ಚಳಿಗಾಲದಲ್ಲಿ (Winter) ಬರುವ ಕ್ರಿಸ್ ಮಸ್ (Christmas) ಗಾಗಿ ಜನರು (People) ಸಾಕಷ್ಟು ತಯಾರಿ ಮಾಡಿಕೊಳ್ತಾರೆ. ಕ್ರಿಸ್ ಮಸ್ ನಂತರ ಹೊಸ ವರ್ಷದ (New Year) ಆರಂಭ. ಇದಕ್ಕಾಗಿ ಜನರು ಮನೆಗಳಲ್ಲಿ ತಿಂಡಿ ತಿನಿಸು ರೆಡಿ ಮಾಡ್ತಾರೆ. ಅದರಲ್ಲಿ ಮುಖ್ಯವಾಗಿ ಕೇಕ್ (Cake) ವಿಶೇಷವಾಗಿ ತಯಾರಿಸಲಾಗುತ್ತದೆ. ಕ್ರಿಸ್ ಮಸ್ ಹಬ್ಬಕ್ಕಾಗಿ ನೀವು ಮನೆಯಲ್ಲಿ ಕೇಕ್ ಮಾಡುವ ಪ್ಲಾನ್ ಮಾಡಿಕೊಂಡಿದ್ದರೆ, ಇಲ್ಲಿ ಆರೋಗ್ಯಕರ ಕೇಕ್ ಮಾಡುವ ವಿಧಾನ ಹೇಳುತ್ತಿದ್ದೇವೆ. ಸಕ್ಕರೆ ಬದಲು ಬೆಲ್ಲದಿಂದ ತಯಾರಿಸಲಾಗುವ ಮೊಟ್ಟೆ ರಹಿತ ಕೇಕ್ ಸಸ್ಯಾಹಾರಿಗಳಿಗೆ ಸಖತ್ ಇಷ್ಟವಾಗುತ್ತದೆ. ಅಲ್ಲದೇ ಸಕ್ಕರೆ ಬದಲು ಬೆಲ್ಲ ಬಳಸಲಾಗಿದ್ದು, ಡಯಟ್ ಗೆ ಹೊಡೆತ ಬೀಳುವುದಿಲ್ಲ.
ಕ್ರಿಸ್ ಮಸ್ ಹಬ್ಬಕ್ಕೆ ಮನೆಯಲ್ಲೇ ತಯಾರಿಸಿ ಹೆಲ್ದೀ ಕೇಕ್
ಪ್ರತಿಯೊಬ್ಬರೂ ಉತ್ತಮ ಆಹಾರ ಸೇವಿಸಲು ಬಯಸುತ್ತಾರೆ. ಯಾವಾಗಲೂ ರುಚಿಕರ, ವಿಶೇಷವಾಗಿ ಸಿಹಿ ತಿನ್ನಲು ಬಯಸುತ್ತಾರೆ. ಕ್ರಿಸ್ಮಸ್ 2022 ಡಿಸೆಂಬರ್ ತಿಂಗಳಲ್ಲಿ ಹಬ್ಬದ ಸಂಭ್ರಮ ಜೋರು. ಮನೆಯಲ್ಲಿ ಪಾರ್ಟಿಗಳು ನಡೆಯುತ್ತವೆ. ಮತ್ತು ಅನಾರೋಗ್ಯಕರ ಆಹಾರ ಮತ್ತು ಪಾನೀಯ ಸೇವನೆ ಹೆಚ್ಚಾಗುತ್ತದೆ. ಇದನ್ನು ಆರೋಗ್ಯಕರವಾಗಿ ಪರಿವರ್ತಿಸಿ.
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಬ್ಬಕ್ಕಾಗಿ ಆರೋಗ್ಯಕರ ಕೇಕ್ ರೆಸಿಪಿ ಇಲ್ಲಿದೆ ನೋಡಿ. ಈ ಕೇಕ್ ಆರೋಗ್ಯ ಮತ್ತು ರುಚಿಯ ಟೇಸ್ಟಿ ಸಂಯೋಜನೆ. ಈ ಕೇಕ್ ತಯಾರಿಸಲು ಸಕ್ಕರೆ ಬಳಸಿಲ್ಲ. ಬೆಲ್ಲ ಬಳಸಲಾಗಿದೆ. ಟೇಸ್ಟಿ ಮತ್ತು ಆರೋಗ್ಯಕರ ಮೊಟ್ಟೆ ರಹಿತ ಬೆಲ್ಲದ ಕೇಕ್ ಪಾಕವಿಧಾನ ನೋಡೋಣ.
ಮೊಟ್ಟೆ ರಹಿತ ಬೆಲ್ಲದ ಕೇಕ್ ತಯಾರಿಸಲು ಬೇಕಾಗುವ ಪದಾರ್ಥಗಳು
ಎರಡು ಕಪ್ ಮೊಸರು, ಒಂದು ಟೀಸ್ಪೂನ್ ಅಡಿಗೆ ಸೋಡಾ, ಒಂದು ಕಪ್ ಸಸ್ಯಜನ್ಯ ಎಣ್ಣೆ, ಒಂದು ಟೀ ಸ್ಪೂನ್ ವೆನಿಲ್ಲಾ, ಅರ್ಧ ಕಪ್ ಹಾಲು, ಅರ್ಧ ಕಪ್ ಕತ್ತರಿಸಿದ ಬಾದಾಮಿ, ಮೂರು ಕಪ್ ಗೋಧಿ ಹಿಟ್ಟು, ಎರಡು ಟೀಸ್ಪೂನ್ ಬೇಕಿಂಗ್ ಪೌಡರ್, ಒಂದೂವರೆ ಕಪ್ ಬೆಲ್ಲ,
ಮೊಟ್ಟೆ ರಹಿತ ಬೆಲ್ಲದ ಕೇಕ್ ತಯಾರಿಸುವ ವಿಧಾನ
ಮೊದಲು ವೃತ್ತಾಕಾರದ ಪ್ಯಾನ್ ನ್ನು ಎಣ್ಣೆಯಿಂದ ಗ್ರೀಸ್ ಮಾಡಿ. ನಂತರ ದೊಡ್ಡ ಬಟ್ಟಲಿನಲ್ಲಿ ಮೊಸರು ಮತ್ತು ಅಡಿಗೆ ಸೋಡಾ ಹಾಕಿ ಮಿಶ್ರಣ ಮಾಡಿ. 5 ನಿಮಿಷ ಪಕ್ಕಕ್ಕಿರಿಸಿ. ನಂತರ ಮಿಶ್ರಣವು ನೊರೆಯಾಗಿ ಗಾತ್ರ ಹೆಚ್ಚುತ್ತದೆ. ಈಗ ಇನ್ನೊಂದು ಪಾತ್ರೆಯಲ್ಲಿ ಹಿಟ್ಟು ಮತ್ತು ಬೇಕಿಂಗ್ ಪೌಡರ್ ಶೋಧಿಸಿ, ಪಕ್ಕಕ್ಕಿರಿಸಿ.
ಒದ್ದೆಯಾದ ಪದಾರ್ಥಗಳಿಗೆ, ಬೆಲ್ಲ ಮತ್ತು ಎಣ್ಣೆ ಸೇರಿಸಿ, ಬೆರೆಸಿರಿ. ನಂತರ ಈ ಹಿಟ್ಟಿಗೆ ಮೊಸರು ಮತ್ತು ಅಡಿಗೆ ಸೋಡಾ ಮಿಶ್ರಣ ಹಾಕಿ. ಮಿಶ್ರಣ ಮಾಡಿ. ನಂತರ ವೆನಿಲ್ಲಾ ಮತ್ತು ಹಾಲು ಸೇರಿಸಿ ಮಿಶ್ರಣ ಮಾಡಿ. ಈಗ ಹಿಟ್ಟನ್ನು ಒಟ್ಟಿಗೆ ಸೇರಿಸಿ. ತಯಾರಾದ ಬೇಕಿಂಗ್ ಪ್ಯಾನ್ಗೆ ಹಿಟ್ಟು ಹಾಕಿ. ಕತ್ತರಿಸಿದ ಬಾದಾಮಿ ಇರಿಸಿ. 50 ನಿಮಿಷ ಒಲೆ ಮೇಲಿರಿಸಿ ಕೇಕ್ ತಯಾರಿಸಿ. ಮೊಟ್ಟೆ ರಹಿತ ಕೇಕ್ ಸಿದ್ಧವಾಗಿದೆ.
ಬೆಲ್ಲವು ದೇಹವನ್ನು ಬೆಚ್ಚಗಿರಿಸುತ್ತದೆ
ಚಳಿಗಾಲದಲ್ಲಿ ಬೆಲ್ಲವು ದೇಹವನ್ನು ಬೆಚ್ಚಗಿಡುತ್ತದೆ. ಬೆಲ್ಲದಲ್ಲಿ ಆ್ಯಂಟಿಆಕ್ಸಿಡೆಂಟ್ ಗಳಿದ್ದು, ದೇಹವನ್ನು ಆರೋಗ್ಯವಾಗಿಡುತ್ತದೆ. ಅನೇಕ ರೋಗಗಳಿಂದ ರಕ್ಷಿಸುತ್ತದೆ. ತೂಕ ಇಳಿಸುವವರಿಗೆ ಸಹಕಾರಿ.
ಇದನ್ನೂ ಓದಿ: ಎಣ್ಣೆ ಬಳಸದೇ ತಯಾರಿಸುವ ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವ ವಿಧಾನ
ಗೋಧಿ ಹಿಟ್ಟು ಬಳಕೆ ಆರೋಗ್ಯಕರ
ಮೈದಾ ಹಿಟ್ಟನ್ನು ಹೆಚ್ಚಿನ ಕೇಕ್ಗಳಲ್ಲಿ ಬಳಸುತ್ತಾರೆ. ಇಲ್ಲಿ ಗೋಧಿ ಹಿಟ್ಟು ಬಳಸಲಾಗಿದ್ದು, ಇದು ಆರೋಗ್ಯಕ್ಕೆ ಹಾನಿ ತಡೆಯುತ್ತದೆ. ಅದು ಆರೋಗ್ಯಕರ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ