ದೇಹದ ಮೂಳೆಗಳ ಆರೋಗ್ಯ ಹೆಚ್ಚಿಸಲು ಈ ಆಹಾರಗಳಿಂದ ದೂರವಿರಿ

news18
Updated:July 31, 2018, 4:06 PM IST
ದೇಹದ ಮೂಳೆಗಳ ಆರೋಗ್ಯ ಹೆಚ್ಚಿಸಲು ಈ ಆಹಾರಗಳಿಂದ ದೂರವಿರಿ
news18
Updated: July 31, 2018, 4:06 PM IST
-ನ್ಯೂಸ್ 18 ಕನ್ನಡ

ಮನುಷ್ಯನಿಗೆ ವಯಸ್ಸಾದಂತೆ ಬಲಹೀನತೆಯ ಸಮಸ್ಯೆ ಕಾಣಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಮೂಳೆಗಳು ದುರ್ಬಲವಾಗುವುದು. ಮೂಳೆಗಳು ಗಟ್ಟಿ ಮುಟ್ಟಾಗಿದ್ದರೆ ಮಾತ್ರ ಉತ್ತಮ ಆರೋಗ್ಯದಿಂದ ಇರಬಹುದು. ಎಲುಬಿನ ಸಮಸ್ಯೆ ಕಾಣಿಸಿಕೊಳ್ಳಲು ನಮ್ಮ ದೈನಂದಿನ ಆಹಾರ ಕೂಡ ಮುಖ್ಯ ಕಾರಣ. ಅಂತಹ 5 ಆಹಾರಗಳ ಪಟ್ಟಿ ಇಲ್ಲಿ ತಿಳಿಸಲಾಗಿದೆ.

* ಬರ್ಗರ್, ಪಿಜ್ಜಾ ಮತ್ತು ಪಾಸ್ತದಂತಹ ಜಂಕ್ ಫುಡ್​ಗಳಲ್ಲಿ ಸೋಡಿಯಂ ಅಂಶ ಹೆಚ್ಚಾಗಿರುತ್ತದೆ. ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾದರೆ ಕ್ಯಾಲ್ಸಿಯಂ ಪ್ರಯಾಣವನ್ನು ಕಡಿಮೆಯಾಗುತ್ತದೆ. ಇದರಿಂದ ಎಲುಬುಗಳು ದುರ್ಬಲಗೊಳ್ಳುತ್ತದೆ.

* ವಿಟಮಿನ್-ಎ ಕೊರತೆಯನ್ನು ನೀಗಿಸಲು ಸಪ್ಲಿಮೆಂಟ್​ಗಳನ್ನು ಸೇವಿಸುತ್ತಿದ್ದರೆ ಕೂಡ ಮೂಳೆಗಳು ದುರ್ಬಲವಾಗುತ್ತದೆ.

* ಕಾಫಿಯಲ್ಲಿ ಕೆಫಿನ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅಧಿಕ ಕಾಫಿ ಸೇವನೆಯಿಂದ ಮೂಳೆಗಳ ಸಾಂದ್ರತೆಯು ಕಡಿಮೆಯಾಗುತ್ತದೆ. ಇದರಿಂದ ಎಲುಬುಗಳು ಅಸ್ಟಿಯೊಪೊರೋಸಿಸ್ ಸಮಸ್ಯೆಗೆ ಒಳಗಾಗುತ್ತದೆ.

* ಅತಿಯಾದ ಮದ್ಯ ಸೇವನೆಯಿಂದ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್-ಡಿ ಕೊರತೆ ಕಾಣಿಸಿಕೊಳ್ಳುತ್ತದೆ. ಇದರಿಂದ ಸಹ ಮೂಳೆಗಳು ದುರ್ಬಲವಾಗುತ್ತಾ ಸಾಗುತ್ತದೆ.

* ಸೋಡಿಯಂ ಅಂಶ ಹೊಂದಿರುವ ತಿಂಡಿ ಮತ್ತು ಚಿಪ್ಸ್​ಗಳನ್ನು ತಿಂದರೂ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ತಿಂಡಿಗಳ ಅತಿಯಾದ ಸೇವನೆಯಿಂದ ಮೂಳೆಗಳು ದುರ್ಬಲವಾಗುತ್ತದೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...