• Home
  • »
  • News
  • »
  • lifestyle
  • »
  • Peanut Salad: ಸಂಜೆ ಸ್ನ್ಯಾಕ್ಸ್​ಗೆ ಆರೋಗ್ಯಕರ ಕಡಲೆಕಾಯಿ ಸಲಾಡ್ ಮಾಡಿ ಸೇವಿಸಿ!

Peanut Salad: ಸಂಜೆ ಸ್ನ್ಯಾಕ್ಸ್​ಗೆ ಆರೋಗ್ಯಕರ ಕಡಲೆಕಾಯಿ ಸಲಾಡ್ ಮಾಡಿ ಸೇವಿಸಿ!

ಕಡಲೆಕಾಯಿಯಲ್ಲಿ ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿದೆ. ಹೀಗಾಗಿ ಇದು ಆರೋಗ್ಯಕ್ಕೆ ಪವರ್ ಪ್ಯಾಕ್ ಆಗಿದೆ. ಕಡಲೆಕಾಯಿ ಒಳಗೊಂಡಿರುವ ಪೋಷಕಾಂಶಗಳು ಕುದ್ದ ನಂತರ 4 ಪಟ್ಟು ಹೆಚ್ಚಾಗುತ್ತದೆ. ಅದಕ್ಕಾಗಿಯೇ ಇದನ್ನು ಹುರಿಯುವ ಬದಲು ಕುದಿಸಿ ತಿನ್ನುವುದು ಹೆಚ್ಚು ಪ್ರಯೋಜನಕಾರಿ.

ಕಡಲೆಕಾಯಿಯಲ್ಲಿ ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿದೆ. ಹೀಗಾಗಿ ಇದು ಆರೋಗ್ಯಕ್ಕೆ ಪವರ್ ಪ್ಯಾಕ್ ಆಗಿದೆ. ಕಡಲೆಕಾಯಿ ಒಳಗೊಂಡಿರುವ ಪೋಷಕಾಂಶಗಳು ಕುದ್ದ ನಂತರ 4 ಪಟ್ಟು ಹೆಚ್ಚಾಗುತ್ತದೆ. ಅದಕ್ಕಾಗಿಯೇ ಇದನ್ನು ಹುರಿಯುವ ಬದಲು ಕುದಿಸಿ ತಿನ್ನುವುದು ಹೆಚ್ಚು ಪ್ರಯೋಜನಕಾರಿ.

ಕಡಲೆಕಾಯಿಯಲ್ಲಿ ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿದೆ. ಹೀಗಾಗಿ ಇದು ಆರೋಗ್ಯಕ್ಕೆ ಪವರ್ ಪ್ಯಾಕ್ ಆಗಿದೆ. ಕಡಲೆಕಾಯಿ ಒಳಗೊಂಡಿರುವ ಪೋಷಕಾಂಶಗಳು ಕುದ್ದ ನಂತರ 4 ಪಟ್ಟು ಹೆಚ್ಚಾಗುತ್ತದೆ. ಅದಕ್ಕಾಗಿಯೇ ಇದನ್ನು ಹುರಿಯುವ ಬದಲು ಕುದಿಸಿ ತಿನ್ನುವುದು ಹೆಚ್ಚು ಪ್ರಯೋಜನಕಾರಿ.

  • Share this:

    ಪ್ರತಿಯೊಬ್ಬರೂ ಚಳಿಗಾಲದಲ್ಲಿ (Winter) ಕಡಲೆಕಾಯಿಯನ್ನು (Peanut) ಹುರಿದು, ಸುಟ್ಟು, ಬೇಯಿಸಿ ಹಾಗೂ ಮಸಾಲಾ ಚಾಟ್ಸ್ ನಂತೆ ತಿನ್ನಲು ಬಯಸುತ್ತಾರೆ. ಸಂಜೆಯಾದ್ರೆ (Evening) ಏನಾದ್ರೂ ತಿನ್ನುವ ಬಯಕೆ ಆಗುತ್ತದೆ. ಆಗ ನೀವು ಕಡಲೆಕಾಯಿ ಸಲಾಡ್ (Peanut Salad) ಸೇವನೆ ಮಾಡಬಹುದು. ಇದು ಆರೋಗ್ಯ ಮತ್ತು ಸ್ಕಿನ್ ಗೂ (Health And Skin) ಬೆಸ್ಟ್ ಆಯ್ಕೆ. ಹುರಿದ, ಕರಿದ ಮತ್ತು ಹಸಿ ಕಡಲೆಕಾಯಿಯನ್ನು ಹಲವು ಬಾರಿ ಸೇವಿಸಿರ್ತೀರಿ. ಆದರೆ ಬೇಯಿಸಿದ ಕಡಲೆಕಾಯಿ ಸಲಾಡ್ ತಿಂದಿದ್ದೀರಾ? ಅಥವಾ ಅದರ ಪ್ರಯೋಜನಗಳ ಬಗ್ಗೆ ಕೇಳಿದ್ದೀರಾ? ಇಲ್ಲಾ ಅಂದ್ರೆ ಇಲ್ಲಿ ನಿಮಗಾಗಿ ಕಡಲೆಕಾಯಿ ಸಲಾಡ್ ರೆಸಿಪಿ ಹೀಗಿದೆ. ಒಮ್ಮೆ ಟ್ರೈ ಮಾಡಿ.


    ಕಡಲೆಕಾಯಿ ಸಲಾಡ್ ಮತ್ತು ಪ್ರಯೋಜನಗಳು


    ಕಡಲೆಕಾಯಿ ಸಲಾಡ್ ಮತ್ತು ಅದರ ಪ್ರಯೋಜನಗಳ ಬಗ್ಗೆ ಇಲ್ಲಿ ಹೇಳಲಾಗಿದೆ. ಅಮೇರಿಕನ್ ಕೆಮಿಕಲ್ ಸೊಸೈಟಿಯ ಸಂಶೋಧನೆಯ ಪ್ರಕಾರ, ಕಡಲೆಕಾಯಿ ಒಳಗೊಂಡಿರುವ ಪೋಷಕಾಂಶಗಳು ಕುದ್ದ ನಂತರ 4 ಪಟ್ಟು ಹೆಚ್ಚಾಗುತ್ತದೆ. ಅದಕ್ಕಾಗಿಯೇ ಇದನ್ನು ಹುರಿಯುವ ಬದಲು ಕುದಿಸಿ ತಿನ್ನುವುದು ಹೆಚ್ಚು ಪ್ರಯೋಜನಕಾರಿ.


    ಕಡಲೆಕಾಯಿ ಆರೋಗ್ಯಕ್ಕೆ ಏಕೆ ಒಳ್ಳೆಯದು?


    ಕಡಲೆಕಾಯಿಯಲ್ಲಿ ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿದೆ. ಹೀಗಾಗಿ ಇದು ಆರೋಗ್ಯಕ್ಕೆ ಪವರ್ ಪ್ಯಾಕ್ ಆಗಿದೆ. ಇದು ಮೊನೊಸಾಚುರೇಟೆಡ್ ಕೊಬ್ಬು, ರೆಸ್ವೆಟ್ರಲ್ ಮತ್ತು ಫೈಟೊಸ್ಟೆರಾಲ್ನಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಕಡಲೆಕಾಯಿ ಸೇವನೆ ಮಧುಮೇಹ, ಹೃದ್ರೋಗ, ಕ್ಯಾನ್ಸರ್ ಮತ್ತು ಆಲ್ಝೈಮರ್ನ ಅಪಾಯವನ್ನು ಕಡಿಮೆ ಮಾಡುತ್ತದೆ.




    ಮಧುಮೇಹಕ್ಕೆ ಸೂಪರ್ ಫುಡ್


    ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ಕಡಲೆಕಾಯಿ ಮಧುಮೇಹಕ್ಕೆ ಸೂಪರ್-ಫುಡ್ ಎಂದು ಹೇಳಿದೆ. ಅವುಗಳು ಫೈಬರ್, ಮೆಗ್ನೀಸಿಯಮ್ ಮತ್ತು ಹೃದಯ-ಆರೋಗ್ಯಕರ ತೈಲ ಹೊಂದಿದೆ. ರಕ್ತದಲ್ಲಿನ ಗ್ಲೂಕೋಸ್‌ನ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಮಧುಮೇಹಿಗಳು ತಮ್ಮ ಆಹಾರದಲ್ಲಿ ಕಡಲೆಕಾಯಿಯನ್ನು ಸೇರಿಸಿಕೊಳ್ಳಬೇಕು.


    ಶಕ್ತಿ ನೀಡುತ್ತದೆ


    ಸ್ವಲ್ಪ ಪ್ರಮಾಣದ ಕಡಲೆಕಾಳನ್ನು ಸೇವಿಸಿದರೂ ಸಾಕಷ್ಟು ಶಕ್ತಿ ಸಿಗುತ್ತದೆ. ಅದಕ್ಕಾಗಿಯೇ ಇದನ್ನು ಪವರ್ ಪ್ಯಾಕ್ ಎಂದು ಕರೆಯುತ್ತಾರೆ. ಶೇಂಗಾದಲ್ಲಿ ಶೇ.50ರಷ್ಟು ಆರೋಗ್ಯಕರ ಕೊಬ್ಬಿದ್ದು, ದೇಹಕ್ಕೆ ಶಕ್ತಿ ನೀಡುತ್ತದೆ.


    ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ


    ಕಡಲೆಕಾಯಿಯಲ್ಲಿ ಅನೇಕ ಉತ್ಕರ್ಷಣ ನಿರೋಧಕಗಳು ಇವೆ. ಇದು ರೋಗಗಳಿಂದ ಪರಿಹಾರ ನೀಡುತ್ತದೆ. ವಯಸ್ಸಾಗುವಿಕೆ ಪ್ರಕ್ರಿಯೆ ನಿಧಾನಗೊಳಿಸುತ್ತದೆ. ಇದು ಉತ್ಕರ್ಷಣ ನಿರೋಧಕ ಖನಿಜಗಳು, ತಾಮ್ರ, ಸೆಲೆನಿಯಮ್, ಮ್ಯಾಂಗನೀಸ್ ಮತ್ತು ಫ್ಲೇವನಾಯ್ಡ್ಗಳನ್ನು ಹೊಂದಿದೆ.


    ಇದು ವಿಟಮಿನ್ ಇ, ಕ್ಲೋರೊಜೆನಿಕ್ ಆಸಿಡ್, ಕೆಫೀಕ್ ಆಸಿಡ್, ಕೂಮರಿಕ್ ಆಸಿಡ್ ಮತ್ತು ಫೆರುಲಿಕ್ ಆಮ್ಲ ಹೊಂದಿದೆ. ಇದು ಉತ್ತಮ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ.


    ಚರ್ಮದ ಆರೋಗ್ಯ ಕಾಪಾಡುತ್ತದೆ


    ಕಡಲೆಕಾಳು ಸೇವನೆ ತ್ವಚೆಯನ್ನು ಸ್ವಲ್ಪ ಮಟ್ಟಿಗೆ ಆರೋಗ್ಯವಾಗಿಡುತ್ತದೆ. ಕಡಲೆಕಾಯಿಯಲ್ಲಿ ಅರ್ಜಿನೈನ್ ಎಂಬ ಅಮೈನೋ ಆಮ್ಲವಿದೆ. ಇದು ತ್ವಚೆಯನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. ಇದು ಯಕೃತ್ತನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ, ಅಮೋನಿಯಾ ಮತ್ತು ದೇಹದ ಇತರ ವಿಷಗಳ ಪರಿಣಾಮ ಕಡಿಮೆ ಮಾಡುತ್ತದೆ.


    ತೂಕ ನಿಯಂತ್ರಣಕ್ಕೆ ಸಹಕಾರಿ


    ಜನರು ತೂಕ ಹೆಚ್ಚಾಗುವ ಸಮಸ್ಯೆಯಿದ್ದರೆ ಕಡಲೆಕಾಯಿ ಸಹಕಾರಿ. ಕಡಲೆಕಾಯಿ ಆರೋಗ್ಯಕರ ಕೊಬ್ಬನ್ನು ಒಳಗೊಂಡಿದೆ. ಆದ್ದರಿಂದ ಇದನ್ನು ಆರೋಗ್ಯಕರ ಆಹಾರದ ಭಾಗವಾಗಿ ಮಾಡುವುದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು.


    ಕಡಲೆಕಾಯಿ ಸಲಾಡ್ ರೆಸಿಪಿ


    ಬೇಕಾದ ಪದಾರ್ಥಗಳು


    ಬೇಯಿಸಿದ ಕಡಲೆಕಾಯಿ ಒಂದು ಕಪ್, ಬೇಯಿಸಿದ ಕಾರ್ನ್ ಒಂದು ಕಪ್, ಸಣ್ಣದಾಗಿ ಕೊಚ್ಚಿದ ಕ್ಯಾರೆಟ್ ಅರ್ಧ ಕಪ್, ಸಣ್ಣದಾಗಿ ಕತ್ತರಿಸಿದ ಕ್ಯಾಪ್ಸಿಕಂ ಅರ್ಧ ಕಪ್, ಸಣ್ಣದಾಗಿ ಕತ್ತರಿಸಿದ ಟೊಮೆಟೊ ಅರ್ಧ ಕಪ್, ಮೊಳಕೆಯೊಡೆದ ಹೆಸರುಕಾಳು ಒಂದು ಕಪ್, ಕೊತ್ತಂಬರಿ ಸೊಪ್ಪು ಅರ್ಧ ಕಪ್, ಅರ್ಧ ನಿಂಬೆ ರಸ ಒಂದು ಟೀಸ್ಪೂನ್, ಉಪ್ಪು ರುಚಿಗೆ ತಕ್ಕಂತೆ ಬೇಕು.


    ಇದನ್ನೂ ಓದಿ: ಬಿಪಿ ಸಮಸ್ಯೆಗೆ ಬೀಟ್​ರೂಟ್​ ಜ್ಯೂಸ್ ಬೆಸ್ಟ್- ಇದರಲ್ಲಿ ಏನೆಲ್ಲಾ ಪ್ರಯೋಜನಗಳಿದೆ ನೋಡಿ


    ಬೇಯಿಸಿದ ಕಡಲೆಕಾಯಿ ಸಲಾಡ್ ಮಾಡುವುದು ಹೇಗೆ?


    ಬೇಯಿಸಿದ ಕಡಲೆಕಾಯಿ ಮತ್ತು ಜೋಳವನ್ನು ಒಂದು ಪಾತ್ರೆಯಲ್ಲಿ ಹಾಕಿ. ನಂತರ ಅದರಲ್ಲಿ ಎಲ್ಲಾ ತರಕಾರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ನಿಂಬೆ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಕೊತ್ತಂಬರಿ ಸೊಪ್ಪು ಹಾಕಿ. ಆರೋಗ್ಯಕರ ಸಲಾಡ್ ತಿನ್ನಿರಿ.

    Published by:renukadariyannavar
    First published: