Health Tips: ಮೂಳೆಗಳ ಆರೋಗ್ಯ: ಈ ಹಣ್ಣು-ತರಕಾರಿಗಳು ನಿಮ್ಮ ಆಹಾರದ ಭಾಗವಾಗಿರಲಿ..!

ಮೂಳೆಗಳನ್ನು ಬಲಗೊಳಿಸುವ ಪೌಷ್ಟಿಕಾಂಶಗಳು ಹೆಚ್ಚಿರುವ ಹಣ್ಣುಗಳು ಮತ್ತು ತರಕಾರಿಗಳ ಪಟ್ಟಿ ಇಲ್ಲಿದೆ. ಇವುಗಳನ್ನು ವಯಸ್ಸನ್ನು ಲೆಕ್ಕಿಸದೆ ನಿಯಮಿತ ಆಹಾರದಲ್ಲಿ ಸೇರಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಾನವನ ದೇಹಕ್ಕೆ ಮೂಳೆ ಮತ್ತು ಮಾಂಸವು ಬಲ ಹಾಗೂ ಆಕಾರ ನೀಡುತ್ತದೆ. ಹಾಗಾಗಿ ಮೂಳೆಯ ಆರೋಗ್ಯದ ಕಡೆಗೆ ಗಮನ ನೀಡಬೇಕಾಗುತ್ತದೆ. ಮನುಷ್ಯನಿಗೆ ವಯಸ್ಸಾದಂತೆ ಮೂಳೆ ದುರ್ಬಲವಾಗುತ್ತಾ ಹೋಗುತ್ತದೆ. ಆದ್ದರಿಂದ ಮನುಷ್ಯ ಮೂಳೆ ಆರೋಗ್ಯಕ್ಕೆ ಸಂಬಂಧಿಸಿದ ಪೋಷಕಾಂಶಗಳಿರುವ ಆಹಾರವನ್ನು ಹೆಚ್ಚು ಸೇವಿಸಬೇಕಾಗುತ್ತದೆ. ಮೂಳೆ ಮತ್ತು ಹಲ್ಲಿನ ರಚನೆಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ತುಂಬಾ ಉಪಯುಕ್ತವಾದ ಜೀವಸತ್ವ. ಹಾಗಾಗಿ ಇವುಗಳು ಯಥೇಚ್ಛವಾಗಿರುವ ಆಹಾರದ ಕಡೆಗೆ ಹೆಚ್ಚು ಗಮನ ಹರಿಸಿ ಅಂತಹ ಆಹಾರಗಳನ್ನೇ ಹೆಚ್ಚು ಸೇವಿಸಬೇಕಾಗುತ್ತದೆ.

ಮೂಳೆಗಳನ್ನು ಬಲಗೊಳಿಸುವ ಪೌಷ್ಟಿಕಾಂಶಗಳು ಹೆಚ್ಚಿರುವ ಹಣ್ಣುಗಳು ಮತ್ತು ತರಕಾರಿಗಳ ಪಟ್ಟಿ ಇಲ್ಲಿದೆ. ಇವುಗಳನ್ನು ವಯಸ್ಸನ್ನು ಲೆಕ್ಕಿಸದೆ ನಿಯಮಿತ ಆಹಾರದಲ್ಲಿ ಸೇರಿಸಬೇಕು.

Bone Health, Nutrients, Vitamin, Health, Calcium, ಮೂಳೆ ಆರೋಗ್ಯ, ಪೋಷಕಾಂಶ, ಜೀವಸತ್ವ, ಆರೋಗ್ಯ, ಕ್ಯಾಲ್ಸಿಯಂ,Health, Immunity.  ನುಗ್ಗೆ ಸೊಪ್ಪು, ಆರೋಗ್ಯ, ರೋಗನಿರೋಧಕ ಶಕ್ತಿ, Moringa leaves keeps your bones strong and fights against osteoporosis stg ae, You Require These Many Nutrients For Healthy Bones ae,
ಪ್ರಾತಿನಿಧಿಕ ಚಿತ್ರ


1. ಪಾಲಕ್ ಸೊಪ್ಪು
ಹಸಿರು ಎಲೆ ತರಕಾರಿಗಳು ಬಹಳಷ್ಟು ಕ್ಯಾಲ್ಸಿಯಂ ಹೊಂದಿರುತ್ತದೆ. ಇದು ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಒಂದು ಕಪ್ ಬೇಯಿಸಿದ ಪಾಲಕ್ ಸೊಪ್ಪು ದೇಹಕ್ಕೆ ಒಂದು ದಿನಕ್ಕೆ ಸುಮಾರು 25 ಪ್ರತಿಶತದಷ್ಟು ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ. ನಾರಿನಂಶವಿರುವ ಎಲೆಗಳು ವಿಟಮಿನ್ ಎ ಮತ್ತು ಕಬ್ಬಿಣವನ್ನು ಹೇರಳವಾಗಿ ಹೊಂದಿರುತ್ತವೆ.

ಇದನ್ನೂಓದಿ: Happy Birthday Mammootty: ಹುಟ್ಟುಹಬ್ಬದಂದು ಮಗಳಿಂದ ಬೆಸ್ಟ್​ ಗಿಫ್ಟ್​ ಪಡೆದ ಮಲಯಾಳಂ ನಟ ಮಮ್ಮುಟ್ಟಿ

2. ಕಿತ್ತಳೆ
ಈ ಹಣ್ಣು ಅನೇಕ ಜನರಲ್ಲಿ ಅಚ್ಚುಮೆಚ್ಚಿನದ್ದಾಗಿರುತ್ತದೆ. ಕಿತ್ತಳೆ ರಸವು ದೇಹಕ್ಕೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡನ್ನೂ ಒದಗಿಸುತ್ತದೆ. ಇದರಿಂದಾಗಿ ಮೂಳೆಯು ಹೆಚ್ಚೆಚ್ಚು ಬಲವಾಗುತ್ತದೆ. ಕಿತ್ತಳೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಆಸ್ಟಿಯೊಪೋರೋಸಿಸ್ ಅನ್ನು ತಡೆಯಬಹುದು.

3. ಬಾಳೆಹಣ್ಣು
ಬಾಳೆಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ, ಮೆಗ್ನೀಷಿಯಂನ ಉತ್ತಮ ಆಗರವಾಗಿದೆ. ಇದು ಪೋಷಕಾಂಶದ ಅವಿಭಾಜ್ಯ ಅಂಗವಾಗಿದ್ದು, ಮೂಳೆ ಮತ್ತು ಹಲ್ಲುಗಳ ರಚನೆಯ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ, ಮೂಳೆಗಳ ಆರೋಗ್ಯಕ್ಕೆ ದಿನಕ್ಕೊಂದಾದರೂ ಬಾಳೆಹಣ್ಣು ಸೇವಿಸುವುದು ಉತ್ತಮ.

ಇದನ್ನೂ ಓದಿ: Yatharv Video: ಮಗನ ಮುದ್ದಾದ ವಿಡಿಯೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್​..!

4. ಅನಾನಸ್
ಅನಾನಸ್ ಹಣ್ಣು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಅನ್ನು ನೇರವಾಗಿ ದೇಹಕ್ಕೆ ನೀಡುವುದಿಲ್ಲ. ಬದಲಾಗಿ, ಇದು ಪೊಟ್ಯಾಶಿಯಂ ಮೂಲವಾಗಿದ್ದು ಅದು ದೇಹದಲ್ಲಿ ಆ್ಯಸಿಡ್ ಲೋಡ್ ಅನ್ನು ತಟಸ್ಥಗೊಳಿಸುತ್ತದೆ ಮತ್ತು ಕ್ಯಾಲ್ಸಿಯಂ ನಷ್ಟವನ್ನು ತಡೆಯುತ್ತದೆ. ಇದು ವಿಟಮಿನ್ ಎ ನ ಉತ್ತಮ ಮೂಲವಾಗಿದೆ.

5. ಸ್ಟ್ರಾಬೆರಿ
ಬೆರ್ರಿಗಳು ಸಂಪೂರ್ಣ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಅವು ಕ್ಯಾಲ್ಸಿಯಂ, ಮ್ಯಾಂಗನೀಸ್, ಪೊಟ್ಯಾಶಿಯಂ, ವಿಟಮಿನ್ ಕೆ ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳಿಂದ ತುಂಬಿರುತ್ತವೆ, ಇದು ಮೂಳೆ ರಚನೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: Radhika Apte Birthday Special: ರಹಸ್ಯ ವಿವಾಹದಿಂದ ಎಂಎಂಸ್​ ಲೀಕ್​ ವಿವಾದದವರಗೆ..!

6. ಪಪ್ಪಾಯ ಹಣ್ಣು
ಪಪ್ಪಾಯ ಹಣ್ಣಿನಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಅಪಾರ ಪ್ರಮಾಣದ ಕ್ಯಾಲ್ಸಿಯಂ ಇದೆ. 100 ಗ್ರಾಂ ಪಪ್ಪಾಯಿಯ ಸೇವನೆಯಲ್ಲಿ ನೀವು 20 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಕಾಣಬಹುದು ಎಂದು ಹೇಳಲಾಗುತ್ತದೆ. ಡಯಟ್ ಮಾಡುವವರು ಪಪ್ಪಾಯವನ್ನು ನಿರಂತರವಾಗಿ ಆಹಾರದಲ್ಲಿ ತೆಗೆದುಕೊಳ್ಳಬಹುದು.

7. ಕಿವಿ ಹಣ್ಣು
ಕಿವಿ ಹಣ್ಣು ಅಥವಾ ಅದರ ರಸವಿರಲಿ, ಇದರಲ್ಲಿ ಸುಮಾರು 60 ಮಿಗ್ರಾಂಗೂ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಇದು ಮೂಳೆಗಳ ಬಲ, ಹಲ್ಲುಗಳ ರಚನೆ ಮತ್ತು ಆಸ್ಟಿಯೊಪೋರೋಸಿಸ್ ಅನ್ನು ತಡೆಯಲು ಸಹಾಯ ಮಾಡುತ್ತದೆ.
Published by:Anitha E
First published: