'ಶೂ'ನಿಂದ ಟ್ರೆಂಡ್​ ಸೃಷ್ಟಿಸಲು ಹೋಗಿ ಟ್ರೋಲಿಗರಿಗೆ ಆಹಾರವಾದ ಶಾರುಖ್ ಖಾನ್ ಮಗ

news18
Updated:August 7, 2018, 4:36 PM IST
'ಶೂ'ನಿಂದ ಟ್ರೆಂಡ್​ ಸೃಷ್ಟಿಸಲು ಹೋಗಿ ಟ್ರೋಲಿಗರಿಗೆ ಆಹಾರವಾದ ಶಾರುಖ್ ಖಾನ್ ಮಗ
news18
Updated: August 7, 2018, 4:36 PM IST
-ನ್ಯೂಸ್ 18 ಕನ್ನಡ

ಬಾಲಿವುಡ್​ ಕಿಂಗ್ ಖಾನ್ ಶಾರುಖ್ ಮಗಳು ಸುಹಾನಾ ಇತ್ತೀಚೆಗೆ ವೋಗ್ ಮ್ಯಾಗಜಿನ್​​ನ ಮುಖಪುಟದಲ್ಲಿ ಸಖತ್ ಸ್ಟೈಲಿಷ್ಟ್​ ಆಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಸದಾ ವಿತಂಡ ವಾದಗಳಿಗೆ ಆಹಾರವಾಗುತ್ತಿದ್ದ ಸುಹಾನ ಖಾನ್​ರ ಈ ಫೋಟೋಗೆ ಸಾಮಾಜಿಕ ತಾಣದಲ್ಲಿ ಮೆಚ್ಚುಗೆಗಳು ಹರಿದುಬಂದಿದ್ದವು. ಆದರೆ ಈ ಬಾರಿ ನೆಟ್ಟಿಜನ್​ಗಳಿಗೆ ಆಹಾರವಾಗಿದ್ದು ಶಾರೂಖ್ ಹಿರಿ ಮಗ ಆರ್ಯನ್ ಖಾನ್.

ಮೊನ್ನೆಯಷ್ಟೇ ಖುಷಿ ಕಪೂರ್ ಮತ್ತು ಶಾನಯ ಕಪೂರ್ ಜೊತೆ ಫ್ರೆಂಡ್​ಶಿಪ್​ ಡೇ ಆಚರಿಸಿಕೊಂಡಿದ್ದ ಆರ್ಯನ್ ಖಾನ್ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆರ್ಯನ್ ಧರಿಸಿದ್ದ ಶೂ ಬಣ್ಣಗಳು ಈಗ ಟ್ರೋಲ್​ ಪೇಜ್​ಗಳ ಆಹಾರವಾಗಿದೆ. ಸ್ನೇಹಿತರ​ ಜೊತೆ ಬಾಂದ್ರಾ ರೆಸ್ಟೋರೆಂಟ್​ನಲ್ಲಿ ಕಾಣಿಸಿದ್ದ  ಆರ್ಯನ್ ಹೊರ ಹೋಗುತ್ತಿದ್ದಂತೆ ಕ್ಯಾಮೆರಾ ಕಣ್ಣುಗಳು ಅವರನ್ನು ಮುತ್ತಿಕೊಂಡಿದೆ.

ಕ್ಯಾಮೆರಾವನ್ನು ಯಾವುದೇ ಅಂಜಿಕೆಯಿಲ್ಲದೆ ಆರ್ಯನ್​ ಫೇಸ್ ಮಾಡಿದ್ದರು. ಆದರೆ ಕಿಂಗ್​ ಖಾನ್​ ಮಗನ ಸ್ಟೈಲ್ ಈಗ ನಗೆಪಾಟಲಿಗೀಡಾಗಿದೆ. ಹೊಂದಿಕೆಯಾಗದ ಎರಡು ಬಣ್ಣಗಳ ಶೂಗಳನ್ನು ಜೂನಿಯರ್ ಖಾನ್ ಧರಿಸಿದ್ದರು. ಒಂದು ಕಾಲಿಗೆ ಕೆಂಪು ಮತ್ತೊಂದು ಕಾಲಿಗೆ ಕಪ್ಪು ಬಣ್ಣದ ಶೂ ಧರಿಸಿದ್ದ ಆರ್ಯನ್ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಬಾಲಿವುಡ್​ ಬಾದ್​ಷಾನ ಮಗ ಫ್ಯಾಷನ್​ ಸೆನ್ಸ್​ ಬಗ್ಗೆ ಸಾಮಾಜಿಕ ತಾಣದಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ.
Loading...

A post shared by Manav Manglani (@manav.manglani) on

ಫೋಟೊಗ್ರಾಫರ್ ಮಾನವ್ ಮಂಗ್ಲಾನಿ 'ವಿಲಕ್ಷಣ ಫ್ಯಾಷನ್' ಎಂದು ಇನ್​ಸ್ಟಾಗ್ರಾಂನಲ್ಲಿ ಆರ್ಯನ್ ಫೋಟೋ ಹಂಚಿಕೊಂಡರೆ, ಮತ್ತೊಬ್ಬರು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಸೆನ್ಸ್​ ಎತ್ತಕಡೆ ಸಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಆರ್ಯನ್ ಎಲ್ಲೋ ಶೂ ಬದಲಿಸಿಕೊಂಡು ಬಂದಿದ್ದಾರೆ ಎಂಬ ವ್ಯಂಗ್ಯವಾಡುತ್ತಿದ್ದಾರೆ.ಈ ಹಿಂದೆ ವಿವಾಹ ಸಂದರ್ಭದಲ್ಲಿ ಸೋನಮ್ ಕಪೂರ್ ಪತಿ ಆನಂದ್ ಅಹುಜಾ ಅವರು ಶೇರ್ವಾನಿಗೆ ಸ್ಪೋರ್ಟ್ಸ್​ ಶೂ ಧರಿಸಿ ಅಪಹಾಸ್ಯಕ್ಕೀಡಾಗಿದ್ದರು. ಬಿಕಿನಿ ಉಡುಗೆಯಲ್ಲಿ ಕಾಣಿಸಿದಾಗೆಲ್ಲಾ  ಟ್ರೋಲ್​ಗೆ ಒಳಗಾಗುತ್ತಿದ್ದ ಸುಹಾನ ಜಾಗದಲ್ಲಿ ಈ ಬಾರಿ ಆರ್ಯನ್ ಖಾನ್ ಅಪಹಾಸ್ಯಕೀಡಾಗಿದ್ದಾರೆ. ಏನೇಯಾದರೂ ಶಾರುಖ್​ ಖಾನ್ ಮಗ-ಮಗಳು ಟ್ರೋಲ್​ಗಳಿಂದ ಈಗಾಗಲೇ ಬಾಲಿವುಡ್ ಸೆಲೆಬ್ರಿಟಿ ಪಟ್ಟಕ್ಕೇರಿರುವುದಂತು ಸುಳ್ಳಲ್ಲ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ