Fighting Cancer: ಕ್ಯಾನ್ಸರ್‌ ಬರದಂತೆ ತಡೆಯಲು ಈ ಸೂಪರ್‌ಫುಡ್‌ಗಳನ್ನು ಮಿಸ್ ಮಾಡ್ಬೇಡಿ

ನೀವು ಕ್ಯಾನ್ಸರ್ ವಿರುದ್ಧ ಹೋರಾಡಲು ಬಯಸಿದರೆ ನಿಮ್ಮ ಊಟದ ತಟ್ಟೆಯಲ್ಲಿ ಏನೇನು ಇರಬೇಕು ಏನೇನು ಇರಬಾರದು ಎಂಬುದರ ಬಗ್ಗೆ ಗಮನ ಕೊಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕ್ಯಾನ್ಸರ್‌ನಂತಹ(Cancer) ರೋಗಗಳು ದೇಹ ವ್ಯಾಪಿಸುವವರೆಗೆ ಗೊತ್ತೇ ಆಗುವುದಿಲ್ಲ, ತಿಳಿದಾಗ ಅನ್ನು ಸಂಭಾಳಿಸದ ಸ್ಥಿತಿಯಷ್ಟರ ಮಟ್ಟಿಗೆ ಆರೋಗ್ಯ ಹದೆಗೆಟ್ಟಿರುತ್ತದೆ. ರೋಗಗಳಿಗೆ ಮದ್ದು ಮಾಡುವುದಕ್ಕಿಂತಲೂ ಬೆಸ್ಟ್ ದಾರಿ ರೋಗ ಬರದಂತೆ ತಡೆಯುವುದು. ಅದು ಕ್ಯಾನ್ಸರ್‌ಗೂ ಅನ್ವಯಿಸುತ್ತದೆ. ಕ್ಯಾನ್ಸರ್ ಬಂದ ನಂತರ ಹೋರಾಡುವುದರ ಬದಲು ಅದಕ್ಕೂ ಮುನ್ನವೇ ಎಚ್ಚೆತ್ತುಕೊಂಡರೆ ಅದಲ್ಲವೇ ಉತ್ತಮ ? ಒಂದಷ್ಟು ಡಯೆಟ್(Diet), ಆಹಾರ ಕುರಿತು ಗಮನಕೊಟ್ಟರೆ ಕ್ಯಾನ್ಸರ್ ನಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳಬಹುದು. ಕೆಲವೊಂದು ಆಹಾರ ವಸ್ತುಗಳನ್ನು ನೈಸರ್ಗಿಕವಾಗಿ ಕ್ಯಾನ್ಸರ್ ಬರದಂತೆ ತಡೆಯುವ ಸೂಪರ್ ಪವರ್ ಹೊಂದಿದೆ, ಆ ಸೂಪರ್ ಫುಡ್ ನಮ್ಮ ತಟ್ಟೆಗಳಲ್ಲಿರಬೇಕು ಅಷ್ಟೆ.

  ನೀವು ಕ್ಯಾನ್ಸರ್ ವಿರುದ್ಧ ಹೋರಾಡಲು ಬಯಸಿದರೆ ನಿಮ್ಮ ಊಟದ ತಟ್ಟೆಯಲ್ಲಿ ಏನೇನು ಇರಬೇಕು ಏನೇನು ಇರಬಾರದು ಎಂಬುದರ ಬಗ್ಗೆ ಗಮನ ಕೊಡಿ. ಆಹಾರ ಆಯ್ಕೆಯಲ್ಲಿ(Choose Food) ಎಚ್ಚರ ಇರಲಿ, ಚೂಸಿಯಾಗಿರಿ, ಕಾನ್ಶಿಯಸ್ ಆಗಿರಿ. ನೀವು ಆಯ್ಕೆ ಮಾಡುವ ಆಹಾರ ಆರೋಗ್ಯದ ವಿಚಾರದಲ್ಲಿ ನೀವು ಎಂತಹಾ ವ್ಯಕ್ತಿಯಾಗಲಿದ್ದೀರಿ ಎನ್ನುವುದನ್ನೂ ನಿರ್ಧರಿಸುತ್ತದೆ. ಮನೆಯೊಳಗೂ, ಹೊರಗೂ ಫುಲ್ ಟೈಂ ನೀವು ಪ್ರೊಸೆಸ್ಡ್ ಆಹಾರಗಳನ್ನು ಸೇವಿಸುವಂತಿಲ್ಲ. ಇದು ಅಪಾಯಕಾರಿ ಎನ್ನುವುದು ನಿಮಗೂ ಗೊತ್ತಿರುತ್ತದೆ.

  ಅನ್ನನಾಳ, ಬಾಯಿ, ಗಂಟಲಕುಳಿ, ಹೊಟ್ಟೆ, ಗುದನಾಳ, ಎಂಡೊಮೆಟ್ರಿಯಮ್ ಮತ್ತು ಅಂಡಾಶಯದ ಕ್ಯಾನ್ಸರ್‌ಗಳಿಗೆ ಸೀಮಿತ ಸಂಖ್ಯೆಯ ಅಧ್ಯಯನಗಳು ಮಾತ್ರ ನಮ್ಮಲ್ಲಿ ಲಭ್ಯ ಇವೆ. ಅವುಗಳಲ್ಲಿ ಹೆಚ್ಚಿನವುಗಳ ಪ್ರಕಾರ ಫೈಬರ್-ಒಳಗೊಂಡಿರುವ ಆಹಾರವನ್ನು ಸೇವಿಸುವುದರಿಂದ ಕ್ಯಾನ್ಸರ್ ವಿರುದ್ಧ ರಕ್ಷಣಾತ್ಮಕ ಪರಿಣಾಮವನ್ನು ಹೊಂದಬಹುದು ಎನ್ನುವುದನ್ನು ಸೂಚಿಸುತ್ತವೆ. ಈ ಪ್ರಮುಖ ಪೋಷಕಾಂಶವನ್ನು ಪಡೆಯಲು ಸುಲಭ ದಾರಿ ಏನೆಂದರೆ ಸಂಸ್ಕರಿಸದ, ಸಸ್ಯ ಆಧಾರಿತ ಆಹಾರಗಳನ್ನು ಆರಿಸಿಕೊಳ್ಳುವುದು. ಅಂದರೆ ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳು.

  ಇದನ್ನೂ ಓದಿ: World Cancer Day 2022: ಕ್ಯಾನ್ಸರ್‌ನಿಂದ ದೂರವಿರಲು ಈ ಟಿಪ್ಸ್ ಫಾಲೋ ಮಾಡಿ

  ಫೈಬರ್(Fiber) ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ದೇಹದ ಒಟ್ಟು ಕ್ಯಾಲರಿ ಇನ್‌ಟೇಕ್ ಪ್ರಮಾಣ ಕಡಿಮೆಯಾಗುತ್ತದೆ. ಇದು ದೇಹಕ್ಕೆ ಹೆಲ್ತಿ ವೈಟ್ ಮೆಂಟೇನ್(Healthy Weight) ಮಾಡುವಲ್ಲಿ ಬಹಳಷ್ಟು ನೆರವಾಗುತ್ತದೆ. ಆರೋಗ್ಯಕರ ತೂಕ ಕ್ಯಾನ್ಸರ್‌ನಿಂದ ದೂರವಿರಲು ಬಹಳ ಪ್ರಮುಖ ಅಂಶ ಎಂದು ಬೇರೆ ಹೇಳಬೇಕಾಗಿಲ್ಲ.

  ಆರೋಗ್ಯಕರ ಫೈಬರ್ ಹೆಚ್ಚಿರುವ ಆಹಾರಗಳು:
  ಓಟ್ಸ್
  ಬಾರ್ಲಿ
  ಧಾನ್ಯ ಹಾಗೂ ಬೀಜಗಳು
  ಕಾಳುಗಳು
  ಅವಕಾಡೋ
  ಆರೆಂಜ್

  ಕ್ಯಾನ್ಸರ್ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಫೈಬರ್ನ ಇತರ ಪ್ರಯೋಜನಗಳು:

  ಹೆಚ್ಚು ಸಮಯ ಹಸಿವಾಗಲ್ಲ: ಫೈಬರ್ಯುಕ್ತ ಆಹಾರ ನಿಮ್ಮ ಹೊಟ್ಟೆ ಸೇರಿದರೆ ಹಸಿವಾಗುವುದು ಕಮ್ಮಿಯಾಗುತ್ತದೆ. ಆಹಾರದ ಫೈಬರ್ ಕಾರ್ಬೋಹೈಡ್ರೇಟ್ನ ಒಂದು ರೂಪವನ್ನು ಒಳಗೊಂಡಿರುತ್ತದೆ, ಅದನ್ನು ಬೇಗ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಫೈಬರ್ ಆಹಾರ ಮತ್ತು ಪಾನೀಯವು ನಿಮ್ಮ ಹೊಟ್ಟೆ ಹಸಿವು ನೈಸರ್ಗಿಕವಾಗಿ ನಿಧಾನಗೊಳಿಸುತ್ತದೆ. ಆ ಕಾರಣದಿಂದ ಹೊಟ್ಟೆ ತುಂಬಿದ ಅನುಭವ ಹೆಚ್ಚು ಕಾಲ ಉಳಿಯುತ್ತದೆ.

  ತೂಕ ಇಳಿಸಿಕೊಳ್ಳಲು ಸಹಕಾರಿ: ಫೈಬರ್ ತೂಕ ನಿಯಂತ್ರಣ ಮಾಡುತ್ತದೆ. ಕಡಿಮೆ ಹಸಿವಾಗುವ ಕಾರಣ ಕಡಿಮೆ ತಿನ್ನಲು ಇದು ದಾರಿ ಮಾಡುತ್ತದೆ. ಹೆಚ್ಚಿನ ಫೈಬರ್ ಆಹಾರಗಳು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಪೌಷ್ಟಿಕಾಂಶ ಹೊಂದಿರುತ್ತವೆ. ಇವು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಿಂದ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.

  ಇದನ್ನೂ ಓದಿ: Strain of HIV Discovered: ವೇಗವಾಗಿ ಹರಡೋ HIV ವೇರಿಯೆಂಟ್ ಪತ್ತೆ..! ಇದು ಮತ್ತಷ್ಟು ಅಪಾಯಕಾರಿಯಾ?

  ಕಡಿಮೆ ಕೊಲೆಸ್ಟ್ರಾಲ್: ಕೆಲವು ಫೈಬರ್ಗಳು ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೀರಿಕೊಳ್ಳುವಿಕೆಯನ್ನು ತಡೆಯುವುದರಲ್ಲಿ ಎಕ್ಸ್‌ಪರ್ಟ್. ನಿಮ್ಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಅದು ಸಹಾಯ ಮಾಡುತ್ತದೆ.

  ಹೆಲ್ತಿ ಸುಗರ್ ಲೆವೆಲ್: ಮಧುಮೇಹದ ವಿರುದ್ಧ ಹೋರಾಡುವವರಿಗೆ ಫೈಬರ್ ಬೆಸ್ಟ್. ಫೈಬರ್ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಪ್ರಯೋಜನಕಾರಿ ರೀತಿಯಲ್ಲಿ ಪ್ರಭಾವಿಸುತ್ತದೆ.
  Published by:Latha CG
  First published: