯವರೆಗೆ ಟಿವಿ ನೋಡುವುದು, ಕೆಟ್ಟ ಆಹಾರ ಪದ್ಧತಿ ಮತ್ತು ಕುಡಿಯುವ ಚಟ,
ಮಾಲಿನ್ಯ ಮತ್ತು ಜಡ ಜೀವನಶೈಲಿಯು ಕಣ್ಣಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಎಲ್ಲಾ ವಯೋಮಾನದವರು ಕಣ್ಣಿನ ಸಮಸ್ಯೆಯಿಂದ ಬಳುತ್ತಿದ್ದಾರೆ. ಕಣ್ಣುಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆ ಎದುರಿಸುತ್ತಿದ್ದಾರೆ.
ಕಣ್ಣು ಸಮಸ್ಯೆಗಳು ಯಾವವು?
ದೃಷ್ಟಿ ಕಡಿಮೆಯಾಗುವುದು,
ದೃಷ್ಟಿ ಮಂದವಾಗುವುದು,
ದೂರ ಅಥವಾ ಸಮೀಪ ದೃಷ್ಟಿ ದೋಷ,
ಕಣ್ಣಿನ ಪೊರೆ,
ಕಣ್ಣುಗಳಲ್ಲಿ ನೀರು ಬರುವುದು,
ಕಣ್ಣು ಕೆಂಪಗಾಗುವುದು,
ಕಣ್ಣುಗಳಲ್ಲಿ ನೋವು,
ಕಣ್ಣುಗಳ ಜಾಲಗಳ ಸಮಸ್ಯೆ ಕಾಡುತ್ತದೆ.
ತುಂಬಾ ಜನರು ಕಣ್ಣಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಕಣ್ಣಿನ ಸಮಸ್ಯೆ ತಪ್ಪಿಸಲು ಮತ್ತು ನಿಮ್ಮ ದೃಷ್ಟಿ ಸುಧಾರಿಸಲು ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ತರುವುದು ತುಂಬಾ ಮುಖ್ಯ. ಜೊತೆಗೆ ನೀವು ತಿನ್ನುವ ಮತ್ತು ಕುಡಿಯುವ ಅಭ್ಯಾಸದಲ್ಲೂ ಉತ್ತಮ ಬದಲಾವಣೆ ಮಾಡಿರಿ.
ಭಾರತದ ಖ್ಯಾತ ಡಯೆಟಿಷಿಯನ್ ಅಂಜಲಿ ಮುಖರ್ಜಿ, ಕಣ್ಣುಗಳ ಸಮಸ್ಯೆ ನಿವಾರಣೆಗೆ ಕೆಲವು ಪರಿಹಾರ ಹೇಳಿದ್ದಾರೆ. ಇದನ್ನು ಫಾಲೋ ಮಾಡಿದ್ರೆ ನಿಮ್ಮ ಕಣ್ಣುಗಳು ಬಲಿಷ್ಠವಾಗುತ್ತದೆ.
ಕಣ್ಣುಗಳ ಆರೋಗ್ಯ ಸುಧಾರಿಸಲು ಮತ್ತು ದೃಷ್ಟಿ ಬಲಪಡಿಸಲು ಸಲಾಡ್ ಸೇವಿಸಿ
ಡಯೆಟಿಷಿಯನ್ ಅಂಜಲಿ ಪ್ರಕಾರ, ಕಣ್ಣುಗಳು ತೀಕ್ಷ್ಣವಾಗಲು, ದೃಷ್ಟಿ ಸುಧಾರಣೆ ಮತ್ತು ದೃಷ್ಟಿ ಚುರುಕಾಗಲು ನಿಯಮಿತವಾಗಿ ಸಲಾಡ್ ಸೇವನೆ ಮಾಡಿ. ಸಲಾಡ್ ಸೇವನೆಯಿಂದ ವಿವಿಧ ಆಂಟಿಆಕ್ಸಿಡೆಂಟ್ಗಳು ಮತ್ತು ಅಗತ್ಯ ವಿಟಮಿನ್ ಗಳು ಕಣ್ಣುಗಳನ್ನು ಪೋಷಣೆ ಮಾಡುತ್ತವೆ. ಜೊತೆಗೆ ಕಣ್ಣಿನ ಪೊರೆ ಹಾಗೂ ಕಣ್ಣಿನ ಗಂಭೀರ ಸಮಸ್ಯೆ ನಿವಾರಿಸಲು, ರಕ್ಷಿಸಲು ಸಹಾಯ ಮಾಡುತ್ತದೆ.
ಕಣ್ಣುಗಳ ಆರೋಗ್ಯಕ್ಕೆ ಸಲಾಡ್ ತಯಾರಿಸುವುದು ಹೇಗೆ?
ಐಸ್ಬರ್ಗ್ ಲೆಟಿಸ್ ಎಲೆಗಳು, ಕ್ಯಾರೆಟ್, ಬೀಟ್ರೂಟ್, ಕೆಂಪು ಬೆಲ್ ಪೆಪರ್, ಮೂಲಂಗಿ, ಹಸಿರು ಕ್ಯಾಪ್ಸಿಕಂ ತೆಗೆದುಕೊಳ್ಳಿ. ಈ ಸಲಾಡ್ ವಿಟಮಿನ್ ಎ ಯ ನಿಧಿ. ಆ ಎಲ್ಲಾ ಅಗತ್ಯ ಪೋಷಕಾಂಶಗಳು ಕಣ್ಣುಗಳ ಆರೋಗ್ಯ ಸುಧಾರಿಸುತ್ತದೆ.
ಇದು ಕಣ್ಣುಗಳ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಟಮಿನ್ ಎ, ವಿಟಮಿನ್ ಇ ಮತ್ತು ರಿಬೋಫ್ಲಾವಿನ್ ನಂತಹ ಅಂಶಗಳು ಕಣ್ಣುಗಳು ಬಲಿಷ್ಠ ಮತ್ತು ದೃಷ್ಟಿ ಸುಧಾರಿಸಲು ಸಹಕಾರಿ.
ಕಣ್ಣಿನ ಪೊರೆ ಸಮಸ್ಯೆಯಿಂದ ರಕ್ಷಣೆ ನೀಡುತ್ತದೆ
ಕ್ಯಾರೆಟ್, ಬೀಟ್ರೂಟ್ ಮತ್ತು ಕೆಂಪು ಮತ್ತು ಹಳದಿ ಬೆಲ್ ಪೆಪರ್ ತರಕಾರಿಗಳು ಫೈಟೊಕೆಮಿಕಲ್ಗಳ ಉತ್ತಮ ಮೂಲ. ಇದು ಹಾನಿಕಾರಕ ಸ್ವತಂತ್ರ ರಾಡಿಕಲ್ಗಳು ಮತ್ತು ಕಣ್ಣಿನ ಪೊರೆ ಸಮಸ್ಯೆಯಿಂದ ರಕ್ಷಣೆ ನೀಡುತ್ತದೆ.
ಇದನ್ನೂ ಓದಿ: ರೆಡ್ ರಾಸ್ಪ್ಬೆರಿ ಟೀ ಆರೋಗ್ಯಕಾರಿಯೇ? ಇದು ಹೇಗೆ ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ?
ಈ ಸಲಾಡ್ ಉತ್ಕರ್ಷಣ ನಿರೋಧಕಗಳ ನಿಧಿಯಾಗಿದೆ. ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ. ಕಣ್ಣುಗಳ ಹಾನಿ ತಡೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ